ETV Bharat / state

ಶಾಸಕ ಸ್ಥಾನಕ್ಕೂ ನಾಗೇಂದ್ರ ರಾಜೀನಾಮೆ ನೀಡಬೇಕು; ಮೂರು ತಿಂಗಳಲ್ಲಿ ಎಲ್ಲ ಹಣ ನಿಗಮಕ್ಕೆ ವಾಪಸ್ ಬರಬೇಕು : ಶ್ರೀರಾಮುಲು ಆಗ್ರಹ - Valmiki corporation scam - VALMIKI CORPORATION SCAM

ವಾಲ್ಮೀಕಿ ನಿಗಮ ಹಗರಣ ಪ್ರಕರಣದ ಆರೋಪಿ ಸ್ಥಾನದಲ್ಲಿರುವ ಮಾಜಿ ಸಚಿವ ನಾಗೇಂದ್ರ ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಆಗ್ರಹಿಸಿದ್ದಾರೆ.

former-minister-b-shriramulu
ಮಾಜಿ ಸಚಿವ ಬಿ. ಶ್ರೀರಾಮುಲು (ETV Bharat)
author img

By ETV Bharat Karnataka Team

Published : Jul 11, 2024, 4:47 PM IST

ಮಾಜಿ ಸಚಿವ ಬಿ. ಶ್ರೀರಾಮುಲು (ETV Bharat)

ಬೆಂಗಳೂರು : ಮೀಸಲು ಕ್ಷೇತ್ರದಿಂದ ಗೆದ್ದ ವ್ಯಕ್ತಿಯಾಗಿ ಸಮುದಾಯದ ಬಗ್ಗೆ ನೋವು ಇದ್ದರೆ ವಾಲ್ಮೀಕಿ ನಿಗಮ ಹಗರಣ ಪ್ರಕರಣದ ಆರೋಪಿ ಸ್ಥಾನದಲ್ಲಿರುವ ಮಾಜಿ ಸಚಿವ ನಾಗೇಂದ್ರ ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು, ನಾಗೇಂದ್ರ ಮೇಲೆ ಬಲವಾದ ಎಫ್​ಐಆರ್ ಆಗಬೇಕು. ಮೂರು ತಿಂಗಳ ಒಳಗೆ ವಾಲ್ಮೀಕಿ ನಿಗಮಕ್ಕೆ ಎಲ್ಲಾ ಹಣ ವಾಪಸ್ ಬರಬೇಕು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಆಗ್ರಹಿಸಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿ ಬೀದರ್​ನಿಂದ ಬೆಂಗಳೂರಿನವರೆಗೆ ಚಲೋ ಮಾಡುತ್ತೇವೆ. ದೆಹಲಿಗೆ ತೆರಳಿ ರಾಷ್ಟ್ರೀಯ ಪರಿಶಿಷ್ಟ ಆಯೋಗಕ್ಕೆ ದೂರು ಕೊಡುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಾಲ್ಮೀಕಿ ನಿಗಮ ಹಗರಣ ಪ್ರಕರಣದಲ್ಲಿ ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರು ಅನ್ನೋ ರೀತಿ ಈ ಸರ್ಕಾರ ನಡೆದುಕೊಂಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಬುಡಕಟ್ಟು ಜನಾಂಗದವರು ಮತ್ತು ಪರಿಶಿಷ್ಟರ ಏಳಿಗೆಗೆ ಕಾನೂನು ತರಲಾಗಿತ್ತು. ನಮ್ಮ ಸಮುದಾಯದ ಪರವಾಗಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಕೆಲಸ ಮಾಡಿದ್ದೇವೆ. ಮೂರು ತಿಂಗಳಿಂದ ಈ ವಿಚಾರವಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು.

