ETV Bharat / state

ಸ್ಟಾಕ್ ಮಾರುಕಟ್ಟೆ ಇನ್ವೆಸ್ಟ್ ಹೆಸರಿನಲ್ಲಿ ಟೆಕ್ಕಿಗೆ 90 ಲಕ್ಷ ರೂ. ವಂಚನೆ: ಮೋಸಕ್ಕೆ ಬಲಿಯಾಗದಂತೆ ಪೊಲೀಸರ ಸೂಚನೆ

author img

By ETV Bharat Karnataka Team

Published : Feb 6, 2024, 1:47 PM IST

Updated : Feb 6, 2024, 9:11 PM IST

ವಾಟ್ಸ್​​ಆ್ಯಪ್​​​​, ಟೆಲಿಗ್ರಾಂ ಗ್ರೂಪ್​ಗಳ ಮೂಲಕ ಜತೆಗೆ ಡಿ ಮ್ಯಾಟ್​ ಅಕೌಂಟ್ ಇಲ್ಲದೇ ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದರೆ ಎಚ್ಚರ. ವಂಚಕರ ಬಲೆಗೆ ಬೀಳದಂತೆ ಪೊಲೀಸರು ಸೂಚಿಸಿದ್ದಾರೆ.

Fraud in the name of stock market investment
ಸ್ಟಾಕ್ ಮಾರುಕಟ್ಟೆ ಇನ್ವೆಸ್ಟ್ ಹೆಸರಿನಲ್ಲಿ ವಂಚನೆ

ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ನೀವೇನಾದರು ವಾಟ್ಸ್​​ಆ್ಯಪ್​​​​, ಟೆಲಿಗ್ರಾಂ ಗ್ರೂಪ್​ಗಳನ್ನು ನಂಬಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ. ವಾಟ್ಸ್​​ಆ್ಯಪ್​​, ಟೆಲಿಗ್ರಾಂ ಗ್ರೂಪ್​ಗಳ ಮೂಲಕ ವಂಚಕರು ರವಾನಿಸುವ ಸಂದೇಶಗಳಿಗೆ ಮಾರುಹೋಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಆಸೆಯಿಂದ ಹಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಬೆಂಗಳೂರು ಈಶಾನ್ಯ ವಿಭಾಗದ ಸೈಬರ್ ಪೊಲೀಸರಿಗೆ ಬರುವ ದೂರುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಆದ್ದರಿಂದ ವಂಚಕರ ಬಗ್ಗೆ ಎಚ್ಚರಿಕೆ ವಹಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಉತ್ತಮ ಲಾಭಾಂಶ ಕೊಡುವುದಾಗಿ ವಾಟ್ಸ್​​ಆ್ಯಪ್​, ಟೆಲಿಗ್ರಾಂ ಗ್ರೂಪ್​ಗಳ ಮೂಲಕ ಸೈಬರ್​ ವಂಚಕರು ಈಗಾಗಲೇ ಹಲವಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ. ಹೀಗಾಗಿ ಅಂಥ ಗ್ರೂಪ್​ಗಳಲ್ಲಿದ್ದರೆ ತಕ್ಷಣವೇ ಹೊರಬರುವಂತೆ ಪೊಲೀಸರು ತಿಳಿಸಿದ್ದಾರೆ.

ಹೇಗೆ ನಡೆಯುತ್ತೆ ವಂಚನೆ: ಷೇರು ಮಾರುಕಟ್ಟೆಯ ವ್ಯವಹಾರದ ಕುರಿತು ವಾಟ್ಸ್​​ಆ್ಯಪ್, ಟೆಲಿಗ್ರಾಂ ಗ್ರೂಪ್​ಗಳನ್ನು ಸೃಷ್ಟಿಸುವ ವಂಚಕರು, ಷೇರುಮಾರುಕಟ್ಟೆಯಲ್ಲಿ ಅನೇಕರು ಹಣ ಹೂಡಿಕೆ ಮಾಡಿ ಕೋಟಿಗಟ್ಟಲೆ ಸಂಪಾದನೆ ಮಾಡಿರುವ ಬಗ್ಗೆ ಸುಳ್ಳು ಸಂದೇಶಗಳನ್ನು ಗ್ರೂಪ್‌ನಲ್ಲಿ ಕಳುಹಿಸುತ್ತಾರೆ.

ಬಹುತೇಕ ವಂಚಕರೇ ತುಂಬಿರುವ ಗ್ರೂಪ್​ನಲ್ಲಿ ಕೋಟಿಗಟ್ಟಲೇ ಹಣ ಗಳಿಸಿದ ಕುರಿತ ಸಂದೇಶಗಳನ್ನು ಕಂಡು ಅಮಾಯಕರು ಮಾರುಹೋಗುತ್ತಾರೆ. ಇಂಥಹದೇ ಒಂದು ಗ್ರೂಪ್‌ನಲ್ಲಿ ಬಂದ ಸಲಹೆ ಕೇಳಿ ಹಣ ಕಳುಹಿಸಿದ ಅಯ್ಯಪ್ಪ ಎಂಬ ಟೆಕ್ಕಿಯೊಬ್ಬರು 90 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಟ್ರೇಡಿಂಗ್​ ಸ್ಟಾಕ್ ಮಾರ್ಕೆಟ್​ ಹೆಸರಿನಲ್ಲಿ ಅಯ್ಯಪ್ಪ ಅವರನ್ನು ವಂಚಿಸಲಾಗಿದ್ದು, ಡಿ ಮ್ಯಾಟ್​ ಅಕೌಂಟ್​ ಇಲ್ಲದೇ ಷೇರು ಮಾರುಕಟ್ಟೆಯಲ್ಲಿ ಷೇರು ಹೋಲ್ಡರ್ ಆಗಲು ಸಾಧ್ಯವಿಲ್ಲ ಎಂಬುದು ಅಯ್ಯಪ್ಪ ಅವರಿಗೆ ಮೋಸ ಹೋದ ನಂತರ ತಿಳಿದು ಬಂದಿದೆ. ಬಳಿಕ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಮಾದರಿಯ ವಂಚನೆಯ ಜಾಲದಲ್ಲಿ ವಿದ್ಯಾವಂತರು, ಉದ್ಯೋಗಿಗಳ ಸಂಖ್ಯೆಯೇ ಅಧಿಕವಾಗಿದ್ದು, ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಈವರೆಗೆ ಮೂರು ಪ್ರಕರಣಗಳು ದಾಖಲಾಗಿವೆ. ದೂರು ದಾಖಲಾಗುತ್ತಿದ್ದಂತೆ ಟ್ರೇಡಿಂಗ್ ಸ್ಟಾಕ್ ಮಾರ್ಕೆಟ್ ಹೆಸರಿನ ನಕಲಿ ವೆಬ್‌ಸೈಟ್‌ನ್ನು ಈಶಾನ್ಯ ವಿಭಾಗದ ಸೈಬರ್ ಪೊಲೀಸರು ಬ್ಲಾಕ್ ಮಾಡಿದ್ದು, ವಂಚಕರ ಕುರಿತು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ: ಲಕ್ಕಿ ಡ್ರಾ ಹೆಸರಿನಲ್ಲಿ ವಂಚನೆ: ಆನ್​ಲೈನ್ ಖರೀದಿಯಲ್ಲಿ ಹೆಚ್ಚಿನ ಕಾಳಜಿ ಅಗತ್ಯ

Last Updated : Feb 6, 2024, 9:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.