ETV Bharat / state

ತಪ್ಪು ಯಾರೇ ಮಾಡಿದರೂ ತಪ್ಪೇ: ಮುನಿರತ್ನ ಪ್ರಕರಣದ ಬಗ್ಗೆ ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿಕೆ - DK Suresh

author img

By ETV Bharat Karnataka Team

Published : Sep 15, 2024, 2:11 PM IST

ದ್ವೇಷಕ್ಕೂ ರಾಜಕಾರಣಕ್ಕೂ ಸಂಬಂಧವಿಲ್ಲ. ದೂರು ದಾಖಲಾಗದ ಮೇಲೆ ವಿಚಾರಗಳು ಹೊರಬಂದಿವೆ ಎಂದು ಮುನಿರತ್ನ ಆರೋಪ ವಿಚಾರವಾಗಿ ಡಿ.ಕೆ.ಸುರೇಶ್ ಪ್ರತಿಕ್ರಿಯೆ ನೀಡಿದರು.

ಮಾಜಿ ಸಂಸದ ಡಿ.ಕೆ.ಸುರೇಶ್
ಮಾಜಿ ಸಂಸದ ಡಿ.ಕೆ.ಸುರೇಶ್ (ETV Bharat)
ಮಾಜಿ ಸಂಸದ ಡಿ.ಕೆ.ಸುರೇಶ್ (ETV Bharat)

ಬೆಂಗಳೂರು: ಡಿಕೆ ಬ್ರದರ್ಸ್​ ಅನ್ನು ಟಾರ್ಗೆಟ್ ಮಾಡಬೇಕು ಎಂಬ ಹುನ್ನಾರವನ್ನು ಎಲ್ಲರೂ ಇಟ್ಟುಕೊಂಡಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು. ಮುನಿರತ್ನ ಬಂಧನ ವಿಚಾರವಾಗಿ ಮಾತನಾಡಿದ ಡಿ.ಕೆ.ಸುರೇಶ್, ತನಿಖೆಗಾಗಿ ಪೊಲೀಸರು ಬಂಧಿಸಿದ್ದಾರೆ. ಮಿಕ್ಕ ವಿಚಾರಗಳು ಕಾನೂನಿಗೆ ಸಂಬಂಧಿಸಿವೆ. ಹಾಗಾಗಿ ಈ ಬಗ್ಗೆ ಹೆಚ್ಚು ಹೇಳಲು ಹೋಗುವುದಿಲ್ಲ. ಯಾರೇ ತಪ್ಪು ಮಾಡಿದರೂ ಕೂಡ ತಪ್ಪೇ. ಈ ರೀತಿ ಜಾತಿ ಜಾತಿಗಳ ಮಧ್ಯೆ ದ್ವೇಷ ಉಂಟು ಮಾಡುವಂಥದ್ದು ಸರಿಯಾ?. ಜೊತೆಗೆ ಜಾತಿ ಧರ್ಮವನ್ನು ಬಹಳ ಕೀಳಾಗಿ ನೋಡತಕ್ಕಂತದ್ದು, ಮಹಿಳೆಯರಿಗೆ ತೋರುವ ಅಗೌರವ ಯಾರು ಕೂಡ ಸಹಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.

ಕೆಲವರು ಇದಕ್ಕೆ ರಾಜಕೀಯ ಬಣ್ಣ ಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ರಾಜಕೀಯ ನಾಯಕರಿಗೆ ವಿರೋಧ ಪಕ್ಷದವರಿಗೆ ಹೇಳುವುದು ಇಷ್ಟೇ. ನಾವ್ಯಾರು ಅವರಿಗೆ ಇನ್ನೊಬ್ಬರನ್ನು ಬೈಯುವಂತೆ ಹೇಳಿಲ್ಲ. ಮತ್ತು ಕಮಿಷನ್ ಇಸ್ಕೊಳ್ಳಿ ಅಂತ ಹೇಳಿಲ್ಲ. ಎಲ್ಲವೂ ಕೂಡ ತೆರೆದ ಪುಸ್ತಕದಂತೆ ಬ್ಲಾಕ್ ಅಂಡ್ ವೈಟ್​​ನಲ್ಲಿ ಇದೆ. ಅದಕ್ಕೆ ರಾಜಕೀಯ ಸಮರ್ಥನೆ ಮಾಡಿಕೊಳ್ಳುವುದು ಸರಿನಾ?. ನಿಮ್ಮ ಜಾತಿ, ಹೆಣ್ಣು ಮಕ್ಕಳನ್ನು ನಿಂದನೆ ಮಾಡಿದಂತವರನ್ನ ನೀವು ಯಾವ ರೀತಿಯಾಗಿ ನೋಡ್ತಿರಿ. ಅದೇ ಕಾಂಗ್ರೆಸ್ ಪಕ್ಷದವರು ಏನಾದರೂ ಮಾಡಿದರೆ ಬಿಜೆಪಿಯವರು ಸುಮ್ಮನೆ ಇರುತ್ತಿದ್ರಾ ಎಂದು ಪ್ರಶ್ನಿಸಿದರು.

