ಬೆಂಗಳೂರು: ಪೆನ್ಡ್ರೈವ್ ಪಿತಾಮಹನೇ ಕುಮಾರಸ್ವಾಮಿ. ಅವರ ಪೆನ್ಡ್ರೈವ್ನಲ್ಲಿದ್ದಿದ್ದು ಅದೇ ಎಂದು ಸಚಿವ ಕೆ.ಎನ್.ರಾಜಣ್ಣ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು, ಎಸ್ಐಟಿಗೆ ಸಂಪೂರ್ಣ ಸಹಕಾರ ಇದೆ. ಅವರು ಏನೋ ಬೇಕೋ ಕ್ರಮ ಕೈಗೊಳ್ಳಬಹುದು. ಅಪರಾಧಿಗಳು ಯಾರಿದ್ದಾರೆ ಶಿಕ್ಷೆ ಕೊಡಿಸ್ತಾರೆ. ದೇವರಾಜೇಗೌಡ ಎಸ್ಐಟಿ ಮೇಲೆ ನಂಬಿಕೆ ಇದೆ ಅಂದ. ಆಮೇಲೆ ಇಲ್ಲ ಅಂದರೆ ಹೇಗೆ?. ಯಾವ ಸಂಗತಿ ಮೇಲೆ ಸರಿ ಇದೆ ಎಂದಿದ್ದ. ಆ ಮೇಲೆ ಯಾವುದು ಸರಿ ಇಲ್ಲ ಹೇಳಲಿ. ಸಿಬಿಐನಲ್ಲಿರೋರು ನಮ್ಮ ಪೊಲೀಸರೇ. ಇಲ್ಲಿ ಇರೋರು ನಮ್ಮ ಪೊಲೀಸರೇ. ಅವರ ಮೇಲೆ ನಂಬಿಕೆ ಇದ್ರೆ ಇವರ ಮೇಲೂ ಇರಬೇಕಲ್ಲ. ಚೋರ್ ಬಚಾವ್ ಇನ್ಸಿಟಿಟ್ಯೂಟ್ ಅಂದವರು ಯಾರು?. ಸಿಬಿಐಗೆ ಹೇಳಿದ್ದು ಇದೇ ಕುಮಾರಸ್ವಾಮಿ ಅಲ್ವೇ ಎಂದು ಪ್ರಶ್ನಿಸಿದರು.
ಡಿಕೆ ಸುತ್ತ ಇರೋರು ತಲೆ ಹಿಡಿಯೋರು ಎಂಬ ಹೆಚ್ಡಿಕೆ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ, ಕುಮಾರಸ್ವಾಮಿ ಸುತ್ತ ಇರೋರು ಯಾರು?. ಅಲ್ಲಿರುವವರು ಅವರೇ ತಾನೇ. ವಿಪಕ್ಷದಲ್ಲಿರೋರು ಆರೋಪ ಮಾಡೋಕೆ ಇರೋರು. ಅವರು ಪರವಾಗಿ ಮಾತನಾಡೋಕೆ ಅಂತಾ ಹೇಳೋಕೆ ಆಗುತ್ತಾ?. 2,647 ಪೆನ್ ಡ್ರೈವ್ ಇದೆ ಅಂತಾರೆ. ಹಾಗಾಗಿ ಸಂತ್ರಸ್ತರಿಂದ ದೂರು ಬಂದಿರಬಹುದು. ಹೆಲ್ಪ್ಲೈನ್ಗೆ ಬಂದಿರಬಹುದು ಎಂದರು.
ರಮೇಶ್ ಜಾರಕಿಹೊಳಿ ಕೇಸ್ ಅಲ್ಲೂ ಕ್ರಮವಿಲ್ಲ. ಯಾರು ಮಾಡಿದ್ರು ಅದು ತಪ್ಪೇ ಅಲ್ವೇ?. ಪ್ರೈವಸಿಗೆ ಅಲ್ಲೂ ಹೊಡೆತಬಿದ್ದಿಲ್ವೇ?. ಯಾಕೆ ಆಗ ಕ್ರಮ ಜರುಗಿಸಲಿಲ್ಲ. ರೇವಣ್ಣ ಕಿಡ್ನಾಪ್ ಕೇಸ್ನಲ್ಲಿ ಜೆಸಿಗೆ ಕಳಿಸ್ತಾರೆ ಅಂದ್ರೆ ಏನೋ ಇರಬೇಕು. ಕುಮಾರಸ್ವಾಮಿ ನಮ್ಮ ಕುಟುಂಬ ಬೇರೆ ಅವರದ್ದು ಬೇರೆ ಅಂದಿದ್ದಾರಲ್ಲ. ದೇವೇಗೌಡರ ಪತ್ರಕ್ಕೆ ಇನ್ನೇನಿದೆ ಮಾನ್ಯತೆ. ನಮ್ಮ ಕುಟುಂಬ ಅಂದ್ರೆ ಹೇಗೆ?. ಕುಮಾರಸ್ವಾಮಿ ಎರಡು ಬೇರೆ ಬೇರೆ ಅಂತಾರಲ್ಲ. ಯಾವ ಕುಟುಂಬಕ್ಕೆ ಅಗೌರವ ಆಗ್ತಿದೆ ಹೇಳಬೇಕಲ್ಲ. ರೇವಣ್ಣನದ್ದೋ, ಕುಮಾರಸ್ವಾಮಿದೋ ಹೇಳಬೇಕಲ್ಲ ಎಂದು ಟೀಕಿಸಿದ್ದಾರೆ.
