ETV Bharat / state

ಬೆಳಗಾವಿಯಲ್ಲಿ ಅದ್ಧೂರಿ ಕರ್ನಾಟಕ ರಾಜ್ಯೋತ್ಸವ: ಚನ್ನಮ್ಮ ವೃತ್ತದಲ್ಲಿ ಕುಣಿದು ಕುಪ್ಪಳಿಸಿದ ಕನ್ನಡ ತಾಯಿ ಮಕ್ಕಳು

ರಾಜ್ಯದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಅತ್ಯಂತ ಸಂಭ್ರಮದಿಂದ ನಡೆಯಿತು. ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ ಕನ್ನಡ ಚಿತ್ರಗೀತೆಗಳಿಗೆ ಕುಣಿದು‌ ಕುಪ್ಪಳಿಸಿದರು. ಹಳದಿ ಕೆಂಪು ಬಾವುಟ ಹಿಡಿದು ಸಂಭ್ರಮಿಸಿದರು.

ಬೆಳಗಾವಿಯಲ್ಲಿಅದ್ಧೂರಿ ಕರ್ನಾಟಕ ರಾಜೋತ್ಸವ
ಬೆಳಗಾವಿಯಲ್ಲಿಅದ್ಧೂರಿ ಕರ್ನಾಟಕ ರಾಜೋತ್ಸವ (ETV Bharat)
author img

By ETV Bharat Karnataka Team

Published : Nov 1, 2024, 9:13 PM IST

ಬೆಳಗಾವಿ: ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಕರ್ನಾಟಕ ರಾಜ್ಯೋತ್ಸವ ಸಂಭ್ರಮದಿಂದ ನಡೆಯಿತು. ಇಂದು ಬೆಳಗ್ಗೆ 10 ಗಂಟೆಗೆ ಆರಂಭವಾದ ಅದ್ಧೂರಿ ಮೆರವಣಿಗೆ ರಾತ್ರಿಯವರೆಗೂ ಸಾಗಿತು. ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ್ದ ಸಹಸ್ರಾರು ಕನ್ನಡಿಗರು ಕನ್ನಡ ಡಿಜೆ ಹಾಡುಗಳಿಗೆ ಹೆಜ್ಜೆ ಹಾಕಿ ಸಂತಸಪಟ್ಟರು.

ಚನ್ನಮ್ಮ ವೃತ್ತದಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ಜನವೋ ಜನ.‌ ಎಲ್ಲೆಲ್ಲೂ ಕನ್ನಡ ಬಾವುಟಗಳ ಹಾರಾಟ, ಕೊರಳಲ್ಲಿ ಕನ್ನಡದ ಶಾಲು, ಶರ್ಟ್ ಮೇಲೆ ಕರ್ನಾಟಕದ ಚಿತ್ರಪಟ, ಮುಖದ ಮೇಲೆ ಹಳದಿ-ಕೆಂಪು ಚಿತ್ರಗಳನ್ನು ಬಿಡಿಸಿಕೊಂಡಿದ್ದ ಯುವಕ-ಯುವತಿಯರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಕನ್ನಡ ನಾಡು-ನುಡಿ‌ ಬಿಂಬಿಸುವ ಹಾಡುಗಳಿಗೆ ಹೆಜ್ಜೆ ಹಾಕಿ ರಾಜ್ಯೋತ್ಸವಕ್ಕೆ ಮತ್ತಷ್ಟು ಹುರುಪು ತಂದರು. 'ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು, ನಮ್ಮ ಅವ್ವ ಕಣೋ ಕನ್ನಡ, ಬೆಳಗಾವಿ ನಮ್ಮ ಬೆಳಗಾವಿ, ಕರುನಾಡೇ ಕೈ ಚಾಚಿದೆ ನೋಡೇ' ಸೇರಿದಂತೆ ಕರ್ನಾಟಕದ ನಾಡು - ನುಡಿ, ಸಂಸ್ಕೃತಿಯನ್ನು ಬಣ್ಣಿಸುವ ಡಿಜೆ ಹಾಡುಗಳ ಅಬ್ಬರ ಜೋರಾಗಿತ್ತು.

