ETV Bharat / state

ಶಿವಮೊಗ್ಗ: ಕಾರಿಗೆ ಬೆಂಕಿ ಹಚ್ಚಿ ಯುವಕನ ಭೀಕರ ಹತ್ಯೆ ಆರೋಪ, 8 ಜನರ ವಿರುದ್ಧ ಪ್ರಕರಣ ದಾಖಲು - murder of a young man

ಯುವಕನೊಬ್ಬನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಶಿಕಾರಿಪುರದಲ್ಲಿ ನಡೆದಿದೆ.

horrific-murder-of-a-young-man-in-shivamogga
ಶಿವಮೊಗ್ಗ: ಕಾರಿಗೆ ಬೆಂಕಿ ಹಚ್ಚಿ ಯುವಕನ ಭೀಕರ ಹತ್ಯೆ
author img

By ETV Bharat Karnataka Team

Published : Mar 16, 2024, 5:05 PM IST

Updated : Mar 17, 2024, 7:20 AM IST

ಶಿವಮೊಗ್ಗ: ಕಾರಿನಲ್ಲಿ ಯುವಕನೊಬ್ಬನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಸಮೀಪದ ತೊಗರ್ಸಿ ಬಳಿ ನಡೆದಿದೆ. ವೀರೇಶ್ (27) ಕೊಲೆಯಾದ ಯುವಕ. ತೊಗರ್ಸಿ ಹೊರವಲಯದ ಸ್ಮಶಾನದ ಬಳಿ ಇಂದು ಬೆಳ್ಳಗೆ ಇನ್ನೋವಾ ಕಾರಿನಲ್ಲಿ ಬೆಂಕಿ ಹೊತ್ತಿ ಉರಿಯುತ್ತಿತ್ತು. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಶಿರಾಳಕೊಪ್ಪ‌ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಕಾರಿನ ನಂಬರ್ ನೋಡಿ ಕಾರಿನ ಮಾಲೀಕರನ್ನು ಪತ್ತೆ ಹಚ್ಚಿ ಫೋನ್​ ಮಾಡಿದಾಗ ಮೃತ ಯುವಕ ಶಿವಮೊಗ್ಗ ಗಾಡಿಕೊಪ್ಪದ ನಿವಾಸಿ ವೀರೇಶ್ (27) ಎಂದು ತಿಳಿದು ಬಂದಿದೆ. ವೀರೇಶ್​ ನನ್ನು ಇನ್ನೋವಾ ಕಾರಿನಲ್ಲಿಯೇ ಸುಟ್ಟು ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಪ್ರೇಮ ವಿಚಾರಕ್ಕೆ ಕೊಲೆಯಾಗಿರುವ ಶಂಕೆ: ವೀರೇಶ್​ ತನ್ನ ದೂರದ‌ ಸಂಬಂಧಿ ಯವತಿಯೊಬ್ಬರನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಇದಕ್ಕೆ ಯುವತಿಯು ಸಹ ಸಮ್ಮತಿ‌ ಸೂಚಿಸಿದ್ದರು. ಇದು ಯುವತಿಯ ಪೋಷಕರಿಗೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಇದೇ ವಿಚಾರವಾಗಿ ಕೊಲೆಯಾಗಿರಬಹುದು ಎಂಬ ಶಂಕಿಸಲಾಗಿದೆ.

