ETV Bharat / state

ಮಂಗಳೂರು: ಕೆನಡಾ ವೀಸಾ ಮಾಡಿಕೊಡುವುದಾಗಿ ನಂಬಿಸಿ ₹15 ಲಕ್ಷ ವಂಚನೆ - Visa Fraud Case

ವೀಸಾ ಹೆಸರಲ್ಲಿ ವಂಚಿಸಲಾಗಿದೆ ಎಂದು ವ್ಯಕ್ತಿಯೊಬ್ಬರು ಮಂಗಳೂರಿನ ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, FIR ದಾಖಲಾಗಿದೆ.

Dakshina Kannada Fraud case
ಪೊಲೀಸ್ ಆಯುಕ್ತರ ಕಚೇರಿ ಮಂಗಳೂರು ನಗರ (ETV Bharat)
author img

By ETV Bharat Karnataka Team

Published : Jun 9, 2024, 7:02 AM IST

ಮಂಗಳೂರು(ದಕ್ಷಿಣ ಕನ್ನಡ): ಕುವೈತ್​​ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಕೆಲಸ ಮಾಡುತ್ತಿರುವ ಡೊಮಿನಿಕ್ ಕಿಶೋರ್ ಡಿಸೋಜಾ ಎಂಬವರಿಗೆ ಕೆನಡಾ ದೇಶದ ವೀಸಾ ಕೊಡಿಸುವುದಾಗಿ ಹೇಳಿ 15 ಲಕ್ಷ ರೂಪಾಯಿ ವಂಚಿಸಲಾಗಿದೆ ಎಂದು ಅವರ ತಂದೆ ಹೆರಾಲ್ಡ್ ಡಿಸೋಜಾ ಕಾವೂರು ಪೊಲೀಸ್​​​ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣದ ಪೂರ್ಣ ವಿವರ: ಡೊಮಿನಿಕ್‌ ಕಿಶೋರ್ ಡಿಸೋಜಾ ಅವರ ಸ್ನೇಹಿತನಾದ ಮಂಗಳೂರಿನ ಗಂಜಿಮಠ ನಿವಾಸಿ ರೋಶನ್ ನವೀನ್ ಕ್ರಾಸ್ಟೋ ಫೋನ್ ಮೂಲಕ ಸಂಪರ್ಕಿಸಿ, ಕೆನಡಾ ದೇಶದ ವೀಸಾವನ್ನು ತನಗೆ ಪರಿಚಯವಿರುವ ಜೇಮ್ಸ್‌ ಡಿಸೋಜಾ ಮಾಡಿಸಿಕೊಡುತ್ತಾನೆ. ಹಾಗೆಯೇ ಯಾರಿಗಾದರೂ ವೀಸಾ ಬೇಕಾಗಿದ್ದರೆ ತಿಳಿಸುವಂತೆಯೂ ಹೇಳಿದ್ದ. ಅದರಂತೆ ಡೊಮಿನಿಕ್‌ಗೆ ರೋಶನ್ ಕಳೆದ ಜನವರಿ ತಿಂಗಳ ಮೊದಲನೇ ವಾರದಲ್ಲಿ ಫೋನ್‌ನಲ್ಲಿ ಜೇಮ್ಸ್ ಡಿಸೋಜಾನನ್ನು ಪರಿಚಯಿಸಿ ಕೊಟ್ಟಿದ್ದ. 30 ಲಕ್ಷ ರೂ. ಹಣ ನೀಡಿದರೆ ಡೊಮಿನಿಕ್ ಹಾಗೂ ಅವರ ಹೆಂಡತಿಗೆ ವೀಸಾ ಮಾಡಿಕೊಡುವುದಾಗಿ ಜೇಮ್ಸ್ ತಿಳಿಸಿದ್ದಾನೆ. ಅದರಲ್ಲಿ 15 ಲಕ್ಷ ರೂ. ಹಣವನ್ನು ವೀಸಾ ಮಾಡುವ ಮೊದಲು ಹಾಗೂ ಉಳಿದ 15 ಲಕ್ಷ ರೂ. ಹಣವನ್ನು ಕೆನಡಾಕ್ಕೆ ಹೊದ ನಂತರ ನೀಡಬೇಕೆಂದು ತಿಳಿಸಿದ್ದ.

ಇದನ್ನೂ ಓದಿ: ದಾವಣಗೆರೆ: ಮನೆ ಬಿಟ್ಟೋಗಿದ್ದ ಮಗ 20 ವರ್ಷದ ಬಳಿಕ ಕುಟುಂಬ ಸೇರಿದ; ಫಲಿಸಿತು ಅಪ್ಪ-ಅಮ್ಮನ ಹರಕೆ - MISSING SON COMES AFTER 20 YEARS

ಅದರಂತೆ, ಡೊಮಿನಿಕ್ ಕಿಶೋರ್ ಡಿಸೋಜಾ ಸುಮಾರು 9 ಕಂತುಗಳಲ್ಲಿ 15 ಲಕ್ಷ ರೂ. ಪಾವತಿಸಿದ್ದಾರೆ. ಇದರಲ್ಲಿ 5 ಲಕ್ಷ ಹಣವನ್ನು ತಮ್ಮ ಸಂಬಂಧಿ ಅರುಣ್ ಡೆರಿಕ್ ಮೊಂತೇರೊ ಅವರ ಖಾತೆಯ ಮೂಲಕ ಜೇಮ್ಸ್ ತಿಳಿಸಿದ ಖಾತೆಗೆ ಜಮೆ ಮಾಡಲಾಗಿತ್ತು. ವೀಸಾ ಪಡೆಯುವ ಹಿನ್ನೆಲೆಯಲ್ಲಿ ಮೇ 26ರಂದು ಐ.ಇ.ಎಲ್.ಟಿ.ಎಸ್. ಪರೀಕ್ಷೆ ಇರುವುದಾಗಿ ತಿಳಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಜೇಮ್ಸ್‌ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದೆ. ಹಲವು ಬಾರಿ ಪ್ರಯತ್ನಿಸಿದರೂ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಕರೆಗಳಿಗೆ ಯಾವುದೇ ಉತ್ತರವನ್ನೂ ನೀಡದೇ ಹಣವನ್ನೂ ವಾಪಸ್​ ಮಾಡದೇ ಮೋಸ ಮಾಡಿದ್ದಾನೆ. ಇದೇ ರೀತಿ ಹಲವು ಮಂದಿಗೆ ಮೋಸ ಮಾಡಿರುವ ಮಾಹಿತಿ ಇದೆ. ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕಾವೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಇದನ್ನೂ ಓದಿ: ಪಿಎಫ್ ಹಣ ಸಿಬ್ಬಂದಿ ವೇತನಕ್ಕೆ ಸೇರಿಸಿ ಪಾವತಿಸಿದಲ್ಲಿ ಅಪರಾಧವಾಗುವುದಿಲ್ಲ: ಹೈಕೋರ್ಟ್ - High Court On PF Money

ETV Bharat Logo

Copyright © 2024 Ushodaya Enterprises Pvt. Ltd., All Rights Reserved.