ETV Bharat / state

ಟ್ಯಾಕ್ಸಿ, ಕ್ಯಾಬ್​​ ಪ್ರಯಾಣಕ್ಕಿನ್ನು ಮನಬಂದಂತೆ ದರ ಹಾಕುವಂತಿಲ್ಲ: ಸರ್ಕಾರದಿಂದಲೇ ರೇಟ್ ಫಿಕ್ಸ್ - ಹೀಗಿದೆ ದರ ಪಟ್ಟಿ - ಸರ್ಕಾರದಿಂದ ಏಕರೂಪ ಪ್ರಯಾಣ ದರ

ರಾಜ್ಯಾದ್ಯಂತ ಟ್ಯಾಕ್ಸಿ, ಕ್ಯಾಬ್​ಗಳಿಗೆ ಏಕರೂಪದ ಪ್ರಯಾಣ ದರ ನಿಗದಿ ಪಡಿಸಿ ಸರ್ಕಾರ ಆದೇಶಿಸಿದೆ. ಈ ಮೂಲಕ ಜನರಿಂದ ಹೆಚ್ಚುವರಿ ಹಣ ವಸೂಲಿ ಮಾಡುವ ಕೆಲ ಟ್ಯಾಕ್ಸಿ ಚಾಲಕರಿಗೆ ಮತ್ತು ಆ್ಯಪ್ ಆಧಾರಿತ ಸಂಸ್ಥೆಗಳಿಗೆ ಬಿಸಿ ಮುಟ್ಟಿದೆ.

Cab taxi uniform fare
ಟ್ಯಾಕ್ಸಿ, ಕ್ಯಾಬ್​​ಗಳಿಗೆ ಏಕರೂಪದ ಪ್ರಯಾಣ ದರ
author img

By ETV Bharat Karnataka Team

Published : Feb 5, 2024, 6:45 AM IST

ಬೆಂಗಳೂರು: ಟ್ಯಾಕ್ಸಿ ಹಾಗೂ ಅಗ್ರಿಗೇಟರ್ಸ್ ನಿಯಮದಡಿ ಕಾರ್ಯನಿರ್ವಹಿಸುವ ವಿವಿಧ ಮಾದರಿಯ ಟ್ಯಾಕ್ಸಿಗಳಿಗೆ ಏಕರೂಪ ಪ್ರಯಾಣ ದರ ನಿಗದಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ಆದೇಶ ಹೊರಡಿಸಿರುವ ಸಾರಿಗೆ ಇಲಾಖೆ, ಬೆಂಗಳೂರು ಸೇರಿ ರಾಜ್ಯದಲ್ಲಿ ಓಡಾಡುವ ಎಲ್ಲಾ ಟ್ಯಾಕ್ಸಿ, ಸಿಟಿ ಟ್ಯಾಕ್ಸಿ ಇನ್ನಿತರೆ ಟ್ಯಾಕ್ಸಿ(ಮೋಟಾರು ಕ್ಯಾಬ್) ಗಳ ಹಾಗೂ ಅಗ್ರಿಗೇಟರ್ಸ್ ನಿಯಮಗಳಡಿ ಕಾರ್ಯಾಚರಣೆ ನಡೆಸುತ್ತಿರುವ ವಿವಿಧ ಮಾದರಿಯ ಟ್ಯಾಕ್ಸಿಗಳ ಪ್ರಯಾಣ ದರ ಮತ್ತು ಸಾಗಾಣಿಕೆಗೆ ಏಕರೂಪ ದರ ನಿಗದಿ ಪಡಿಸಲಾಗಿದೆ. ಕೂಡಲೇ ಜಾರಿಗೆ ಬರುವಂತೆ ನಿಗದಿಪಡಿಸಲು ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರಕ್ಕೆ ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳಿಗೆ ನಿರ್ದೇಶಿಸಲಾಗಿದೆ.

ಆ್ಯಪ್ ಆಧಾರಿತ ಟ್ಯಾಕ್ಸಿಗಳು ಕೆಲ ವೇಳೆ ದುಬಾರಿ ದರ ವಿಧಿಸುತ್ತಿದ್ದರು. ಅದರಲ್ಲೂ ಪೀಕ್ ಅವಧಿಯಲ್ಲಿ ಟ್ಯಾಕ್ಸಿ ದರ ದುಪ್ಪಟ್ಟಾಗುತಿತ್ತು. ಹೀಗಾಗಿ ವಿವಿಧ ಟ್ಯಾಕ್ಸಿಗಳಿಗೆ ಒಂದೇ ಮಾದರಿ ದರ ನಿಗದಿ ಮಾಡುವಂತೆ ಪ್ರಯಾಣಿಕರಿಂದ ಹಲವು ವರ್ಷಗಳಿಂದ ಬೇಡಿಕೆ ಇತ್ತು. ಇದೀಗ ಸರ್ಕಾರ ಏಕ ರೂಪ ದರ ನಿಗದಿಗೊಳಸಿ ಆದೇಶ ಹೊರಡಿಸಿದೆ.