ಶುಕ್ರವಾರ ಮನೆಯಿಂದ ತೆರಳಿದ್ದ ವೀರೇಶ್: ನಿನ್ನೆ ರಾತ್ರಿ ಗಾಡಿಕೊಪ್ಪದ ಮನೆಯಲ್ಲಿದ್ದ ವೀರೇಶ್​ಗೆ, ಕೆಲ ಪರಿಚಿತರು ಫೋನ್​ ಕರೆ ಮಾಡಿದ್ದರು. ಬಳಿಕ ವೀರೇಶ್ ಸ್ನೇಹಿತನೊಬ್ಬನ ಇನ್ನೋವಾ ಕಾರಿನಲ್ಲಿ ಹೊರಗೆ ತೆರಳಿದ್ದರು. ನಂತರ ಮನೆಗೆ ಹಿಂದಿರುಗಿರಲಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಶಿಕಾರಿಪುರ ಡಿವೈಎಸ್‌ಪಿ ಕೇಶವ್, ಇನ್ಸ್​ಪೆಕ್ಟರ್ ರುದ್ರೇಶ್, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಪತ್ನಿ, ಮೂವರು ಮಕ್ಕಳನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಕೊಲೆ ಪ್ರಕರಣ ದಾಖಲಿಸಿದ ಮೃತ ಯುವಕನ ತಾಯಿ: ನನ್ನ ಮಗನನ್ನು ಎಂಟು ಜನ ಸೇರಿ ಕೊಲೆ ಮಾಡಿದ್ದು, 8 ಜನ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಎಂದು ಮೃತ ವೀರೇಶ್ ತಾಯಿ ಮಾದೇವಿ ಅವರು ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನಲ್ಲೇನಿದೆ: ಮೃತ ಯುವಕ ವೀರೇಶ್ ಗಾಡಿಕೊಪ್ಪದ‌ ನಿವಾಸಿ. ಇವರ ತಾಯಿ ಮಾದೇವಿ ಅವರು ನೀಡಿದ ದೂರಿನಲ್ಲಿ ಎಂಟು ಜನರ ವಿರುದ್ಧ ಕೊಲೆ ಆರೋಪ‌ ಮಾಡಿದ್ದಾರೆ. ನನ್ನ ಪತಿ ಹಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದಾರೆ. ನನಗೆ ವೀರೇಶ್ ಹಾಗೂ ಕಾವ್ಯಾ ಎಂಬ ಇಬ್ಬರು ಮಕ್ಕಳಿದ್ದು, ನನ್ನ ಮಗಳನ್ನು ಮದುವೆ ಮಾಡಿಕೊಟ್ಟಿದ್ದು, ಕೆಲ ವರ್ಷಗಳ ಹಿಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಈಗ ನಾನು ನನ್ನ ಮಗನ ಜೊತೆ ವಾಸವಾಗಿದ್ದೇನೆ. ನನ್ನ ಮಗ ವೀರೇಶ್ ಕಾರ್ ಡ್ರೈವರ್ ಆಗಿದ್ದ. ಹಾವೇರಿ ಜಿಲ್ಲೆ ಅಕ್ಕಿ ಆಲೂರು ನಿವಾಸಿಯಾದ ಯುವತಿಯನ್ನು ನನ್ನು ಮಗ ಪ್ರೀತಿಸುತ್ತಿದ್ದನು. ಈ ಯುವತಿ ನಮ್ಮ ದೂರದ ಸಂಬಂಧಿ. ಫಾರ್ಮಸಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು,‌ ಖಾಸಗಿ ಪಿಜಿಯಲ್ಲಿದ್ದಳು. ಈ ಪ್ರೀತಿಯ ಬಗ್ಗೆ ನನ್ನ ಮಗ ವೀರೇಶ್ ಹೇಳಿದಾಗ ನಾನು ಅದಕ್ಕೆ ವಿರೋಧ ಮಾಡಿದೆ. ಇದರಿಂದ ನಾನು ಮೂರುನಾಲ್ಕು ಹೆಣ್ಣುಗಳನ್ನು‌ ಮದುವೆಗೆ ತೋರಿಸಿದರು ಸಹ ಒಪ್ಪಿರಲಿಲ್ಲ. ಆ ಬಳಿಕ ನಾನು ಅವರ ಪ್ರೀತಿಗೆ ಒಪ್ಪಿಗೆ ಸೂಚಿಸಿದ್ದೆ.

