ETV Bharat / state

ದೇವದಾರಿ ಗಣಿಗಾರಿಕೆ ಯೋಜನೆ; ಕುದುರೆಮುಖ ಕಬ್ಬಿಣ ಅದಿರು ಕಂಪನಿ ಉನ್ನತಾಧಿಕಾರಿಗಳ ಸಭೆ ನಡೆಸಿದ ಹೆಚ್​ಡಿಕೆ - H D Kumaraswamy

author img

By ETV Bharat Karnataka Team

Published : Jun 18, 2024, 8:46 PM IST

ದೇವದಾರಿ ಪ್ರದೇಶದಲ್ಲಿ ಕುದುರೆಮುಖ ಕಬ್ಬಿಣ ಅದಿರು ಕಂಪನಿ ಕೈಗೆತ್ತಿಕೊಂಡಿರುವ ಗಣಿಗಾರಿಕೆ ಯೋಜನೆಯ ಕುರಿತು ಉನ್ನತ ಅಧಿಕಾರಿಗಳೊಂದಿಗೆ ಕೇಂದ್ರ ಸಚಿವ ಹೆಚ್​. ಡಿ ಕುಮಾರಸ್ವಾಮಿ ಸಭೆ ನಡೆಸಿದರು. ಈ ಕುರಿತು ಮಾತನಾಡಿದ ಅವರು, ಗಣಿಗಾರಿಕೆ ಯೋಜನೆಯ ಬಗ್ಗೆ ಕಳವಳ ಬೇಡ ಎಂದು ಅಭಯ ನೀಡಿದರು.

Union Minister H. D Kumaraswamy
ಕೇಂದ್ರ ಸಚಿವ ಹೆಚ್​. ಡಿ ಕುಮಾರಸ್ವಾಮಿ (ETV Bharat)

ಬೆಂಗಳೂರು : ಬಳ್ಳಾರಿಯ ಸಂಡೂರು ವ್ಯಾಪ್ತಿಯ ದೇವದಾರಿ ಪ್ರದೇಶದಲ್ಲಿ ಕುದುರೆಮುಖ ಕಬ್ಬಿಣ ಅದಿರು ಕಂಪನಿ (KIOCL) ಕೈಗೆತ್ತಿಕೊಂಡಿರುವ ಗಣಿಗಾರಿಕೆ ಯೋಜನೆಯ ಬಗ್ಗೆ ಕಳವಳ ಬೇಡ ಎಂದು ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್. ಡಿ ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನ ಕೋರಮಂಗಲದಲ್ಲಿರುವ ಕೆಐಒಸಿಎಲ್ ಕಚೇರಿಯಲ್ಲಿ ಮಂಗಳವಾರ ಕುದುರೆಮುಖ ಕಬ್ಬಿಣ ಅದಿರು ಕಂಪನಿಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಗಂಟಿ ವೆಂಕಟ ಕಿರಣ್ ಅವರು ಸೇರಿದಂತೆ ಇನ್ನೂ ಹಲವು ಉನ್ನತಾಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.

h-d-kumaraswamy
ಕೇಂದ್ರ ಸಚಿವ ಹೆಚ್​ ಡಿ ಕುಮಾರಸ್ವಾಮಿಯವರನ್ನ ಸ್ವಾಗತಿಸಿದ ಅಧಿಕಾರಿಗಳು (ETV Bharat)

ಮೋದಿ ಅವರ ಕನಸು ನನಸು : ಅರಣ್ಯ ನಾಶಕ್ಕೆ ನಾನು ಸಹಿ ಹಾಕಿದ್ದಲ್ಲ. ರಾಜ್ಯದಲ್ಲಿ ಉಕ್ಕು ಉತ್ಪಾದನೆ ಆಗಬೇಕು ಹಾಗೂ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾಗಿ ನಮ್ಮ ಯುವಕರಿಗೆ ಉದ್ಯೋಗ ದೊರೆಯಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮ‌ನಿರ್ಭರ ಭಾರತದ ಆಶಯದಂತೆ ಜಿಡಿಪಿ ವೃದ್ಧಿಗೆ ಹೆಚ್ಚು ಕಾಣಿಕೆ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಅರಣ್ಯ ಉಳಿಸಲು ಕ್ರಮ ವಹಿಸಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.

h-d-kumaraswamy-held-a-meeting-with-top-officials-of-kudremukh-iron-ore-company
ಕುದುರೆಮುಖ ಕಬ್ಬಿಣ ಅದಿರು ಕಂಪನಿ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಹೆಚ್​ಡಿಕೆ (ETV Bharat)

