ETV Bharat / state

ಸಹಕಾರಿ ಬ್ಯಾಂಕ್​ಗಳ ಸಿಬ್ಬಂದಿಯ ಬ್ಯಾಂಕ್​ ಪಾವತಿ ಮೊತ್ತ ಕಡಿತಗೊಳಿಸಿ ಸಿಎಜಿ ಹೊರಡಿಸಿದ್ದ ಸುತ್ತೋಲೆ ರದ್ದುಪಡಿಸಿದ ಹೈಕೋರ್ಟ್ - High Court

ಅಕೌಂಟೆಂಟ್ ಜನರಲ್ಸ್ ಆಫೀಸ್ ಎಂಪ್ಲಾಯಿಸ್ ಕೋ ಆಪರೇಟಿವ್ ಬಾಂಕ್​ಗೆ ಪಾವತಿಸಬೇಕಿದ್ದ ಬಾಕಿ ಮೊತ್ತವನ್ನು ಕಡಿತಗೊಳಿಸುವುದಕ್ಕೆ ನಿರ್ಬಂಧ ವಿಧಿಸಿ ಭಾರತೀಯ ಮಹಾಲೆಕ್ಕಪಾಲರು (ಸಿಎಜಿ) ಸುತ್ತೋಲೆ ಹೊರಡಿಸಿದ್ದರು.ಈ ಸುತ್ತೋಲೆಯನ್ನು ಹೈಕೋರ್ಟ್​ ರದ್ದುಪಡಿಸಿದೆ.

ಹೈಕೋರ್ಟ್
ಹೈಕೋರ್ಟ್
author img

By ETV Bharat Karnataka Team

Published : Mar 23, 2024, 10:47 PM IST

ಬೆಂಗಳೂರು : ಸಹಕಾರಿ ಬ್ಯಾಂಕುಗಳ ಸಿಬ್ಬಂದಿಯಿಂದ ಅವರು ಬ್ಯಾಂಕ್‌ಗೆ ಪಾವತಿಸಬೇಕಿದ್ದ ಬಾಕಿ ಮೊತ್ತವನ್ನು ಕಡಿತಗೊಳಿಸುವುದಕ್ಕೆ ನಿರ್ಬಂಧ ವಿಧಿಸಿ ಭಾರತೀಯ ಮಹಾಲೆಕ್ಕಪಾಲರು (ಸಿಎಜಿ) ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್ ರದ್ದುಪಡಿಸಿದೆ. ಮಹಾಲೆಕ್ಕಪಾಲರ ಸುತ್ತೋಲೆ ಸಂಬಂಧ ಅಕೌಂಟೆಂಟ್ ಜನರಲ್ಸ್ ಆಫೀಸ್ ಎಂಪ್ಲಾಯಿಸ್ ಕೋ ಆಪರೇಟಿವ್ ಬಾಂಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ.

ಈ ಆದೇಶದಿಂದ ಸಹಕಾರಿ ಬ್ಯಾಂಕುಗಳ ಸಿಬ್ಬಂದಿಯ ಒಪ್ಪಿಗೆ ಮೇರೆಗೆ ಅವರು ಬ್ಯಾಂಕ್​​ಗೆ ಪಾವತಿಸಬೇಕಿರುವ ಬಾಕಿ ಮೊತ್ತವನ್ನು ವೇತನದಲ್ಲಿ ಕಡಿತ ಮಾಡಿಕೊಳ್ಳಲು ಸಹಕಾರಿ ಸಂಘಗಳು ಮತ್ತು ಬ್ಯಾಂಕುಗಳಿಗೆ ಇದ್ದ ಅಡ್ಡಿ ತೆರವಾದಂತಾಗಿದೆ. ಅಲ್ಲದೇ, ಸಂಘಗಳು ಮತ್ತು ಬ್ಯಾಂಕುಗಳು ಇನ್ನು ಮುಂದೆ ಸಿಬ್ಬಂದಿಯಿಂದ ಬಾಕಿ ಮೊತ್ತ ವಸೂಲು ಮಾಡಲು ಅನುಕೂಲವಾಗಲಿದೆ. ಕ್ಲಾಸ್ -5 ರಡಿ ಸಿಎಜಿ ಸಿಬ್ಬಂದಿಯ ವೇತನದಿಂದ ಕಡಿತಗೊಳಿಸಲು ನಿರ್ಬಂಧ ವಿಧಿಸಿ 2020ರ ಜನವರಿ 29 ,30 ಹಾಗೂ ಫೆ.6 ರಂದು ಹೊರಡಿಸಿದ್ದ ಸುತ್ತೋಲೆಗಳನ್ನು ರದ್ದುಗೊಳಿಸಿತು.

