ETV Bharat / state

ದಾವಣಗೆರೆ: ಘನತ್ಯಾಜ್ಯ ಸಂಸ್ಕರಣಾ ಘಟಕದಿಂದ ಅಪಾಯಕಾರಿ ಹೊಗೆ; ಬೆಳೆ ನಾಶ, ಜನರಿಗೆ ಅನಾರೋಗ್ಯ - Waste Disposal Unit

ದಾವಣಗೆರೆಯ ಅವರಗೋಳದಲ್ಲಿ ಘನತ್ಯಾಜ್ಯ ಸಂಸ್ಕರಣೆ ಹಾಗೂ ವಿಲೇವಾರಿ ಘಟಕವಿದ್ದು, ದಿನನಿತ್ಯ ಇಲ್ಲಿಂದ ಹೊರಬರುತ್ತಿರುವ ಅಪಾಯಕಾರಿ ಹೊಗೆ ಗ್ರಾಮವನ್ನು ಆವರಿಸುತ್ತಿದ್ದು, ಜನಜೀವನಕ್ಕೆ ತೊಂದರೆಯಾಗಿದೆ.

ತ್ಯಾಜ್ಯ ವಿಲೇವಾರಿ ಘಟಕದಿಂದ ಹೊರಸೂಸುತ್ತಿರುವ ಹೊಗೆ
ತ್ಯಾಜ್ಯ ವಿಲೇವಾರಿ ಘಟಕದಿಂದ ಹೊರಸೂಸುತ್ತಿರುವ ಹೊಗೆ (ETV Bharat)
author img

By ETV Bharat Karnataka Team

Published : May 12, 2024, 12:04 PM IST

Updated : May 12, 2024, 1:36 PM IST

ದಾವಣಗೆರೆ: 20 ವರ್ಷಗಳ ಹಿಂದೆ ಸಾಕಷ್ಟು ವಿರೋಧದ ನಡುವೆ ಸ್ಥಾಪಿಸಿದ್ದ ಘನತ್ಯಾಜ್ಯ ಸಂಸ್ಕರಣೆ ಹಾಗೂ ವಿಲೇವಾರಿ ಘಟಕ ಇದೀಗ ಗ್ರಾಮದ ಜನರ ಆರೋಗ್ಯ ಕೆಡಿಸುತ್ತಿದೆ. ಈ ಘಟಕ ಅಪಾಯಕಾರಿ ಹೊಗೆ ಹೊರಸೂಸುತ್ತಿದ್ದು ದಾವಣಗೆರೆ ತಾಲೂಕಿನ ಅವರಗೋಳ ಗ್ರಾಮಸ್ಥರ ಪ್ರಾಣಕ್ಕೆ ಸಂಚಕಾರ ಎದುರಾಗಿದೆ.

ಅವರಗೋಳದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕ
ಅವರಗೋಳದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕ (ETV Bharat)

ತ್ಯಾಜ್ಯದಿಂದ ಬರುವ ದಟ್ಟ ಹೊಗೆ ವಿವಿಧ ಬೆಳೆಗಳ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಗ್ರಾಮದಿಂದ ಅರ್ಧ ಕಿ.ಮೀ ದೂರದಲ್ಲಿರುವ ಘಟಕಕ್ಕೆ ನಿತ್ಯ ಬೆಂಕಿ ಆವರಿಸಿಕೊಳ್ಳುತ್ತಿದೆ. ಘಟಕದಲ್ಲಿ ಬೃಹತ್ ಕಸದ ರಾಶಿಯನ್ನು ಗುಡ್ಡದಂತೆ ಶೇಖರಿಸಲಾಗುತ್ತಿದೆ. ಈ ಘಟಕವನ್ನು ಸ್ಥಳಾಂತರಿಸಿ ಎಂದು ಇಲ್ಲಿನ ಜನರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜ‌ನವಾಗಿಲ್ಲ. ಹೊಗೆಯಿಂದಾಗಿ ಅಕ್ಕಪಕ್ಕ ಜಮೀನುಗಳಲ್ಲಿ ಬೆಳೆದಿರುವ ಭತ್ತ, ಅಡಿಕೆ, ತೆಂಗು ಬೆಳೆ ಹಾನಿಯಾಗುತ್ತಿದೆ ಎಂದು ರೈತರು ತಿಳಿಸಿದ್ದಾರೆ.