ಈಗಿನ ಪರಿಸ್ಥಿತಿಯಲ್ಲಿ ಇ.ಡಿ ಅವರು, ನಾಗೇಂದ್ರ ಹಾಗೂ ಆಪ್ತರ ಮನೆ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ. ಇದನ್ನ ನಾವು ಸ್ವಾಗತ ಮಾಡುತ್ತೇವೆ. ವಾಲ್ಮೀಕಿ ನಿಗಮ ಪ್ರಾರಂಭವಾದ ಮೇಲೆ ಎಸ್ಟಿ ಅಭಿವೃದ್ಧಿ ಮಾಡಲು ಅನೇಕ ಕೆಲಸ ಮಾಡಬೇಕಿದೆ. ಇಡಿ ಎಸ್ಐಟಿ ವಿಚಾರಣೆ ಮಾಡಿ ಮುಂದೆ ಏನೆಲ್ಲಾ ಆಗಬೇಕು, ಆಗುತ್ತದೆ ಅಂತ‌ ವಿಚಾರಣೆ ಮಾಡಿದ್ದಾರೆ. ನಾಗೇಂದ್ರಗೆ ಸಂಬಂಧಿಸಿದ 18 ಜಾಗಗಳಲ್ಲಿ ಇ.ಡಿ ದಾಳಿ ಮಾಡಿದೆ. ಯೂನಿಯನ್ ಬ್ಯಾಂಕ್ ಸಿಬಿಐಗೆ ದೂರು ಕೊಟ್ಟ ಹಿನ್ನೆಲೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಹರೀಶ್ ಅನ್ನೋರ ಖಾತೆಗೆ 80 ಲಕ್ಷ ಹಣ ವರ್ಗಾವಣೆ ಆಗಿದೆ. ವಾಲ್ಮೀಕಿ ನಿಗಮದಿಂದ ಹಣ ವರ್ಗಾವಣೆ ಆಗಿದೆ. ಹರೀಶ್ ಯಾರು ಅಂದರೆ ನಾಗೇಂದ್ರ ಅವರ ಪಿ ಎ. ಇಷ್ಟು ದೊಡ್ಡ ಮಟ್ಟದಲ್ಲಿ ಹಣ ವರ್ಗಾವಣೆ ಆಗಿದೆ. ನಿನ್ನೆ ಇಡಿ ದಾಳಿ ಮಾಡಿದೆ. ಇದರ ಬಗ್ಗೆ ನಮಗೆ ಮಾಹಿತಿ ಇಲ್ಲ ಅಂತ ಗೃಹಸಚಿವ ಪರಮೇಶ್ವರ್ ಹೇಳಿದ್ದಾರೆ. ಇಂತವು ಸರ್ಕಾರದ ಗಮನಕ್ಕೆ ಬರೋದೆ‌ ಇಲ್ಲ ಅಂತ ವ್ಯಂಗ್ಯವಾಡಿದರು.

ರಾಜ್ಯದಲ್ಲಿ ನಾಚಿಕೆ ಇಲ್ಲದ ಸರ್ಕಾರ ಇದೆ. ಕಳ್ಳರ ಉಪಾಧ್ಯಕ್ಷನನ್ನ ಹಿಡಿದಿದ್ದಾರೆ. ಆದರೆ, ಅಧ್ಯಕ್ಷ ಯಾರು ಅಂತ ಪತ್ತೆ ಹಚ್ಚಬೇಕಿದೆ. ಆ ಕೆಲಸವನ್ನ ಇಡಿ ಮಾಡಲಿದೆ. ಎಸ್ಐಟಿ ಇನ್ವೆಸ್ಟಿಗೇಷನ್ ಕೂಡ ನಡೆಯುತ್ತಿದೆ. ಲ್ಯಾಂಬೊರ್ಗಿನಿ ಕಾರ್, ಹನಿಟ್ರ್ಯಾಪ್ ಎಲ್ಲವೂ ನಡೆದಿದೆ. ಜವಾಬ್ದಾರಿ ಇಲ್ಲದ ಉಪಾಧ್ಯಕ್ಷರು ಹನಿಟ್ರ್ಯಾಪ್ ಮಾಡಿಸಿದ್ದಾರೆ. ಸಮುದಾಯದ ಬಡಪಾಯಿಗಳನ್ನ ಹನಿಟ್ರ್ಯಾಪ್​ಗೆ ಸಿಲುಕಿಸಿದ್ದಾರೆ. ಸಮುದಾಯದ ಹಣ ಒಳ್ಳೆಯ ಕಾರ್ಯಕ್ರಮಕ್ಕೆ ಸಿಗಬೇಕಿತ್ತು. ರಸ್ತೆ, ಬೋರ್ವೆಲ್, ಭೂ ಒಡೆತನದ ಜಮೀನು ಈ ಹಣದಿಂದ ಸಿಗಬೇಕಿತ್ತು. ಈ ಸರ್ಕಾರಕ್ಕೆ ಬುಡಕಟ್ಟು ಜನಾಂಗದ ಶಾಪ ತಟ್ಟುತ್ತದೆ. ಬುಡಕಟ್ಟು ಜನಾಂಗದ ಹಣದಲ್ಲಿ ಶೋಕಿ ಮಾಡುತ್ತಿದ್ದಾರೆ. ಚುನಾವಣೆ ಗೆಲ್ಲಲು ಹಣ ಬಳಸಿದ್ದಾರೆ. ಕಲ್ಬುರ್ಗಿ, ರಾಯಚೂರು, ಕೊಪ್ಪಳ, ಬೀದರ್ ಚುನಾವಣೆಗೆ ಈ ಹಣ ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಇದೀಗ ಹೊಸದಾಗಿ ಮತ್ತೊಂದು ಹಗರಣವಾಗಿ ಮುಡಾ ಹಗರಣ ಹೊರ ಬಂದಿದೆ. ಇದೊಂದು ಕಳ್ಳ ಸರ್ಕಾರ, ಡಕಾಯಿತ ಸರ್ಕಾರ, ನಾಗೇಂದ್ರ ಅವರ ಬಂಧನ ಆಗಲೇಬೇಕು. ಇದನ್ನ ಇಡಿ ಗಂಭೀರವಾಗಿ ಪರಿಗಣಿಸಬೇಕು. ನಾಗೇಂದ್ರ ಬಂಧನ ಮಾಡುವ ಕೆಲಸವನ್ನ ಇಡಿ ಮಾಡಲಿದೆ ಅಂತ ಭಾವಿಸಿದ್ದೇನೆ ಎಂದರು.

