ETV Bharat / state

ಕಾನೂನು ಪದವಿ ಪಡೆದಿದ್ದ ಸರ್ಕಾರಿ ನೌಕರನಿಗೆ ಪ್ರಮಾಣ ಪತ್ರ ನೀಡಲು ಹೈಕೋರ್ಟ್ ಸೂಚನೆ

ಬೀದರ್​ನ ಸಿವಿಲ್ ನ್ಯಾಯಾಲಯದ ಮಾಜಿ ಸಹಾಯಕ ರಿಜಿಸ್ಟ್ರಾರ್ ಅವರಿಗೆ ಪ್ರಮಾಣ ಪತ್ರ ನೀಡಲು ರಾಜ್ಯ ವಕೀಲರ ಪರಿಷತ್​ಗೆ ಹೈಕೋರ್ಟ್​ ಸೂಚನೆ ನೀಡಿದೆ.

ಹೈಕೋರ್ಟ್
ಹೈಕೋರ್ಟ್
author img

By ETV Bharat Karnataka Team

Published : Feb 15, 2024, 11:20 AM IST

Updated : Feb 15, 2024, 11:50 AM IST

ಬೆಂಗಳೂರು : ಸರ್ಕಾರಿ ನೌಕರರಾಗಿದ್ದೂ ಕಾನೂನು ಪದವಿ ಪಡೆದಿದ್ದ ವ್ಯಕ್ತಿಯೊಬ್ಬರಿಗೆ ಸನ್ನದ್ದು ನೀಡಲು ನಿರಾಕರಿಸಿದ್ದ ರಾಜ್ಯ ವಕೀಲರ ಪರಿಷತ್ ಕ್ರಮವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ಬೀದರ್​ನ ಸಿವಿಲ್ ನ್ಯಾಯಾಲಯದ ಮಾಜಿ ಸಹಾಯಕ ರಿಜಿಸ್ಟ್ರಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಅರ್ಜಿದಾರರು ಸರ್ಕಾರಿ ನೌಕರರಾಗಿದ್ದು, ಕಾನೂನು ಪದವಿ ಪಡೆದಿದ್ದಾರೆ. ತರಗತಿಗಳಿಗೆ ಹಾಜರಾಗಿರುವ ಸಂಬಂಧ ಸೂಕ್ತ ದಾಖಲೆ ಸಲ್ಲಿಸಿಲ್ಲ ಎಂದು ತಿಳಿಸಿದ್ದ ಪರಿಷತ್ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿತ್ತು. ಈ ಕ್ರಮವನ್ನು ರದ್ದು ಪಡಿಸಿದ ನ್ಯಾಯಪೀಠ, ವಿಶ್ವವಿದ್ಯಾಲಯವು ಅರ್ಜಿದಾರರಿಗೆ ತಾತ್ಕಾಲಿಕ ಪದವಿ ಪ್ರಮಾಣಪತ್ರ ಮತ್ತು ಘಟಿಕೋತ್ಸವ ಪ್ರಮಾಣಪತ್ರ ನೀಡಿದೆ. ಹೀಗಾಗಿ ಪ್ರಮಾಣ ಪತ್ರವನ್ನು ನೀಡಲು ಅಭ್ಯರ್ಥಿಯು ಅರ್ಹರಾಗಿದ್ದಾರೆ ಎಂದು ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು? : ಅರ್ಜಿದಾರ ಪ್ರಾರಂಭದಲ್ಲಿ ಟೈಪಿಸ್ಟ್ ಆಗಿ ನೇಮಕಗೊಂಡ ನಂತರ, ಅವರು ಎಲ್ಎಲ್​ಬಿ ಕೋರ್ಸ್ ಮಾಡಲು ನಿರ್ಧರಿಸಿದರು. ಇದಕ್ಕಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಅನುಮತಿ ನೀಡಿದ್ದರು. ಹೀಗಾಗಿ, ಅವರು 2000ನೇ ವರ್ಷದಲ್ಲಿ ಕೋರ್ಸ್​ಗೆ ಸೇರಿ, ಯಶಸ್ವಿಯಾಗಿ ಪೂರ್ಣಗೊಳಿಸಿದರು. ಅದರಂತೆ ಅವರಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪದವಿ ಮತ್ತು ಘಟಿಕೋತ್ಸವ ಪ್ರಮಾಣಪತ್ರ ಪ್ರದಾನ ಮಾಡಲಾಗಿತ್ತು.