ಬೆಳಗಾವಿಯಲ್ಲಿ ಅದ್ಧೂರಿ ಕರ್ನಾಟಕ ರಾಜ್ಯೋತ್ಸವ (ETV Bharat)

ಸುಮಾರು ಗಂಟೆಗಳ ಕಾಲ ಸತತವಾಗಿ ಕುಣಿದರೂ ಯುವಕ-ಯುವತಿಯರ ಉತ್ಸಾಹ ಕುಂದಲಿಲ್ಲ. ಒಂದಾದ ಮೇಲೆ ಒಂದು ಹಾಡಿಗೆ ಡ್ಯಾನ್ಸ್ ಮಾಡುತ್ತಲೇ ಇದ್ದರು. ಕಿವಿಗಡಚಿಕ್ಕುವ ಡಿಜೆ ಸೌಂಡ್​ಗೆ ಹುಮ್ಮಸ್ಸಿನಿಂದ ಕುಣಿದು ಕುಪ್ಪಳಿಸಿದರು.

ಗಮನ ಸೆಳೆದ ರೂಪಕಗಳು: ತಾಯಿ ಭುವನೇಶ್ವರಿ ದೇವಿ, ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ, ವೀರರಾಣಿ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕ, ಹಂಪಿಯ ಐತಿಹಾಸಿಕ ಕಲ್ಲಿನ ರಥದ ಮಾದರಿ ಸೇರಿ ಹಲವು ರೂಪಕಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.

ಬೆಳಗಾವಿಯಲ್ಲಿ ಅದ್ಧೂರಿ ಕರ್ನಾಟಕ ರಾಜೋತ್ಸವ
ಬೆಳಗಾವಿಯಲ್ಲಿ ಅದ್ಧೂರಿ ಕರ್ನಾಟಕ ರಾಜೋತ್ಸವ (ETV Bharat)

ಅಪ್ಪು ಭಾವಚಿತ್ರದ ಬಾವುಟಗಳ ಹಾರಾಟ: ಕರ್ನಾಟಕ ರತ್ನ ಡಾ. ಪುನೀತ್​ ರಾಜ್​ಕುಮಾರ್ ಭಾವಚಿತ್ರ ಇರುವ ಕನ್ನಡ ಬಾವುಟಗಳನ್ನು ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಿಡಿದುಕೊಂಡು ಬಂದಿದ್ದರು. ಅಪ್ಪು ಅಗಲಿ ಮೂರು ವರ್ಷ ಕಳೆದರೂ ಅವರ ಮೇಲಿನ ಅಭಿಮಾನ ಮಾತ್ರ ಕಡಿಮೆ ಆಗಿಲ್ಲ‌ ಎಂಬುದನ್ನು ಅಭಿಮಾನಿಗಳು ನಿರೂಪಿಸಿದರು. ಅದೇ ರೀತಿ ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಸೇರಿ ಮತ್ತಿತರ ಮಹನೀಯರ ಭಾವಚಿತ್ರಗಳನ್ನು ಹಿಡಿದು ನೃತ್ಯ ಮಾಡಿದರು.

ಚನ್ನಮ್ಮ ವೃತ್ತದಲ್ಲಿ ಕರ್ನಾಟಕ ರಾಜೋತ್ಸವದ ಸಂಭ್ರಮ
ಚನ್ನಮ್ಮ ವೃತ್ತದಲ್ಲಿ ಕರ್ನಾಟಕ ರಾಜೋತ್ಸವದ ಸಂಭ್ರಮ (ETV Bharat)

ಕಣಬರಗಿಯಿಂದ ಬಂದಿದ್ದ ಯುವತಿಯರು 'ಈಟಿವಿ ಭಾರತ' ಜೊತೆಗೆ ಮಾತನಾಡಿ, ಅಂಬಾರಿ ಮೆರವಣಿಗೆ ನೋಡಲು ಮೈಸೂರಿಗೆ ಹೋಗಬೇಕು. ಕರ್ನಾಟಕ ರಾಜ್ಯೋತ್ಸವ ಕಣ್ತುಂಬಿಕೊಳ್ಳಬೇಕು ಎಂದರೆ ಬೆಳಗಾವಿಗೆ ಬರಬೇಕು. ಅಷ್ಟೊಂದು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅಷ್ಟೊಂದು ಸಂಭ್ರಮಾಚರಣೆ ಇದೆ. ಸಹೋದರಿಯರೆಲ್ಲಾ ಸೇರಿಕೊಂಡು ಬಂದಿದ್ದೇವೆ. ಸಖತ್ ಎಂಜಾಯ್ ಮಾಡುತ್ತಿದ್ದೇವೆ. ರಾತ್ರಿ 12 ಗಂಟೆವರೆಗೂ ಸಾಕಾಗುವಷ್ಟು ಕುಣಿದು ಮನೆಗೆ ಹೋಗುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ನಾನು ಅಧಿಕಾರದಲ್ಲಿರುವಾಗ ಕನ್ನಡಕ್ಕೆ ಚ್ಯುತಿಯಾಗಲು ಬಿಡುವುದಿಲ್ಲ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.