ದೇವರಾಜೇಗೌಡ, ಡಿಕೆಶಿ ಮಾತುಕತೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಯಾರೋ ಮಾಡಿರುತ್ತಾರೆ, ಮಾತನಾಡಬೇಕಲ್ಲ. ಮಾತನಾಡೋಕೆ ಆಗಲ್ಲ ಅಂತ ಹೇಳೋಕೆ ಆಗುತ್ತಾ?. ನಮ್ಮನ್ನ ಸಿಕ್ಕಿಸಲು ಪ್ರಯತ್ನ ಮಾಡ್ತಾರೆ. ಹೆಣ್ಣುಮಕ್ಕಳು ಮಾಡಿದ್ರೆ ನಾನೇ ಬ್ಲಾಕ್ ಮಾಡ್ತೇನೆ. ಯಾಕೆ ಬೇಕಪ್ಪ ಇದು ಅಂತ ಬ್ಲಾಕ್ ಮಾಡ್ತೀನಿ. ನಾನು ಮೊಬೈಲ್ ಎಕ್ಸ್ ಫರ್ಟ್ ಅಲ್ಲ. ಫೋನ್ ಮಾಡೋದು ಅಷ್ಟೇ ನನಗೆ ಗೊತ್ತಿರೋದು. ಹನಿಟ್ರ್ಯಾಪ್ ಯಾಕೆ ಆಗುತ್ತದೆ ಎಂದರು.
ಪ್ರಜ್ವಲ್ ಮಾಡಿರೋದು ಘೋರ ಅಪರಾಧ: ರಿಲೀಸ್ ಆಗಿರೋದು ಅಪರಾಧವೇ. ರಮೇಶ್ ಜಾರಕಿಜೊಳಿ ಕೇಸ್ನಲ್ಲಿ ಏನಾಯ್ತು?. ಅವನಿಗೂ ಇದೇ ಟ್ರ್ಯಾಪ್ ತಾನೇ ಮಾಡಿದ್ದು. ಅದರ ಮೇಲೆ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ?. ಪ್ರಜ್ವಲ್ ವಿರುದ್ಧ ಕ್ರಮ ಕೈಗೊಳ್ತಾರೆ. ಅವರ ಮೂವ್ಮೆಂಟ್ ಎಲ್ಲರಿಗೆ ಗೊತ್ತಿದೆ. ಪಾಸ್ಪೋರ್ಟ್ ರದ್ಧು ಏಕಾಏಕಿ ಆಗಲ್ಲ. ಅವಕಾಶ ಮಾಡಿಕೊಡಬೇಕು. ಕಾನೂನಿನ ಲೋಪವಾಗದಂತೆ ನೋಡಿಕೊಳ್ತಿದ್ದಾರೆ. ಅವರೆಲ್ಲಿದ್ದಾರೆ ಎಲ್ಲರಿಗೂ ಗೊತ್ತಿರುತ್ತದೆ. ಕೇಂದ್ರಕ್ಕೂ ಗೊತ್ತು, ರಾಜ್ಯಕ್ಕೂ ಗೊತ್ತು. ಎಸ್ಐಟಿ ಅವರಿಗೂ ಗೊತ್ತಿರುತ್ತೆ. ಕಾನೂನಿನ ಪ್ರಕಾರವೇ ನಾವು ಮುಂದಕ್ಕೆ ಹೋಗಬೇಕು ಎಂದು ತಿಳಿಸಿದರು.