ಸ್ವಲ್ಪ ವಿಚಾರ ಮಾಡಿ ಮಾಧ್ಯಮಗಳ ಮುಂದೆ ಹೇಳಿಕೆ ಕೊಡಲಿ. ಅನಾವಶ್ಯಕವಾಗಿ ರಾಜಕೀಯ ಮಾಡುವುದು ಬೇಡ. ತಪ್ಪು ಮಾಡಿರುವುದು ಸಾಮಾನ್ಯ ವ್ಯಕ್ತಿಯಲ್ಲ. ಒಬ್ಬ ಮಾಜಿ ಸಚಿವ. ಬಿಜೆಪಿ ನಾಯಕರು ಅದನ್ನು ಅರ್ಥ ಮಾಡಿಕೊಂಡು ನಿಮ್ಮ ಪಕ್ಷ ಇದಕ್ಕೆ ಬೆಂಬಲ ಕೊಡುತ್ತಾ ಅನ್ನೋದನ್ನ ಸ್ಪಷ್ಟವಾಗಿ ಹೇಳಲಿ ಎಂದು ಸವಾಲು ಹಾಕಿದರು.

ಇದನ್ನೂ ಓದಿ: ಸ್ಪಷ್ಟೀಕರಣ ನೀಡುವಂತೆ ಶಾಸಕ ಮುನಿರತ್ನಗೆ ಬಿಜೆಪಿ ಶಿಸ್ತು ಸಮಿತಿ ನೋಟಿಸ್​​ - BJP Notice To MLA Muniratna

ದ್ವೇಷ ರಾಜಕಾರಣ ಎಂಬ ಮುನಿರತ್ನ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ದ್ವೇಷಕ್ಕೂ, ರಾಜಕಾರಣಕ್ಕೂ ಸಂಬಂಧವೇ ಇಲ್ಲ. ನಾವ್ಯಾರು ಆ ಮಾತು ಹೇಳು ಎಂದು ಹೇಳಲೇ ಇಲ್ಲ. ಅವರಿಬ್ಬರ ನಡುವೆ ನಡೆದ ಘಟನೆ ನಮಗಂತೂ ಗೊತ್ತಿಲ್ಲ. ದೂರು ಕೊಟ್ಟ ಮೇಲೆ ಈ ವಿಚಾರಗಳೆಲ್ಲ ಹೊರಗಡೆ ಬಂದಿದೆ. ಪೊಲೀಸರ ತನಿಖೆಯಿಂದ ಎಲ್ಲ ವಿಚಾರಗಳು ಸಾರ್ವಜನಿಕವಾಗಿ ಚರ್ಚೆಯಾಗುತ್ತವೆ. ಚುನಾವಣೆ ಸೋತ ಮೇಲೆ ನಾನು ಯಾವ ವಿಚಾರಕ್ಕೂ ಬಾಯಿ ಹಾಕುತ್ತಿಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ. ಜನ ಕೊಟ್ಟ ತೀರ್ಪನ್ನು ಗೌರವಯುತವಾಗಿ ಸ್ವೀಕಾರ ಮಾಡಿದ್ದೇನೆ ಎಂದರು‌.

ಜನರಿಗೆ ನನ್ನ ಕೈಯಲ್ಲಿ ಆದ ಸಹಾಯ ಮಾಡ್ತಾ ಇದ್ದೇನೆ. ನನ್ನ ಕೆಲಸ ನಾನು ಮಾಡುತ್ತಿದ್ದೇನೆ. ಹೊರತು ಈ ರಾಜಕೀಯದ ನಾಯಕರಿಂದ ದೂರವೇ ಇದ್ದೇನೆ. ನನಗೆ ಅಂತ ಅವಶ್ಯಕತೆ ಇಲ್ಲ. ದಿನ ಬೆಳಗಾದ್ರೆ ರಾಜಕಾರಣ ಮಾಡುವುದಿಲ್ಲ. ಸಿನಿಮಾ ಪ್ರೊಡ್ಯೂಸ್ ಮಾಡಕ್ಕೂ ಹೋಗುವುದಿಲ್ಲ, ಡೈರೆಕ್ಟ್ ಮಾಡೋದಕ್ಕೂ ಹೋಗಲ್ಲ. ಅದೆಲ್ಲವನ್ನು ಬಿಜೆಪಿ ಜೆಡಿಎಸ್ ಇಬ್ಬರಿಗೆ ಬಿಟ್ಟಿದ್ದೇನೆ. ಪ್ರೊಡ್ಯೂಸರ್, ಆಕ್ಟರು, ಆಕ್ಷನ್ ಕಟ್ ಎಲ್ಲವೂ ಅವರಿಗೆ ಬಿಟ್ಟಿದ್ದೇವೆ. ನಮ್ಮನ್ನ ನೆನೆಸಿಕೊಳ್ಳದಿದ್ದರೆ ರಾಜಕಾರಣದಲ್ಲಿ ಅವರಿಗೆ ರಕ್ಷಣೆ ಸಿಗೋದಿಲ್ಲ. ರಾಜಕಾರಣದಲ್ಲಿ ಮೇಲೆ ಬರೋದಿಕ್ಕೆ ಆಗೋದಿಲ್ಲ. ಅದು ಸರಿನಾ ತಪ್ಪಾ ಅದು ಅವರಿಗೆ ಬಿಟ್ಟದ್ದು. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಯಾರು ಏನೇ ಮಾತನಾಡಿದರು ಸಮಯ ಬಂದಾಗ ಎಲ್ಲದಕ್ಕೂ ಉತ್ತರ ಕೊಡುತ್ತೇವೆ ಎಂದು ಟಾಂಗ್ ನೀಡಿದರು.

ಇದನ್ನೂ ಓದಿ: ಗುತ್ತಿಗೆದಾರನಿಗೆ ಜೀವ ಬೆದರಿಕೆ, ಜಾತಿ ನಿಂದನೆ ಆರೋಪ: ಶಾಸಕ ಮುನಿರತ್ನ ಬಂಧನ - BJP MLA Muniratna

ETV Bharat Logo

Copyright © 2024 Ushodaya Enterprises Pvt. Ltd., All Rights Reserved.