ನಮ್ಮ ಸಂಬಂಧಿಯೊಬ್ಬರು ಯುವತಿಯ ಮನೆಯವರಿಗೆ ಫೋನ್ ಮಾಡಿ ಇಬ್ಬರ ಮದುವೆ ವಿಚಾರ ತಿಳಿಸಿದಾಗ ಅವರು ಅವಾಚ್ಯ ಶಬ್ದಗಳಿಂದ ಬೈಯ್ದರು. ನಂತರ ಮಾರ್ಚ್ 13 ರಂದು ಯುವತಿಯ ಮನೆಯವರು ಮತ್ತೆ ಫೋನ್ ನಿಂದಿಸಿದ್ದರು. ನಂತರ ಅಕ್ಕಿ ಆಲೂರಿನಿಂದ ಕೆಲವರು ಮಾರ್ಚ್ 15 ರಂದು ನಮ್ಮ ಮನೆಗೆ ಬಂದು ಮದುವೆಗೆ ಯಾರು ಒಪ್ಪುತ್ತಿಲ್ಲ. ಸ್ವಲ್ಪ ದಿನ ಸುಮ್ಮನಿರಿ, ನಾವು ಮದುವೆ ಮಾಡಿಸುವುದಾಗಿ ಹೇಳಿ, ವೀರೇಶ್ ಮೊಬೈಲ್​​ನಲ್ಲಿದ್ದ ಇಬ್ಬರ ಫೋಟೊಗಳನ್ನು ಡಿಲಿಟ್ ಮಾಡಿಸುತ್ತಾರೆ. ನಂತರ ನಾನು ಮನೆಯವರಿಗೆ ಒಪ್ಪಿಸಿ ನಿಮ್ಮ ಮದುವೆ ಮಾಡಿಸುವೆ ಎಂದು ಹೇಳಿ ವಾಪಸ್ ಹೋಗುತ್ತಾರೆ. ಅಂದೇ ಸಂಜೆ ಫೋನ್ ಮಾಡಿದ ಯುವತಿಯ ಸಹೋದರ, ನಾನು ನನ್ನ ತಂಗಿಯನ್ನು ಕರೆದುಕೊಂಡು ಬರುತ್ತಿದ್ದು, ಓಡಿ ಹೋಗಲು ತಮ್ಮ ಊರಿನ ಬಳಿ ಬರುವಂತೆ ತಿಳಿಸುತ್ತಾರೆ. ಇದನ್ನು ನಂಬಿದ ವೀರೇಶ್ ಮನೆಯಿಂದ 2 ಲಕ್ಷ ರೂ ಪಡೆದು ಆತನ ಸ್ನೇಹಿತನಾದ ಸುನೀಲ್ ಎಂಬುವರ ಇನ್ನೋವಾ ಕಾರು ತೆಗೆದುಕೊಂಡು ಹೋಗಿರುತ್ತಾರೆ. ಬಳಿಕ ನನ್ನ ಮಗನ ಫೋನ್​ ಸಂಪರ್ಕ ಸಾಧ್ಯವಾಗಲಿಲ್ಲ. ಮರು ದಿನ ಬೆಳಗ್ಗೆ ಕಾರಿನಲ್ಲಿ ಒಂದು ಶವ ಸಿಕ್ಕಿದ್ದು, ‌ಕಾರು ಸಂಪೂರ್ಣ ಸುಟ್ಟಿದ್ದು, ಅದರಲ್ಲಿ ಒಂದು‌ ಸುಟ್ಟು ಹೋದ ಶವ ಪತ್ತೆಯಾಗಿದೆ. ಇದನ್ನು‌ ನೋಡಿ ಪರಿಶೀಲಿಸಿದಾಗ ಮೃತನ ಕೈಯಲ್ಲಿನ ಉಂಗುರವನ್ನು‌ ನೋಡಿ ಇದು ವೀರೇಶ ಎಂದು ಗುರುತಿಸಲಾಯಿತು. ನನ್ನ ಮಗ ವೀರೇಶ್ ನನ್ನು ಕೊಲೆ‌ ಮಾಡಲಾಗಿದೆ ಮೃತರ ತಾಯಿ ಎಂದು ದೂರು ನೀಡಿದ್ದಾರೆ. ಪ್ರವೀಣ್, ಆದರ್ಶ್, ಪ್ರಶಾಂತ್, ಪ್ರಭು, ಬಸವಣ್ಯಪ್ಪ, ಸಂದೀಪ, ವೀರೇಶ್ ಮತ್ತು ಶೇಖರಪ್ಪ ಎಂಬುವರ ವಿರುದ್ದ ದೂರು ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಕಾರಿನಲ್ಲಿ ರಿಯಲ್​ ಎಸ್ಟೇಟ್ ಉದ್ಯಮಿ ಶವ ಪತ್ತೆ, ಕೊಲೆ ಶಂಕೆ

Last Updated : Mar 17, 2024, 7:20 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.