ಮೈಸೂರು: ನಾಡ ಹಬ್ಬ ದಸರಾದ ಜಂಬೂಸವಾರಿಗೆ ಗಜಪಡೆ ಸನ್ನದ್ಧವಾಗಿದ್ದು ಅಂತಿಮ ತೂಕ ಪರೀಕ್ಷೆ ನಡೆಸಲಾಗಿದೆ. ಅತಿ ಹೆಚ್ಚು ತೂಕ ಹೊಂದಿರುವ ಆನೆಯಾಗಿ ಅಭಿಮನ್ಯು ಮೊದಲ ಸ್ಥಾನ ಪಡೆದಿದ್ದಾನೆ.
ಇಂದು ದಸರಾ ಜಂಬೂಸವಾರಿ ಹಿನ್ನೆಲೆ ನಡೆಸಿರುವ ಗಜಪಡೆಯ ಅಂತಿಮ ತೂಕ ಪರೀಕ್ಷೆಯಲ್ಲಿ ಅಭಿಮನ್ಯು ಅತಿ ತೂಕದ ಆನೆಯಾಗಿ ಮೊದಲ ಸ್ಥಾನ ಪಡೆದಿದೆ. ಈ ಬಾರಿಯ ಜಂಬೂಸವಾರಿಯಲ್ಲಿ ನಿಶಾನೆಯಾನೆಯಾಗಿ ಅರ್ಜುನನ ಸ್ಥಾನವನ್ನು ಧನಂಜಯ, ನೌಪಥ್ ಆನೆಯಾಗಿ ಗೋಪಿ ಆಯ್ಕೆಯಾಗಿದೆ. ಒಟ್ಟು 9 ಆನೆಗಳು ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಕುಮ್ಕಿ ಆನೆಗಳಾಗಿ ಹಿರಣ್ಯ ಮತ್ತು ಲಕ್ಷ್ಮೀ ಆನೆಗಳಿದ್ದರೆ, ಚಿನ್ನದ ಅಂಬಾರಿಯನ್ನು ಅಭಿಮನ್ಯು ಈ ಬಾರಿ ಹೊರಲಿದ್ದಾನೆ ಎಂದು ಡಿಸಿಎಫ್ ಪ್ರಭುಗೌಡ ಮಾಹಿತಿ ನೀಡಿದರು.
ಇಂದು ಗಜಪಡೆಯ ಅಂತಿಮ ತೂಕ ಪರೀಕ್ಷೆ ಮಾಡಲಾಗಿದ್ದು, ಎಲ್ಲಾ ಆನೆಗಳು ಆರೋಗ್ಯವಾಗಿದೆ. ಅತಿ ಹೆಚ್ಚು ತೂಕವನ್ನು ಅಂಬಾರಿ ಕ್ಯಾಪ್ಟನ್ ಅಭಿಮನ್ಯು ಹೊಂದಿದ್ದಾನೆ. ಹಾಗೇ ಅತಿ ಕಡಿಮೆ ತೂಕವನ್ನು ಕುಮ್ಕಿ ಆನೆ ಲಕ್ಷ್ಮೀ ಹೊಂದಿದೆ. ಅರಮನೆಗೆ ಬಂದ ನಂತರ ಭೀಮಾ ಆನೆ 435 ಕೆಜಿ ಹಾಗೂ ಏಕಲವ್ಯ 364 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ.
ಆನೆಗಳ ತೂಕ ಪರೀಕ್ಷೆ ವಿವರ ಇಂತಿವೆ:
ಹಳೆಯ ತೂಕ ಪರೀಕ್ಷೆ ಮಾಹಿತಿ :
ಅಭಿಮನ್ಯು | 5,560 |
ಭೀಮ | 4,945 |
ಏಕಲವ್ಯ | 4,730 |
ಕಂಜನ್ | 4,515 |
ಧನಂಜಯ | 5,155 |
ಲಕ್ಷ್ಮೀ | 2,480 |
ವರಲಕ್ಷ್ಮಿ | 3,495 |
ರೋಹಿತ | 3,625 |
ಗೋಪಿ | 4,970 |
ಪ್ರಶಾಂತ | 4,875 |
ಹಿರಣ್ಯ | 2,930 |
ಮಹೇಂದ್ರ | 4,910 |
ಸುಗ್ರೀವ | 5,190 |
ದೊಡ್ಡ ಹರವೆ ಲಕ್ಷ್ಮಿ | 3,485 |
ಹೊಸ ತೂಕ ಪರೀಕ್ಷೆ ಮಾಹಿತಿ :
ಅಭಿಮನ್ಯು | 5820 |
ಭೀಮ | 5545 |
ಏಕಲವ್ಯ | 5380 |
ಕಂಜನ್ | 5280 |
ಧನಂಜಯ | 5255 |
ಲಕ್ಷ್ಮೀ | 2625 |
ವರಲಕ್ಷ್ಮಿ | 5150 |
ರೋಹಿತ | 5095 |
ಗೋಪಿ | 4725 |
ಪ್ರಶಾಂತ | 3930 |
ಹಿರಣ್ಯ | 3570 |
ಮಹೇಂದ್ರ | 3555 |
ಸುಗ್ರೀವ | 3160 |
ದೊಡ್ಡ ಹರವೆ ಲಕ್ಷ್ಮಿ | 2625 |
ಶ್ರೀರಂಗಪಟ್ಟಣ ದಸರಾದಲ್ಲಿ ಲಕ್ಷ್ಮೀ ಆನೆ ವಿಚಲಿತವಾಗಲು ಕಾರಣ: ಶ್ರೀರಂಗಪಟ್ಟಣ ದಸರಾದಲ್ಲಿ ಮಹೇಂದ್ರ, ಲಕ್ಷ್ಮೀ, ಹಿರಣ್ಯ ಆನೆಗಳು ಭಾಗವಹಿಸಿದ್ದವು. ಈ ಸಂದರ್ಭದಲ್ಲಿ ಲಕ್ಷ್ಮೀ ಆನೆಯನ್ನು ಲಾರಿ ಹತ್ತಿಸಲು ಮುಂದಾದಾಗ, ಆ ಆನೆ ವಿಚಲಿತಗೊಂಡಿತು. ಬಳಿಕ ಕಾವಾಡಿ, ಮಾವುತರು ಸಂಪೂರ್ಣವಾಗಿ ನಿಯಂತ್ರ ಮಾಡಿ, ಲಾರಿ ಹತ್ತಿಸಿದ್ದಾರೆ. ಲಕ್ಷ್ಮೀ ಆನೆಯೂ ಸಹ ಜಂಬೂ ಸವಾರಿಯಲ್ಲಿ ಭಾಗವಹಿಸಲಿದೆ ಎಂದು ಡಿಸಿಎಫ್ ಪ್ರಭುಗೌಡ ಮಾಹಿತಿ ನೀಡಿದರು.
ಇದನ್ನೂ ಓದಿ: ಮೈಸೂರು ದಸರಾ: ಯೋಗ ಸರಪಳಿಯಲ್ಲಿ 4000ಕ್ಕೂ ಅಧಿಕ ಜನರು ಭಾಗಿ - Yoga In Mysuru Dasara