ETV Bharat / state

'ಯಶ್​​, ಕೆಜಿಎಫ್​ ಅವಮಾನಿಸಿಲ್ಲ'; ಪುಷ್ಪ 2 ಯಶಸ್ಸನ್ನು ಆಶಿಸಿದ್ದೆ: ಚಿತ್ರವಿತರಕ ಲಕ್ಷ್ಮೀಕಾಂತ ರೆಡ್ಡಿ - FILM DISTRIBUTOR CLARIFICATION

ಕೆಜಿಎಫ್-2 ಸಿನಿಮಾ ಬಗ್ಗೆ ಮಾತನಾಡಿದ್ದಕ್ಕೆ ಟೀಕೆಗೊಳಗಾಗಿದ್ದ ಚಿತ್ರವಿತರಕ ಲಕ್ಷ್ಮೀಕಾಂತ ರೆಡ್ಡಿ ಅವರು ಸ್ಪಷ್ಟನೆಯನ್ನು ನೀಡಿದ್ದಾರೆ.

Film distributor Lakshmikanth Reddy
ಚಿತ್ರವಿತರಕ ಲಕ್ಷ್ಮೀಕಾಂತ ರೆಡ್ಡಿ (ETV Bharat)
author img

By ETV Bharat Entertainment Team

Published : Oct 28, 2024, 5:30 PM IST

ಬಳ್ಳಾರಿ: ''ತೆಲುಗಿನ ಬಹುನಿರೀಕ್ಷಿತ 'ಪುಷ್ಪ-2' ಚಿತ್ರದ ವಿತರಕನಾಗಿ ಅದರ ಯಶಸ್ಸು ಬಯಸಿದ್ದೇನೆಯೇ ಹೊರತು, ಕನ್ನಡದ ಸ್ಟಾರ್​ ನಟ ಯಶ್ ಅವರನ್ನಾಗಿಲಿ ಅಥವಾ ಅವರ ಕೆಜಿಎಫ್ ಸರಣಿ ಚಿತ್ರಗಳನ್ನಾಗಲಿ ಅಪಮಾನಿಸುವ ಉದ್ದೇಶ ಹೊಂದಿಲ್ಲ'' ಎಂದು 'ನಟರಾಜ' ಸಿನಿಮಾ ಮಂದಿರಗಳ ಮಾಲೀಕ, ಚಿತ್ರವಿತರಕ ಲಕ್ಷ್ಮೀಕಾಂತ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಸೌತ್​ ಸ್ಟಾರ್​​ ಅಲ್ಲು ಅರ್ಜುನ್ ನಟನೆಯ 'ಪುಷ್ಪ-2' ಸಿನಿಮಾದ ವಿಶಾಲ ಕರ್ನಾಟಕ ವಿತರಣೆಯನ್ನು ನಾನೇ ಪಡೆದುಕೊಂಡಿದ್ದೇನೆ. ಇತ್ತೀಚೆಗೆ ಚಿತ್ರತಂಡ ಹೈದರಾಬಾದ್‌ನಲ್ಲಿ ಕರೆದಿದ್ದ ಮಾಧ್ಯಮಗೋಷ್ಟಿಗೆ ನಾನೂ ಹೋಗಿದ್ದೆ. ಚಿತ್ರ ಕೆಜಿಎಫ್-2 ಸಿನಿಮಾದ ದಾಖಲೆಯನ್ನೂ ಮೀರಿ ಯಶಸ್ಸು ಗಳಿಸಲಿ ಎಂದು ಅಲ್ಲಿ ಹೇಳಿದ್ದೆ. ಇದರಲ್ಲಿ ತಪ್ಪು ಹುಡುಕಿರುವ ಕೆಲ ಮಂದಿ ಸಾಮಾಜಿಕ ಮಾಧ್ಯಮದಲ್ಲಿ ವಿವಾದ ಸೃಷ್ಟಿ ಮಾಡುತ್ತಿದ್ದಾರೆ'' ಎಂದು ಬೇಸರ ವ್ಯಕ್ತಪಡಿಸಿದರು.

ಚಿತ್ರವಿತರಕ ಲಕ್ಷ್ಮೀಕಾಂತ ರೆಡ್ಡಿ (ETV Bharat)

ಸಿನಿಮಾವೊಂದು ಹಿಂದಿನ ದಾಖಲೆಗಳನ್ನು ಮೀರಲಿ ಎಂದು ನಿರ್ಮಾಪಕರು, ವಿತರಕರು ಆಶಿಸುವುದು ಸಾಮಾನ್ಯ. ಇಲ್ಲಿ ಯಶ್ ಅವರನ್ನಾಗಲಿ, ಅವರ ಸಿನಿಮಾಗಳನ್ನಾಗಲಿ ಅಪಮಾನಿಸುವುದು ತನ್ನ ಉದ್ದೇಶವಲ್ಲ ಎಂದು ಹೇಳಿದರು. ಅಲ್ಲದೇ, 'ಯಶ್ ಅವರ ಹಲವು ಸಿನಿಮಾಗಳನ್ನು ತೆಲುಗಿನಲ್ಲಿ ನಾನೇ ವಿತರಣೆ ಮಾಡಿದ್ದೇನೆ. ಕನ್ನಡದ ಹಲವು ಸಿನಿಮಾಗಳನ್ನೂ ವಿತರಿಸಿದ್ದೇನೆ. ನಟರಾಜ ಸಿನಿಮಾ ಮಂದಿರಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಿದ್ದೇನೆ. ಕನ್ನಡವನ್ನಾಗಲಿ, ಕನ್ನಡದ ಸಿನಿಮಾಗಳನ್ನಾಗಲಿ ನಾನು ಕಡೆಗಣಿಸಿಲ್ಲ' ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಪುನೀತ್​ 'ಗಂಧದಗುಡಿ'ಗೆ 2 ವರ್ಷ: 'ಅಭಿಮಾನಿಗಳ ಪ್ರೀತಿ ವರ್ಣನಾತೀತ' ಎಂದ ಅಪ್ಪು ಸ್ಪೆಷಲ್​ ವಿಡಿಯೋ ರಿಲೀಸ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.