2018ರಲ್ಲಿ ನಿವೃತ್ತರಾದ ನಂತರ, ಅವರು ವಕೀಲರಾಗಿ ನೋಂದಾಯಿಸಲು ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್​ಬಿಸಿ) ಸಂಪರ್ಕಿಸಿದ್ದರು. ಆದರೆ, ಅವರು ಪದವಿ ಪ್ರಮಾಣಪತ್ರ ಪಡೆಯಲು ಅರ್ಹರಲ್ಲ ಎಂಬ ಕಾರಣ ನೀಡಿ ಅವರ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಭಾರತೀಯ ವಕೀಲರ ಪರಿಷತ್ (ಬಿಸಿಐ) ನಿರ್ಣಯಕ್ಕೆ ಅನುಗುಣವಾಗಿ ಇದನ್ನು ಮಾಡಲಾಗಿದೆ ಎಂದು ಕೆಎಸ್​ಬಿಸಿ ಹೇಳಿತ್ತು.

ವಿಶ್ವವಿದ್ಯಾಲಯಕ್ಕೆ ತನ್ನ ಅರ್ಹತೆಯ ಬಗ್ಗೆ ಯಾವುದೇ ಆತಂಕ ಇರಲಿಲ್ಲ ಮತ್ತು ಪರೀಕ್ಷೆ ಬರೆಯಲು ಹಾಗೂ ಅಂತಿಮವಾಗಿ ಪದವಿ ಪಡೆಯಲು ಅವಕಾಶ ನೀಡಿದೆ. ಕೆಎಸ್​ಬಿಸಿ ಪದವಿ ಪ್ರಮಾಣ ಪತ್ರ ಪ್ರಶ್ನಿಸಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು. ಈ ಆಧಾರದ ಮೇಲೆ, ಕೆಎಸ್​ಬಿಸಿ ಆದೇಶ ರದ್ದುಗೊಳಿಸಬೇಕು ಎಂದು ಕೋರಿದ್ದರು.

ಪರಿಷತ್ ಪರ ವಕೀಲರು, ಅರ್ಜಿದಾರರು ತಮ್ಮ ಎಲ್ಎಲ್​ಬಿ ಕೋರ್ಸ್ ಸಮಯದಲ್ಲಿ ನ್ಯಾಯಾಲಯದಲ್ಲಿ ಉದ್ಯೋಗದಲ್ಲಿದ್ದರು ಮತ್ತು ಅವರು ಕಾಲೇಜು ತರಗತಿಗಳಿಗೆ ಹಾಜರಾಗಿದ್ದಾರೆ ಎಂದು ತೋರಿಸಲು ಸಾಧ್ಯವಾಗಲಿಲ್ಲ ಎಂದು ಬಿಸಿಐ ಮತ್ತು ಕೆಎಸ್​ಬಿಸಿ ವಾದಿಸಿದ್ದವು. ಆದ್ದರಿಂದ, ಹಾಜರಾತಿ ಕೊರತೆಯಿಂದಾಗಿ ಅರ್ಜಿದಾರರ ಅರ್ಜಿ ತಿರಸ್ಕರಿಸಲಾಗಿದೆ. ಈ ನೆಲೆಯಲ್ಲಿ ಅರ್ಜಿ ವಜಾಗೊಳಿಸುವಂತೆ ಕೋರಿದ್ದರು.

ಇದನ್ನೂ ಓದಿ : ಸುಗ್ರೀವಾಜ್ಞೆ ಮೂಲಕ ಬಿಡಿಎ ಮುಚ್ಚುವುದೇ ಲೇಸು: ಹೈಕೋರ್ಟ್ ಮೌಖಿಕ ಅಭಿಪ್ರಾಯ

Last Updated : Feb 15, 2024, 11:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.