ETV Bharat / state

ನಿರ್ಮಾಪಕ ಸೌಂದರ್ಯ ಜಗದೀಶ್​ ಆತ್ಮಹತ್ಯೆ ಪ್ರಕರಣ: ಆರೋಪಿಗಳು ನಿರಾಳ - Soundarya Jagadish Suicide Case

ನಿರ್ಮಾಪಕ ಸೌಂದರ್ಯ ಜಗದೀಶ್‌ ಆತ್ಮಹತ್ಯೆ ಸಂಬಂಧ ಮೂವರು ಆರೋಪಿಗಳ ವಿರುದ್ಧದ ಪ್ರಕರಣವನ್ನು ಹೈಕೋರ್ಟ್‌ ರದ್ದು ಮಾಡಿದೆ. ಏಪ್ರಿಲ್​ 18ರಂದು ನಿರ್ಮಾಪಕ ಸೌಂದರ್ಯ ಜಗದೀಶ್‌ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

soundarya jagadish
ಸೌಂದರ್ಯ ಜಗದೀಶ್‌, ಹೈಕೋರ್ಟ್‌ (ETV Bharat)
author img

By ETV Bharat Karnataka Team

Published : Sep 4, 2024, 7:38 PM IST

ಬೆಂಗಳೂರು: ಚಲನಚಿತ್ರ ನಿರ್ಮಾಪಕ ಸೌಂದರ್ಯ ಜಗದೀಶ್‌ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಮೂವರು ಆರೋಪಿಗಳ ವಿರುದ್ಧದ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿ ಆದೇಶ ಹೊರಡಿಸಿದೆ.

ಪ್ರಕರಣ ರದ್ದು ಕೋರಿ ಸೌಂದರ್ಯ ಜಗದೀಶ್‌ ಅವರ ವ್ಯವಹಾರದ ಪಾಲುದಾರರಾದ ವಿ.ಎಸ್‌. ಸುರೇಶ್‌, ಎಸ್‌.ಪಿ. ಹೊಂಬಣ್ಣ ಮತ್ತು ಮ್ಯಾನೇಜರ್‌ ಎಸ್‌. ಸುಧೀಂದ್ರ ಸಲ್ಲಿಸಿದ್ದ ಅರ್ಜಿಗಳ ಕುರಿತು ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಪ್ರಕಟಿಸಿತು.

ಹೈಕೋರ್ಟ್​​​​ ಆದೇಶದಿಂದಾಗಿ ಸೌಂದರ್ಯ ಜಗದೀಶ್‌ ಅವರ ವ್ಯವಹಾರದ ಪಾಲುದಾರರಾದ ವಿ.ಎಸ್‌. ಸುರೇಶ್‌, ಎಸ್‌.ಪಿ.ಹೊಂಬಣ್ಣ ಮತ್ತು ಮ್ಯಾನೇಜರ್‌ ಎಸ್‌. ಸುಧೀಂದ್ರ ಸದ್ಯಕ್ಕೆ ನಿರಾಳರಾಗಿದ್ದಾರೆ. ಅಲ್ಲದೆ, ಮೃತರು ಬರೆದಿರುವ ಪತ್ರದಲ್ಲಿ ಎಲ್ಲೂ ಸಹ ಆತ್ಮಹತ್ಯೆಗೆ ಆರೋಪಿಗಳು ಪ್ರಚೋದನೆ ಅಥವಾ ಕುಮ್ಮುಕ್ಕು ನೀಡಿದ್ದಾರೆಂಬ ಉಲ್ಲೇಖವಿಲ್ಲ ಎಂಬ ಅರ್ಜಿದಾರರ ವಾದ ಮಾನ್ಯ ಮಾಡಿರುವ ನ್ಯಾಯಾಲಯ, ಪ್ರಕರಣವನ್ನು ರದ್ದುಗೊಳಿಸಿದೆ. ಅಲ್ಲದೆ, ಈ ಆದೇಶದಲ್ಲಿನ ಅಭಿಪ್ರಾಯಗಳು ಆರೋಪಿಗಳು ಮತ್ತು ಮೃತರ ನಡುವಿನ ಬೇರೆ ವಿವಾದಗಳಿಗೆ ಅನ್ವಯವಾಗುವುದಿಲ್ಲ ಎಂದು ಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.

