ETV Bharat / state

ಜಲಮಂಡಳಿಯ ಗ್ರೀನ್‌ ಸ್ಟಾರ್‌ ಚಾಲೆಂಜ್​​ಗೆ ಉತ್ತಮ ಪ್ರತಿಕ್ರಿಯೆ: 2 ವಾರದಲ್ಲಿ 629ಕ್ಕೂ ಹೆಚ್ಚು ಗ್ರಾಹಕರ ನೋಂದಣಿ - Green Star Challenge

ನೀರನ್ನು ಉಳಿಸುವ, ಸದ್ಬಳಕೆಯನ್ನು ಪ್ರೋತ್ಸಾಹಿಸುವ ಪಂಚಸೂತ್ರಗಳನ್ನು ಅಳವಡಿಸಿಕೊಳ್ಳುವ ಜಲಮಂಡಳಿಯ ಗ್ರೀನ್‌ ಸ್ಟಾರ್‌ ಚಾಲೆಂಜ್​ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.

Green Star Challenge
ಗ್ರೀನ್‌ ಸ್ಟಾರ್‌ ಚಾಲೆಂಜ್​​ (Etv Bharat)
author img

By ETV Bharat Karnataka Team

Published : May 4, 2024, 6:56 PM IST

ಬೆಂಗಳೂರು: ಜಲಮಂಡಳಿಯಿಂದ ನೀರು ಉಳಿತಾಯದ ಉತ್ತಮ ಕ್ರಮಗಳನ್ನು ಅಳವಡಿಸಿಕೊಳ್ಳಲು ಅನುವು ಮಾಡಿಕೊಡುವಂತಹ ಪಂಚಸೂತ್ರಗಳ ಗ್ರೀನ್‌ ಸ್ಟಾರ್‌ ಚಾಲೆಂಜ್​ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಎರಡು ವಾರಗಳಲ್ಲಿ ಗ್ರೀನ್‌ ಸ್ಟಾರ್‌ ರೇಟಿಂಗ್‌ ಪಡೆಯಲು 629ಕ್ಕೂ ಹೆಚ್ಚು ಕಟ್ಟಡಗಳು ಹಾಗೂ ಸಂಸ್ಥೆಗಳು ನೋಂದಣಿ ಮಾಡಿಕೊಂಡಿವೆ.

ನೀರು ಉಳಿಸಿ-ಬೆಂಗಳೂರು ಬೆಳೆಸಿ ಕಾರ್ಯಕ್ರಮದ ಪ್ರಮುಖ ಭಾಗವಾದ ಗ್ರೀನ್‌ ಸ್ಟಾರ್‌ ಚಾಲೆಂಜ್​ನ ಪಂಚಸೂತ್ರಗಳನ್ನು ಅಳವಡಿಸಿಕೊಂಡು ನೀರು ಉಳಿತಾಯದ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಎರಡು ವಾರಗಳ ಹಿಂದೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕರೆ ನೀಡಿತ್ತು. ಇದಕ್ಕೆ ಬೆಂಗಳೂರು ಆಪಾರ್ಟ್‌ಮೆಂಟ್‌ ಫೆಡರೇಷನ್‌, ಎಫ್‌ಕೆಸಿಸಿಐ, ಪೀಣ್ಯ ಕೈಗಾರಿಕಾ ಸಂಘ, ಕ್ರೆಡೈ ಬೆಂಗಳೂರು ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದವು.

ಏನಿದು ಗ್ರೀನ್‌ ಸ್ಟಾರ್‌ ಚಾಲೆಂಜ್‌? ನೀರಿನ ಉಳಿತಾಯ ಮಾಡುವಂತಹ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು, ಸಂಸ್ಕರಿಸಿದ ನೀರಿನ ಬಳಕೆಯನ್ನು ಹೆಚ್ಚಿಸುವುದು, ಕೊಳವೆ ಬಾವಿಗಳ ಬಳಕೆಯಲ್ಲಿ ತಂತ್ರಜ್ಞಾನದ ಅಳವಡಿಕೆ ಮಾಡಿಕೊಳ್ಳುವುದು, ಮಳೆ ನೀರು ಇಂಗು ಗುಂಡಿಗಳನ್ನು ಅಳವಡಿಸಿಕೊಳ್ಳುವುದು ಹಾಗೂ ಈ ಎಲ್ಲಾ ಹೊಸ ಅನುಷ್ಠಾನಗಳ ಬಗ್ಗೆ ಗ್ರಾಹಕರಿಗೆ ಹಾಗೂ ಸಿಬ್ಬಂದಿಗೆ ಮಾಹಿತಿಯನ್ನು ಕೊಡುವ ಮೂಲಕ ನೀರಿನ ಉಳಿತಾಯದ ಮಹತ್ವವನ್ನು ಸಾರುವುದು. ಈ ಪಂಚಸೂತ್ರಗಳನ್ನು ಅಳವಡಿಸಿಕೊಂಡರೆ ಫೈವ್ ಸ್ಟಾರ್ ಗ್ರೀನ್ ರೇಟಿಂಗ್​ ಅನ್ನು ನೀಡುವ ಬೆಂಗಳೂರು ಜಲಮಂಡಳಿಯ ಅಭಿಯಾನ ಇದಾಗಿದೆ.

