ETV Bharat / state

ಬೆಂಗಳೂರಿನಲ್ಲಿ ಮುಂಗಾರು ಮಳೆ ಆರ್ಭಟ ಶುರು; ಬಡಾವಣೆಗಳಲ್ಲಿ ಮನೆಗೆ ನುಗ್ಗಿದ ನೀರು - Bengaluru Rain - BENGALURU RAIN

ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದ್ದು, ಇಂದು ಸಂಜೆ ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿಯಿತು.

monsoon-rain
ಬೆಂಗಳೂರಿನಲ್ಲಿ ಭಾರೀ ಮಳೆ (ETV Bharat)
author img

By ETV Bharat Karnataka Team

Published : Jun 2, 2024, 10:09 PM IST

Updated : Jun 2, 2024, 10:31 PM IST

ಬೆಂಗಳೂರಿನಲ್ಲಿ ಮುಂಗಾರು ಮಳೆ ಆರ್ಭಟ ಶುರು (ETV Bharat)

ಬೆಂಗಳೂರು: ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಸುಳಿಗಾಳಿ ಎದ್ದು ಮುಂಗಾರು ಮಾರುತಗಳು ರಾಜ್ಯ ಪ್ರವೇಶಿಸಿವೆ. ಕಳೆದ ವರ್ಷ ಜೂನ್ 15ರಂದು ಮುಂಗಾರು ಮಾರುತ ಪ್ರವೇಶಿಸಿತ್ತು. ಆದರೆ ಈ ಬಾರಿ ಅವಧಿಗೆ ಮೊದಲೇ ರಾಜ್ಯಕ್ಕೆ ಮುಂಗಾರು ಮಾರುತ ಪ್ರವೇಶ ಮಾಡಿದೆ. ಹೀಗಾಗಿ ಹವಾಮಾನ ಇಲಾಖೆ ಈ ಬಾರಿ ಉತ್ತಮ ಮಳೆಯಾಗುವ ಮುನ್ಸೂಚನೆ ನೀಡಿದೆ.

ಈ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ 5 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಈಗಾಗಲೇ ಮಳೆಗೆ ನಗರದ ಅನೇಕ ಕಡೆ ಭಾರೀ ಅವಾಂತರಗಳು ಸಂಭವಿಸಿವೆ. ಭಾನುವಾರ ಸಂಜೆ ಕೂಡ ಸಿಲಿಕಾನ್ ಸಿಟಿಯಲ್ಲಿ ಮಳೆ ಆರ್ಭಟ ಶುರುವಾಗಿದ್ದು, ಹಲವೆಡೆ ಸುರಿಯುತ್ತಿದೆ.

ನಗರದ ಶೇಷಾದ್ರಿಪುರಂ, ಶಿವಾನಂದ ಸರ್ಕಲ್, ವಿಜಯನಗರ, ಶಿವಾಜಿನಗರ, ಮಲ್ಲೇಶ್ವರಂ, ವಸಂತನಗರ, ಶಾಂತಿನಗರ, ಜಯನಗರ, ಯಶವಂತಪುರ, ರಾಜಾಜಿನಗರ, ಕೋರಮಂಗಲ, ಎಂ.ಜಿ ರಸ್ತೆ, ಕಬ್ಬನ್ ಪಾರ್ಕ್ ಸೇರಿದಂತೆ ನಗರದ ಹಲವೆಡೆ ಮಳೆಯಾಗುತ್ತಿದೆ. ನಿನ್ನೆ ಕೂಡ ಭರ್ಜರಿ ಮಳೆ ಆಗಿದ್ದು, ಇಂದು ಸಹ ಮಳೆ ಮುಂದುವರೆದಿದೆ. ಈ ವಾರ ಪೂರ್ತಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಯಲಚೇನಹಳ್ಳಿಯ ಕನಕನಗರದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದ್ದು, 15 ವರ್ಷಗಳಿಂದ ನಿವಾಸಿಗಳು ಪರದಾಡುತ್ತಿದ್ದಾರೆ. ನಿವಾಸಿಗಳು ಇಂದು ಬೆಳಗ್ಗೆ ರಸ್ತೆಗಿಳಿದು ಪ್ರತಿಭಟನೆ ಕೂಡ ನಡೆಸಿದ್ದರು. ಇಂದೂ ಕೂಡ ಕೊಳಚೆ ನೀರು, ಮಳೆ ನೀರು, ಚರಂಡಿ ನೀರು ಬಡಾವಣೆ ಪ್ರವೇಶಿಸಿದೆ.

ಸದ್ಯ ಜೆಪಿ ನಗರದ ಬಳಿ ಮರ ಬಿದ್ದ ಕಾರಣ ಶಾಲಿನಿ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿದೆ. ಬಿಟಿಎಂ ಲೇಔಟ್‌ನಲ್ಲಿ ಮರ ಬಿದ್ದ ಕಾರಣ ಅರವಿಂದ ಜಂಕ್ಷನ್ ಕಡೆಗೆ ಕೂಡ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ. ಕಸ್ತೂರಿ ನಗರ ರಸ್ತೆಯಲ್ಲಿ ನೀರು ನಿಂತಿರುವುದರಿಂದ ಕಸ್ತೂರಿ ನಗರದಿಂದ ಹೆಬ್ಬಾಳ ಸಂಚಾರದಲ್ಲಿ ಕೂಡ ಸಮಸ್ಯೆಯಾಗಿದೆ.

ಇದನ್ನೂ ಓದಿ: ನಗರದಲ್ಲಿ ಜೂನ್ ತಿಂಗಳ ಮೊದಲ ದಿನವೇ ಗುಡುಗು ಮಿಂಚು ಸಹಿತ ಭಾರಿ ಮಳೆ - Karnataka Weather

Last Updated : Jun 2, 2024, 10:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.