ETV Bharat / state

ಗ್ಯಾರಂಟಿ ಯೋಜನೆಗಳು ಲೂಟಿ ಜಾತ್ರೆಯಾಗುತ್ತಿವೆ: ಹೆಚ್.ಡಿ.ಕುಮಾರಸ್ವಾಮಿ

ರಾಜ್ಯ ಕಾಂಗ್ರೆಸ್ ಸರ್ಕಾರದ​ ಗ್ಯಾರಂಟಿ ಯೋಜನೆಗಳನ್ನು ವಿಧಾನಸಭೆಯಲ್ಲಿಂದು ಜೆಡಿಎಸ್‌ ಶಾಸಕ ಹೆಚ್‌.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

Etv Bharatಗ್ಯಾರಂಟಿ ಯೋಜನೆಗಳು ಲೂಟಿ ಜಾತ್ರೆಯಾಗುತ್ತಿವೆ: ಹೆಚ್.ಡಿ.ಕುಮಾರಸ್ವಾಮಿ ಟೀಕೆ
ಗ್ಯಾರಂಟಿ ಯೋಜನೆಗಳು ಲೂಟಿ ಜಾತ್ರೆಯಾಗುತ್ತಿವೆ: ಹೆಚ್.ಡಿ.ಕುಮಾರಸ್ವಾಮಿ ಟೀಕೆ
author img

By ETV Bharat Karnataka Team

Published : Feb 15, 2024, 5:27 PM IST

ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಲೂಟಿ ಜಾತ್ರೆಯಾಗುತ್ತಿವೆ ಎಂದು ಜೆಡಿಎಸ್ ಶಾಸಕ ಹೆಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ಇಂದು ಟೀಕಿಸಿದರು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಚಾರಕ್ಕಾಗಿ ಜಾಹೀರಾತು ನೀಡಿದ 140 ಕೋಟಿ ರೂ. ಬಿಡುಗಡೆಯಾಗಿಲ್ಲ ಎಂಬ ಪತ್ರ ಬರೆದಿರುವುದೂ ಇದೆ. ಪಾಲಿಸಿ ಫ್ರಂಟ್ ಎಂಬ ಸಂಸ್ಥೆಗೆ 7.20 ಕೋಟಿ ರೂ. ಮೊತ್ತವನ್ನು ತೆರಿಗೆ ವಿನಾಯಿತಿ ನೀಡಿ ಶರವೇಗದಲ್ಲಿ ಹಣ ಬಿಡುಗಡೆ ಮಾಡಲಾಗಿದೆ. ಆ ಸಂಸ್ಥೆಗೆ ಅಪ್ಪ, ಅಮ್ಮ ಇಲ್ಲ. ಅದರ ಮೂಲ ಪತ್ತೆಯಾಗಿಲ್ಲ. ರಾಕೆಟ್ ವೇಗದಲ್ಲಿ ಹಣ ಬಿಡುಗಡೆಯಾಗಿದ್ದು, ಯಾವ ರೀತಿ ಕೆಲಸ ಮಾಡುತ್ತಿದೆ ಎಂದು ಗೊತ್ತಿಲ್ಲ. ಅದು ಪಟ್ಟೊ, ಮೊಟ್ಟೊ, ರಟ್ಟೊ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಕಚೇರಿಯಿಂದ ಜಾಹೀರಾತು ನೀಡಿ ಭ್ರಷ್ಟಾಚಾರದ ರೇಟ್ ಕಾರ್ಡ್ ಬಿಡುಗಡೆ ಮಾಡಲಾಗಿತ್ತು. ಈಗ ಅಧಿಕಾರಕ್ಕೆ ಬಂದ ಮೇಲೆ ಪರ್ಸಂಟೇಜ್ ನಿಲ್ಲಿಸಿದ್ದೀರಾ, ಇಲ್ಲವೇ ಜಾಸ್ತಿ ಮಾಡಿದ್ದೀರಾ ಅಥವಾ ಕಡಿಮೆ ಮಾಡಿದ್ದೀರಾ ಎಂಬುದನ್ನು ಹೇಳಬೇಕು. 250 ಲಕ್ಷ ಕೋಟಿ ರೂ. ಜಿಡಿಪಿಯಲ್ಲಿ 25 ಲಕ್ಷ ಕೋಟಿ ರೂ. ಕಪ್ಪು ಹಣವಿದೆ ಎಂದು ವೈದ್ಯನಾಥನ್ ಎಂಬವರು ಭ್ರಷ್ಟಾಚಾರದ ಬಗ್ಗೆ ಪುಸ್ತಕ ಬರೆದಿದ್ದಾರೆ. ಹೀಗಾಗಿ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡುವುದರಲ್ಲಿ ಉಪಯೋಗವಿಲ್ಲ ಎಂದರು.

