ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಜಿಯೋಲಾಜಿಕಲ್ ಸರ್ವೇ ತಂಡದಿಂದ ಪರಿಶೀಲನೆ ಆರಂಭವಾಗಿದೆ.
![ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಜಿಯೋಲಾಜಿಕಲ್ ಸರ್ವೇ](https://etvbharatimages.akamaized.net/etvbharat/prod-images/11-08-2024/kn-ckm-02-mullaiah-giri-survey-7202347_11082024173438_1108f_1723377878_951.jpg)
ನೆರೆ ರಾಜ್ಯ ಕೇರಳದ ವಯನಾಡಿನಲ್ಲಿ ಸಂಭವಿಸಿದ ಗುಡ್ಡ ಕುಸಿತದ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ ಮಲೆನಾಡು ಭಾಗದ ಅಪಾಯಕಾರಿ ಸ್ಥಳಗಳ ಪಟ್ಟಿ ಕೇಳಿತ್ತು. ಚಿಕ್ಕಮಗಳೂರು ಜಿಲ್ಲಾಡಳಿತ 77 ಅಪಾಯಕಾರಿ ಸ್ಥಳಗಳನ್ನು ಗುರುತು ಮಾಡಿ ವರದಿ ಕಳುಹಿಸಿತ್ತು. ಈ ಹಿನ್ನೆಲೆ ಭಾನುವಾರದಿಂದ ಚಂದ್ರದ್ರೋಣ ಪರ್ವತಗಳ ಸಾಲಿನ ಕವಿಕಲ್ ಗಂಡಿ, ಮುಳ್ಳಯ್ಯನಗಿರಿ ಮಾರ್ಗ, ದತ್ತಪೀಠ ಸೇರಿದಂತೆ ಗಿರಿ ಭಾಗದಲ್ಲಿ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ತಂಡದಿಂದ ಪರಿಶೀಲನೆ ಆರಂಭವಾಗಿದೆ.
![ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಜಿಯೋಲಾಜಿಕಲ್ ಸರ್ವೇ](https://etvbharatimages.akamaized.net/etvbharat/prod-images/11-08-2024/kn-ckm-02-mullaiah-giri-survey-7202347_11082024173438_1108f_1723377878_362.jpg)
ಹಿರಿಯ ಭೂ ವಿಜ್ಞಾನ ಅಧಿಕಾರಿ ಸೆಂಥಿಲ್ ಕುಮಾರ್ ನೇತೃತ್ವದ ತಂಡದಿಂದ ಸರ್ವೇ ಆರಂಭವಾಗಿದ್ದು, ಇನ್ನೂ ಎರಡು ದಿನ ಜಿಲ್ಲೆಯಾದ್ಯಂತ ಆಯಕಟ್ಟಿನ ಪ್ರದೇಶದಲ್ಲಿ ಸರ್ವೇ ನಡೆಸಲಿದ್ದಾರೆ. ಚಿಕ್ಕಮಗಳೂರು ತಾಲೂಕಿನ ದತ್ತಪೀಠ ರಸ್ತೆಯಲ್ಲಿ ನೂರಾರು ಅಡಿ ಪ್ರಪಾತಕ್ಕೆ ರಸ್ತೆ ಕುಸಿದಿತ್ತು. ಆ ಜಾಗವೂ ಸೇರಿ ಮಲೆನಾಡು ಭಾಗದ ಚಿಕ್ಕಮಗಳೂರು, ಕೊಪ್ಪ, ಕಳಸ, ಮೂಡಿಗೆರೆ, ಶೃಂಗೇರಿ ಸೇರಿದಂತೆ ಒಟ್ಟು 77 ಪ್ರದೇಶಗಳು ಡೇಂಜರಸ್ ಎಂದು ಜಿಲ್ಲಾಡಳಿತ ವರದಿ ನೀಡಿದ್ದು, ಅಲ್ಲಿ ಸರ್ವೇ ಕಾರ್ಯ ಆರಂಭವಾಗಿದೆ.
![ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಜಿಯೋಲಾಜಿಕಲ್ ಸರ್ವೇ](https://etvbharatimages.akamaized.net/etvbharat/prod-images/11-08-2024/kn-ckm-02-mullaiah-giri-survey-7202347_11082024173438_1108f_1723377878_456.jpg)