ETV Bharat / state

ಸುಳ್ಳು ಸುದ್ದಿ ಹರಡಿದ ಆರೋಪ; ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ; ಸರ್ಕಾರದ ಗಮನ ಸೆಳೆದಿದ್ದೇ ತಪ್ಪಾ ಎಂದು ಸಂಸದರ ಪ್ರಶ್ನೆ

ರೈತ ರುದ್ರಪ್ಪ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲಾಡಳಿತ ಹಾಗೂ ಪೊಲೀಸ್​ ಇಲಾಖೆ ಇದೀಗ ಸ್ಪಷ್ಟನೆ ನೀಡಿದೆ.

ಸಂಸದ ತೇಜಸ್ವಿ ಸೂರ್ಯ
ಸಂಸದ ತೇಜಸ್ವಿ ಸೂರ್ಯ (ETV Bharat)
author img

By ETV Bharat Karnataka Team

Published : Nov 8, 2024, 1:21 PM IST

Updated : Nov 8, 2024, 3:38 PM IST

ಹಾವೇರಿ: ಸಾಲಬಾಧೆಯಿಂದ ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಹೊರತು ಪಹಣಿಯಲ್ಲಿ ವಕ್ಫ್​ ಅಂತ ನಮೂದಾದ ಹಿನ್ನೆಲೆಯಲ್ಲಿ ಅಲ್ಲ ಎಂದು ಹಾವೇರಿ ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ವಕ್ಫ್​ ಎಂದು ನಮೂದಾದ ಕಾರಣ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಹಾವೇರಿ ಎಸ್ಪಿ ತಿಳಿಸಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ: ಪಹಣಿಯಲ್ಲಿ ವಕ್ಫ್ ಎಂದು ನಮೂದಾಗಿದ್ದಕ್ಕೆ ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಸಂಸದ ತೇಜಸ್ವಿ ಸೂರ್ಯ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದರು. ಸುಳ್ಳು ಸುದ್ದಿ ಮಾಹಿತಿ ಹರಡಿದ ಆರೋಪದ ಮೇರೆಗೆ ತೇಜಸ್ವಿ ಸೂರ್ಯ ವಿರುದ್ಧ ಹಾವೇರಿ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಲಾಗಿದೆ. ವರದಿ ಮಾಡಿದ ಎರಡು ಮಾಧ್ಯಮ ಸಂಸ್ಥೆಗಳ ಮೇಲೂ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯೆ (ETV Bharat)

ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯೆ: ತಮ್ಮ ಮೇಲೆ ಎಫ್ಐಆರ್ ದಾಖಲಾದ ವಿಚಾರಕ್ಕೆ ಹುಬ್ಬಳ್ಳಿ ನಗರದಲ್ಲಿಂದು ಪ್ರತಿಕ್ರಿಯಿಸಿದ ಸಂಸದ ತೇಜಸ್ವಿ ಸೂರ್ಯ, "ನಿನ್ನೆ ಜೆಪಿಸಿ ಬಂದಾಗ ಹಾವೇರಿಯ ರೈತನ ಅಹವಾಲು ಪಡೆದೆವು. ಅದರಲ್ಲಿ ರೈತನ ಜಮೀನು ವಕ್ಫ್​​ ಎಂದು ಬದಲಾಯಿಸಿದ ಕಾರಣ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಾಧ್ಯಮಗಳಲ್ಲೂ ವರದಿ ಬಂದಿದೆ.‌ ರೈತನ ಕುಟುಂಬಸ್ಥರು ಕೂಡಾ ಮಾಧ್ಯಮದೆದುರು ಮಾತನಾಡಿದ್ದು ಪ್ರಸಾರವಾಗಿದೆ. ಒಂದು ವೆಬ್ ಈ ಸುದ್ದಿಯನ್ನು ಪ್ರಸಾರ ಮಾಡಿದೆ".‌

