ETV Bharat / state

ಮಾತೃಭಾಷೆ ಕಲಿಕೆ ಕಡ್ಡಾಯವಾಗಬೇಕೆಂದು ಪ್ರತಿಪಾದಿಸಿದ್ದ ಕುವೆಂಪು ಅಭಿಪ್ರಾಯಕ್ಕೆ ನನ್ನ ಸಹಮತ ಇದೆ; ಮುಖ್ಯ ನ್ಯಾ. ಅಂಜಾರಿಯ

ಮಾತೃ ಭಾಷೆ ಕಲಿಕೆ ಕಡ್ಡಾಯವಾಗಬೇಕು ಎಂಬ ಅಭಿಪ್ರಾಯಕ್ಕೆ ನನ್ನ ಸಂಪೂರ್ಣ ಸಹಮತವಿದೆ ಎಂದು ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಅಂಜಾರಿಯ
ಮುಖ್ಯ ನ್ಯಾಯಮೂರ್ತಿ ಅಂಜಾರಿಯ
author img

By ETV Bharat Karnataka Team

Published : Feb 26, 2024, 4:04 PM IST

Updated : Feb 26, 2024, 7:14 PM IST

ಬೆಂಗಳೂರು: ಸಾಮಾಜಿಕ ಸಮಾನತೆಯ ಧ್ವನಿಯಾಗಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರ ಕವಿ ಕುವೆಂಪು ಅವರು ಆಂಗ್ಲ ಭಾಷೆಯ ಜೊತೆಗೆ ಮಾತೃ ಭಾಷೆ ಕಲಿಕೆ ಕಡ್ಡಾಯವಾಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.‌ ಅವರಂತೆ ಮತೃಭಾಷೆ ಕಲಿಯಬೇಕು ಎನ್ನುವುದಕ್ಕೆ ನನ್ನ ಸಂಪೂರ್ಣ ಸಹಮತವಿರಲಿದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯ ತಿಳಿಸಿದ್ದಾರೆ.

ರಾಜ್ಯ ವಕೀಲರ ಪರಿಷತ್‌ನಿಂದ ಹೈಕೋರ್ಟ್‌ನ ಹಾಲ್ ಒಂದರಲ್ಲಿ ಹಮ್ಮಿಕೊಂಡಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕುವೆಂಪು ಅವರು ಆಂಗ್ಲ ಭಾಷೆಯ ಜತೆ ಮಾತೃಭಾಷೆ ಕಡ್ಡಾಯಗೊಳಿಸಬೇಕು ಎಂದಿದ್ದರು. ಅದಕ್ಕೆ ನನ್ನ ಬೆಂಬಲವಿದೆ. ಗುಜರಾತಿ ನನಗೆ ಮಾತೃಭಾಷೆಯಾಗಿತ್ತು, ಕನ್ನಡ ನನ್ನ ಕರ್ಮ ಭಾಷೆಯಾಗಿದೆ ಎಂದರು. ಕರ್ನಾಟಕದೊಂದಿಗೆ ನನಗೆ ಹಲವು ರೀತಿಯಲ್ಲಿ ಸಂಬಂಧವಿದ್ದು, ಗುಜರಾತ್ ನ್ಯಾಯಾಲಯಲ್ಲಿ ವಕೀಲನಾಗಿ ಸೇವೆ ಪ್ರಾರಂಭಿಸಿದ ಸಂದರ್ಭದಲ್ಲಿ ನವೀನ್ ಚಂದ್ರ ಲಾ ಫೌಂಡೇಷನ್ ವತಿಯಿಂದ ಫೆಲೋಶಿಪ್ (ಶಿಷ್ಯವೇತನ) ಲಭ್ಯವಾಗಿತ್ತು.

ಈ ಫೆಲೋಶಿಪ್‌ನ್ನು ಸುಪ್ರೀಂಕೊರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಕನ್ನಡಿಗ ನ್ಯಾ. ಎಂ.ಎನ್. ವೆಂಕಟಾಚಲಯ್ಯ ಅವರು ಪ್ರದಾನ ಮಾಡಿದ್ದರು. ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡ ಸಂದರ್ಭದಲ್ಲಿ ಕೇಂದ್ರದಲ್ಲಿ ಕನ್ನಡಿಗರಾಗಿದ್ದ ಎಂ. ವೀರಪ್ಪ ಮೋಯ್ಲಿ ಅವರು ಕೇಂದ್ರ ನಾನೂನು ಸಚಿವರಾಗಿದ್ದರು. ಗುಜರಾತ್ ಹೈಕೋರ್ಟ್‌ಗೆ ನ್ಯಾಯಮೂರ್ತಿಯಾಗಿ ನೇಮಕಗೊಂಡ ಬಳಿಕ ಕರ್ನಾಟಕ ಹೈಕೋರ್ಟನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಅವರೊಂದಿಗೆ ಮೊದಲ ಬಾರಿ ವಿಭಾಗೀಯ ಪೀಠ ಹಂಚಿಕೊಂಡಿದ್ದೆ ಎಂದು ವಿವರಿಸಿದರು.

