ETV Bharat / state

ಅಕ್ರಮ ಹೋರ್ಡಿಂಗ್, ಫೆಕ್ಸ್ ವಿಚಾರ ಲಘುವಾಗಿ ಪರಿಗಣಿಸಬೇಡಿ: ಸರ್ಕಾರ, ಬಿಬಿಎಂಪಿಗೆ ಹೈಕೋರ್ಟ್ ಎಚ್ಚರಿಕೆ - BENGALURU FLEX CASE

ನಗರದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಅಳವಡಿಸುವವರನ್ನು ಶಿಕ್ಷಿಸುವ ಅಂಶವೇ ಬೈಲಾದಲ್ಲಿ ಇಲ್ಲ ಎಂದು ಸರ್ಕಾರ ಮತ್ತು ಬೆಂಗಳೂರು ಮಹಾನಗರ ಪಾಲಿಕೆ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.

ಅಕ್ರಮ ಹೋರ್ಡಿಂಗ್ ಫೆಕ್ಸ್ , ಹೈಕೋರ್ಟ್ ಎಚ್ಚರಿಕೆ
ಹೈಕೋರ್ಟ್, ಬಿಬಿಎಂಪಿ (ETV Bharat)
author img

By ETV Bharat Karnataka Team

Published : Dec 13, 2024, 7:45 PM IST

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಹೋರ್ಡಿಂಗ್ ಅಥವಾ ಬ್ಯಾನರ್​​ಗಳನ್ನು ಹಾಕುವವರನ್ನು ದಂಡಿಸಲು ಉದ್ದೇಶಿತ ಬೈಲಾದಲ್ಲಿ ಯಾವುದೇ ಅಂಶಗಳು ಇಲ್ಲದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ನಗರದಲ್ಲಿನ ಅಕ್ರಮ ಹೋರ್ಡಿಂಗ್, ಫೆಕ್ಸ್ ವಿಚಾರವನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಸರ್ಕಾರ ಮತ್ತು ಬಿಬಿಎಂಪಿಗೆ ಹೈಕೋರ್ಟ್ ಎಚ್ಚರಿಸಿದೆ.

ಬೆಂಗಳೂರು ಮಹಾನಗರದಲ್ಲಿ ಅನಧಿಕೃತ ಫ್ಲೆಕ್ಸ್ ಮತ್ತು ಹೋರ್ಡಿಂಗ್​​ಗಳ ಹಾವಳಿ ಕುರಿತು ಹೈಕೋರ್ಟ್ ಸ್ವಯಂ ಪ್ರೇರಿತವಾಗಿ 2024ರ ಜುಲೈ ತಿಂಗಳಲ್ಲಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಮುಖ್ಯನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠ ಈ ಎಚ್ಚರಿಕೆ ನೀಡಿತು.

ಬೆಂಗಳೂರಿನ ಅಕ್ರಮ ಫ್ಲೆಕ್ಸ್ ಮತ್ತು ಹೋರ್ಡಿಂಗ್ ಸಮಸ್ಯೆ ಅತಿ ಮುಖ್ಯವಾದುದು, ಅದು ಎಲ್ಲಾ ನಗರವಾಸಿಗಳಿಗೂ ಹಲವು ವರ್ಷಗಳಿಂದ ತೊಂದರೆ ನೀಡುತ್ತಲೇ ಇದೆ. ಇಷ್ಟಾದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಉದ್ದೇಶಿತ ಬೈಲಾದಲ್ಲಿ ಆ ರೀತಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಅಥವಾ ಹೋರ್ಡಿಂಗ್‌ಗಳನ್ನು ಹಾಕುವವರನ್ನು ಶಿಕ್ಷಿಸುವ ಅಂಶವೇ ಇಲ್ಲ ಎಂದು ನ್ಯಾಯಪೀಠ ಚಾಟಿ ಬೀಸಿದೆ.