ಅರಣ್ಯ ನಾಶದ ಆತಂಕ ಬೇಡ : ದೇವದಾರಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ ಎಂದು ಪ್ರಚಾರ ಮಾಡಲಾಗುತ್ತಿದೆ. ಜನರಲ್ಲಿ ಸ್ವಲ್ಪ ಮಟ್ಟಿಗಿನ ಆತಂಕ‌ ಉಂಟಾಗುವ ರೀತಿಯಲ್ಲಿ ಪ್ರಚಾರವಾಗಿದೆ. 2019ರಲ್ಲಿ ರಾಜ್ಯ ಸರ್ಕಾರವೇ ದೇವದಾರಿ ಗಣಿಗಾರಿಕೆ ಯೋಜನೆಗೆ 404 ಹೆಕ್ಟೇರ್ ಪ್ರದೇಶದಲ್ಲಿ ಅನುಮತಿ ಕೊಟ್ಟಿದೆ. ನಂತರ ಕೇಂದ್ರ ಸರ್ಕಾರದ ಪರಿಸರ ಇಲಾಖೆ ಕೂಡ ಅನುಮತಿ ನೀಡಿದೆ. ಆದರೆ, ಕುಮಾರಸ್ವಾಮಿ ಅವರು ಗಣಿಗಾರಿಕೆಗೆ ಅನುಮತಿ ನೀಡುವ ಯೋಜನೆಗೆ ಸಹಿ ಹಾಕಿದ್ದಾರೆ. ದೇವದಾರಿ ಭಾಗದಲ್ಲಿ ಅರಣ್ಯ ಮತ್ತು ಜೀವರಾಶಿಗಳಿಗೆ ಹಾನಿ ಆಗುತ್ತದೆ. 99 ಸಾವಿರ ಮರಗಳಿಗೆ ಧಕ್ಕೆ ಆಗುತ್ತದೆ ಎಂದು ವರದಿಗಳು ಬಂದಿವೆ. ಆದರೆ, ಅರಣ್ಯ ನಾಶದ ಬಗ್ಗೆ ಆತಂಕ ಬೇಡ ಎಂದು ಕೇಂದ್ರ ಸಚಿವರು ಹೇಳಿದರು.

h-d-kumaraswamy
ಗಿಡವೊಂದಕ್ಕೆ ನೀರು ಹಾಕುತ್ತಿರುವ ಕೇಂದ್ರ ಸಚಿವ ಹೆಚ್​ ಡಿ ಕುಮಾರಸ್ವಾಮಿ (ETV Bharat)

ಕುದುರೆಮುಖ ಕಂಪನಿ ಅದಿರು ತೆಗೆಯುವ ಕೆಲಸ ಪ್ರಾರಂಭ ಮಾಡುವ ಮುನ್ನವೇ ಸುಮಾರು 194 ಕೋಟಿ ರೂಪಾಯಿ ವೆಚ್ಚದಲ್ಲಿ 808 ಹೆಕ್ಟೇರ್ ಪ್ರದೇಶದಲ್ಲಿ ಪರ್ಯಾಯವಾಗಿ ಅರಣ್ಯ ಬೆಳೆಸಲಿದೆ. ಅದಕ್ಕಾಗಿ ಅರಣ್ಯ ಇಲಾಖೆಗೆ ಹಣ ಪಾವತಿಸಿದೆ. ಜೀವರಾಶಿಗೆ ತೊಂದರೆಯಾಗದ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಈ ವಿಷಯವನ್ನು ಆ ಭಾಗದ ಜನತೆ ಗಮನಿಸಬೇಕು ಎಂದು ಹೆಚ್​ಡಿಕೆ ಮನವಿ ಮಾಡಿದರು. ಇದಕ್ಕೂ ಮೊದಲು ಅಧಿಕಾರಿಗಳ ಜತೆ ಸಭೆ ನಡೆಸಿದ ಕುಮಾರಸ್ವಾಮಿ ಅವರು, ಕುದುರೆಮುಖ ಕಂಪನಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು.

ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗಂಟಿ ವೆಂಕಟ ಕಿರಣ್ ಅವರು ನೀಡಿದ ಕಂಪನಿಯ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿ, ಉಕ್ಕು ಉತ್ಪಾದನೆ, ರಪ್ತು ಬಗ್ಗೆ ವ್ಯಾಪಕ ಚರ್ಚೆ ನಡೆಸಿದರು. ದೇವದಾರಿ ಯೋಜನೆ ಪ್ರಧಾನಿಯವರ ನೂರು ದಿನದ ಕಾರ್ಯಸೂಚಿಯಲ್ಲಿ ಇದ್ದು, ಈ ಬಗ್ಗೆ ಮುತುವರ್ಜಿಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು. ಆದಷ್ಟು ಬೇಗ ಗಣಿಗಾರಿಕೆ ಆರಂಭ ಮಾಡಿ ಎಂದು ಹೇಳಿದರು.

