ETV Bharat / state

ತುಮಕೂರು: ₹3 ಲಕ್ಷ ಮೌಲ್ಯದ ಒಡವೆ ಹಿಂತಿರುಗಿಸಿ ಮಾದರಿಯಾದ ಕಂಡಕ್ಟರ್, ಚಾಲಕ - gold ornaments bag returned - GOLD ORNAMENTS BAG RETURNED

ಪ್ರಯಾಣಿಕರೊಬ್ಬರು ಬಸ್​ನಲ್ಲಿ ಬಿಟ್ಟು ಹೋಗಿದ್ದ 3 ಲಕ್ಷ ರೂ. ಮೌಲ್ಯದ ಒಡವೆ ಹಿಂತಿರುಗಿಸುವ ಮೂಲಕ ಕಂಡಕ್ಟರ್ ಹಾಗೂ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಒಡವೆಯನ್ನು ಹಿಂತಿರುಗಿಸಿ ಮಾದರಿಯಾದ ಕಂಡಕ್ಟರ್, ಚಾಲಕ
ಒಡವೆಯನ್ನು ಹಿಂತಿರುಗಿಸಿ ಮಾದರಿಯಾದ ಕಂಡಕ್ಟರ್, ಚಾಲಕ (ETV Bharat)
author img

By ETV Bharat Karnataka Team

Published : Jun 5, 2024, 8:19 PM IST

ತುಮಕೂರು: ಬಸ್​ನಲ್ಲಿ ಬಿಟ್ಟು ಹೋಗಿದ್ದ 3 ಲಕ್ಷ ರೂ. ಮೌಲ್ಯದ ಒಡವೆಯನ್ನು ಮಾಲೀಕರಿಗೆ ಹಿಂತಿರುಗಿಸುವ ಮೂಲಕ ಕಂಡಕ್ಟರ್ ಹಾಗೂ ಬಸ್​ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಒಡವೆ ಹಿಂತಿರುಗಿಸಿದ ಕೆಜಿಎಫ್ ಘಟಕದ ಕಂಡಕ್ಟರ್​ ಕಲ್ಲಪ್ಪ ಹನುಮಂತ್ ಕವಣಿ ಮತ್ತು ಚಾಲಕ ಸಂತೋಷ್ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅದೋನಿಯಿಂದ ಪ್ರಯಾಣಿಸಿದ್ದ ಪ್ರಮೀಳಾ ಎಂಬವರು ಬಳ್ಳಾರಿಯಲ್ಲಿ ತಮ್ಮ ಬ್ಯಾಗ್​ಅನ್ನು ಬಸ್​ನಲ್ಲೇ ಬಿಟ್ಟು ಇಳಿದಿದ್ದರು. ಬಸ್​ನಲ್ಲಿ ಬ್ಯಾಗ್ ಇರುವುದನ್ನು ಗಮನಿಸಿದ ಕಂಡಕ್ಟರ್​ ಹಾಗೂ ಚಾಲಕ, ಶಿರಾ ಘಟಕಕ್ಕೆ ಬಂದು ಘಟಕದ ಮುಖ್ಯಸ್ಥರಿಗೆ ವಿಷಯ ತಿಳಿಸಿದ್ದಾರೆ. ನಂತರ ಹೊಸಪೇಟೆ, ಬಳ್ಳಾರಿ ಹಾಗೂ ಶಿರಾ ಡಿಪೋಗಳ ಮುಖ್ಯಸ್ಥರ ಸಹಕಾರದಿಂದ ಶಿರಾ ಘಟಕದಲ್ಲಿ ತಮ್ಮ ಬ್ಯಾಗ್​ ಇರುವ ಮಾಹಿತಿ ಪ್ರಮೀಳಾ ಅವರಿಗೆ ಸಿಕ್ಕಿದೆ. ಬಳಿಕ ಅವರು ಶಿರಾಕ್ಕೆ ಆಗಮಿಸಿ ತಮ್ಮ ಆಭರಣಗಳಿರುವ ಬ್ಯಾಗ್ ಸ್ವೀಕರಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ: ಹಾವೇರಿಯ ಹೆಗ್ಗೇರಿ ಕೆರೆಗಾಗಿ ಬದುಕನ್ನೇ ಮುಡಿಪಿಟ್ಟ ಈ ಪರಿಸರಪ್ರೇಮಿಗೊಂದು ಸೆಲ್ಯೂಟ್! - World Environment Day

ETV Bharat Logo

Copyright © 2025 Ushodaya Enterprises Pvt. Ltd., All Rights Reserved.