ಗುಜರಾತ್ ಮತ್ತು ಕರ್ನಾಟಕ ರಾಜ್ಯಕ್ಕೆ ಅವಿನಾಭಾವ ಸಂಬಧವಿದ್ದು, ಕರ್ನಾಟಕ ಮೂಲದ ಚಾಲುಕ್ಯ ರಾಜ ಮನೆತನ ಗುಜರಾತ್‌ನಲ್ಲಿಯೂ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿತ್ತು. ರಾಷ್ಟ್ರ ಕವಿ ಕುವೆಂಪು ಮತ್ತು ಗುಜರಾತ್ ರಾಜ್ಯದ ಉಮಾಶಂಕರ್ ಜೋಶಿ ಅವರು ಒಂದೇ ವರ್ಷ ಒಟ್ಟಾಗಿ ಜ್ಞಾನ ಪೀಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು ಎಂದು ಹೇಳಿದರು.

ಸಾಂಸ್ಕೃತಿವಾಗಿ ಅತ್ಯಂತ ಶ್ರೀಮಂತವಾಗಿರುವ ಕರ್ನಾಟಕ ರಾಜ್ಯ ಸಂಗೀತಗಾರರು, ಕವಿಗಳು ಮತ್ತು ಸಾಹಿತ್ಯಗಾರರನ್ನು ಹುಟ್ಟುಹಾಕಿದೆ. ಹೈಕೋರ್ಟನ ಮತ್ತೊಂದು ಪೀಠವಿರುವ ಧಾರವಾಡದಲ್ಲಿ ಪಂಡಿತ್ ಭೀಮಸೇನ್ ಜೋಶಿ, ಕುಮಾರ್ ಗಂಧರ್ವ ಸೇರಿದಂತೆ ಇತರರ ಜನ್ಮ ಸ್ಥಳವಾಗಿದೆ ಎಂದು ಹೇಳಿದರು. ನ್ಯಾಯಾಂಗವು ಪ್ರಜಾಪ್ರಭುತ್ವ ವ್ಯವಸ್ಥೆಯ ಅತ್ಯಂತ ಪ್ರಬಲ ಅಂಗಗಳಲ್ಲಿ ಒಂದಾಗಿದ್ದು, ಅಂತಿಮ ಪರಿಹಾರ ಕಂಡುಕೊಳ್ಳಲು ಅಸ್ತ್ರವಾಗಿದೆ. ಸಂವಿಧಾನದ ಪ್ರಸ್ತಾವನೆಯಲ್ಲಿ ತಿಳಿಸಿರುವಂತೆ ಎಲ್ಲ ವರ್ಗದವರಿಗೂ ಘನತೆಯನ್ನು ಖಾತರಿ ಪಡಿಸಬೇಕಾಗಿದ್ದು, ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿದು ಅದನ್ನು ಸಕ್ರಿಯಗೊಳಿಸಿ ಮುಂದುವರೆಸುವುದು ಇದರ ಜವಾಬ್ದಾರಿಯಾಗಿರಲಿದೆ ಎಂದರು.

ಅಲ್ಲದೆ, ಪ್ರಕರಣಗಳನ್ನು ಸರಿಯಾದ ರೀತಿಯಲ್ಲಿ ತಾಳ್ಮೆಯಿಂದ ಕೇಳಿ ಅರ್ಥ ಮಾಡಿಕೊಳ್ಳುವುದು ನ್ಯಾಯಯುತವಾಗಿ ನಿರ್ಧರವನ್ನು ತೆಗೆದುಕೊಳ್ಳಲು ಧೈರ್ಯವನ್ನು ನೀಡಬೇಕು. ನ್ಯಾಯಾಂಗ ಪ್ರಕ್ರಿಯೆಯಲ್ಲಿ ತಪ್ಪಾಗದಂತೆ ನಡೆಯಬೇಕಾಗಿದೆ. ಹೈಕೋರ್ಟ್‌ನ ಇತರೆ ಸಹೋದರ ನ್ಯಾಯಮೂರ್ತಿಗಳು ಹಾಗೂ ವಕೀಲರ ವೃಂದ ನನ್ನ ಎರಡೂ ಕೈಗಳಿದ್ದಂತೆ. ಈ ನಿಟ್ಟಿನಲ್ಲಿ ನಿಮ್ಮೆಲರ ಸಹಕಾರವು ನನಗೆ ಶಕ್ತಿಯಾಗಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಹೈಕೋರ್ಟ್‌ನ ಎಲ್ಲ ನ್ಯಾಯಮೂರ್ತಿಗಳು, ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ, ವಕೀಲರ ಪರಿಷತ್ ಅಧ್ಯಕ್ಷ ವಿಶಾಲ್ ರಘು ಸೇರಿದಂತೆ ಹಲವು ವಕೀಲರು ಭಾಗವಹಿಸಿದ್ದರು.

ಇದನ್ನೂ ಓದಿ: ರಾಜ್ಯಸಭಾ ಚುನಾವಣೆ ಮುನ್ನ ಸಿಎಂ, ಡಿಸಿಎಂ ಭೇಟಿಯಾದ ಜನಾರ್ದನ ರೆಡ್ಡಿ

Last Updated : Feb 26, 2024, 7:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.