2017ರಲ್ಲಿ ಸಲ್ಲಿಕೆಯಾಗಿದ್ದ ಪಿಐಎಲ್​​ಗಳ ಸಂಬಂಧ ಹೈಕೋರ್ಟ್, ಸಿಲಿಕಾನ್ ಸಿಟಿ ಬೆಂಗಳೂರಿನ ಅಂದ ಹಾಳು ಮಾಡುತ್ತಿರುವ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಅಥವಾ ಹೋರ್ಡಿಂಗ್‌ಗಳನ್ನು ನಿಯಂತ್ರಿಸಲು ಹಲವು ನಿರ್ದೇಶನಗಳನ್ನು ನೀಡಿದ್ದರೂ ನಗರದಲ್ಲಿ ಅವುಗಳ ಹಾವಳಿ ಮೀತಿ ಮೀರಿದೆ ಎಂದು ನ್ಯಾಯಪೀಠ ತಿಳಿಸಿತು.

ನ್ಯಾಯಾಲಯ ಉದ್ದೇಶಿತ ಬೆಂಗಳೂರು ಮಹಾನಗರ ಪಾಲಿಕೆ (ಜಾಹೀರಾತು) ಬೈಲಾ 2024 ರಲ್ಲಿನ ಬೈಲಾ 15(1)(ಐಐಐ)ರಲ್ಲಿ ಖಾಸಗಿ ಹಾಗೂ ಸಾರ್ವಜನಿಕ ಆಸ್ತಿಗಳಲ್ಲಿನ ಅಕ್ರಮ ಫ್ಲೆಕ್ಸ್, ಬ್ಯಾನರ್ ಅಥವಾ ಹೋರ್ಡಿಂಗ್​​ಗಳನ್ನು ತೆರವುಗೊಳಿಸಲಾಗುವುದು ಮತ್ತು ಅದರ ಮಾಲೀಕರನ್ನು ದಂಡಿಸಲಾಗುವುದು ಎಂದು ಹೇಳಲಾಗಿದೆ. ಆದರೆ ನ್ಯಾಯಾಲಯ ಹಿಂದೆಯೇ ಈ ಅಂಶದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದರೂ ಸಹ ಸಾರ್ವಜನಿಕ ಸ್ಥಳಗಳು, ಪಾದಚಾರಿ ಮಾರ್ಗಗಳು, ಸಾರ್ವಜನಿಕ ರಸ್ತೆ ಮತ್ತಿತರ ಕಡೆ ಅಕ್ರಮ ಹೋರ್ಡಿಂಗ್, ಫ್ಲೆಕ್ಸ್ ಹಾಕಿದವರಿಗೆ ದಂಡದ ಪ್ರಮಾಣವನ್ನು ನಿಗದಿಪಡಿಸಿಲ್ಲಎಂದು ನ್ಯಾಯಾಲಯ ಆಕ್ಷೇಪಿಸಿತು.

ಅಲ್ಲದೆ, ಅನಧಿಕೃತ ಫ್ಲೆಕ್ಸ್, ಬ್ಯಾನರ್ ಅಥವಾ ಹೋರ್ಡಿಂಗ್‌ಗಳನ್ನು ಹಾಕುವುದರಿಂದ ವಾಹನದಟ್ಟಣೆ ಉಂಟಾಗುವುದಲ್ಲದೆ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಹಾಗಾಗಿ ಸರ್ಕಾರ ಮತ್ತು ಬಿಬಿಎಂಪಿ ಅನಧಿಕೃತವಾಗಿ ಫೆಕ್ಸ್ ಮತ್ತು ಬ್ಯಾನರ್ ಹಾಕಿದವರಿಗೆ ದಂಡದ ಪ್ರಮಾಣ ನಿಗದಿ ಬಗ್ಗೆ ಮುಂದಿನ ವಿಚಾರಣೆ ವೇಳೆ ಸಮರ್ಪಕ ಉತ್ತರ ನೀಡಬೇಕು ಎಂದು ತಿಳಿಸಿ ವಿಚಾರಣೆಯನ್ನು 2025ರ ಜ.16ಕ್ಕೆ ಮುಂದೂಡಿತು.

ಇದನ್ನೂ ಓದಿ: ತೃತೀಯ ಲಿಂಗಿಗಳಿಗೂ 'ಗೃಹಲಕ್ಷ್ಮಿ' ಹಣ: 'ಸ್ವಾವಲಂಬಿಗಳಾಗಿ ದುಡಿಯಲು ಯೋಜನೆ ಸಹಕಾರಿ'- ಪ್ರಣತಿ ಪ್ರಕಾಶ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.