ETV Bharat / state

ಫೋನ್ ಪೇ ಹೆಸರಲ್ಲಿ ನಕಲಿ ಕರೆ: ರಿವ್ಯೂ ನೀಡಲು ಹೋಗಿ ಲಕ್ಷ - ಲಕ್ಷ ಹಣ ಕಳೆದುಕೊಂಡ ಯುವಕ - fake calls in name of phonepe - FAKE CALLS IN NAME OF PHONEPE

ವಂಚಕರು ಫೋನ್​ ಪೇ ಕಸ್ಟಮರ್​ ಹೆಸರಿನಲ್ಲಿ ಕರೆ ಮಾಡಿ ಸೇವೆಗೆ ರಿವ್ಯೂ ನೀಡಲು ಲಿಂಕ್​ ಕಳುಹಿಸಿದ್ದಾರೆ. ನಂಬಿ ಲಿಂಕ್​ ಒತ್ತಿದ ಯುವಕನ ಖಾತೆಯಿಂದ 6 ಲಕ್ಷಕ್ಕೂ ಅಧಿಕ ಹಣ ವಂಚನೆಯಾಗಿದೆ.

ಸಿಇಎನ್​ ಅಪರಾಧ ಪೊಲೀಸ್​ ಠಾಣೆ
ಸಿಇಎನ್​ ಅಪರಾಧ ಪೊಲೀಸ್​ ಠಾಣೆ (ETV Bharat)
author img

By ETV Bharat Karnataka Team

Published : Sep 13, 2024, 2:42 PM IST

ದಾವಣಗೆರೆ: ಫೋನ್​ ಪೇ ಕಸ್ಟಮರ್​ ಸೋಗಿನಲ್ಲಿ ರಿವ್ಯೂ ಕೇಳಿದ ಅಪರಿಚಿತರು ಲಿಂಕ್​ ಮೂಲಕ ವ್ಯಕ್ತಿಯೊಬ್ಬನಿಗೆ ಲಕ್ಷ-ಲಕ್ಷ ಹಣ ವಂಚಿಸಿದ್ದಾರೆ.

ಸಂಪೂರ್ಣ ವಿವರ: ಆಗಸ್ಟ್ 06ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಂಚನೆಗೊಳಗಾದ ವ್ಯಕ್ತಿ ಬಗೆಗಿನ ಮಾಹಿತಿ ಬಗ್ಗೆ ಪೊಲೀಸರು ಗೌಪ್ಯತೆ ಕಾಪಾಡಿಕೊಂಡಿದ್ದಾರೆ. ಫೋನ್ ಪೇ​ ರಿವ್ಯೂ ಕೊಟ್ಟ ತಕ್ಷಣ ಒಟ್ಟು ಆರುವರೆ ಲಕ್ಷ ಹಣ ಅನ್​ಲೈನ್​ ವಂಚನೆ ಆಗಿದೆ ಎಂದು ಪೊಲೀಸ್​​ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವ್ಯಕ್ತಿಯೊಬ್ಬ ತನ್ನ ಸ್ನೇಹಿತ ಶಿವಣ್ಣ ಎಂಬುವರ ಮೊಬೈಲ್ ಸಂಖ್ಯೆಗೆ ಒಟ್ಟು 98,000 ರೂಪಾಯಿಗಳನ್ನು ಫೋನ್ ಪೇ ಮಾಡಿದ್ದಾರೆ. ಈ ವೇಳೆ ವಹಿವಾಟು ಕಡಿತ ಆಗಿದೆ. ಬಳಿಕ ಕೆಲ ಹೊತ್ತಲ್ಲೇ ಮೋಸ ಹೋದ ವ್ಯಕ್ತಿ ಖಾತೆಯಿಂದ 98 ಸಾವಿರ ಹಣ ಡೆಬಿಟ್ ಆಗಿರುವ ಬಗ್ಗೆ ಮೊಬೈಲ್​ಗೆ ಸಂದೇಶ ಬಂದಿದೆ.‌ ಸಂಬಂಧಪಟ್ಟ ಸ್ನೇಹಿತನ ಖಾತೆಗೆ ಹಣ ಹೋಗದ ಸಂಬಂಧ ಮೋಸ ಹೋದ ವ್ಯಕ್ತಿ ಗೂಗಲ್​ನಲ್ಲಿ ಫೋನ್​ ಪೇ ಕಸ್ಟಮರ್​ ಕೇರ್​ಗೆ​ ದೂರವಾಣಿ ಸಂಖ್ಯೆ ಹುಡುಕಿ ಕರೆ ಮಾಡಿದ್ದಾರೆ. ಆಗ ಕಸ್ಟಮರ್ ಕೇರ್​ ಸಿಬ್ಬಂದಿಯು ವ್ಯಕ್ತಿಗೆ ಸಂಜೆಯೊಳಗೆ ನಿಮ್ಮ ಹಣ ವಾಪಸ್​ ಬರುತ್ತದೆ ಕಾಯಿರಿ ಅಂತಾ ಹೇಳಿದ್ದರು. ಬಳಿಕ ಸಂಜೆ ವೇಳೆಗೆ ಮೋಸ ಹೋದ ವ್ಯಕ್ತಿಯ ಬ್ಯಾಂಕ್ ಖಾತೆಗೆ 98 ಸಾವಿರ ರೂಪಾಯಿ ಹಣ ಜಮಾ ಆಗಿತ್ತು.‌

