ಬೆಂಗಳೂರು: ಅನಗತ್ಯವಾಗಿ ಹೈ ಬೀಮ್ ಲೈಟ್ ಉಪಯೋಗಿಸುತ್ತಿದ್ದ ವಾಹನ ಚಾಲಕರಿಗೆ ಬೆಂಗಳೂರು ಸಂಚಾರಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಾತ್ರಿ ಸಮಯದಲ್ಲಿ ಸಂಭವಿಸುತ್ತಿರುವ ಅಪಘಾತಗಳಿಗೆ ಹೈ ಬೀಮ್ ಲೈಟ್ ಬಳಕೆ ಸಹ ಕಾರಣ ಆಗುತ್ತಿರುವುದರಿಂದ ತಡರಾತ್ರಿ ವಿಶೇಷ ಕಾರ್ಯಾಚರಣೆ ಕೈಗೊಂಡ ಬೆಂಗಳೂರು ಸಂಚಾರ ಪಶ್ಚಿಮ ವಿಭಾಗದ ಪೊಲೀಸರು, ಅನಗತ್ಯವಾಗಿ ಹೈ ಬೀಮ್ ಲೈಟ್ ಬಳಸುತ್ತಿದ್ದ ವಾಹನ ಚಾಲಕರ ವಿರುದ್ಧ ಮೋಟಾರು ವಾಹನ ಕಾಯ್ದೆ 177ರಡಿ ಒಟ್ಟು 239 ಪ್ರಕರಣ ಪ್ರಕರಣಗಳನ್ನ ದಾಖಲಿಸಿದ್ದಾರೆ.
ಅಲ್ಲದೆ ವಾಹನ ಚಾಲಕರು, ಸವಾರರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಸೂಚಿಸುವುದರೊಂದಿಗೆ ಸಂಚಾರ ನಿಯಮಗಳ ಮಹತ್ವದ ಕುರಿತು ಅರಿವು ಮೂಡಿಸಿದ್ದಾರೆ.
ಹೈ ಬೀಮ್ ಲೈಟ್ ಯಾವಾಗ ಬಳಸಬಹುದು..?
ಹೈ-ಬೀಮ್ ಹೆಡ್‌ಲೈಟ್‌ಗಳು ಸಾಮಾನ್ಯ ಹೆಡ್ ಹೆಡ್‌ಲೈಟ್‌ಗಳಿಗಿಂತಲೂ ಹೆಚ್ಚು ಪ್ರಕಾಶವಾದ ಬೆಳಕನ್ನ ಹೊರಸೂಸುತ್ತವೆ. ಅವುಗಳನ್ನ ಸೂಕ್ತವಾಗಿ ಬಳಸದಿದ್ದರೆ ಇತರ ವಾಹನ ಚಾಲಕರಿಗೆ ಸಂಚಾರಕ್ಕೆ ಅಡ್ಡಿಪಡಿಸಬಹುದು ಅಥವಾ ಅಪಾಯ ತಂದೊಡ್ಡುವ ಸಾಧ್ಯತೆಯಿರುತ್ತದೆ. 1989ರ ಕೇಂದ್ರ ಮೋಟಾರು ವಾಹನ ಕಾಯ್ದೆಯ ಅನುಸಾರ ''ವಾಹನದ ಮುಂಬದಿಯ ರಸ್ತೆ ಗೋಚರಿಸದಿದ್ದಾಗ (ಮಂಜು, ಹೊಗೆ, ಮಳೆ, ದಟ್ಟ ಕತ್ತಲು ಕವಿದ ಮತ್ತಿತರ ಸಂದರ್ಭಗಳಲ್ಲಿ) ಹೈ ಬೀಮ್ ಹೆಡ್ ಲೈಟ್ಸ್ ಬಳಸಬಹುದು.
ಆದರೆ ನಿಮ್ಮ ವಾಹನದ ಮುಂದಿರುವ ವಾಹನದ ಹಿಂದಿನ ದೀಪಗಳ ಬೆಳಕು ನಿಮಗೆ ರಸ್ತೆ ಗೋಚರಿಸಲು ಸಹಾಯವಾಗುತ್ತಿಲ್ಲ ಅಥವಾ ಮುಂದೆ ಯಾರೂ ಇಲ್ಲ ಎಂದರಷ್ಟೇ ಹೈ ಬೀಮ್ ಬಳಸಬಹುದಾಗಿದೆ. ಮತ್ತು ಎದುರು ದಿಕ್ಕಿನಿಂದ ಮತ್ತೊಂದು ವಾಹನ ಬಂದಾಗ / ಜನವಸತಿ ಪ್ರದೇಶಗಳಲ್ಲಿ / ನಗರ ಪ್ರದೇಶಗಳಲ್ಲಿ / ಸಂಚಾರ ದಟ್ಟಣೆಯಿರುವ ಕಡೆಗಳಲ್ಲಿ ಹೈ ಬೀಮ್ ಬಳಸುವಂತಿಲ್ಲ.
ಇದನ್ನೂ ಓದಿ: ನೂತನ ಕ್ರಿಮಿನಲ್ ಕಾನೂನಿನನ್ವಯ ಮೊದಲ ದಿನವೇ ಬೆಂಗಳೂರಿನಲ್ಲಿ ದಾಖಲಾದ ಪ್ರಕರಣಗಳೆಷ್ಟು ಗೊತ್ತಾ? - New Criminal law cases