ETV Bharat / state

ಹಾವೇರಿ: ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸಾರ್ವಜನಿಕರ ವೀಕ್ಷಣೆಗೆ ಮುಕ್ತ - ಹಾವೇರಿ

ಹಾವೇರಿ ಜಿಲ್ಲಾಧಿಕಾರಿ ಕಚೇರಿ ಎದುರಿನ ಬೆಟ್ಟದ ನಿರ್ಮಿಸಲಾದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ. ವೀಕ್ಷಣೆಗೆ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಸಮಯ ನಿಗದಿಪಡಿಸಲಾಗಿದೆ.

ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ  Sub Regional Science Center  ವಿಪತ್ತು ನಿರ್ವಹಣೆ ಗ್ಯಾಲರಿ  ಹಾವೇರಿ  Haveri
ಹಾವೇರಿ: ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸಾರ್ವಜನಿಕರ ವೀಕ್ಷಣೆಗೆ ಮುಕ್ತ
author img

By ETV Bharat Karnataka Team

Published : Feb 24, 2024, 11:41 AM IST

Updated : Feb 24, 2024, 8:03 PM IST

ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸಾರ್ವಜನಿಕರ ವೀಕ್ಷಣೆಗೆ ಮುಕ್ತ

ಹಾವೇರಿ: ಹಿಂದೆ ಜಿಲ್ಲೆಯ ವಿದ್ಯಾರ್ಥಿಗಳು ವಿಜ್ಞಾನದ ಪ್ರಾತ್ಯಕ್ಷಿಕೆ, ತಾರಾಮಂಡಲದ ಕೌತುಕಗಳನ್ನು ನೋಡಲು ಧಾರವಾಡ, ದಾವಣಗೆರೆ ನಗರ ಸೇರಿದಂತೆ ವಿವಿಧೆಡೆ ಹೋಗಬೇಕಾಗುತ್ತಿತ್ತು. ಆದರೆ, ಇದೀಗ ಹಾವೇರಿ ಜಿಲ್ಲಾಧಿಕಾರಿ ಕಚೇರಿ ಎದುರಿಗಿರುವ ಬೆಟ್ಟದ ಮೇಲೆಯೇ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ನಿರ್ಮಿಸಲಾಗಿದೆ.

ಫೆ.18ರಂದು ಉದ್ಘಾಟನೆಯಾಗಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಫೆ.20ರಿಂದ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ. ವಿದ್ಯಾರ್ಥಿಗಳನ್ನು ವಿಜ್ಞಾನಾಸಕ್ತರನ್ನು ಕೈಬೀಸಿ ಕರೆಯುತ್ತಿದೆ. ಸುಮಾರು ಏಳುಕೋಟಿ ರೂಪಾಯಿ ವೆಚ್ಚದಲ್ಲಿ ಒಂದೂವರೆ ಎಕರೆ ಜಾಗದಲ್ಲಿ ಈ ವಿಜ್ಞಾನ ಕೇಂದ್ರ ನಿರ್ಮಾಣವಾಗಿದೆ. ವಿಜ್ಞಾನ ಕೇಂದ್ರದಲ್ಲಿ ನಾಲ್ಕು ವಿಭಾಗಗಳಿದ್ದು, ಹಲವು ಪ್ರಯೋಗಗಳು, ಕೌತುಕಗಳನ್ನು ಜನರ ಮುಂದೆ ತೆರದಿಡುತ್ತದೆ.

ವಿಜ್ಞಾನ ಕೇಂದ್ರದಲ್ಲೇನಿದೆ?: ವಿದ್ಯಾರ್ಥಿಗಳಿಗೆ ಹಾಗೂ ವಿಜ್ಞಾನ ಆಸಕ್ತರಿಗೆ ವೈಜ್ಞಾನಿಕ ಜಗತ್ತಿನ ಆಸಕ್ತಿದಾಯಕ ಭೌತವಿಜ್ಞಾನ, ಖಗೋಳ, ತಾರಾಲಯ, ಬಾಹ್ಯಾಕಾಶ, ಮೋಜಿನ ಗ್ಯಾಲರಿಗಳು, ವಿವಿಧ ಮಾದರಿಗಳು ಕುತೂಹಲ ಮೂಡಿಸುತ್ತಿವೆ. ಒಂದೊಂದು ಮಾದರಿಯು ವಿಭಿನ್ನ ಕೌತುಕ ಕಥೆಗಳನ್ನು ತಿಳಿಸುತ್ತವೆ. ಸುನಾಮಿ, ಪ್ರವಾಹ, ಭೂ ಕುಸಿತ, ಭೂ ಕಂಪನ, ಆಕಾಶ ಕಾಯಗಳು ಒಳಗೊಂಡ ನೂರಾರು ಮಾದರಿಗಳು, ವೈಜ್ಞಾನಿಕ ಪ್ರಶ್ನೋತ್ತರಕ್ಕೆ ಗಣಕೀಕೃತ ಕೌಂಟರ್, ಭೂಮಿ ಮೇಲೆ ನಿಂತಾಗ ನಮ್ಮ ತೂಕದ ಸಾಂದ್ರತೆ, ಜೊತೆಗೆ ಬೇರೆ ಬೇರೆ ಕಾಯಗಳಲ್ಲಿ ನಾವು ನಿಂತಾಗ ಎಷ್ಟು ಗುರುತ್ವಾಕರ್ಷಣೆ ಇರುತ್ತದೆ ಎಂಬ ಮಾಹಿತಿಯು ಗಮನ ಸೆಳೆಯುತ್ತದೆ.