ಗ್ರೀನ್‌ ಸ್ಟಾರ್‌ ವೆಬ್ ಪೋರ್ಟಲ್: ಏಪ್ರಿಲ್‌ 17ರಂದು ಎಫ್‌ಕೆಸಿಸಿಐ, ಬೆಂಗಳೂರು ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌, ಕ್ರೆಡೈ, ಹೊಟೇಲ್‌ ಅಸೋಸಿಯೇಷನ್ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳ ಜೊತೆಗೂಡಿ ಜಲಮಂಡಳಿಯ ಮಹತ್ವಾಕಾಂಕ್ಷೆಯ ಗ್ರೀನ್‌ ಸ್ಟಾರ್‌ ಚಾಲೆಂಜ್​ನ ನೋಂದಣಿಗಾಗಿ ರಚಿಸಿರುವ ವೆಬ್‌ ಪೋರ್ಟಲ್​ಗೆ ಚಾಲನೆ ನೀಡಲಾಗಿತ್ತು.

ಯಾರಿಂದ ನೋಂದಣಿ? ಈ ವೆಬ್‌ಸೈಟ್‌ ಮೂಲಕ ಇದುವರೆಗೂ 416ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳು, 68ಕ್ಕೂ ಹೆಚ್ಚು ಸರಕಾರಿ ಸಂಸ್ಥೆಗಳು, 2 ಐಟಿ ಪಾರ್ಕ್‌ಗಳು, 13 ಐಟಿ ಕಂಪನಿಗಳು, 52 ವಾಣಿಜ್ಯ ಸಂಸ್ಥೆಗಳು, 32 ಹೋಟೆಲ್‌ಗಳು, 16 ಆಸ್ಪತ್ರೆಗಳು, 11 ಶೈಕ್ಷಣಿಕ ಸಂಸ್ಥೆಗಳು, 1 ಧೋಬಿ ಘಾಟ್‌ ಸೇರಿದಂತೆ 629 ಕಟ್ಟಡಗಳು ಹಾಗೂ ಪ್ರದೇಶಗಳು ಗ್ರೀನ್‌ ಸ್ಟಾರ್‌ ರೇಟಿಂಗ್‌ ಪಡೆಯಲು ನೋಂದಣಿಯಾಗಿವೆ.

ಇದನ್ನೂ ಓದಿ: 'ಹೆಚ್.ಡಿ. ರೇವಣ್ಣ ವಿದೇಶಕ್ಕೆ ಹೋಗುವ ಸಾಧ್ಯತೆ, ಹಾಗಾಗಿ ಲುಕ್‌ಔಟ್ ನೋಟಿಸ್ ಜಾರಿ': ಡಾ. ಜಿ ಪರಮೇಶ್ವರ್ - G Parameshwar

ನೀರನ್ನು ಉಳಿಸುವ ಹಾಗೂ ಸದ್ಬಳಕೆಯನ್ನು ಪ್ರೋತ್ಸಾಹಿಸುವ ಪಂಚಸೂತ್ರಗಳನ್ನು ಅಳವಡಿಸಿಕೊಳ್ಳುವ ಜಲಮಂಡಳಿಯ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಗ್ರೀನ್‌ ಸ್ಟಾರ್‌ ರೇಟಿಂಗ್‌ ಪಡೆಯುವ ಮೂಲಕ ಸಂಸ್ಥೆಗಳು ಹಾಗೂ ಕಟ್ಟಡಗಳು ನೀರು ಬಳಕೆಯನ್ನು ಕಡಿಮೆ ಮಾಡುವುದಲ್ಲದೇ ವಾಟರ್‌ ಸಫಿಶಿಯೆಂಟ್‌ ಬೆಂಗಳೂರಿನ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಹಂತ ಹಂತವಾಗಿ ಎಲ್ಲಾ ಬಳಕೆದಾರರನ್ನೂ ಈ ಅಭಿಯಾನದ ಭಾಗವನ್ನಾಗಿಸುವ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಡಾ. ವಿ ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.