ETV Bharat / state

ಉಡುಪಿ: ಮೊಬೈಲ್,​ ಚಿನ್ನಾಭರಣ ಬಿಟ್ಟು ವರ ನಾಪತ್ತೆ; ಮದುವೆಗೆ ಬಂದವರು ಮರಳಿ ಮನೆ ಹಾದಿ ಹಿಡಿದರು! - Groom Missing - GROOM MISSING

ವರ ನಾಪತ್ತೆಯಾದ ಹಿನ್ನೆಲೆ ಸೋಮವಾರ ನಡೆಯಬೇಕಾಗಿದ್ದ ಮದುವೆ ರದ್ದಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

WEDDING CANCEL  MARRIAGE CELEBRATION  UDUPI
ಉಡುಪಿ: ವರ ನಾಪತ್ತೆ, ಸೋಮವಾರ ನಡೆಯಬೇಕಾಗಿದ್ದ ಮದುವೆ ರದ್ದು (ETV Bharat)
author img

By ETV Bharat Karnataka Team

Published : Aug 20, 2024, 1:10 PM IST

ಉಡುಪಿ: ಮದುಮಗ ಓಡಿ ಹೋದ ಕಾರಣ ಸೋಮವಾರ (ಆ. 19) ನಡೆಯಬೇಕಿದ್ದ ಮದುವೆ ರದ್ದಾಗಿದೆ. ಅಳಿವೆಕೋಡಿ ಗ್ರಾಮದ ಯುವಕನೊಂದಿಗೆ ಉಪ್ಪುಂದ ಗ್ರಾಮದ ಯುವತಿಯ ಮದುವೆ ಸೋಮವಾರ ನಾಗೂರಿನಲ್ಲಿ ನಡೆಯಬೇಕಿತ್ತು. ಹುಡುಗ ಖಾಸಗಿ ಸಂಸ್ಥೆಯಲ್ಲಿ ಕೆಲಸದಲ್ಲಿದ್ದ. ಈ ಹಿಂದೆ ಎರಡು ಕಡೆಯ ಮನೆಯವರು ಸೇರಿ ಮದುವೆ ನಿಶ್ಚಯಿಸಿದ್ದರು. ಆ.18 ರಂದು ಹುಡುಗನ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆದಿತ್ತು.

ಮದುಮಗ ಆ.18ರಂದು ಮದುವೆಗೆ ಅಗತ್ಯವಿರುವ ಚಿನ್ನಾಭರಣಗಳನ್ನು ಅಂಗಡಿಯಿಂದ ಪಡೆದು, ಅಂಗಡಿಯವರಿಗೆ 20 ಸಾವಿರ ರೂ. ಕೊಡಲು ಬಾಕಿ ಇತ್ತು. ಚಿನ್ನಾಭರಣಗಳನ್ನು ಮನೆಯಲ್ಲಿಟ್ಟು ಕೆಲವು ವಸ್ತುಗಳನ್ನು ತರಲು ಇದೆ ಎಂದು ಮನೆಯವರಲ್ಲಿ ಹೇಳಿ, ಮೊಬೈಲ್ ಮತ್ತು ಕೈಯಲ್ಲಿದ್ದ ಚಿನ್ನದ ಬ್ರಾಸ್‌ಲೇಟ್ ಅನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾನೆ.

ಮೆಹಂದಿಯ ಸಂಭ್ರಮದಲ್ಲಿ ಇದ್ದ ಮನೆಯವರು ಹುಡುಗ ಮನೆಗೆ ಬಾರದೆ ಇರುವುದರಿಂದ ಗಾಬರಿಯಿಂದ ಹುಡುಕಾಟದಲ್ಲಿ ತೊಡಗಿದರು. ಬಳಿಕ ಹುಡುಗ ನಾಪತ್ತೆ ವಿಷಯ ತಿಳಿದು ನೆರೆದವರೆಲ್ಲರೂ ವಾಪಸ್​ ತೆರಳಿದರು.

ಓದಿ: ಬೆಂಗಳೂರು: ಅತ್ಯಾಚಾರ ಯತ್ನಕ್ಕೊಳಗಾಗಿದ್ದ ಸಂತ್ರಸ್ತೆ ವಿರುದ್ಧ ಪ್ರಕರಣ, ಕಾರಣ? - Case Against Rape Attempted Victim

ETV Bharat Logo

Copyright © 2025 Ushodaya Enterprises Pvt. Ltd., All Rights Reserved.