ಕೈಬೀಸಿ ಕರೆಯುವ ವಿಜ್ಞಾನ ಕೇಂದ್ರದ ಹೊರಾವರಣ: ವಿಜ್ಞಾನ ಕೇಂದ್ರದ ಹೊರಾವರಣದಲ್ಲಿ ವಿವಿಧ ವಿಜ್ಞಾನ ಮಾದರಿಗಳು,
ವಿಜ್ಞಾನಿಗಳ ಪ್ರತಿಕೃತಿಗಳು, ಸಭಾಂಗಣ ನಿರ್ಮಾಣ ಮಾಡಲಾಗಿದೆ. ವಿಜ್ಞಾನ ಕೇಂದ್ರಕ್ಕೆ ಪ್ರವೇಶಿಸುತ್ತಿದ್ದಂತೆ ಮೋಜಿನ ವಿಜ್ಞಾನ ಗ್ಯಾಲರಿ ವಿದ್ಯಾರ್ಥಿಗಳನ್ನು ಸೆಳೆಯುತ್ತದೆ. ಈ ಗ್ಯಾಲರಿಯಲ್ಲಿ ಒಟ್ಟು 40 ವಿಜ್ಞಾನ ಮಾದರಿಗಳನ್ನು ಹೊಂದಿದೆ. ಇಲ್ಲಿರುವ ಎಲ್ಲ ಮಾದರಿಗಳು ವಿಜ್ಞಾನ ಹಾಗೂ ಗಣಿತ ವಿಷಯದ ಪರಿಕಲ್ಪನೆ ಆಧಾರದ ಮೇಲೆ ಇವೆ. ಸಂವಾದಾತ್ಮಕ ವಿಜ್ಞಾನದ ಪ್ರದರ್ಶನಗಳನ್ನು ಒದಗಿಸುವುದರೊಂದಿಗೆ ಅಸಂಖ್ಯಾತ ಜನರ ಕುತೂಹಲವನ್ನು ಪ್ರಚೋದಿಸುತ್ತವೆ. ಮತ್ತು ಅವರ ಸೃಜನಶೀಲತೆಯನ್ನು ಹೊರಹಾಕಲು ಸಹಾಯ ಮಾಡುತ್ತದೆ. ಫೈಥಾಗೋರಸ್ ಪ್ರಮೇಯ ಸೇರಿದಂತೆ ವಿವಿಧ ಗಣಿತದ ಸೂತ್ರಗಳು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವಲ್ಲಿ ವಿಜ್ಞಾನ ಕೇಂದ್ರ ಸಹಕಾರಿಯಾಗಿದೆ.

ಗಮನಸೆಳೆಯುವ ವಿಪತ್ತು ನಿರ್ವಹಣೆ ಗ್ಯಾಲರಿ: ವಿಪತ್ತು ನಿರ್ವಹಣೆ ಗ್ಯಾಲರಿಯಲ್ಲಿ ನೈಸರ್ಗಿಕ ವಿಕೋಪಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಭೂಕಂಪ, ಜ್ವಾಲಾಮುಖಿ, ಸುನಾಮಿ, ನೆರೆ, ಕಾಳ್ಗಿಚ್ಚು, ಭೂಕುಸಿತ, ಪ್ರವಾಹ ಸೇರಿದಂತೆ ಪ್ರಕೃತಿಯ ವಿವಿಧ ವಿಪತ್ತುಗಳಿಗೆ ಕಾರಣಗಳು, ಅವುಗಳನ್ನು ಹೇಗೆ ಸಂಭವಿಸುತ್ತವೆ ಎಂಬ ಐದು ಪ್ರಾಯೋಗಿಕ ಮಾದರಿಗಳನ್ನು ಅಳವಡಿಸಲಾಗಿದೆ. ಮಕ್ಕಳು ಪ್ರಕೃತಿ ವಿಕೋಪಗಳಾದಾಗ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳೇನು? ಅದರಲ್ಲಿ ಸಿಲುಕಿದವರ ರಕ್ಷಣೆ ಮಾಡುವ ಕುರಿತಂತೆ ಈ ಗ್ಯಾಲರಿಯಲ್ಲಿ ಮಾಹಿತಿ ಲಭಿಸುತ್ತದೆೆ.