ಗ್ರಾಮದ ಮುಖಂಡ ಬಿ.ಎಂ.ಷಣ್ಮುಖಯ್ಯ ಆರೋಪ (ETV Bharat)

"ಇಪ್ಪತ್ತು ವರ್ಷಗಳಿಂದ ಈ ಘಟಕದಲ್ಲಿ ತ್ಯಾಜ್ಯ ವಿಲೇವಾರಿ ಆಗುತ್ತಿದ್ದು, ಅಪಾಯಕಾರಿ ತ್ಯಾಜ್ಯ ತಂದು ಗುಡ್ಡದ ರೀತಿ ಡಂಪ್ ಮಾಡುತ್ತಿದ್ದಾರೆ. ಮೂಡುಗಾಳಿ ಎದ್ದರೆ ನಮ್ಮ ಗ್ರಾಮ ಉಳಿಯಲ್ಲ, ಅಧಿಕಾರಿಗಳು ಮಡ್ ಕ್ಯಾಪಿಂಗ್ ಮಾಡಿಸುತ್ತೇವೆ ಎಂದರೂ ಯಾರೂ ಇತ್ತ ಬಂದಿಲ್ಲ. ಪುಟ್ಟ ಮಕ್ಕಳಿಗೆ ಉಸಿರಾಟದ ತೊಂದರೆ, ಅಸ್ತಮಾ ಖಾಯಿಲೆ ಬಾಧಿಸುವ ಅಪಾಯವಿದೆ. ರೈತರ ಜಮೀನುಗಳಲ್ಲಿರುವ ತೆಂಗಿನ ಮರಗಳು ಸುಟ್ಟುಹೋಗಿವೆ. ಬೆಂಕಿಯ ಬೂದಿ ಭತ್ತದ ಗದ್ದೆಗಳಿಗೆ ಹರಡಿ ಹೂವಾಡುವ ಬೆಳೆ ಮೇಲೆ ಬಿದ್ದು ಕಾಳುಕಟ್ಟದ ಪರಿಸ್ಥಿತಿ ಇದೆ" ಎಂದು ಗ್ರಾಮದ ಮುಖಂಡ ಬಿ.ಎಂ.ಷಣ್ಮುಖಯ್ಯ ಆಕ್ರೋಶ ವ್ಯಕ್ತಪಡಿಸಿದರು.

33 ಎಕರೆಯಲ್ಲಿದೆ ತ್ಯಾಜ್ಯ ವಿಲೇವಾರಿ ಘಟಕ: ತ್ಯಾಜ್ಯ ವಿಲೇವಾರಿ ಘಟಕ ಒಟ್ಟು 33 ಎಕರೆ ವ್ಯಾಪ್ತಿಯಲ್ಲಿದೆ. ದಾವಣಗೆರೆ ಮಹಾನಗರ ಪಾಲಿಕೆಯ 42 ವಾರ್ಡ್​ಗಳ ತ್ಯಾಜ್ಯವನ್ನು ತಂದು ಅವರಗೋಳ ಗ್ರಾಮದಲ್ಲಿರುವ ಈ ಘಟಕದಲ್ಲಿ ಡಂಪ್ ಮಾಡಲಾಗುತ್ತಿದೆ.

ಅವರಗೋಳ ಗ್ರಾ.ಪಂ.ಸದಸ್ಯ ಸಿದ್ದೇಶ್ ಮಾಹಿತಿ (ETV Bharat)

"ನೂರಾರು ಲೋಡ್ ಕಸ ಬಂದು ಬೀಳುತ್ತಿದೆ. ಈ ಕಸವನ್ನು ಸಂಸ್ಕರಿಸುವಲ್ಲಿ ಪಾಲಿಕೆ ವಿಫಲವಾಗಿದೆ. ಇದರ ಸುತ್ತ ಇರುವ ಅವರಗೋಳ, ಚಿಕ್ಕಬೂದಿಹಾಳ್, ಕಕ್ಕರಗೋಳ್ಳ, ಬೂಸವಹಟ್ಟಿ, ಮಗನಹಳ್ಳಿ ಗ್ರಾಮಗಳನ್ನು ಇಲ್ಲಿಂದ ಹೊರಬರುವ ಹೊಗೆ ಆವರಿಸಿಕೊಳ್ಳುತ್ತಿದೆ" ಎಂದು ಅವರಗೋಳ ಗ್ರಾ.ಪಂ.ಸದಸ್ಯ ಸಿದ್ದೇಶ್ ವಿವರಿಸಿದರು.

ಇದನ್ನೂ ಓದಿ: ಬರಗಾಲದಿಂದ ನೆಲಕಚ್ಚಿದ ನೂರಾರು ಎಕರೆ ಕಬ್ಬು, ಅಡಿಕೆ, ತೆಂಗು: ಸಂಕಷ್ಟದಲ್ಲಿ ರೈತ - Crop Loss

Last Updated : May 12, 2024, 1:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.