ETV Bharat / state

ರಾತ್ರಿ ಸುರಿದ ಮಳೆಗೆ ಅರ್ಧ ಬೆಂಗಳೂರು ಜಲಾವೃತ, ರಸ್ತೆಗಳಲ್ಲಿ ಪ್ರವಾಹ ಪರಿಸ್ಥಿತಿ - HEAVY RAINS

ಬೆಂಗಳೂರು ನಗರದಲ್ಲಿ ರಾತ್ರಿ ಸುರಿದ ಮಳೆಗೆ ರಸ್ತೆಗಳು ಜಲಾವೃತಗೊಂಡಿವೆ. ಯಲಹಂಕದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

HEAVY RAINS
ಪ್ರವಾಹ ಪರಿಸ್ಥಿತಿ (ETV Bharat)
author img

By ETV Bharat Karnataka Team

Published : Oct 22, 2024, 11:24 AM IST

Updated : Oct 22, 2024, 12:25 PM IST

ಬೆಂಗಳೂರು : ನಗರದಲ್ಲಿ ತಡರಾತ್ರಿ ಸುರಿದ ಮಳೆ ಮತ್ತಷ್ಟು ಅವಾಂತರಗಳನ್ನ ಸೃಷ್ಟಿಸಿದೆ. ಯಲಹಂಕದ ಕೋಗಿಲು ಕ್ರಾಸ್ ಬಳಿ ಇರುವ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್ ಮುಂದೆ ಅಕ್ಷರಶಃ ಪ್ರವಾಹ ಸದೃಶ ವಾತಾವರಣ ನಿರ್ಮಾಣವಾಗಿದೆ. ಸುಮಾರು 2,500 ಜನರಿರುವ ಕೇಂದ್ರಿಯ ವಿಹಾರ ಅಪಾರ್ಟ್‌ಮೆಂಟ್ ಸುತ್ತಲೂ ನೀರು ತುಂಬಿಕೊಂಡಿದ್ದು, NDRF ತಂಡ ಬೋಟ್ ಬಳಸಿ ನಿವಾಸಿಗಳಿಗೆ ನೆರವು ಒದಗಿಸುತ್ತಿದೆ‌.

ಶಾಲಾ ಮಕ್ಕಳ ಪರದಾಟ: ಯಲಹಂಕದಲ್ಲಿ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿರುವುದು ಶಾಲಾ ಮಕ್ಕಳಿಗೆ ಸಂಕಷ್ಟ ತಂದೊಡ್ಡಿದೆ. ರಸ್ತೆಗಳು ಜಲಾವೃತಗೊಂಡಿರುವ ಕಾರಣ ಶಾಲಾ ಬಸ್‌ಗಳು ಬರಲಾರದೇ, ನೀರಿನ‌ ಮಧ್ಯೆಯೇ ಮಕ್ಕಳು ನಡೆದು ಹೋಗುವ ಅನಿವಾರ್ಯತೆ ಉಂಟಾಗಿದೆ.

ನಗರದಲ್ಲಿ ತಡರಾತ್ರಿ ಸುರಿದ ಮಳೆ ಮತ್ತಷ್ಟು ಅವಾಂತರ (ETV Bharat)

ಮತ್ತೊಂದೆಡೆ ಚಿಕ್ಕಬಾಣಾವರದ ದ್ವಾರಕಾ ನಗರದ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ. ರಾತ್ರಿ ಸುರಿದ ಮಳೆ ಪರಿಣಾಮ ರಾಜ ಕಾಲುವೆ ನೀರು ಏರಿಯಾಗೆ ನುಗ್ಗಿ ಸಂಪೂರ್ಣ ಜಲಾವೃತಗೊಂಡಿದೆ. 30ಕ್ಕೂ ಅಧಿಕ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಅಗತ್ಯ ಸಾಮಗ್ರಿಗಳಿಗಾಗಿಯೂ ಏರಿಯಾದಿಂದ ಹೊರಬರಲಾರದ ಪರಿಸ್ಥಿತಿ ನಿರ್ಮಾಣವಾಗಿದೆ‌.

ಇದನ್ನೂ ಓದಿ: ರಾತ್ರಿ ಸುರಿದ ಮಳೆಗೆ ಅರ್ಧ ಬೆಂಗಳೂರು ಜಲಾವೃತ, ರಾಜ್ಯದಲ್ಲಿ 4 ದಿನ ಬಿರುಸಾದ ಮಳೆ: ಮತ್ತೆ ಯೆಲ್ಲೋ ಅಲರ್ಟ್ ಘೋಷಣೆ

Last Updated : Oct 22, 2024, 12:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.