ನೈಜ ಅನುಭವ ನೀಡುವ ತಾರಾಲಯ: ಬಾಹ್ಯಾಕಾಶ ಗ್ಯಾಲರಿಯಲ್ಲಿ ಬಾಹ್ಯಾಕಾಶದ ಅನ್ವೇಷಣೆಗಳು, ರಾಕೆಟ್ ತಂತ್ರಜ್ಞಾನದ ನಾಲ್ಕು ಮಾದರಿಗಳನ್ನು ಇವೆ. ಮಕ್ಕಳನ್ನು ಬಾಹ್ಯಾಕಾಶದ ಪ್ರಪಂಚಕ್ಕೆ ಕರೆದೊಯ್ಯಲು ಸಹಕಾರಿಯಾಗಿದೆ. ಇಸ್ರೋ ಸಂಸ್ಥೆ ಆರಂಭದಿಂದ ಇಲ್ಲಿಯವರೆಗಿನ ಸಾಧನೆಗಳನ್ನು ಬಿಂಬಿಸುವ ವಿವಿಧ ರಾಕೆಟ್​ಗಳ ಪ್ರತಿಕೃತಿಗಳು ಗಮನ ಸೆಳೆಯುತ್ತವೆ. ಇಲ್ಲಿರುವ ತಾರಾಲಯವು ಖಗೋಳ ವಿದ್ಯಮಾನಗಳನ್ನು ನೋಡುಗರ ಮುಂದೆ ತೆರೆದಿಡುತ್ತದೆ. ತಾರಾಲಯವು ವಿಜ್ಞಾನ ಕೇಂದ್ರದ ಪ್ರಮುಖ ಆಕರ್ಷಣೆಯಾಗಿದೆ. ತಾರಾಲಯದೊಳಗಿನ ಪರದೆಯ ಮೇಲೆ 3ಡಿ ವೀಕ್ಷಣೆ ಅನುಕೂಲ ಮಾಡಿಕೊಡಲಾಗಿದೆ. ಗೃಹ, ಉಪಗೃಹ, ನಕ್ಷತ್ರಗಳು, ಧೂಮಕೇತು, ಗ್ಯಾಲಾಕ್ಷಿಗಳು ಸೇರಿದಂತೆ ವಿವಿಧ ಆಕಾಶಕಾಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ನೈಜ ಅನುಭವ ಲಭಿಸುತ್ತದೆ.

ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವೀಕ್ಷಣೆ ಸಮಯ: ನಿರ್ಮಿತಿ ಕೇಂದ್ರದಿಂದ ಕಟ್ಟಡ ವಿನ್ಯಾಸ ಮತ್ತು ನಿರ್ಮಾಣ ಮಾಡಲಾಗಿದೆ. ಒಳ ಆವರಣದ ವಿಜ್ಞಾನದ ಮಾದರಿಗಳ ಅಳವಡಿಕೆಗೆ ಬೆಂಗಳೂರಿನ ಧೀನಬಂಧು ಸಂಸ್ಥೆ ಶ್ರಮಿಸಿದೆ. ಪುಣೆಯ ಟಯೋಮಾ ಬಿಫಾಲ್ ಯು ಸಂಸ್ಥೆ ಹಾಗೂ ನೋಯ್ಡಾದ ಫುಲ್‍ಡಾನ್ ಪ್ರೋ ಸಂಸ್ಥೆಯು ತಾರಾಲಯ ನಿರ್ಮಿಸಿವೆ. ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ವೀಕ್ಷಣೆಗೆ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಸಮಯ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಪರಿಷತ್​ನಲ್ಲಿ 'ಗೋಧ್ರಾ ಮಾದರಿ ಘಟನೆ ಬೆದರಿಕೆ' ಪ್ರಸ್ತಾಪ: ಪೀಠಿಕೆಗೆ ಸೀಮಿತಗೊಳಿಸಿದ ಸಭಾಪತಿ

Last Updated : Feb 24, 2024, 8:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.