ETV Bharat / state

ವಯನಾಡು ದುರಂತ : ತಾನು ಬದುಕಿದ, ತನ್ನೊಂದಿಗೆ 7 ಜನರ ಜೀವ ಉಳಿಸಿದ ಗುಂಡ್ಲುಪೇಟೆ ವೃದ್ಧ - WAYANAD LANDSLIDES - WAYANAD LANDSLIDES

ವಯನಾಡು ಭೂ ಕುಸಿತದಲ್ಲಿ ಸಿಲುಕಿ ಗುಂಡ್ಲುಪೇಟೆಯ ವೃದ್ಧರೊಬ್ಬರು ಪಾರಾಗುವ ಜೊತೆಗೆ 7 ಮಂದಿಯ ಪ್ರಾಣ ಉಳಿಸಿಕೊಂಡು ಬಂದಿದ್ದಾರೆ. ಇದೀಗ ಆ ದುರಂತದ ಬಗ್ಗೆ ವಿವರಿಸಿದ್ದಾರೆ.

Swami shetty
ಸ್ವಾಮಿಶೆಟ್ಟಿ (ETV Bharat)
author img

By ETV Bharat Karnataka Team

Published : Aug 1, 2024, 3:56 PM IST

Updated : Aug 1, 2024, 4:13 PM IST

ಸ್ವಾಮಿಶೆಟ್ಟಿ ಮಾತನಾಡಿದರು (ETV Bharat)

ಚಾಮರಾಜನಗರ : ವಯನಾಡು ದುರಂತದಲ್ಲಿ ಹಲವು ಮನಕಲಕುವ ವಿಚಾರಗಳು, ಸಿನಿಮೀಯ ಶೈಲಿಯಂತೆ ಬದುಕುಳಿದವರ ಕಥೆಗಳು ಬೆಳಕಿಗೆ ಬರುತ್ತಿವೆ. ಅದೇ ರೀತಿ ಭೂ ಕುಸಿತದಲ್ಲಿ ಗುಂಡ್ಲುಪೇಟೆ ವೃದ್ಧರೊಬ್ಬರು ಪಾರಾಗಿ ಬಂದಿದ್ದಾರೆ‌. ಜೊತೆಗೆ 7 ಮಂದಿಯನ್ನು ಉಳಿಸಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ತ್ರಯಂಬಕಪುರದ ಸ್ವಾಮಿಶೆಟ್ಟಿ ಕೇರಳದ ದುರಂತದಲ್ಲಿ ಸಿಲುಕಿದ್ದರು. ಅವರು ಬದುಕಿ ಬಂದಿದ್ದೇ ರೋಚಕವಾಗಿದೆ. ಈ ನಡುವೆ ಮನೆಯಲ್ಲಿ ನಿದ್ರೆಗೆ ಜಾರಿದ್ದ 7 ಮಂದಿಯನ್ನೂ ಕಾಪಾಡಿದ್ದಾರೆ.

ಅಣ್ಣನ ತಿಥಿ ಕಾರ್ಯಕ್ಕೆ ತೆರಳಿದ್ದ ಸ್ವಾಮಿಶೆಟ್ಟಿ : ಕೇರಳದ ಚೂರಲ್ ಮಲೆಯಲ್ಲಿ ಟೀ‌ ಎಸ್ಟೇಟ್​ನಲ್ಲಿ ಕೆಲಸ ಮಾಡುತ್ತಿದ್ದ ಅಣ್ಣ ಅಸುನೀಗಿದ್ದರು. ಅವರ ತಿಥಿ ಕಾರ್ಯಕ್ಕೆ ತೆರಳಿದ್ದ ಸ್ವಾಮಿಶೆಟ್ಟಿ ಅಲ್ಲೇ ಉಳಿದುಕೊಂಡಿದ್ದರು. ಅಣ್ಣನ ಮನೆಯಲ್ಲಿ ಅತ್ತಿಗೆ, ಮಗಳು, ಅಳಿಯ, ನಾಲ್ವರು ಮಕ್ಕಳಿದ್ದರು.

ಸೋಮವಾರದಂದು ಸುರಿಯುತ್ತಿದ್ದ ಜೋರುಮಳೆಗೆ ಸ್ವಾಮಿಶೆಟ್ಟಿ ಅವರಿಗೆ ನಿದ್ರೆ ಬರದಂತಾಗಿತ್ತು.‌ ಬಾಗಿಲು ಬಡಿಯುವ ಶಬ್ಧದಂತೆ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದರಿಂದ ಮೊದಲ ಬಾರಿ ಬಾಗಿಲು ತೆಗೆದು ನೋಡಿದ್ದಾರೆ. ಅದಾದ ಬಳಿಕ, ಎರಡನೇ ಬಾರಿ ಬಾಗಿಲು ತೆಗೆಯುತ್ತಿದ್ದಂತೆ ತಾವು ಮುಳುಗುವ ಮಟ್ಟಿಗೆ ಮನೆಯೊಳಕ್ಕೆ ನೀರು ಬಂದಿದೆ. ಕೂಡಲೇ, ಕೋಣೆಗಳ ಬಾಗಿಲು ಬಡಿದು ಎಲ್ಲರನ್ನೂ ಎಬ್ಬಿಸಿ ಕಂಬಿಯೊಂದನ್ನು ಹಿಡಿದು ಎತ್ತರದ ಪ್ರದೇಶಕ್ಕೆ ಹತ್ತಿಸಿದ್ದಾರೆ.