ಮಧ್ಯವರ್ತಿಗಳಿಗೆ ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದರು. ಗದಗದಲ್ಲಿ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮರಳು ದಂಧೆ ವಿರುದ್ಧ ಪತ್ರ ಬರೆದಿದ್ದಕ್ಕೆ ಆ ರೀತಿಯಾಗಿದೆ ಎಂಬ ಮಾಹಿತಿ ಇದೆ. ಸರ್ಕಾರದ ಪರಿಶುದ್ಧ ಆಡಳಿತ ಹೇಗಿದೆಯೆಂದರೆ ನಗರೋತ್ಥಾನ ಯೋಜನೆಯ 233 ಕೋಟಿ ರೂ. ಬಿಲ್ ಪಾವತಿಗೆ ಮಧ್ಯವರ್ತಿ ಡಾಕ್ಟರ್ ಚೀಟಿ ಬೇಕು ಎಂಬುದು ಪತ್ರಿಕೆಯಲ್ಲಿ ವರದಿಯಾಗಿದೆ ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯಸರ್ಕಾರದ ನಡುವೆ ಸಂಘರ್ಷ ಕಂಡುಬರುತ್ತಿದ್ದು, ರಾಜ್ಯಕ್ಕೆ ಅನುದಾನ ಸಮರ್ಪಕವಾಗಿ ಬರುತ್ತಿಲ್ಲ ಎಂಬ ಆರೋಪ ಮಾಡಲಾಗುತ್ತಿದೆ. ನನ್ನನ್ನು ಲಾಟರಿ ಮುಖ್ಯಮಂತ್ರಿ ಎನ್ನುತ್ತಾರೆ. ನಾನು 2 ಬಾರಿ ಮುಖ್ಯಮಂತ್ರಿಯಾಗಿದ್ದೆ. ಮೊದಲು ಬಿಜೆಪಿ-ಜೆಡಿಎಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದೆ. ಆಗ ಕೇಂದ್ರದಲ್ಲಿ ಯುಪಿಎ ಸರ್ಕಾರವಿತ್ತು. ನಾನು ಹಲವು ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದೆ. ನಾನು ಎರಡನೇ ಬಾರಿ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಮುಖ್ಯಮಂತ್ರಿಯಾಗಿದ್ದಾಗ 134 ತಾಲೂಕುಗಳಲ್ಲಿ ಸಮಸ್ಯೆ ಉಂಟಾಗಿತ್ತು. ಅಂದು ನಾನು ಪ್ರಧಾನಿಯವರಿಗೆ ಮನವಿ ಮಾಡಿದ್ದೆ. ಆಗ ಅನುದಾನವನ್ನು ಕೊಟ್ಟಿದ್ದರು ಎಂದು ತಿಳಿಸಿದರು.

ಈಗ ಪ್ರತಿನಿತ್ಯ ಕೇಂದ್ರ ಸರ್ಕಾರದ ವಿರುದ್ಧ ಆಪಾದನೆ ಮಾಡುತ್ತಿದ್ದಾರೆ. ಹೀಗಾದರೆ ಯಾರು ಗೌರವ ಕೊಡುತ್ತಾರೆ ಎಂದು ತಿರುಗೇಟು ನೀಡಿದರು. ಬ್ರ್ಯಾಂಡ್ ಬೆಂಗಳೂರು ಮಾಡಲು ಹೊರಟಿದ್ದಾರೆ. ಸುರಂಗ ಮಾರ್ಗ ನಿರ್ಮಾಣಕ್ಕೆ ಮುಂದಾಗಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಇದಕ್ಕೆ ಅನುಮೋದನೆ ಕೊಟ್ಟಿದ್ದೆ. ಪೆರಿಫೆರಲ್ ರಸ್ತೆಗೂ ಆಗ 3,500 ಕೋಟಿ ರೂ. ಬೇಕಾಗಿತ್ತು. ಇಂದು 23 ಸಾವಿರ ಕೋಟಿ ರೂ. ಬೇಕು ಎನ್ನುತ್ತಿದ್ದಾರೆ ಎಂದರು.

ಇದನ್ನೂ ಓದಿ: ಏಪ್ರಿಲ್ 1ರಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನ: ಸಚಿವ ಕೆ.ಹೆಚ್.ಮುನಿಯಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.