ನಮ್ಮ ಅಭ್ಯರ್ಥಿಗೆ ಗೆಲುವಾಗಲಿದೆ: ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವಾಗಲಿದೆ. 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಒಲವಿದೆ. ಹಾಸನ ಉಸ್ತುವಾರಿ ಜಿಲ್ಲೆ, ತುಮಕೂರು ನನ್ನ ತವರು ಜಿಲ್ಲೆ. ಹಾಸನದಲ್ಲಿ ಒಂದೇ ಕುಟುಂಬ ಇತ್ತು. 25 ವರ್ಷಗಳಿಂದ ಅವರೇ ಇದ್ರು. ಈ ಬಾರಿ ನಮ್ಮ ಅಭ್ಯರ್ಥಿಗೆ ಅವಕಾಶವಿದೆ. ಪೆನ್ ಡ್ರೈವ್ ಪ್ರಕರಣ ಇದರ ಮೇಲೆ ಪರಿಣಾಮ ಬೀರಲ್ಲ. ಪುಟ್ಟಸ್ವಾಮಿ ಗೌಡರು ರಾಜಕೀಯದಲ್ಲಿದ್ದವರು. ಶ್ರೇಯಸ್ ಪಟೇಲ್ 3,000 ಮತಗಳಿಂದ ಸೋತಿದ್ರು. ಹೊಳೆನರಸೀಪುರದಲ್ಲಿ ಹೆಚ್ಚಿನ ಮತ ಪಡೆದಿದ್ರು. ಅವರ ತಾಯಿ ಕೂಡ ಸೋತಿದ್ದರು. ಹೀಗಾಗಿ ಎಲ್ಲರ ಶ್ರೀರಕ್ಷೆ ನಮ್ಮ ಅಭ್ಯರ್ಥಿಗೆ ಇದ್ದು ಗೆಲುವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಳ ಸಮುದಾಯಕ್ಕೆ ಅವಕಾಶ ಕೊಡಬೇಕು: ಪರಿಷತ್ ಚುನಾವಣೆಗೆ ಬಹಳಷ್ಟು ಆಕಾಂಕ್ಷಿಗಳು ಇದ್ದಾರೆ. ಅವರ ಪಟ್ಟಿ ಬಹಳ ಉದ್ದವಿದೆ. ನಾಮಿನೇಷನ್ ಮಾಡುವಾಗ ಸಂಪ್ರದಾಯವಿರುತ್ತೆ. ಯಾರು ವಿದ್ವತ್ ಹೊಂದಿತ್ತಾರೆ ಅವರಿಗೆ ಕೊಡಬೇಕು. ಪರಿಗಣನೆ ಮಾಡುವಾಗ ಇದನ್ನ ಗಮನಿಸಬೇಕು. ಮೊದಲಿನಿಂದಲೂ ನನ್ನದು ಇದೇ ವಾದ. ಅವಕಾಶ ವಂಚಿತರಿಗೆ ಅವಕಾಶ ಕೊಡಬೇಕು. ನಮ್ಮ ಬಳಿ ಯಾವ ಬೇಡಿಕೆ ಇಲ್ಲ. ತಳ ಸಮುದಾಯಗಳಿಗೆ ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು.
ನನ್ನನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಲಿ: ನನ್ನನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಲಿ ಎಂದು ಸಚಿವ ಕೆ.ಎನ್.ರಾಜಣ್ಣ ತಮ್ಮ ಒಲವು ವ್ಯಕ್ತಪಿಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಸಂಬಂಧ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಕೆ.ಎನ್.ರಾಜಣ್ಣ ಮಾತು ಮಹತ್ವ ಪಡೆದುಕೊಂಡಿದೆ. ನನ್ನನ್ನು ಅಧ್ಯಕ್ಷನನ್ನಾಗಿ ಮಾಡಲಿ. ನಾನು ಮಂತ್ರಿಸ್ಥಾನ ಬಿಡೋಕೆ ಸಿದ್ಧ. ಅಧ್ಯಕ್ಷರ ಬದಲಾವಣೆ ಸನ್ನಿವೇಶ ಎದುರಾದರೆ ನಾನು ಸಿದ್ಧ. ನಾನು ಯಾವ ಚುನಾವಣೆಗೆ ನಿಲ್ಲಲ್ಲ. ಪಕ್ಷಕ್ಕಾಗಿ ತನುಮನ ಅರ್ಪಿಸುತ್ತೇನೆ. ನನ್ನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡ್ತೇನೆ ಎಂದು ತಿಳಿಸಿದ್ದಾರೆ.
ಓದಿ: ಫೋನ್ ಟ್ಯಾಪಿಂಗ್ ಹಗರಣವನ್ನು ಸಿಬಿಐ ತನಿಖೆಗೆ ಕೊಡಿ: ಪ್ರತಿಪಕ್ಷ ನಾಯಕ ಆರ್.ಅಶೋಕ್ - Phone Tapping Scam