ಬಾಗಿಲು ತೆಗೆದ ನಂತರ ನೀರು ನುಗ್ಗಿದ ರಭಸಕ್ಕೆ ಎದೆ ನೋವು ಕಾಣಿಸಿಕೊಂಡರೂ ಬದುಕಬೇಕೆಂಬ ಛಲದಲ್ಲಿ ನೀರಿನ ನಡುವೆ ಬೆಟ್ಟ ಏರಿದ್ದಾರೆ. ಬೆಟ್ಟ ಏರಲು ಬೀಡಿ ಹೊತ್ತಿಸಲು ಇಟ್ಟುಕೊಂಡಿದ್ದ ಲೈಟರ್ ಮೂಲಕ ಬೆಳಕು ಮಾಡಿಕೊಂಡು ಪ್ರವಾಹಕ್ಕೆ ಸೆಡ್ಡು ಹೊಡೆದಿದ್ದಾರೆ.

ಬೆಳಗಿನ ಜಾವ 4ಕ್ಕೆ ಗುಡ್ಡದ ಮೇಲಿನ ತಮ್ಮ ಮನೆಯವರೆಲ್ಲರನ್ನೂ ಭೇಟಿ ಮಾಡಿದ ಸ್ವಾಮಿಶೆಟ್ಟಿ ಒಂದು ಹಗಲು, ಒಂದು ರಾತ್ರಿ ಮಳೆಯಲ್ಲಿ ‌ನೆನೆದರೂ ಸಹ ಪಾರಾಗಿ ಬಂದಿದ್ದಾರೆ. ತಾವಿದ್ದ ಮನೆಯ ಒಂದು ಗೋಡೆ ಬಿಟ್ಟರೆ ಎಲ್ಲವೂ ಕೊಚ್ಚಿಹೋಗಿದ್ದು ಎಂದು ಈಗಲೂ ಆ ಘಟನೆ ನೆನೆಸಿಕೊಂಡು ಬಿಕ್ಕಳಿಸುತ್ತಾರೆ.

ಗುರುವಾರ ಬೆಳಗಿನ ಜಾವ ತ್ರಯಂಬಕರಪುರದ ಮನೆಗೆ ಗುಂಡ್ಲುಪೇಟೆ ತಹಶೀಲ್ದಾರ್ ತಂಡ ಸುರಕ್ಷಿತವಾಗಿ ಅವರನ್ನು ಕರೆತಂದಿದ್ದಾರೆ. ಒಂದು ಹಗಲು, ಒಂದು ರಾತ್ರಿ ಇಡೀ ಮಳೆಯಲ್ಲಿ ತೋಯ್ದು ದುರಂತದಲ್ಲಿ ಪಾರಾಗುವ ಜೊತೆಗೆ ಸಿನಿಮೀಯ ಶೈಲಿಯಲ್ಲಿ ಮನೆಯಲ್ಲಿದ್ದ 7 ಮಂದಿಯನ್ನು ಕಾಪಾಡಿದ್ದಾರೆ.‌

ದುರಂತದ ವಿಚಾರ ತಿಳಿದು ಮನೆಯಲ್ಲಿ ಢವಢವ : ಸ್ವಾಮಿಶೆಟ್ಟಿ ಕುಟುಂಬಸ್ಥರು ದುರಂತದ ವಿಚಾರ ತಿಳಿದು ಮನೆಯಲ್ಲಿ ಭಯಭೀತರಾಗಿದ್ದರು. ಊಟವೂ ಸೇರುತ್ತಿರಲಿಲ್ಲ, ಟಿವಿ ನೋಡಿದರೆ ಭಯ ಆಗುತ್ತಿತ್ತು, ಫೋನ್ ಸಂಪರ್ಕವೂ ಇರಲಿಲ್ಲ. ಮಂಗಳವಾರದಂದು ಸ್ವಾಮಿಶೆಟ್ಟಿ ಚೆನ್ನಾಗಿದ್ದಾರೆಂಬ ಮಾಹಿತಿ ಬಂದ ಬಳಿಕ ಮನಸ್ಸು ಹಗುರವಾಯಿತು ಎಂದು ಅವರ ಪತ್ನಿ ನಾಗಮ್ಮ ಭಾವುಕರಾದರು.

ಇದನ್ನೂ ಓದಿ : "ಸಂಜೆ ಭೇಟಿ ಕೊಟ್ಟಿದ್ದ ಶಾಲೆ ಬೆಳಗ್ಗೆ ನಾಪತ್ತೆ": ವಯನಾಡು ದುರಂತದಲ್ಲಿ ಪಾರಾಗಿ ಬಂದ ಮಳವಳ್ಳಿಯ ರಾಧಾ ಕಣ್ಣೀರು - WAYANAD LANDSLIDES

Last Updated : Aug 1, 2024, 4:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.