"ಇದು ಮಾಧ್ಯಮದವರು ಕಾಲ್ಪನಿಕ, ಕಾದಂಬರಿ ಬರೆದಿರುವುದಲ್ಲ. ರೈತರ ಕುಟುಂಬದವರು ಬಂದು ಮನವಿ ಕೊಟ್ಟರು. ಬಳಿಕ ಮಾಧ್ಯಮದವರು ಈ ಬಗ್ಗೆ ಬರೆದಿದ್ದಾರೆ. ಅವರ ಸಂದರ್ಶನ ರೆಕಾರ್ಡ್​ ಆಗಿದೆ. ನಿನ್ನೆ ಸಂಜೆ ಕಾರ್ಯಕ್ರಮದಲ್ಲೂ ಪ್ರಸಾರವಾಗಿದೆ. ಇದಾಗಿಯೂ ಕೂಡ ಪೊಲೀಸ್​ ವ್ಯವಸ್ಥೆಯಿಂದ ಟ್ವೀಟ್​ ಬಂದ ಕಾರಣ ಗೌರವದಿಂದ ನನ್ನ ಟ್ವೀಟ್‌ ತೆಗೆದಿದ್ದೇನೆ. ಆದರೆ ಇದರ ಹಿಂದೆ ಪ್ರಕರಣವನ್ನು ಮುಚ್ಚಿ ಹಾಕುವ ಷಡ್ಯಂತ್ರ ಕಾಣುತ್ತಿದೆ" ಎಂದು ಅವರು ಆರೋಪಿಸಿದರು.

ಸಂಸದ ತೇಜಸ್ವಿ ಸೂರ್ಯ ಮಾತನಾಡಿದರು (ETV Bharat)

ವಕ್ಫ್ ವಿರುದ್ಧ ತೇಜಸ್ವಿ ಸೂರ್ಯ ಅಸಮಾಧಾನ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಕೃಪಾ ಪೋಷಿತ ವಕ್ಫ್​​ ಆಟೋಟೋಪ ಚರಮ ಸ್ಥಿತಿಗೆ ಏರಿದೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.

ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ತಡಸ ಗ್ರಾಮದಲ್ಲಿ ಮಾತನಾಡಿದ ಅವರು, ಏನು‌ ಸಾಧಿಸಲು ಹೊರಟಿದೆ ಸರ್ಕಾರ ಎಂದು ಪ್ರಶ್ನಿಸಿದ್ದಾರೆ. ಹಾವೇರಿಯ ರೈತರು ಜಂಟಿ ಸಮಿತಿ ಅಧ್ಯಕ್ಷರ ಎದುರು ಅಳಲು ತೋಡಿಕೊಂಡಿದ್ದಾರೆ. ನಮ್ಮ ಮನೆ ಮಗನ ಹೆಸರಿಗೆ ಇದ್ದ 4 ಎಕರೆ ಜಮೀನು ಪಹಣಿಯಲ್ಲಿ ವಕ್ಫ್​​ ಅಂತ ನಮೂದು ಆಗಿದ್ದಕ್ಕೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅವರು ಹೇಳಿದ್ದರು. ಆ ವರದಿಯನ್ನೇ ಮಾಧ್ಯಮದವರು ಬಿತ್ತಿರಿಸಿದ್ರಿ, ಇದನ್ನ ನಾನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದ್ದೆ, ಆದರೆ ಸರ್ಕಾರ ನನ್ನ ಧ್ವನಿ ಹತ್ತಿಕ್ಕಲು, ನನ್ನ ವಿರುದ್ಧವೇ ಎಫ್​ಐಆರ್ ಹಾಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ವಕ್ಫ್ ಆಸ್ತಿ ವಿವಾದ: ಹುಬ್ಬಳ್ಳಿಯಲ್ಲಿ ವಕ್ಫ್ ಬೋರ್ಡ್ ಜೆಪಿಸಿ ಅಧ್ಯಕ್ಷ, ರೈತರಿಗೆ ನ್ಯಾಯ ಕೊಡಿಸುವ ಅಭಯ

Last Updated : Nov 8, 2024, 3:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.