ನಿಗದಿಪಡಿಸಿದ ಪ್ರಯಾಣ ದರ ಹೀಗಿದೆ:

  • ವಾಹನದ ಮೌಲ್ಯ 10 ಲಕ್ಷ ರೂ. ಗಿಂತ ಕಡಿಮೆ ಇದ್ದರೆ ಕನಿಷ್ಠ 4 ಕಿಮೀ ವರೆಗೆ ನಿಗದಿತ ದರ 100 ರೂ. ಇರಲಿದೆ. ಪ್ರತಿ ಕಿಮೀಗೆ 24 ರೂ ದರ ನಿಗದಿ ಪಡಿಸಲಾಗಿದೆ.
  • ವಾಹನ ಮೌಲ್ಯ 10 ಲಕ್ಷ ದಿಂದ 15 ಲಕ್ಷ ವರೆಗೆ ಇದ್ದರೆ ಕನಿಷ್ಠ 4 ಕಿಮೀ ವರೆಗೆ ನಿಗದಿತ ದರ 115 ರೂ. ಇರಲಿದೆ. ಪ್ರತಿ ಕಿಮೀಗೆ 28 ರೂ. ದರ ನಿಗದಿ ಪಡಿಸಲಾಗಿದೆ.
  • ವಾಹನ ಮೌಲ್ಯ 15 ಲಕ್ಷಗಿಂತ ಅಧಿಕವಾಗಿದ್ದರೆ ಕನಿಷ್ಠ 4 ಕಿಮೀ ವರೆಗೆ ನಿಗದಿತ ದರ 130 ರೂ. ಇರಲಿದೆ. ಪ್ರತಿ ಕಿಮೀಗೆ 32 ರೂ. ದರ ನಿಗದಿ ಪಡಿಸಲಾಗಿದೆ.
  • ಲಗೇಜ್ ದರಗಳು ಮೊದಲಿನ 120 ಕೆಜಿವರೆಗೆ ಉಚಿತ (ಸೂಟ್ ಕೇಸ್, ಬೆಡ್ಡಿಂಗ್ ಇತ್ಯಾದಿ ವೈಯಕ್ತಿಕ ಲಗೇಜುಗಳು) ನಂತರದ ಪ್ರತಿ 30 ಕೆಜಿಗೆ ಅಥವಾ ಅದರ ಭಾಗಕ್ಕೆ 7 ರೂ.
  • ಕಾಯುವಿಕೆಯ ದರಗಳು ಮೊದಲ 5 ನಿಮಿಷಗಳವರೆಗೆ ಉಚಿತ. ನಂತರದ ಪ್ರತಿ 1 ನಿಮಿಷಕ್ಕೆ 1 ರೂ.
  • ರಾತ್ರಿ 12 ಗಂಟೆಯಿಂದ ಬೆಳಗಿನ 6 ಗಂಟೆಯವರೆಗೆ ಸಂಚರಿಸುವ ಟ್ಯಾಕ್ಸಿಗಳಿಗೆ ಪ್ರಯಾಣ ದರದ ಮೇಲೆ ಶೇ.10 ರಷ್ಟು ಹೆಚ್ಚುವರಿ ದರ
  • ಸಿಟಿ ಟ್ಯಾಕ್ಸಿಯವರು / ಪ್ರವರ್ತಕರು, ಅಗ್ರಿಗೇಟರ್‌ಗಳು ಅನ್ವಯಿಸುವಂತಹ ಜಿ.ಎಸ್.ಟಿ. ಮತ್ತು ಟೋಲ್ ಶುಲ್ಕವನ್ನು ಪ್ರಯಾಣಿಕರಿಂದ ವಸೂಲಿ ಮಾಡಬಹುದಾಗಿದೆ.
  • ಸಮಯದ ಆಧಾರದಲ್ಲಿ ದರಗಳನ್ನು ವಸೂಲಿ ಮಾಡಬಾರದು. ಸರ್ಕಾರದಿಂದ ಕಿಮೀ ಆಧಾರದಲ್ಲಿ ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ದರಗಳನ್ನು ಮಾತ್ರ ಪ್ರಯಾಣಿಕರಿಂದ ವಸೂಲಿ ಮಾಡಬೇಕು.
  • ಸರ್ಕಾರ ನಿಗದಿಪಡಿಸಿರುವ ದರಗಳನ್ನು ಹೊರತುಪಡಿಸಿ ಅನಧಿಕೃತವಾಗಿ ಯಾವುದೇ ದರಗಳನ್ನು ಪ್ರಯಾಣಿಕರಿಂದ ಪಡೆಯುವಂತಿಲ್ಲ.

ಇದನ್ನೂ ಓದಿ: ಬೆಂಗಳೂರು: ಚಾಲನಾ ಪರೀಕ್ಷೆ ಪೂರ್ಣವಾದರೂ ಲೈಸೆನ್ಸ್​ ಸಿಗದೆ ಚಾಲಕರ ಪರದಾಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.