ETV Bharat / state

ಹೆದ್ದಾರಿಯಲ್ಲಿ ದರೋಡೆ ಯತ್ನ: 56 ಪ್ರಕರಣಗಳ ರೌಡಿಶೀಟರ್ ಕಾಲಿಗೆ ಗುಂಡೇಟು - Rowdy sheeter Shot - ROWDY SHEETER SHOT

ಪೊಲೀಸ್ ಹೆಡ್​​ ಕಾನ್​ಸ್ಟೇಬಲ್​ ಮೇಲೆ ಹಲ್ಲೆಗೈದು ಪರಾರಿಯಾಗಲು ಯತ್ನಿಸಿದ ರೌಡಿಶೀಟರ್​ ಕಾಲಿಗೆ ಇನ್​ಸ್ಪೆಕ್ಟರ್​ ಗುಂಡು ಹಾರಿಸಿದ್ದಾರೆ. ಗಾಯಾಳು ಆರೋಪಿ ಹಾಗೂ ಹೆಡ್​ ಕಾನ್​ಸ್ಟೇಬಲ್​ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Rowdy Sheeter Jayanth
ರೌಡಿಶೀಟರ್ ಜಯಂತ್ (ETV Bharat)
author img

By ETV Bharat Karnataka Team

Published : Sep 1, 2024, 10:12 AM IST

ನೆಲಮಂಗಲ: ಹೆದ್ದಾರಿಯಲ್ಲಿ ದರೋಡೆಗೆ ಯತ್ನಿಸುತ್ತಿದ್ದ ರೌಡಿಶೀಟರ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ನೆಲಮಂಗಲ ತಾಲೂಕಿನ ದಾಬಸ್‌ಪೇಟೆಯಲ್ಲಿ ಶನಿವಾರ ನಡೆದಿದೆ. ಗಾಯಾಳು ರೌಡಿಶೀಟರ್ ಜಯಂತ್​ ಎಂಬಾತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾಬಸ್​ಪೇಟೆಯ ಶಿವಗಂಗೆ ಕಂಬಾಳು ನಡುವಿನ ನೀಲಗಿರಿ ತೋಪಿನ ಬಳಿ ರೌಡಿಶೀಟರ್​ ದರೋಡೆಗೆ ಯತ್ನಿಸುತ್ತಿರುವ ವಿಷಯ ತಿಳಿದು ದಾಬಸ್​ಪೇಟೆ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಈ ವೇಳೆ ಪೊಲೀಸರು ರೌಡಿಶೀಟರ್​ಗೆ ಶರಣಾಗುವಂತೆ ಸೂಚಿಸಿ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ನಂತರ ಬಂಧಿಸಲು ಹೋದ ಹೆಡ್​ ಕಾನ್​ಸ್ಟೇಬಲ್​ ಇಮ್ರಾನ್​ ಖಾನ್​ ಮೇಲೆ ರೌಡಿಶೀಟರ್​ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣ ಇನ್​ಸ್ಪೆಕ್ಟರ್​ ಬಿ.ರಾಜು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಆರೋಪಿಯ ಬಲಗಾಲಿಗೆ ಗುಂಡು ಬಿದ್ದಿದೆ.

ಗಾಯಾಳು ಹೆಡ್ ಕಾನ್​ಸ್ಟೇಬಲ್ ಇಮ್ರಾನ್ ಖಾನ್​ ಅವರನ್ನು ದಾಬಸ್‌ಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ರೌಡಿಶೀಟರ್ ಜಯಂತ್ ವಿರುದ್ಧ ಕೊಲೆ, ಕೊಲೆಯತ್ನ, ಕಳ್ಳತನ, ದರೋಡೆ ಸೇರಿದಂತೆ 56 ಪ್ರಕರಣಗಳಿವೆ.

ಇದನ್ನೂ ಓದಿ: ಮಂಗಳೂರು: ಗುತ್ತಿಗೆದಾರನ ಮನೆಯಲ್ಲಿ ದರೋಡೆ ಕೇಸ್​, ಮತ್ತೆ ಮೂವರ ಸೆರೆ - Three more accused arrested

ETV Bharat Logo

Copyright © 2025 Ushodaya Enterprises Pvt. Ltd., All Rights Reserved.