ಕರೆ ಮಾಡಿ ರಿವಿವ್ಯೂ ಕೊಡಲು ಹೇಳಿ ವಂಚನೆ: ಆಗಸ್ಟ್​ 08ರಂದು ಮೋಸ ಹೋದ ವ್ಯಕ್ತಿಯ ಮೊಬೈಲ್​ ಸಂಖ್ಯೆಗೆ ಯಾರೋ ಅಪರಿಚಿತರು ಕರೆ ಮಾಡಿ ಹಿಂದಿ ಭಾಷೆಯಲ್ಲಿ ನಾವು ಫೋನ್ ಪೇ ಕಸ್ಟಮರ್ ಕೇರ್​ನಿಂದ ಕರೆ ಮಾಡುತ್ತಿದ್ದೇವೆ. ನಿಮ್ಮ ಫೋನ್ ಪೇ ಸಮಸ್ಯೆ ಬಗೆಹರಿದಿದೆಯಾ ಎಂದು ಕೇಳಿದ್ದಾರೆ. ಆಗ ನಾನು ಹಣ ವಾಪಸ್​ ಬಂದಿರುತ್ತದೆ ಅಂತಾ ಹೇಳಿದಾಗ ಅವರು, ನಮ್ಮ ಸೇವೆಗೆ ನಿಮ್ಮ ರಿವ್ಯೂ ಕೊಡಬೇಕು. ನಿಮಗೆ ನಾನು ಒಂದು ಲಿಂಕ್ ಕಳುಹಿಸುತ್ತೇನೆ, ಅದರಲ್ಲಿ ರಿವ್ಯೂ ಕೊಡಿ ಎಂದು ಹೇಳಿ ಪುಸಲಾಯಿಸಿದ್ದಾರೆ.

ಮೋಸ ಹೋದ ವ್ಯಕ್ತಿಯ ವಾಟ್ಸ್​ಆ್ಯಪ್​​ಗೆ ವಂಚಕರು ಲಿಂಕ್ ಕಳಿಸಿದ್ದಾರೆ. ಅದ​ನ್ನು ಒಪನ್ ಮಾಡಿದಾಗ ಒಂದು ಅಪ್ಲಿಕೇಶನ್ ಡೌನ್ಲೋಡ್ ಆಗಿದೆ. ಬಳಿಕ ಅಪ್ಲಿಕೇಶನ್ ಓಪನ್ ಮಾಡಿ ವೇರಿ ಗುಡ್ ಎಂದು ಮೋಸ ಹೋದ ವ್ಯಕ್ತಿ ರಿವ್ಯೂ ಕೊಟ್ಟ ತಕ್ಷಣ ಬ್ಯಾಂಕ್ ಖಾತೆಯಲ್ಲಿದ್ದ ರೂ. 5,00,000 ರೂಪಾಯಿ ಮೊದಲು ಕಡಿತವಾಗಿದೆ. ಬಳಿಕ 1,61,000 ರೂ. ಹಣ ಡೆಬಿಟ್ ಆಗಿದೆ. ಈ ಬಗ್ಗೆ ಮೊಬೈಲ್​ಗೆ ಹಣ ಕಟ್ ಆಗಿದ್ದರ ಬಗ್ಗೆ ಸಂದೇಶ ಬಂದಾಗ ತಾನು ಮೋಸ ಹೋಗಿರುವುದು ವ್ಯಕ್ತಿಗೆ ಗೊತ್ತಾಗಿದೆ. ಬಳಿಕ ಸಿಇಎನ್ ಅಪರಾಧ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಇಬ್ಬರು ನಕಲಿ ವೈದ್ಯರಿಗೆ 1 ಲಕ್ಷ ರೂ ದಂಡ, ಮೆಡಿಕಲ್ ಸ್ಟೋರ್ ಮುಚ್ಚಲು ದಾವಣಗೆರೆ ಡಿಸಿ ಆದೇಶ - Fake Doctors

ETV Bharat Logo

Copyright © 2024 Ushodaya Enterprises Pvt. Ltd., All Rights Reserved.