ETV Bharat / state

ಬೆಳಗಾವಿ: ಇನ್ಶೂರೆನ್ಸ್ ಹಣಕ್ಕಾಗಿ ಸ್ನೇಹಿತರ ಜೊತೆಗೂಡಿ ಅಣ್ಣನನ್ನೇ ಕೊಂದ ತಮ್ಮ! - MURDER FOR INSURANCE MONEY

ಇನ್ಶೂರೆನ್ಸ್ ಹಣಕ್ಕಾಗಿ ಸ್ನೇಹಿತರ ಜೊತೆಗೂಡಿ ಸಹೋದರನನ್ನು ಆತನ ತಮ್ಮನೇ ಕೊಲೆ ಮಾಡಿರುವ ಘಟನೆ ನಡೆದಿದೆ.

murder
ಹತ್ಯೆಯಾದ ಹಣಮಂತ ತಳವಾರ, ಆರೋಪಿ ಬಸವರಾಜ ತಳವಾರ (ETV Bharat)
author img

By ETV Bharat Karnataka Team

Published : Dec 4, 2024, 11:49 AM IST

ಬೆಳಗಾವಿ: 50 ಲಕ್ಷ ರೂ. ಇನ್ಶೂರೆನ್ಸ್ ಹಣಕ್ಕಾಗಿ ಒಡಹುಟ್ಟಿದ ಅಣ್ಣನನ್ನೇ ತಮ್ಮನೋರ್ವ ಕೊಲೆಗೈದಿರುವ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದ‌ ಬಳಿ‌ ನಡೆದಿದೆ. ಪ್ರಕರಣದ ಬಳಿಕ ಊರು ಬಿಟ್ಟಿದ್ದ ಆರೋಪಿಗಳು ಈಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಹಣಮಂತ ಗೋಪಾಲ ತಳವಾರ (35) ಕೊಲೆಯಾದ ವ್ಯಕ್ತಿ. ಬಸವರಾಜ ತಳವಾರ ತನ್ನ ಮೂವರು ಸ್ನೇಹಿತರ ಜೊತೆಗೂಡಿ ಅಣ್ಣನ ಹತ್ಯೆಗೈದ ಆರೋಪಿಯಾಗಿದ್ದಾನೆ. ಹಣಮಂತ ತನ್ನ ಹೆಸರಲ್ಲಿ ಬಸವರಾಜ 50 ಲಕ್ಷ ರೂ. ಇನ್ಶೂರೆನ್ಸ್ ಮಾಡಿಸಿದ್ದ, ಅಲ್ಲದೇ ಆ ಇನ್ಶೂರೆನ್ಸ್​ಗೆ ನಾಮಿನಿ ಕೂಡ ತಾನೇ ಆಗಿದ್ದ. ಅಣ್ಣ ಸತ್ತರೆ ತನಗೆ ಲಾಭ ಎಂದು ಭಾವಿಸಿ ಆತನನ್ನೇ ಹತ್ಯೆ ಮಾಡಲು ಬಸವರಾಜ ಸಂಚು ರೂಪಿಸಿದ್ದ. ಅ‌ಕ್ಟೋಬರ್​​ 7ರಂದು ಕಂಠಪೂರ್ತಿ ಕುಡಿಸಿ ತನ್ನ ಗ್ಯಾಂಗ್​ನೊಂದಿಗೆ ಅಣ್ಣನನ್ನು ಶ್ರೀಗಂಧದ ಕಟ್ಟಿಗೆಗಳಿವೆ, ಅದನ್ನು‌ ತರಲು ಹೋಗೋಣ ಬಾ ಎಂದು ಕರೆದುಕೊಂಡು ಹೋಗಿದ್ದ. ಈ ವೇಳೆ ಹಣಮಂತನ ತಲೆಗೆ ರಾಡ್​​ನಿಂದ ಹೊಡೆದು ಆರೋಪಿಗಳು ಕೊಲೆ ಮಾಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಬಳಿಕ ಕಬ್ಬಿನ ಹೊಲದಲ್ಲಿ ಹಣಮಂತನ ಶವ ಪತ್ತೆಯಾಗಿತ್ತು. ಹಣಮಂತನ ಶವ ಸಿಗುತ್ತಿದ್ದಂತೆ, ಆರೋಪಿಗಳು ಊರಿನಿಂದ ಪರಾರಿಯಾಗಿದ್ದರು. ಮೊಬೈಲ್ ಟವರ್ ಲೊಕೇಷನ್ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಘಟಪ್ರಭಾ ಪೊಲೀಸರು ಯಶಸ್ವಿಯಾಗಿದ್ದಾರೆ. ಮೃತ ಹಣಮಂತನ ಸಹೋದರ ಬಸವರಾಜ್ ತಳವಾರ, ಆತನ ಸ್ನೇಹಿತರಾದ ಬಾಪು ಶೇಖ್, ಈರಪ್ಪ ಹಡಗಿನಾಳ ಹಾಗೂ ಸಚಿನ್ ಕಂಟೆನ್ನವರ್ ಎಂಬ ಆರೋಪಿಗಳನ್ನು ಬಂಧಿಸಿ, ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಧಾರವಾಡ: ಮನೆಗೆ ಬಂದು ವ್ಯಕ್ತಿಯನ್ನು ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು: ಆರೋಪಿಗಳಿಗಾಗಿ ತಲಾಶ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.