ETV Bharat / state

ಮಾಜಿ ಪ್ರಧಾನಿ ದೇವೇಗೌಡ್ರು, ಕುಮಾರಸ್ವಾಮಿ ಈಗ ಬಿಜೆಪಿ ವಕ್ತಾರರಾಗಿದ್ದಾರೆ: ಸಿದ್ದರಾಮಯ್ಯ ಟೀಕಾ ಪ್ರಹಾರ

author img

By ETV Bharat Karnataka Team

Published : Mar 13, 2024, 8:52 PM IST

Updated : Mar 13, 2024, 10:59 PM IST

ಚಿಂತಾಮಣಿ ನಗರದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆಯನ್ನು ಸಿಎಂ ಸಿದ್ದರಾಮಯ್ಯ ನೆರವೇರಿಸಿದರು.

CM Siddaramaiah spoke.
ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ಚಿಕ್ಕಬಳ್ಳಾಪುರ: ಮೋದಿ ಪ್ರಧಾನಿಯಾದರೆ ದೇವೇಗೌಡರು ನಾನು ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳಿದ್ರು, ಆದರೆ ಈಗ ದೇವೇಗೌಡ್ರು ಹಾಗೂ ಕುಮಾರಸ್ವಾಮಿ ಬಿಜೆಪಿ ವಕ್ತಾರರಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

ಚಿಂತಾಮಣಿ ನಗರದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ವಿವಿಧ ಅಭಿವೃದ್ಧಿ ಕಾರ್ಯಕ್ರಮ ಸೇರಿದಂತೆ ಕೋಲಾರ ಮಿಲ್ಕ್ ಯೂನಿಯನ್ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ಮಾಡಲಾಗುತ್ತಿದೆ. ಚಿಂತಾಮಣಿಯಲ್ಲಿ ಇಂದು ಉದ್ಘಾಟನೆಯನ್ನು ಬಹಳಷ್ಟು ಸಂತೋಷದಿಂದ ಮಾಡುತ್ತಿದ್ದೇನೆ. ಶಾಸಕ‌ ಸುಧಾಕರ್ ಬಹಳ ಕ್ರಿಯಾಶೀಲ ಮಂತ್ರಿ, ಜನಪರ ಕಾಳಜಿ ಹೊಂದಿದ್ದಾರೆ. ಸಚಿವರಾಗಿ ಉತ್ತಮ ರೀತಿ ಕೆಲಸ ಮಾಡುತ್ತಿದ್ದಾರೆ.‌ ನೀವೆಲ್ಲಾ ಕೂಡ ಕ್ರಿಯಾಶೀಲ ಜನಪರ ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೀರಿ, ಅವರಿಗೆ ರಾಜಕೀಯದಲ್ಲಿ ಇನ್ನೂ ಮುಂದಿನ ದಿನಗಳಲ್ಲಿ ಭವಿಷ್ಯ ಇದೆ ಎಂದು ಅಭಿಪ್ರಾಯ ತಿಳಿಸಿದರು.

ಯಾವ ಜನಪ್ರತಿನಿಧಿಗಳಿಗೆ ರಾಜ್ಯದ ಬಗ್ಗೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಯಾರಿಗೆ ಕಾಳಜಿ ಇರುತ್ತೋ, ಅವರು ರಾಜಕೀಯವಾಗಿ‌ ಬೆಳೆಯಲು ಸಾಧ್ಯ, ಅವೆಲ್ಲ ಗುಣಗಳು ಎಂ ಸಿ ಸುಧಾಕರ್ ಪಡೆದಿದ್ದಾರೆ. ನಿಮಗೆಲ್ಲ ಗೊತ್ತಿದೆ ಚುನಾವಣೆ ಪೂರ್ವದಲ್ಲಿ ಅನೇಕ ಭರವಸೆ ಕೊಟ್ಟಿದ್ದೆವು. ಅವುಗಳಲ್ಲಿ ಪ್ರಮುಖವಾಗಿ 5 ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ತಕ್ಷಣ ಕೊಡುವುದಾಗಿ ತಿಳಿಸಿದ್ದೆವು. ನುಡಿದಂತೆ ನಡೆದುಕೊಂಡಿದ್ದೇವೆ ಎಂದರು.

