ETV Bharat / state

ಅಪ್ರಾಪ್ತೆ ಅತ್ಯಾಚಾರ, ಮದುವೆ: ಮಗು - ತಾಯಿಯ ಭವಿಷ್ಯಕ್ಕಾಗಿ ಆರೋಪಿ ಮೇಲಿನ ಕೇಸ್​ ರದ್ದು - High Court Quashed POCSO Case - HIGH COURT QUASHED POCSO CASE

ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿ, ಮದುವೆಯಾಗಿದ್ದ ಆರೋಪಿ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.

high court
ಹೈಕೋರ್ಟ್ (ETV Bharat)
author img

By ETV Bharat Karnataka Team

Published : Jul 20, 2024, 10:28 PM IST

ಬೆಂಗಳೂರು: ಮಗು ಮತ್ತು ತಾಯಿಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸಮಾಜದ ಅಪಕೀರ್ತಿ ತಪ್ಪಿಸಲು ಪ್ರೇಮಿಗಳನ್ನು ಒಂದಾಗಲು ಅನುಮತಿ ನೀಡಿದ್ದ ಹೈಕೋರ್ಟ್, ಯುವಕನ ವಿರುದ್ಧದ ಅತ್ಯಾಚಾರ ಮತ್ತು ಪೋಕ್ಸೊ ಪ್ರಕರಣ ರದ್ದುಪಡಿಸಿ ಆದೇಶಿಸಿದೆ.

ಮೈಸೂರಿನ ವರುಣಾ ಹೋಬಳಿಯ ಯಡಹಳ್ಳಿಯ 23 ವರ್ಷದ ಮಂಜುನಾಥ್ ವಿರುದ್ಧ ಮೈಸೂರಿನ ಪೋಕ್ಸೊ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣವನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ರದ್ದುಪಡಿಸಿ, ಇತ್ಯರ್ಥಪಡಿಸಿದೆ.

ಅಲ್ಲದೇ, ಜೈಲಿನಲ್ಲಿರುವ ಮಂಜುನಾಥ್ ಬಿಡುಗಡೆಗೆ ರಿಜಿಸ್ಟ್ರಾರ್ ಅಗತ್ಯ ಕ್ರಮ ಕೈಗೊಳ್ಳಬೇಕು. ಅರ್ಜಿ ಇತ್ಯರ್ಥವಾಗಿದೆ ಎಂದು ಮಗು ಮತ್ತು ತಾಯಿಯನ್ನು ಮತ್ತೆ ಬಿಕ್ಕಟ್ಟಿಗೆ ದೂಡಿದರೆ ಮಂಜುನಾಥ್ ವಿರುದ್ಧದ ಪ್ರಕರಣ ಮರುಚಾಲನೆ ಪಡೆಯಲಿದೆ ಎಂದು ನ್ಯಾಯಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.

ಜೊತೆಗೆ, ಮದುವೆಗೂ ಮುನ್ನ ಅರ್ಜಿದಾರ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿರುವುದರಿಂದ ಮಗು ಜನಿಸಿದೆ. ಮಗುವಿಗೆ ಏನೆಲ್ಲಾ ಘಟನೆ ನಡೆದಿದೆ ಎಂಬುದು ತಿಳಿದಿಲ್ಲ. ಪ್ರಕರಣ ಇತ್ಯರ್ಥಪಡಿಸಿ, ಅರ್ಜಿದಾರನನ್ನು ಬಿಡುಗಡೆ ಮಾಡದಿದ್ದರೆ ಮಗು ಮತ್ತು ತಾಯಿಯ ಬದುಕು ಬಿಕ್ಕಟ್ಟಿಗೆ ಸಿಲುಕಲಿದೆ. ಅರ್ಜಿದಾರ ಮತ್ತು ಸಂತ್ರಸ್ತೆ ವಿವಾಹವಾಗಲು ಈಗಾಗಲೇ ನ್ಯಾಯಾಲಯವು ಮಧ್ಯಂತರ ಜಾಮೀನು ನೀಡಿದೆ. ಮದುವೆಯ ಬಳಿಕ ಅರ್ಜಿದಾರ ಜೈಲಿಗೆ ಮರಳಿದ್ದಾನೆ. ಈಗ ಕಾನೂನು ಪ್ರಕ್ರಿಯೆ ರದ್ದುಪಡಿಸದಿದ್ದರೆ ಮಗು ಮತ್ತು ತಾಯಿಯ ಬದುಕು ಅತಂತ್ರವಾಗಲಿದ್ದು, ಅವರು ಸಮಾಜದಲ್ಲಿ ಅಪಖ್ಯಾತಿಗೆ ಗುರಿಯಾಗಬೇಕಾಗುತ್ತದೆ. ಸಮಾಜದ ಅಪಕೀರ್ತಿ ತಪ್ಪಿಸಲು ಪ್ರಕರಣ ರದ್ದುಪಡಿಸಲಾಗುತ್ತಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರ ಮಂಜುನಾಥ್ ಮತ್ತು ಸಂತ್ರಸ್ತೆಯು ಒಂದೇ ಶಾಲೆಯ ವಿದ್ಯಾರ್ಥಿಗಳಾಗಿದ್ದು, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆಗಿಂದಾಗ್ಗೆ ಅರ್ಜಿದಾರ ತನ್ನನ್ನು ಭೇಟಿ ಮಾಡುವಂತೆ ಸಂತ್ರಸ್ತೆಗೆ ಕಿರುಕುಳ ನೀಡುತ್ತಿದ್ದ. ಕೆಲವೊಮ್ಮೆ ನಿರ್ಜನ ಪ್ರದೇಶಕ್ಕೆ ಸಂತ್ರಸ್ತೆಯನ್ನು ಕರೆದೊಯ್ದು ಆಕೆಯ ಮೇಲೆ ಪದೇ ಪದೇ ಅತ್ಯಾಚಾರ ನಡೆಸಿದ್ದ ಎಂದು ಸಂತ್ರಸ್ತೆಯ ತಾಯಿಯು 2023ರ ಫೆಬ್ರವರಿ 15ರಂದು ಮೈಸೂರಿನ ಉದಯಗಿರಿ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರು ಆಧರಿಸಿ ಪೊಲೀಸರು ಮಂಜುನಾಥ್ ವಿರುದ್ಧ ಪೋಕ್ಸೊ ಕಾಯಿದೆ ಹಾಗೂ ಐಪಿಸಿ ಕಾಯಿದೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಇದರ ಬಳಿಕ ಮಂಜುನಾಥ್​ನನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: ಮಕ್ಕಳ ಆಶ್ಲೀಲ ಚಿತ್ರ ವೀಕ್ಷಣೆ ಅಪರಾಧವಲ್ಲ ಎಂದು ನೀಡಿದ್ದ ಆದೇಶ ಹಿಂಪಡೆದ ಹೈಕೋರ್ಟ್ - High Court

ETV Bharat Logo

Copyright © 2024 Ushodaya Enterprises Pvt. Ltd., All Rights Reserved.