ETV Bharat / state

'ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಗೆಲ್ಲದಿದ್ದರೆ ಗ್ಯಾರಂಟಿ ರದ್ದುಗೊಳಿಸುವುದು ಉತ್ತಮ'

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನ ನಮ್ಮನ್ನು ಗೆಲ್ಲಿಸದೇ ಇದ್ದರೆ ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡುವುದು ಒಳಿತು ಎಂದು ಶಾಸಕ ಹೆಚ್.ಸಿ.ಬಾಲಕೃಷ್ಣ ಹೇಳಿದರು.

MLA H C Balakrishna
ಶಾಸಕ ಹೆಚ್​. ಸಿ. ಬಾಲಕೃಷ್ಣ
author img

By ETV Bharat Karnataka Team

Published : Jan 31, 2024, 7:00 AM IST

Updated : Jan 31, 2024, 7:12 AM IST

ಶಾಸಕ ಹೆಚ್​.ಸಿ.ಬಾಲಕೃಷ್ಣ ಹೇಳಿಕೆ

ರಾಮನಗರ: "ಇಷ್ಟು ಗ್ಯಾರಂಟಿಗಳನ್ನು ಕೊಟ್ಟು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ ಹಾಕಿ ನಮ್ಮನ್ನು ಗೆಲ್ಲಿಸದಿದ್ದರೆ, ಜನ ಗ್ಯಾರಂಟಿಗಳನ್ನು ತಿರಸ್ಕರಿಸಿದಂತೆ. ಒಂದು ವೇಳೆ ಚುನಾವಣೆಯಲ್ಲಿ ಕಾಂಗ್ರೆಸ್​ ಹೆಚ್ಚು ಸ್ಥಾನಗಳನ್ನು ಪಡೆಯದೇ ಇದ್ದರೆ ಗ್ಯಾರಂಟಿಗಳನ್ನು ರದ್ದು ಮಾಡುವುದೇ ಉತ್ತಮ. ಈ ಬಗ್ಗೆ ನಾನು ಮುಖ್ಯಮಂತ್ರಿಗಳ ಬಳಿಯೂ ಮಾತನಾಡಿದ್ದೇನೆ" ಎಂದು ಕಾಂಗ್ರೆಸ್ ಶಾಸಕ ಹೆಚ್.ಸಿ.ಬಾಲಕೃಷ್ಣ ಹೇಳಿಕೆ ನೀಡಿದ್ದಾರೆ.

ರಾಮನಗರ ತಾಲೂಕಿನ ಶ್ರೀಗಿರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗಳವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಇಷ್ಟೆಲ್ಲಾ ಮಾಡಿ ಜನ ನಮಗೆ ಮತ ಹಾಕದೆ ತಿರಸ್ಕರಿಸಿದರೆ ಈ ಗ್ಯಾರಂಟಿಗಳಿಗೆ ಬೆಲೆ ಇಲ್ಲ, ಅಕ್ಷತೆಗೆ ಬೆಲೆ ಇದೆ ಎಂದು ತೀರ್ಮಾನ ಮಾಡಬೇಕಾಗುತ್ತದೆ. ಆಗ ನಾವೂ ಗ್ಯಾರಂಟಿಗಳನ್ನು ರದ್ದು ಮಾಡಿ, ಅಕ್ಷತೆ ಹಾಕಿ, ದೇವಸ್ಥಾನ ಕಟ್ಟಿ ಪೂಜೆ ಮಾಡಿ, ಮತ ಹಾಕಿಸಿಕೊಳ್ಳುತ್ತೇವೆ" ಎಂದು ಹೇಳಿದರು.

ಈ ಹಿಂದೆ ಕಾಂಗ್ರೆಸ್​ಗೆ ಹೆಚ್ಚು ಮತ ನೀಡಿರುವ ಗ್ರಾಮಗಳ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿಕೆ ನೀಡಿದ್ದ ಶಾಸಕರು ಮತ್ತೊಮ್ಮೆ, "ನಾವು ಐದು ವರ್ಷ ಜನರ ಕೆಲಸ ಮಾಡ್ತೀವಿ. ಅದರಂತೆ ಮತ ನೀಡಿ. ನಿಮ್ಮ ಮತ ಅಕ್ಷತೆ ಕಾಳಿಗಾ, ಐದು ಗ್ಯಾರಂಟಿಗಾ? ಈ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಿಸಿದರೆ ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸುತ್ತೇವೆ. ಗೆಲ್ಲಿಸದೇ ಇದ್ದರೆ ಸಿದ್ದರಾಮಯ್ಯನವರ ಗ್ಯಾರಂಟಿ ಯೋಜನೆ ಜನರಿಗೆ ಅವಶ್ಯಕತೆ ಇಲ್ಲ ಎಂದು ತೀರ್ಮಾನವಾಗಲಿದೆ ಅಲ್ಲವೆ? ಈ ಬಗ್ಗೆ ಜನರು ಯೋಚಿಸಿ" ಎಂದರು.

"ನಾವು ಎಲ್ಲಾ ಹಿಂದೂಗಳೇ. ಆದರೆ ದೇವಸ್ಥಾನದ ಹೆಸರಿನಲ್ಲಿ ಮತ ಪಡೆಯೋದು ಸರಿಯಲ್ಲ. ನಮ್ಮ ಜನ ಈಗ ಎಲ್ಲಾ ದೇವಸ್ಥಾನ ಕಟ್ಟಿಬಿಟ್ಟಿದ್ದಾರೆ. ಮುಂದೆ ಗ್ರಾಮಗಳಲ್ಲಿ ಹೊಸ ದೇವಾಲಯಗಳ ನಿರ್ಮಾಣಕ್ಕೆ ನಾಲ್ಕು ಲಕ್ಷ ರೂಪಾಯಿ ನೀಡುವುದಾಗಿ ಸಂಸದರು ಕೂಡ ತಿಳಿಸಿದ್ದಾರೆ."

"ನೀವು ಮಾಡುತ್ತಿರುವ ಕಾರ್ಯಕ್ರಮಗಳಿಂದ ಜನರು ನಮ್ಮನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಬೇಕು. ಗೆಲ್ಲಿಸಲಿಲ್ಲ ಎಂದರೆ, ಜನರಿಗೆ ನಿಮ್ಮ ಗ್ಯಾರಂಟಿಗಳ ಅವಶ್ಯಕತೆ ಇಲ್ಲ ಎನ್ನುವುದು ಅರ್ಥವಾಗುತ್ತದೆ ಎಂದು ಸಿಎಂಗೆ ಹೇಳಿದ್ದೇನೆ. ಗ್ಯಾರಂಟಿಗಳನ್ನು ರದ್ದು ಮಾಡಿ, ಆ ಹಣದಿಂದ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇವೆ. ಈ ಗ್ಯಾರಂಟಿಗಳಿಂದ ಸ್ವಲ್ಪ ಅಭಿವೃದ್ಧಿ ಕೆಲಸಗಳು ಕಡಿಮೆಯಾಗಿದೆ. ಮುಂದಿನ ವರ್ಷದಿಂದ ಎಲ್ಲವೂ ಸರಿಯಾಗುತ್ತದೆ" ಎಂದು ಹೇಳಿದರು.

ಇದನ್ನೂ ಓದಿ: ದೊಡ್ಡಬಳ್ಳಾಪುರ: ಕಾಂಗ್ರೆಸ್ ಸರ್ಕಾರದ ವಿರುದ್ಧ ಅಶೋಕ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ

Last Updated : Jan 31, 2024, 7:12 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.