ETV Bharat / state

ಸರ್ಕಾರ ಎಲ್ಲ ಪ್ರಜೆಗಳನ್ನೂ ಸಮಾನವಾಗಿ ಕಾಣಬೇಕು: ಪೇಜಾವರ ಶ್ರೀ - Vishwaprasanna Theertha Swamiji - VISHWAPRASANNA THEERTHA SWAMIJI

ಸರ್ಕಾರ ಒಂದು ಕೋಮಿನ, ಗುಂಪಿನ ಸ್ವತ್ತಲ್ಲ ಎಂದು ಪೇಜಾವರ ಶ್ರೀ ತಿಳಿಸಿದ್ದಾರೆ.

vishwaprasanna-theertha-swamiji
ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
author img

By ETV Bharat Karnataka Team

Published : Apr 7, 2024, 9:33 PM IST

ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ವಿಜಯಪುರ: ಸರ್ಕಾರ ಒಂದು ಕೋಮಿನ, ಗುಂಪಿನ ಸ್ವತ್ತಲ್ಲ. ಎಲ್ಲ ಪ್ರಜೆಗಳನ್ನೂ ಸಮಾನವಾಗಿ ಕಾಣಬೇಕು. ಇದು ಅಧಿಕಾರದಲ್ಲಿ ಇದ್ದವರ ಕರ್ತವ್ಯ ಎಂದು ರಾಜ್ಯ ಸರ್ಕಾರದ ಕುರಿತು ಪೇಜಾವರ ಶ್ರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯಪುರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಗರ್ತ್​ಪೇಟೆಯಲ್ಲಿ ಹನುಮಾನ್ ಚಾಲಿಸಾ ಹಚ್ಚಿ ಹಲ್ಲೆಗೊಳಗಾದ ಮುಕೇಶ್ ಎಂಬವರ ಮೇಲೆ ಪ್ರಕರಣ ದಾಖಲಾದ ವಿಚಾರವಾಗಿ ಅವರು ಪ್ರತಿಕ್ರಿಯಿಸಿದರು.

ರಾಮ ನವಮಿಗೆ ಅಯೋಧ್ಯೆಗೆ ಭಕ್ತರು ಬರಬೇಡಿ: ರಾಮ ನವಮಿಯ ದಿನ ಭಕ್ತರು ಅಯೋಧ್ಯೆಗೆ ಬರಬೇಡಿ. ತಮ್ಮ ತಮ್ಮ ಊರುಗಳಲ್ಲೇ ರಾಮ ನವಮಿ ಆಚರಿಸಿ. ಆ ದಿನ ಅಯೋಧ್ಯೆಗೆ ಭಕ್ತರು ಬಂದಲ್ಲಿ ದರ್ಶನಕ್ಕೆ ತೊಂದರೆಯಾಗುತ್ತದೆ. ತಮ್ಮ ಊರಿನ ಮಂದಿರ, ಮನೆಗಳಲ್ಲೇ ರಾಮ ನವಮಿ ಆಚರಿಸಿ ಎಂದು ಶ್ರೀಗಳು ಇದೇ ವೇಳೆ ಮನವಿ ಮಾಡಿದ್ದಾರೆ.

ಈಗಾಗಲೇ ಪ್ರತಿ ಗಂಟೆಗೆ 15 ಸಾವಿರ ಭಕ್ತರು ದರ್ಶನ ಪಡೆಯುತ್ತಿದ್ದಾರೆ. ನಿತ್ಯ ಲಕ್ಷಾಂತರ ಭಕ್ತರು ದರ್ಶನ ಪಡೆಯುತ್ತಿದ್ದಾರೆ. ರಾಮನವಮಿಗೆ ಇನ್ನಷ್ಟು ಭಕ್ತರು ಆಗಮಿಸಿದಲ್ಲಿ ತೊಂದರೆ ಉಂಟಾಗುತ್ತದೆ ಎಂದು ತಿಳಿಸಿದರು.

ರಾಮಮಂದಿರ ನಿರ್ಮಾಣವಾಗಿದೆ. ಶತಶತಮಾನಗಳ ಕನಸು ನನಸಾಗಿದೆ. ಭಾರತೀಯರ ಕನಸು ಕೇವಲ ರಾಮಮಂದಿರ ಅಷ್ಟೇ ಅಲ್ಲ, ರಾಮರಾಜ್ಯದ ಕನಸು. ಅದು ಇನ್ನೂ ಬಾಕಿ ಉಳಿದಿದೆ. ರಾಮರಾಜ್ಯ ಅಂದ್ರೆ ಸರ್ವ ಸಮೃದ್ಧಿ. ಅವತ್ತು ರಾಜರ ಆಳ್ವಿಕೆ ಇತ್ತು, ಒಬ್ಬ ರಾಮ ರಾಜನಾದ, ರಾಮರಾಜ್ಯ ಸುಲಭ ಆಗಿ ಹೋಯ್ತು. ಇವತ್ತು ರಾಜರ ಆಳ್ವಿಕೆ ಇಲ್ಲ, ಇವತ್ತು ಪ್ರಜಾರಾಜ್ಯ ಇದೆ ಎಂದರು.

ಕಷ್ಟದಲ್ಲಿರುವವರಿಗೆ ನೆರವಾಗಬೇಕು: ವಾಲ್ಮೀಕಿ ರಾಮಾಯಣ ರಾಮನನ್ನು ಪರಿಚಯ ಮಾಡಿಕೊಟ್ಟಿದ್ದೇ ಅನೇಕ ಸದ್ಗುಣಗಳ ಮೂಲಕ. ಪ್ರಜೆಗಳ ಕಷ್ಟ ಸುಖ ತನ್ನದೆಂದು ಭಾವಿಸುತ್ತಿದ್ದವ ರಾಮ. ಹಾಗೆಯೇ ರಾಮನಿಗೆ ಹೊಸ ಮಂದಿರವಾಯಿತು. ಅವನ ಪ್ರಜೆಗಳು ನಮಗೂ ಮನೆಯಿಲ್ಲ ಎಂದು ಕೊರಗುವಂತಿರಬಾರದು. ನಮ್ಮ ನಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಕಷ್ಟದಲ್ಲಿರುವವರಿಗೆ ನೆರವಾಗಬೇಕು. ಸಾಮರ್ಥ್ಯವಿರುವವರು ಒಂದೆರಡು ಲಕ್ಷ ಖರ್ಚು ಮಾಡಿದರೆ ಸಾಕು ಒಂದು ಪುಟ್ಟ ಸುಂದರ ಮನೆ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: ರಾಮಮಂದಿರ‌ ನಿರ್ಮಾಣದಿಂದ ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ‌ ಬಂದ್ರೆ ತಪ್ಪೇನಿಲ್ಲ: ಪೇಜಾವರ ಶ್ರೀ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.