ವಿಜಯಪುರ: ಜಿಲ್ಲೆಯಾದ್ಯಂತ ಹೋಳಿ ಹಬ್ಬ ಮತ್ತು ಕಾಮದಹನದ ಸಂಭ್ರಮ ಮನೆ ಮಾಡಿದೆ. ನಿನ್ನೆ (ಭಾನುವಾರ) ಜಿಲ್ಲೆಯಾದ್ಯಂತ ಸಂಪ್ರದಾಯದಂತೆ ಕಾಮದಹನ ನೆರವೇರಿಸಲಾಯಿತು. ಜಿಲ್ಲೆ, ಪಟ್ಟಣ, ಗ್ರಾಮಗಳು ಮತ್ತು ಗಲ್ಲಿ ಗಲ್ಲಿಗಳಲ್ಲೂ ಜನರು ಸೇರಿ ಕಾಮದಹನ ಮಾಡುತ್ತಿದ್ದುದು ಕಂಡುಬಂತು.
ಕೊಲ್ಹಾರ ಪಟ್ಟಣದಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹಂತಿ ಪದ ಹಾಡಿ ಗಮನ ಸೆಳೆದರು. ಶ್ರೀ ದ್ಯಾಮವ್ವದೇವಿ ದೇಗುಲದ ಬಳಿ ತಡರಾತ್ರಿ ಕಾಮದಹನ ನಡೆಯಿತು. ರೈತರೊಂದಿಗೆ ಸೇರಿ ಸಾಂಪ್ರದಾಯಿಕ ಜಾನಪದ ಹಂತಿ ಪದಗಳನ್ನು ಬೆಳ್ಳುಬ್ಬಿ ಹಾಡಿದರು. ಕಾಮದಹನಕ್ಕೂ ಮುನ್ನ ಅವರು ವಿಶೇಷ ಪ್ರಾರ್ಥನೆ ಮತ್ತು ಪೂಜೆ ಸಲ್ಲಿಸಿದರು. ಜಿಲ್ಲೆಯಲ್ಲಿ ರಂಗಪಂಚಮಿವರೆಗೆ ಹೋಳಿ ಹಬ್ಬಾಚರಣೆ ನಡೆಯುತ್ತದೆ.
ಇದನ್ನೂ ಓದಿ: ದಾವಣಗೆರೆಯಲ್ಲಿ ಸಾಂಪ್ರದಾಯಿಕವಾಗಿ ಕಾಮದಹನ ಮಾಡಿ ಹೋಳಿ ಆಚರಣೆಗೆ ಚಾಲನೆ - traditional kamadahana