ETV Bharat / state

4 ವರ್ಷದ ಮಗುವಿನ ಕೆನ್ನೆ ಕಿತ್ತ ಬೀದಿ ನಾಯಿಗಳು - Stray Dogs Attack

ಬೀದಿನಾಯಿಗಳು 4 ವರ್ಷದ ಮಗುವಿನ ಮೇಲೆ ದಾಳಿ ನಡೆಸಿ, ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಹೊಸಕೋಟೆಯಲ್ಲಿ ನಡೆದಿದೆ.

author img

By ETV Bharat Karnataka Team

Published : Jul 8, 2024, 3:39 PM IST

dogs attack
ಸಂಗ್ರಹ ಚಿತ್ರ (IANS)
ಗ್ರಾಮ ಪಂಚಾಯತ್ ಸದಸ್ಯ ಸಬೀರ್ ಬೇಗ್​ರಿಂದ ಘಟನೆ ವಿವರ (ETV Bharat)

ಬೆಂ.ಗ್ರಾಮಾಂತರ: ಬೀದಿ ನಾಯಿಗಳ ದಾಳಿಗೆ ನಾಲ್ಕು ವರ್ಷದ ಮಗುವಿನ ಕೆನ್ನೆ ಕಿತ್ತು ಬಂದಿರುವ ಘಟನೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.

ಸಿಮ್ರಾನ್​ ಎಂಬವರ ಪುತ್ರ ಅವಾಜ್ ತನ್ನ ಸ್ನೇಹಿತರ ಜೊತೆ ನಿನ್ನೆ ಸಂಜೆ ಅಂಗಡಿಗೆ ಹೋಗುತ್ತಿದ್ದ ವೇಳೆ ಬೀದಿ ನಾಯಿಗಳು ದಾಳಿ ಮಾಡಿದ್ದು, ಮಗುವಿನ ಕೆನ್ನೆಗೆ ಕಚ್ಚಿ ಗಂಭೀರ ಗಾಯಗೊಳಿಸಿವೆ. ತಕ್ಷಣ ಸ್ಥಳೀಯರು ಮಗುವನ್ನು ರಕ್ಷಣೆ ಮಾಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದೆ. ಸದ್ಯ ಮಗುವಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಘಟನೆಗೆ ಸಂಬಂಧಿಸಿ ಮಾತನಾಡಿದ ಗ್ರಾಮ ಪಂಚಾಯತ್ ಸದಸ್ಯ ಸಬೀರ್ ಬೇಗ್, ''ಇತ್ತೀಚೆಗೆ ಗ್ರಾಮದಲ್ಲಿ ಬೀದಿ ನಾಯಿಗಳು ಹೆಚ್ಚಾಗಿವೆ. ಘಟನೆ ನಡೆದ ರಸ್ತೆಯಲ್ಲಿ ನಾಲ್ಕು ಶಾಲೆಗಳಿದ್ದು, ಇದೇ ಮಾರ್ಗದಲ್ಲಿ ಮಕ್ಕಳು ದಿನನಿತ್ಯ ತೆರಳಬೇಕಿದೆ. ಅವುಗಳ ಸಂಖ್ಯೆ ಹೆಚ್ಚಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದ್ದು, ಬೀದಿ ನಾಯಿಗಳಿಗೆ ಕಡಿವಾಣ ಹಾಕಬೇಕು'' ಎಂದು ಆಗ್ರಹಿಸಿದರು.

ಇದನ್ನೂ ಓದಿ: ಹಾವೇರಿ: ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕ ಸಾವು, ಡೆಂಗ್ಯೂ ಶಂಕೆ - Boy Succumbs to Fever

ETV Bharat Logo

Copyright © 2024 Ushodaya Enterprises Pvt. Ltd., All Rights Reserved.