ETV Bharat / state

ಬೆಂಗಳೂರು: ಹೊಯ್ಸಳ ಶೈಲಿಯಲ್ಲಿ ಧಾರ್ಮಿಕ ಸೌಧ ನಿರ್ಮಾಣದ ನೀಲನಕ್ಷೆ ಸಿದ್ಧ

ಬೆಂಗಳೂರಿನ ಎಂ.ಎಸ್.ಬಿಲ್ಡಿಂಗ್ ಮುಂದೆ ನಿರ್ಮಾಣಗೊಳ್ಳಲಿರುವ ಹೊಯ್ಸಳ ಶೈಲಿಯ ಧಾರ್ಮಿಕ ಸೌಧ ನೀಲನಕ್ಷೆ ಸಿದ್ಧಗೊಂಡಿದ್ದು, ಅತಿ ಶೀಘ್ರದಲ್ಲೇ ಕಟ್ಟಡ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ ಎಂದು ಮುಜರಾಯಿ ಇಲಾಖೆ ಮಾಹಿತಿ ನೀಡಿದೆ.

Religious Building Blueprint
ಧಾರ್ಮಿಕ ಸೌಧದ ನೀಲನಕ್ಷೆ (Govt Of Karnataka)
author img

By ETV Bharat Karnataka Team

Published : Nov 30, 2024, 6:50 AM IST

ಬೆಂಗಳೂರು: ಎಂ.ಎಸ್. ಬಿಲ್ಡಿಂಗ್ ಎದುರುಗಡೆ ಇರುವ ಜಾಗದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೊಯ್ಸಳ ಶೈಲಿಯ ಧಾರ್ಮಿಕ‌ ಸೌಧದ ನೀಲನಕ್ಷೆ ಸಿದ್ಧವಾಗಿದೆ.

ಎಂ.ಎಸ್. ಬಿಲ್ಡಿಂಗ್ ಎದುರುಗಡೆಯ ರಾಮಾಂಜನೇಯ ಸ್ವಾಮಿ ದೇವಸ್ಥಾನ ಹಿಂಭಾಗ ಇರುವ ಮುಜರಾಯಿ ಇಲಾಖೆಯ 26 ಗುಂಟೆ ಜಾಗದಲ್ಲಿ 6 ಗುಂಟೆ ದೇವಸ್ಥಾನವಿದ್ದು, ಉಳಿದ 20 ಗುಂಟೆ ಜಾಗದಲ್ಲಿ ರಾಜ್ಯದ ಮುಜರಾಯಿ ಇಲಾಖೆ ಸ್ವಂತ ಕಟ್ಟಡ ನಿರ್ಮಾಣ ಮಾಡಲಿದೆ. ಹೊಯ್ಸಳ ಶೈಲಿಯಲ್ಲಿ ಧಾರ್ಮಿಕ ಸೌಧವನ್ನು ನಿರ್ಮಾಣ ಮಾಡಲಿದೆ. ನಾಲ್ಕು ಅಂತಸ್ತಿನ ಕಟ್ಟಡ ಇದಾಗಿರಲಿದೆ.

Religious Building Blueprint
ಧಾರ್ಮಿಕ‌ ಸೌಧದ ನೀಲನಕ್ಷೆ (Govt Of Karnataka)

ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ದತ್ತಿ ಇಲಾಖೆ ಪರಿಷತ್ ಸಭೆಯಲ್ಲಿ ಕಟ್ಟಡ ನಿರ್ಮಾಣ ಮಾಡಲು ನಿರ್ಧರಿಸಲಾಗಿತ್ತು. ಇದೀಗ ನೀಲನಕ್ಷೆ ಎಲ್ಲವೂ ಸಿದ್ಧವಾಗಿದ್ದು, ಅತಿ ಶೀಘ್ರದಲ್ಲೇ ಕಟ್ಟಡ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಈಗಿರುವ ಧಾರ್ಮಿಕ ದತ್ತಿ ಇಲಾಖೆ ಕಚೇರಿ ಮಿಂಟೋ ಆಸ್ಪತ್ರೆ ಎದುರುಗಡೆ ಇದ್ದು, ಪ್ರತಿ ತಿಂಗಳು ಸುಮಾರು 11 ಲಕ್ಷ ಬಾಡಿಗೆ ನೀಡಲಾಗುತ್ತಿದೆ. ಸ್ವಾತಂತ್ರ್ಯ ನಂತರ ಇಲಾಖೆ ಪ್ರಾರಂಭವಾದದಿಂದ ಇಲ್ಲಿಯವರೆಗೂ ಯಾವುದೇ ಸ್ವಂತ ಕಟ್ಟಡ ಕಚೇರಿ ಇಲ್ಲ. ರಾಜ್ಯದಲ್ಲಿ ಹಾಗೂ ಬೆಂಗಳೂರಿನಲ್ಲಿ ನೂರಾರು ಎಕರೆಗಳು ದೇವಸ್ಥಾನದ ಮುಜರಾಯಿ ಇಲಾಖೆಯ ಆಸ್ತಿಗಳಿದ್ದರೂ ಮುಜರಾಯಿ ಇಲಾಖೆಗೆ ಸ್ವಂತ ಕಟ್ಟಡ ಇಲ್ಲ. ಹೀಗಾಗಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ.

ಧಾರ್ಮಿಕ ಸೌಧ ರೂಪುರೇಷೆ: ಧಾರ್ಮಿಕ ಸೌಧದ ಮೊದಲನೆಯ ಮಹಡಿಯಲ್ಲಿ ಕೋರ್ಟ್ ಹಾಲ್, ಕಮಿಷನರ್ ಕಚೇರಿ, ಸರ್ವೆ ಇಲಾಖೆ , ಹೆಚ್​ಕ್ಯೂ ಮತ್ತು QA ಕಚೇರಿಗಳು ಇರಲಿವೆ. ಎರಡನೇ ಮಹಡಿಯಲ್ಲಿ ಆಗಮ ಸೆಕ್ಷನ್ ಆಫೀಸರ್, ಐಟಿ ಸೆಕ್ಷನ್, ಇಂಜಿನಿಯರಿಂಗ್ ಸೆಕ್ಷನ್, ಮೀಟಿಂಗ್ ಹಾಲ್, ಹೆಚ್​ಕ್ಯೂ ಒನ್ ಚೇಂಬರ್, QA1 ಇರಲಿದೆ. ಮೂರನೇ ಮಹಡಿಯಲ್ಲಿ ಓಪನ್ ಆಫೀಸ್ ಹಾಲ್, SUPERDIENT 1-5 ಕಚೇರಿಗಳು, ಡಿಜಿಟಲ್ ಲೈಬ್ರರಿ, ಆರ್​ಡಿಪಿಆರ್, ರೆಕಾರ್ಡ್ಸ್ ಇರಲಿವೆ. ನಾಲ್ಕನೆಯ ಮಹಡಿಯಲ್ಲಿ ಆಡಿಟೋರಿಯಂ ಇರಲಿದೆ. ನೆಲಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಇರಲಿದೆ.

ಪಕ್ಕದಲ್ಲಿರುವ ರಾಮಾಂಜನೇಯ ದೇವಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಬ್ಬರು ಅರ್ಚಕರಿಗೆ ಎರಡು ಡಬಲ್ ಬೆಡ್​ರೂಮ್ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗುವುದು. ದೇವಸ್ಥಾನದ ಖರ್ಚುಗಳು ಹಾಗೂ ದೇವಸ್ಥಾನ ಮುಂದೆ ಇರುವ ಯಾಗ ಶಾಲೆ, ಪಾಕಶಾಲೆಯನ್ನು ನವೀಕರಣ ಮಾಡಲಾಗುವುದು. ದೇವಸ್ಥಾನದ ಖರ್ಚು ವೆಚ್ಚವನ್ನು ಮುಜರಾಯಿ ಇಲಾಖೆ ಭರಿಸಲಿದೆ ಎಂದು ಮಾಹಿತಿ ನೀಡಿದೆ.

ಇದನ್ನೂ ಓದಿ: ಕಾರವಾರದಲ್ಲಿ ರಾಜ್ಯದ ಮೊದಲ ಕಡಲಜೀವಿ ಆರೈಕೆ ಕೇಂದ್ರ ; ಅರಣ್ಯ ಇಲಾಖೆಯಿಂದ 4 ಕೋಟಿ ವೆಚ್ಚದಲ್ಲಿ ನೀಲನಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.