ETV Bharat / state

ಬೆಂಗಳೂರಲ್ಲಿ ಸಂಜೆ ಮತ್ತೆ ಮಳೆಯ ಆರ್ಭಟ - RAIN IN BENGALURU - RAIN IN BENGALURU

ಬೆಂಗಳೂರು ನಗರದ ಹಲವೆಡೆ ಗುಡುಗು ಮಿಂಚು ಸಹಿತ ಮಳೆಯಾಗಿದೆ.

Heavy rain
ಬೆಂಗಳೂರಲ್ಲಿ ಸಂಜೆ ಮತ್ತೆ ಮಳೆಯ ಆರ್ಭಟ (ETV Bharat)
author img

By ETV Bharat Karnataka Team

Published : May 8, 2024, 7:34 PM IST

Updated : May 8, 2024, 9:32 PM IST

ಬೆಂಗಳೂರಲ್ಲಿ ಸಂಜೆ ಮತ್ತೆ ಮಳೆಯ ಆರ್ಭಟ (ETV Bharat)

ಬೆಂಗಳೂರು : ಬೇಸಿಗೆ ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ನಗರದಲ್ಲಿ ಗುಡುಗು ಸಿಡಿಲಿನೊಂದಿಗೆ ಭಾರಿ ಮಳೆಯಾಗಿದೆ. ಒಂದು ವಾರದಲ್ಲಿ ನಾಲ್ಕು ದಿನ ಮಳೆಯಾಗಿದೆ. ಬುಧವಾರ ಕೂಡ ಸುರಿದ ಮಳೆ ನಗರದಲ್ಲಿ ಅವಾಂತರವನ್ನೇ ಸೃಷ್ಟಿಸಿದೆ.

ಮೆಜೆಸ್ಟಿಕ್, ಕೆ. ಆರ್ ಮಾರ್ಕೆಟ್, ಜಯನಗರ, ಜೆಜೆಆರ್ ನಗರ, ಟೌನ್ ಹಾಲ್ ಸುತ್ತಮುತ್ತ ಭಾರಿ ಮಳೆ ಬಿದ್ದಿದೆ. ಸದಾಶಿವ ನಗರ, ಪ್ಯಾಲೇಸ್ ಗುಟ್ಟಹಳ್ಳಿ, ಮಲ್ಲೇಶ್ವರ, ವೈಯಾಲಿಕಾವಲ್, ಅರಮನೆ ಮೈದಾನ, ಶೇಷಾದ್ರಿಪುರ, ಯಶವಂತಪುರ ಸುತ್ತಮುತ್ತ ಆಲಿಕಲ್ಲು ಮಳೆಯಾಗಿದೆ. ವಿಧಾನಸೌಧ, ಕೆ. ಆರ್ ಸರ್ಕಲ್, ಕಾರ್ಪೋರೇಷನ್, ಟೌನ್ ಹಾಲ್ ಸುತ್ತಮುತ್ತ ಗುಡುಗು, ಮಿಂಚು ಸಹಿತ ಜೋರು ಮಳೆ ಬಿದ್ದಿದೆ.

ನಗರದ ಹಲವು ಕಡೆ ಮರಗಳು ಧರೆಗುರುಳಿವೆ. ಹಲವು ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಇನ್ನೂ ಕೆಲವು ಕಡೆ ವಾಹನ ದಟ್ಟಣೆ ಉಂಟಾಗಿತ್ತು. ಸಂಜೆ ಆಫೀಸ್ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಜನರು ಮಳೆಯಲ್ಲಿ ಸಿಲುಕಿ ಒದ್ದಾಡಿದರು. ಕೆಲವರು ಅಲ್ಲಲ್ಲಿ ಅಂಗಡಿಗಳ ಮುಂದೆ ನಿಂತು ಮಳೆಯಿಂದ ರಕ್ಷಣೆ ಪಡೆದರು.

ವಸಂತನಗರದಲ್ಲಿ ಮಳೆಗೆ ಆಟೋ ಮೇಲೆ ಮರದ ಜೊತೆಗೆ ವಿದ್ಯುತ್ ಕಂಬ ಬಿದ್ದು, ಆಟೋ ಮುಂಭಾಗ ಫುಲ್ ಜಖಂ ಆಗಿದೆ. ಅದೃಷ್ಟವಶಾತ್ ಡ್ರೈವರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರಿಗೆ ಚಿಕ್ಕ ಪುಟ್ಟ ಗಾಯಗಳಾಗಿವೆ. ಗಾಳಿ ಸಹಿತ ಸುರಿದ ಜೋರು ಮಳೆಗೆ ವಿದ್ಯುತ್ ಕಂಬ ಜೊತೆಗೆ ಮರ ಬಿದ್ದಿದೆ. ಜ್ಞಾನಭಾರತಿ ಜಂಕ್ಷನ್​ನಲ್ಲಿ ಮಳೆಯ ಕಾರಣ ರಸ್ತೆಯ ತುಂಬಾ ನೀರು ಹರಿದಿದ್ದು, ವಾಹನ ಸವಾರರು ಪರದಾಡಿದ ದೃಶ್ಯಗಳು ಕಂಡುಬಂದವು.

ಸತತ ಏಳು ದಿನ ಮಳೆ ಸುರಿಯಲಿದೆ. ಮೇ 13 ಹಾಗೂ 14ರಂದು ರಾಜ್ಯಾದ್ಯಂತ ಹೆಚ್ಚಿನ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇಂದು ಮಳೆ: ಹವಾಮಾನ ಇಲಾಖೆ ಮುನ್ಸೂಚನೆ - Rainfall Alert

Last Updated : May 8, 2024, 9:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.