ETV Bharat / state

ಮತ್ತೆ ನಾಲ್ಕು ಚಾರಣಿಗರ ಮೃತ ದೇಹ ಪತ್ತೆ: 9 ಮೃತದೇಹಗಳನ್ನು ಬೆಂಗಳೂರಿಗೆ ಸಾಗಿಸಲು ಕ್ರಮ: ಸಚಿವ ಕೃಷ್ಣ ಬೈರೇಗೌಡ - trekkers dead bodies found

author img

By ETV Bharat Karnataka Team

Published : Jun 6, 2024, 12:14 PM IST

Updated : Jun 6, 2024, 1:26 PM IST

ಮತ್ತೆ ನಾಲ್ಕು ಚಾರಣಿಗರ ಮೃತ ದೇಹ ಪತ್ತೆಯಾಗಿದ್ದು, ಎಲ್ಲ 9 ಮೃತದೇಹಗಳನ್ನು ಬೆಂಗಳೂರಿಗೆ ಸಾಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಚಾರಣಿಗರ ರಕ್ಷಣೆ ಕುರಿತು ಸಚಿವ ಕೃಷ್ಣ ಬೈರೇಗೌಡ ಮಾಹಿತಿ
ಚಾರಣಿಗರ ರಕ್ಷಣೆ ಕುರಿತು ಸಚಿವ ಕೃಷ್ಣ ಬೈರೇಗೌಡ ಮಾಹಿತಿ (ETV Bharat)
ಉತ್ತರಾಖಂಡ ಚಾರಣಿಗರ ರಕ್ಷಣೆ ಕಾರ್ಯದ ವಿಡಿಯೋ (ETV Bharat)

ಬೆಂಗಳೂರು: ಉತ್ತರಾಖಂಡ ಚಾರಣಿಗರ ರಕ್ಷಣೆ ಕಾರ್ಯ ನಡೆಯುತ್ತಿದ್ದು, ಮತ್ತೆ ನಾಲ್ಕು ಮೃತ ದೇಹಗಳು ಪತ್ತೆಯಾಗಿವೆ. ಈ ಸಂಬಂಧ ಪ್ರತ್ರಿಕಾ ಪ್ರಕಟಣೆ ಹೊರಡಿಸಿರುವ ಸಚಿವ ಕೃಷ್ಣ ಬೈರೇಗೌಡ, ಇಂದು ಮುಂಜಾನೆ ಕಾರ್ಯಾಚರಣೆಯಲ್ಲಿ ಇನ್ನೂ 4 ಶವಗಳನ್ನು ಪತ್ತೆ ಮಾಡಲಾಗಿದ್ದು, ಉತ್ತರಕಾಶಿಗೆ ವಿಮಾನದಲ್ಲಿ ರವಾನಿಸಲಾಗಿದೆ.

ಪದ್ಮನಾಭ ಕೆ.ಪಿ, ವೆಂಕಟೇಶ್ ಪ್ರಸಾದ್ ಕೆ, ಅನಿತಾ ರಂಗಪ್ಪ, ಪದ್ಮಿನಿ ಹೆಗ್ಡೆ ಇಂದು ಪತ್ತೆಯಾದ ಮೃತ ದುರ್ದೈವಿಗಳಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಉತ್ತರಕಾಶಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಬೆಳಗ್ಗೆ 11 ಗಂಟೆಗೆ ಎಲ್ಲ 9 ಮೃತದೇಹಗಳನ್ನು ವಿಮಾನದ ಮೂಲಕ ಡೆಹ್ರಾಡೂನ್‌ಗೆ ತರಲಾಗುವುದು. ಡೆಹ್ರಾಡೂನ್‌ನಲ್ಲಿ ಎಂಬಾಮಿಂಗ್​ ಮಾಡಲಾಗಿದೆ. ಎಲ್ಲ 9 ಶವಗಳನ್ನು ಬೆಂಗಳೂರಿಗೆ ಸಾಗಿಸಲು ನಾವು ಈಗಾಗಲೇ ಚಾರ್ಟರ್​​ ಫ್ಲೈಟ್​​​ ವ್ಯವಸ್ಥೆ ಮಾಡಿದ್ದೇವೆ. ಉತ್ತರಾಖಂಡದ ಮುಖ್ಯ ಕಾರ್ಯದರ್ಶಿಯವರ ಭೇಟಿ ಮಾಡಲಾಗಿದ್ದು, ಮುಖ್ಯ ಕಾರ್ಯದರ್ಶಿಯವರೊಂದಿಗಿನ ಸಭೆಯಲ್ಲಿ ಮೃತದೇಹಗಳ ಸಾಗಣೆಗೆ ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ. ಇಂದೇ ಮೃತ ದೇಹಗಳ ರವಾನೆ ಮಾಡಲಾವುದು ಎಂದು ತಿಳಿಸಿದ್ದಾರೆ.