ವಿಚಾರಣೆ ವೇಳೆ ಆರೋಪಿಗಳ ಪರ ವಕೀಲರು, ''ಸೌಂದರ್ಯ ಜಗದೀಶ್‌ ಆತ್ಮಹತ್ಯೆ ಮಾಡಿಕೊಂಡ ತಿಂಗಳ ಬಳಿಕ ಡೆತ್‌ ನೋಟ್‌ ಆಧರಿಸಿ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ, ಡೆತ್‌ ನೋಟ್‌ನಲ್ಲಿ ಎಲ್ಲೂ ಆತ್ಮಹತ್ಯೆಗೆ ಆರೋಪಿಗಳೇ ಪ್ರಚೋದನೆ ನೀಡಿದ್ದಾರೆಂಬ ಆರೋಪವಿಲ್ಲ. ಹಾಗಾಗಿ, ಪ್ರಕರಣ ರದ್ದುಗೊಳಿಸಬೇಕು'' ಎಂದು ಕೋರಿದರು.

ಪ್ರಕರಣ ತನಿಖೆಗೆ ತಡೆ ನೀಡದಂತೆ ಕೋರಿ ಜಗದೀಶ್​ ಪತ್ನಿ ಶಶಿರೇಖಾ ಪರ ವಕೀಲರು, ''ಸೌಂದರ್ಯ ಜಗದೀಶ್‌ ಬ್ಲ್ಯಾಕ್‌ಮೇಲ್‌ಗೆ ಒಳಗಾಗಿದ್ದರೆಂಬ ಆರೋಪವಿದೆ. ಪವಿತ್ರಾ ಗೌಡಗೆ ಜಗದೀಶ್‌ ಹಣ ವರ್ಗಾವಣೆ ಮಾಡಿದ್ದಾರೆಂದು ಆರೋಪಿ ಹೇಳಿದ್ದರು. ಹಲವು ಅಂಶಗಳನ್ನು ಬಹಿರಂಗಪಡಿಸುವುದಾಗಿ ಆರೋಪಿ ಸುರೇಶ್‌ ಹೇಳಿದ್ದರು. ಹಾಗಾಗಿ, ಸೌಂದರ್ಯ ಜಗದೀಶ್‌ ಬ್ಲ್ಯಾಕ್‌ಮೇಲ್‌ಗೆ ಒಳಗಾಗಿರುವ ಸಾಧ್ಯತೆ ಇರುವುದರಿಂದ ಆರೋಪಿಗಳು ಪ್ರಕರಣ ರದ್ದು ಕೋರಿ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಮನವಿ ಮಾಡಿದರು.

ಪ್ರಕರಣದ ಹಿನ್ನೆಲೆ: ಏಪ್ರಿಲ್​ 18ರಂದು ನಿರ್ಮಾಪಕ ಸೌಂದರ್ಯ ಜಗದೀಶ್‌ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆನಂತರ ಮೇ 18ರಂದು ಅವರ ಮನೆಯ ವಾರ್ಡ್‌ ರೋಬ್‌ ಸ್ವಚ್ಛ ಮಾಡುವಾಗ ಡೆತ್‌ ನೋಟ್‌ ಸಿಕ್ಕಿದ್ದು, ಅದರಲ್ಲಿ ಪತಿ ಆರೋಪಿಗಳ ಹೆಸರು ಉಲ್ಲೇಖಿಸಿದ್ದಾರೆಂದು ಜಗದೀಶ್‌ ಅವರ ಪತ್ನಿ ಶಶಿರೇಖಾ ಪೊಲೀಸರಿಗೆ ದೂರು ನೀಡಿದ್ದರು. ಅದನ್ನು ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದರು.

ಇದನ್ನೂ ಓದಿ: ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ವಿರುದ್ಧದ ಪ್ರಕರಣ ರದ್ದು - Siddhasiri Sugar Factory

ETV Bharat Logo

Copyright © 2024 Ushodaya Enterprises Pvt. Ltd., All Rights Reserved.