ಕೇಂದ್ರ ಸರ್ಕಾರ ನೀತಿಯಿಂದ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ರೈತರು ಅನೇಕ‌ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಈ ಕಾರಣದಿಂದ ನಾನು ಮತ್ತು ಡಿಕೆಶಿಯವರು ಗ್ಯಾರಂಟಿ ಯೋಜನೆಗಳ ಬಗ್ಗೆ ಹೇಳಿ ಗ್ಯಾರಂಟಿ ಕಾರ್ಡ್​ಗಳಿಗೆ ಸಹಿ ಮಾಡಿ ಕೊಟ್ಟಿದ್ದೆವು. ನಂತರ ಜನರ ಆಶೀರ್ವಾದದಿಂದ 136 ಸ್ಥಾನ ಗೆದ್ದು ಅಧಿಕಾರಕ್ಕೆ ಬಂದಿದ್ದೇವೆ. ಅಲ್ಲಿಂದ‌ ನೇರವಾಗಿ ವಿಧಾನಸೌಧದ ಕ್ಯಾಬಿನೆಟ್​​ನಲ್ಲಿ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಯಿತು ಎಂದು ತಿಳಿಸಿದರು.

ಗ್ಯಾರಂಟಿ ಘೋಷಣೆಗಳನ್ನು ಜಾರಿ ಮಾಡಿದರೆ ಕರ್ನಾಟಕ ಖಜಾನೆ ಖಾಲಿಯಾಗುತ್ತೆ ಎಂದು ಪ್ರತಿಪಕ್ಷದ ಬಿಜೆಪಿಯವರು ಅಪ ಪ್ರಚಾರ ಮಾಡಿದರು. ಗ್ಯಾರಂಟಿಗಳನ್ನು ಲೋಕಸಭೆ ಚುನಾವಣೆ ನಂತರ ಮೇಲೆ‌ ನಿಲ್ಲಿಸುತ್ತಾರೆ ಎಂದ ಹೇಳಿಕೊಳ್ಳುತ್ತಿದ್ದಾರೆ. ಜನರಿಗೆ ಸುಳ್ಳು ಹೇಳಿ ದಾರಿ ತಪ್ಪಿಸುವುದು ಬದಲು ಅವರೇ ಮೂರ್ಖರಾಗುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಆರ್ ಅಶೋಕ್​ , ಬೊಮ್ಮಾಯಿ, ವಿಜಯೇಂದ್ರ ಹೇಳಿಕೆಗಳಲ್ಲಿ ಬರೀ ಸುಳ್ಳು ಕಾಣುತ್ತಿದೆ. ಆದ್ದರಿಂದ ಅನೇಕ ಸಲ ನಾನು ಹೇಳಿದ್ದೆ, ಬಿಜೆಪಿ ಮನೆ ದೇವರು ಸುಳ್ಳು ಯಾಕಂದ್ರೆ ನರೇಂದ್ರ ಮೋದಿಜೀ ಸುಳ್ಳು, ವಿದೇಶದಲ್ಲಿ ಕಪ್ಪು ಕಣ ತಂದು ಕೊಡುತ್ತೇನೆಂದು ಹೇಳಿದ್ದರು. ಆದರೆ, ಇದುವರೆಗೆ 15 ಪೈಸೆ ಕೊಡಲಿಲ್ಲ. ಇವರ ಅಚ್ಚೇದಿನ್ ಎಲ್ಲಿ ಹೋಯಿತು. ಆದರೆ, ಇಂದು ಪೆಟ್ರೋಲ್, ಗ್ಯಾಸ್, ಗೊಬ್ಬರ ಬೆಲೆ ಜಾಸ್ತಿ ಆಗಿದೆ. ಅಧಿಕಾರಕ್ಕೆ ಬಂದರೆ ರೈತರ ಆದಾಯ ದುಪ್ಪಟ್ಟು ಹಣ ಮಾಡುವುದಾಗಿ ಎಂದು ಭರವಸೆ ನೀಡಿದ್ದರು ಎಂದು ಆರೋಪಿಸಿದರು.