ಈ ಕೆಳಗಿನ ಚಾರಣಿಗರನ್ನು ನಿನ್ನೆ (ಬುಧವಾರ) ರಕ್ಷಿಸಿ ಡೆಹ್ರಾಡೂನ್‌ಗೆ ಸ್ಥಳಾಂತರಿಸಲಾಗಿದೆ.
1. ಸೌಮ್ಯಾ ಕೆನಾಲೆ
2. ಸ್ಮೃತಿ ಡೋಲಾಸ್
3. ಶೀನಾ ಲಕ್ಷ್ಮಿ
4. ಎಸ್. ಶಿವ ಜ್ಯೋತಿ
5. ಅನಿಲ್ ಜಮತಿಗೆ ಅರುಣಾಚಲ ಭಟ್
6. ಭರತ್ ಬೊಮ್ಮನ ಗೌಡರ್
7. ಮಧು ಕಿರಣ್ ರೆಡ್ಡಿ
8. ಜೈಪ್ರಕಾಶ್ ಬಿ.ಎಸ್.

ಇಂದು ಬೆಳಗ್ಗೆ 5 ಚಾರಣಿಗರನ್ನು ರಕ್ಷಿಸಲಾಗಿದ್ದು, ಬೆಳಗ್ಗೆ 11 ಗಂಟೆಗೆ ವಿಮಾನದ ಮೂಲಕ ರಕ್ಷಿಸಲ್ಪಟ್ಟವರನ್ನು ಉತ್ತರಕಾಶಿಯಿಂದ ಡೆಹ್ರಾಡೂನ್‌ಗೆ ಕಳುಹಿಸಲು ಸಿದ್ದತೆ ನಡೆಸಲಾಗಿದೆ. ಎಸ್ ಸುಧಾಕರ್, ವಿನಯ್ ಎಂ.ಕೆ, ವಿವೇಕ್ ಶ್ರೀಧರ್, ನವೀನ್ ಎ , ರಿತಿಕಾ ಜಿಂದಾಲ್ ಅವ​ರನ್ನು ರಕ್ಷಿಸಲಾಗಿದೆ.

5 ಚಾರಣಿಗರ ಮೃತದೇಹಗಳನ್ನು ನಿನ್ನೆ (ಬುಧವಾರ) ಉತ್ತರಕಾಶಿಗೆ ವಿಮಾನದಲ್ಲಿ ರವಾನಿಸಲಾಗಿತ್ತು. ಸಿಂಧು ವಕೆಲಂ, ಆಶಾ ಸುಧಾಕರ್, ಸುಜಾತಾ ಮುಂಗುರವಾಡಿ, ವಿನಾಯಕ್‌ ಮುಂಗುರವಾಡಿ ಮತ್ತು ಚಿತ್ರಾ ಪ್ರಣೀತ್ ಮೃತ ದೇಹಗಳನ್ನು ಉತ್ತರ ಕಾಶಿಗೆ ರವಾನಿಸಲಾಗಿದೆ.

ಇದನ್ನೂ ಓದಿ: ಉತ್ತರಾಖಂಡ್​​ ಟ್ರೆಕ್ಕಿಂಗ್​ ದುರಂತ: ಇಂದು ಕರ್ನಾಟಕದ ನಾಲ್ವರ ಮೃತದೇಹ ಪತ್ತೆ, ಸಾವಿನ ಸಂಖ್ಯೆ 9ಕ್ಕೆ ಏರಿಕೆ - TREKKING TRAGEDY

ಇದನ್ನೂ ಓದಿ: ಉತ್ತರಾಖಂಡ್​​ ಟ್ರೆಕ್ಕಿಂಗ್​ ದುರಂತ:​ ಬೆಂಗಳೂರಿನ ಐವರು ಸಾವು, ನಾಲ್ವರು ನಾಪತ್ತೆ, 11 ಜನರ ರಕ್ಷಣೆ - TREKKING TRAGEDY

Last Updated : Jun 6, 2024, 1:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.