ಒಮ್ಮೆ ಸಹಕಾರಿ ಸಂಘದ ಸದಸ್ಯರಾದರೆ, ಆತ ಸೊಸೈಟಿಯೊಂದಿಗೆ ಒಪ್ಪಂದ ಮಾಡಿಕೊಂಡಂತೆ. ಅಂತಹ ಒಪ್ಪಂದ ಸಿಬ್ಬಂದಿಯಿಂದ ಬಾಕಿಯನ್ನು ವಸೂಲು ಮಾಡಲು ಅವರ ವೇತನದಿಂದ ಶೇ.50ರಷ್ಟು ಮೀರದಂತೆ ಕಡಿತಗೊಳಿಸಲು ಅವಕಾಶವಿದೆ. ಅದಕ್ಕೆ ಕರ್ನಾಟಕ ಸಹಕಾರ ಸಂಘಗಳ ಕಾಯಿದೆ 1959ರ ಸೆಕ್ಷನ್ 34 ಅವಕಾಶ ಕಲ್ಪಿಸುತ್ತದೆ. ಹಾಗಾಗಿ ಸಿಎಜಿ ಕ್ಲಾಸ್-5ರಡಿ ಹೊರಡಿಸಿರುವ ಸುತ್ತೋಲೆ ಕಾನೂನು ಬಾಹಿರವಾಗಿದ್ದು, ಅದನ್ನು ರದ್ದುಗೊಳಿಸಲಾಗುತ್ತಿದೆ ಎಂದು ಪೀಠ ತಿಳಿಸಿದೆ.

ಅರ್ಜಿದಾರರ ಪರ ವಕೀಲರು, ಕರ್ನಾಟಕ ಸಹಕಾರ ಸಂಘಗಳ ಕಾಯಿದೆ 1959ರ ಸೆಕ್ಷನ್ 34ರಡಿ ಸಾಲಗಾರರು ಮತ್ತು ಸಹಕಾರಿ ಬ್ಯಾಂಕ್ ನಡುವೆ ಒಪ್ಪಂದವಾಗಿರುತ್ತದೆ. ಅದರಂತೆ ಸಾಲ ನೀಡಿದವರು ಸೊಸೈಟಿಗೆ ಬರಬೇಕಾಗಿರುವ ಹಣ ಮರುಪಾವತಿಗೆ ವೇತನದಲ್ಲಿ ಹಣವನ್ನು ಕಡಿತಮಾಡಿಕೊಳ್ಳಬಹುದು. ಸಿಬ್ಬಂದಿ ವೇತನದಿಂದ ಕಡಿತ ಮಾಡುವಂತಿಲ್ಲ ಎಂದು ಆದೇಶ ಹೊರಡಿಸುವ ಅಧಿಕಾರ ಸಿಎಜಿಗೆ ಇಲ್ಲ ಎಂದು ಹೇಳಿದರು.

ಸಿಎಜಿ ಪರ ವಕೀಲರು, ಕೆಲವು ಸಹಕಾರಿ ಸಂಸ್ಥೆಗಳು ಮತ್ತು ಬ್ಯಾಂಕುಗಳನ್ನು ಸೆಕ್ಷನ್ 34ರ ಹೊರಗಿಟ್ಟು ಸಿಎಜಿ ನೀತಿ ನಿರ್ಧಾರವನ್ನು ಕೈಗೊಂಡಿದೆ. ಇದರಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದಕ್ಕೆ ಅವಕಾಶ ವಿರುವುದಿಲ್ಲ ಎಂದು ವಾದ ಮಂಡಿಸಿದ್ದರು.

ಇದನ್ನೂ ಓದಿ : ಸಂಸದ ತೇಜಸ್ವಿ ಸೂರ್ಯ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ - High Court

ETV Bharat Logo

Copyright © 2024 Ushodaya Enterprises Pvt. Ltd., All Rights Reserved.