ದೇಶ ಬಿಟ್ಟು ಹೋಗ್ತೀನಿ ಎಂದಿದ್ದರು ದೇವೇಗೌಡರು: ಇತ್ತೀಚೆಗೆ ದೇವೇಗೌಡ್ರು‌ ಮೋದಿ ಅವರನ್ನು ಹೊಗಳುತ್ತಿದ್ದಾರೆ. ಬಿಜೆಪಿ ಜೊತೆ ಸೇರುವುದಿಲ್ಲ ಎಂದು ಹೇಳಿದ್ರು, ಮೋದಿ ಪ್ರಧಾನಿ ಆದ್ರೆ ದೇಶ ಬಿಟ್ಟು ಹೋಗ್ತೀನಿ ಎಂದಿದ್ದರು. ಆದರೆ, ಈಗ ಮೋದಿ ನನಗೆ ಅವಿನಾಭಾವ ಸಂಬಂಧ ಎಂದು ಹೇಳಿ ಕೊಳ್ಳುತ್ತಿದ್ದಾರೆ. ಇಷ್ಟೆಲ್ಲಾ ಸುಳ್ಳು ಹೇಳಿ ಮೋದಿಯನ್ನು ಹೊಗಳುತ್ತಿದ್ದಾರೆ. ಇದು ನ್ಯಾಯನಾ ಎಂದು ಪ್ರಶ್ನಿಸಿದರು. ಈಗ ಕುಮಾರಸ್ವಾಮಿ ದೇವೇಗೌಡ್ರು ಬಿಜೆಪಿ ವಕ್ತಾರಾಗುತ್ತಿದ್ದಾರೆ. ಇವರು ಕರ್ನಾಟಕ ಅಭಿವೃದ್ಧಿಗೆ ಅಡ್ಡಿಯಾಗುತ್ತಿದ್ದಾರೆ. ಬಿಜೆಪಿ ಜೊತೆ ಸೇರಿ ಇವರು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಸಂವಿಧಾನ ಉಳಿಯಬೇಕು: ಸಂವಿಧಾನ ಬದಲಾವಣೆ ಮಾಡುವುದಾಗಿ ಬಿಜೆಪಿ ಮಾಜಿ ‌ಮಂತ್ರಿಯೊಬ್ಬರು ಹೇಳುತ್ತಿದ್ದಾರೆ. ಬಡವರು, ಅಲ್ಪಸಂಖ್ಯಾತರು, ಕಾರ್ಮಿಕರು ಉಳಿಯಬೇಕಾದರೆ ಸಂವಿಧಾನ ಉಳಿಯಬೇಕು. ಆದರೆ ಬಿಜೆಪಿಯವರು ಸಂವಿಧಾನ ವಿರೋಧಿಗಳು ಅದಕ್ಕೋಸ್ಕರ ಬಿಜೆಪಿಯನ್ನು ಸೋಲಿಸಬೇಕು ಎಂದು ಮನವಿ ಮಾಡಿದರು.

ಸಿದ್ದರಾಮಯ್ಯ ಇದ್ರೆ ಬಿಜೆಪಿಯವರಿಗೆ ನಿದ್ದೆ ಬರಲ್ಲ. ಈಗಲೂ ಸರ್ಕಾರವನ್ನು ಕೆಡವಲು ಪ್ರಯತ್ನ ಮಾಡುತ್ತಿದ್ದಾರೆ. ಈ ಭಾಗದ ಎಂ ಪಿ ಮುನಿಸ್ವಾಮಿ ಒಂದು ಸಲವಾದರೂ ಕೇಂದ್ರಕ್ಕೆ ಪ್ರಶ್ನೆ ಮಾಡಿದ್ದಾರಾ? ಮುನಿಸ್ವಾಮಿ ಯಾವ ಕಾರಣಕ್ಕೂ ಗೆಲ್ಲಬಾರದು. ದ್ರೋಹಿಗಳಿಗೆ ಪಾಠ ಕಲಿಸಬೇಕಾದರೆ ಮುಂದಿನ ಲೋಕಸಭೆಯಲ್ಲಿ ಸೋಲಿಸಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಕೊಡಬೇಕು ಎಂದು ತಿಳಿಸಿದರು.

ಇದನ್ನೂಓದಿ:ಎಲ್ಲ ರೀತಿಯಲ್ಲೂ ಚುನಾವಣೆ ಎದುರಿಸಲು ಮಾನಸಿಕವಾಗಿ ಸಿದ್ದ: ಡಾ ಮಂಜುನಾಥ್

Last Updated : Mar 13, 2024, 10:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.