ETV Bharat / state

ದಕ್ಷಿಣ ಕನ್ನಡ: ನಿರ್ಮಾಣ ಹಂತದ ಮನೆಯಿಂದ ಬಿದ್ದು ಗ್ರಾ.ಪಂ ಸದಸ್ಯ ಸಾವು - Gram Panchayat Member Dies - GRAM PANCHAYAT MEMBER DIES

ನಿರ್ಮಾಣ ಹಂತದ ಮನೆಯೊಂದರಿಂದ ಕೆಳಗೆ ಬಿದ್ದು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಮೃತಪಟ್ಟ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ನಿರ್ಮಾಣ ಹಂತದ ಮನೆಯಿಂದ ಬಿದ್ದು ಗ್ರಾ.ಪಂ ಸದಸ್ಯ ಸಾವು
ನಿರ್ಮಾಣ ಹಂತದ ಮನೆಯಿಂದ ಬಿದ್ದು ಗ್ರಾ.ಪಂ ಸದಸ್ಯ ಸಾವು (ETV Bharat)
author img

By ETV Bharat Karnataka Team

Published : Jun 5, 2024, 10:31 PM IST

ಬಂಟ್ವಾಳ(ದಕ್ಷಿಣ ಕನ್ನಡ): ನಿರ್ಮಾಣ ಹಂತದ ಮನೆಯೊಂದರ ಕಾಂಕ್ರೀಟ್‌ ಅಳವಡಿಕೆಗೆ ಹಾಕಿದ್ದ ಹಲಗೆಗಳು ಹಾಗೂ ಜಾಕ್‌ಗಳು ಹಠಾತ್‌ ಮುರಿದು ಬಿದ್ದ ಪರಿಣಾಮ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ. ಬಂಟ್ವಾಳ ಅಮ್ಟಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಡ್ಯಾಲು ನಿವಾಸಿ ಪ್ರಕಾಶ್ (45) ಮೃತರು. ಇವರು ಅಮ್ಟಾಡಿ ಗ್ರಾಮ ಪಂಚಾಯಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದರು.

ಬಡಾಜೆ ಎಂಬಲ್ಲಿ ಮನೆಯೊಂದರ ಎರಡನೇ ಮಹಡಿಗೆ ಮೃತರು ಸೇರಿ ಒಟ್ಟು ಮೂರು ಮಂದಿ ಕಾಂಕ್ರೀಟ್ ಕೆಲಸ ಮಾಡುತ್ತಿದ್ದರು. ಆದರೆ ಏಕಾಏಕಿ ಕಾಂಕ್ರೀಟ್ ಅಳವಡಿಕೆಗೆ ಹಾಕಿದ್ದ ಹಲಗೆಗಳು ಮತ್ತು ಜಾಕ್​ಗಳು ಮುರಿದು ಬಿದ್ದ ಪರಿಣಾಮ ಮೂವರು ಕೆಳಗೆ ಬಿದ್ದಿದ್ದಾರೆ. ಪ್ರಕಾಶ್ ಮಾತ್ರ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಮೂವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಗಂಭೀರವಾಗಿ ಗಾಯಗೊಂಡಿದ್ದ ಪ್ರಕಾಶ್ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಉಳಿದಂತೆ ಇನ್ನಿಬ್ಬರು ಕೆಲಸಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಬರ್ತ್‌ಡೇ ಪಾರ್ಟಿಗೆ ಹೋಗಿದ್ದ ಯುವಕನ ಬರ್ಬರ ಹತ್ಯೆ - Young Man Murder

ETV Bharat Logo

Copyright © 2024 Ushodaya Enterprises Pvt. Ltd., All Rights Reserved.