ವಿಶ್ವೇಶ್ವರಯ್ಯ ಕಬ್ಬಿಣ ಅದಿರು ಕಾರ್ಖಾನೆ ಬಗ್ಗೆ ಚರ್ಚೆ : ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಅದಿರು ಕಾರ್ಖಾನೆ ಪುನಶ್ಚೇತನ ಬಗ್ಗೆ ಕೂಡ ಸಭೆಯಲ್ಲಿ ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರು ಚರ್ಚೆ ನಡೆಸಿದರು. ಈ ಬಗ್ಗೆ ಆಲೋಚನೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ ಕೇಂದ್ರ ಸಚಿವರು, ಇದು ಒಳ್ಳೆಯ ಕಾರ್ಖಾನೆ, ಕರ್ನಾಟಕದ ಹೆಗ್ಗುರುತು ಆಗಿತ್ತು. ಅದನ್ನು ಉಳಿಸುವ ಬಗ್ಗೆ ಚಿಂತನೆ ಮಾಡಿ ಎಂದರು.

Specialty ಸ್ಟೀಲ್ ಉತ್ಪಾದನೆಗೆ ಒತ್ತು ಕೊಡಿ : Specialty ಸ್ಟೀಲ್ (ಮೌಲ್ಯಾಧಾರಿತ ಉಕ್ಕು) ಅನ್ನು ಹೆಚ್ಚು ಉತ್ಪಾದನೆ ಮಾಡುವ ಕಡೆ ಹೆಚ್ಚು ಗಮನ ಹರಿಸಿ. ಜಾಗತಿಕವಾಗಿ ಅದರಲ್ಲಿಯೂ ಚೀನಾ, ತೈವಾನ್, ದಕ್ಷಿಣ ಕೊರಿಯಾ ಪೈಪೋಟಿ ಎದುರಿಸಲು Specialty ಸ್ಟೀಲ್ ಉತ್ಪಾದನೆ ಕಡೆ ಹೆಚ್ಚು ಗಮನ ಕೊಡಿ. Specialty ಸ್ಟೀಲ್ ಉತ್ಪಾದನೆಗೆ ಅಗತ್ಯವಾದ ತಂತ್ರಜ್ಞಾನ ಜೋಡಿಸಿಕೊಳ್ಳಿ ಎಂದು ಸಚಿವರು ನಿರ್ದೇಶನ ನೀಡಿದರು.

KIOCL Office
ಕೆಐಓಸಿಎಲ್ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಹೆಚ್​ಡಿಕೆ (ETV Bharat)

ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಭಾರತ ಮುನ್ನಡೆ ; ಮೋದಿ ಕನಸು : ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಭಾರತ ಸ್ವಾವಲಂಬನೆ ಸಾಧಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸು ಎಂದು ಕೇಂದ್ರ ಸಚಿವರು ಇದೇ ವೇಳೆ ತಿಳಿಸಿದರು.

ರಾಜ್ಯ ಕೈಗಾರಿಕೆ ಸಚಿವ ಎಂ. ಬಿ ಪಾಟೀಲ್ ಅವರು ನೀಡಿರುವ ಯೂ ಟರ್ನ್ ಹೇಳಿಕೆ‌ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಹೆಚ್ ಡಿಕೆ, ದೇಶದಲ್ಲಿ ಸೆಮಿಕಂಡಕ್ಟರ್ ಕೈಗಾರಿಕೆ ದೊಡ್ಡ ಪ್ರಮಾಣದಲ್ಲಿ ಬೆಳೆಯಬೇಕಿದೆ. ತೈವಾನ್, ಅಮೆರಿಕದಲ್ಲಿ ಈ ಉದ್ಯಮ ದೊಡ್ಡಮಟ್ಟದಲ್ಲಿದೆ. ಅದಕ್ಕೆ ಮೋದಿಯವರು ಪ್ರೋತ್ಸಾಹ ನೀಡಲು ಒಂದು ಬೃಹತ್ ಯೋಜನೆ ಜಾರಿಗೆ ತಂದಿದ್ದಾರೆ. ಇದರಲ್ಲಿ ಯೂಟರ್ನ್ ಪ್ರಶ್ನೆ ಏನೂ ಇಲ್ಲ. ದೇಶದ ಪ್ರಗತಿಯಷ್ಟೇ ಮುಖ್ಯ ಎಂದರು.

ಇದನ್ನೂ ಓದಿ : ನಾನು ಸೆಂಟ್ರಲ್ ಮಿನಿಸ್ಟರ್, ದರ್ಶನ್ ಕೇಸ್ ಬಗ್ಗೆ ಚರ್ಚೆ ಮಾಡಲ್ಲ : ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ - H D Kumaraswamy

ETV Bharat Logo

Copyright © 2024 Ushodaya Enterprises Pvt. Ltd., All Rights Reserved.