ಡಿ. ಕೆ ಶಿವಕುಮಾರ್ ಏಕೆ ಇಡಿ ಬೇಡ ಎನ್ನುತ್ತಾರೆ ಎಂದರೆ, ಡಿ ಕೆ ಶಿವಕುಮಾರ್ ಅವರಿಗೂ ಇದರಲ್ಲಿ ಪಾಲಿದೆ. ಇಂದು ನಾಗೇಂದ್ರ ಬುಡಕ್ಕೆ ಬೆಂಕಿ ಬಿದ್ದಿದೆ. ಅದಕ್ಕಾಗಿ ಇಡಿ ದಾಳಿಗೆ ಇವರೆಲ್ಲಾ ವಿರೋಧ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಇದಕ್ಕೆಲ್ಲ ಸಿದ್ದರಾಮಯ್ಯರೇ ಅಧ್ಯಕ್ಷರು : ಹಣಕಾಸು ಸಚಿವರಾಗಿ ಸಿಎಂ ಸಿದ್ದರಾಮಯ್ಯ ಇದ್ದಾರೆ. ಅವರೇ ಅಧ್ಯಕ್ಷರು ಅಲ್ವಾ.? ಹಲವಾರು ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ. ಟೇಬಲ್ ಅನ್ನ ಗುದ್ದಿ ಗುದ್ದಿ ಮಾತನಾಡುತ್ತಾರೆ. ಆದರೆ, ಸಮುದಾಯದ ಪರ ಧ್ವನಿ ಎತ್ತುತ್ತಿಲ್ಲ. ಲೂಟಿ ಹೊಡೆದ ಅಧ್ಯಕ್ಷ ಸಿದ್ದರಾಮಯ್ಯ, ಉಪಾಧ್ಯಕ್ಷ ನಾಗೇಂದ್ರ ಎಂದು ಶ್ರೀರಾಮುಲು ವಾಗ್ದಾಳಿ ನಡೆಸಿದರು. ಕಲ್ಯಾಣ ಕರ್ನಾಟಕದಲ್ಲಿ ನಿಗಮದ ಹಣ ಬಳಸಿಕೊಂಡೆ ಚುನಾವಣೆ ಗೆದ್ದಿದ್ದಾರೆ. ಅವರ ಗೆಲುವಿಗೆ ನೂರಕ್ಕೆ ನೂರರಷ್ಟು ನಿಗಮದ ಹಣ ಬಳಕೆಯೇ ಕಾರಣ ಎಂದು ಆರೋಪಿಸಿದರು.

ಮಾಜಿ ಸಚಿವ ರಾಜುಗೌಡ ಮಾತನಾಡಿ, ಮೂರು ಕೋಟಿ ಮೇಲೆ ವರ್ಗಾವಣೆ ಆಗಬೇಕಾದರೆ ಚೀಫ್ ಸೆಕ್ರೆಟರಿ ಗಮನಕ್ಕೆ ತರಬೇಕು. ಆದರೆ ಯಾರ ಗಮನಕ್ಕೂ ತರದೇ 50 ಕೋಟಿ ಒಂದೇ ದಿನ ವರ್ಗಾವಣೆ ಮಾಡಿದ್ದಾರೆ. ಇತಿಹಾಸದಲ್ಲಿ ಮೊದಲ ಬಾರಿಗೆ ಬ್ಯಾಂಕ್ ಮೂಲಕ ಲೂಟಿ ಮಾಡಿದ್ದಾರೆ. ವೈಟ್ ಮೂಲಕವೇ ಕೊಳ್ಳೆ ಹೊಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ವೈಟ್ ಮೂಲಕವೇ ಹಣ ವರ್ಗಾವಣೆ ಆಗಿದ್ದು, ಅದನ್ನ ರಿಕವರಿ ಮಾಡೋಕೆ ಇಷ್ಟು ದಿನ ಬೇಕಾ? ಎಂದು ಪ್ರಶ್ನಿಸಿದರು.

ಇವರು ತನಿಖೆ ಹೆಸರಿನಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಎಸ್ಟಿ ಸಮುದಾಯದ ಪರ ಕೆಲಸ ಮಾಡೋ ನಾವು ಸೋತಿದ್ದೇವೆ. ಕಾಂಗ್ರೆಸ್​ನಿಂದ ಎಸ್ಟಿ ಸಮುದಾಯದ 14 ಜನ ಗೆದ್ದಿದ್ದಾರೆ. ಆದರೆ ಯಾರೂ ಕೂಡ ಮಾತನಾಡುತ್ತಿಲ್ಲ. ಎಲ್ಲರೂ ಕೇವಲ ರಬ್ಬರ್ ಸ್ಟ್ಯಾಂಪ್ ಆಗಿದ್ದಾರೆ. ನಿಗಮದ ಹಣ ಬ್ಯಾಂಕಲ್ಲಿ ಇಡಬೇಕಾದರೆ ಸಿಎಂ ಅನುಮತಿ ಇಲ್ಲದೇ ಇಡಲು ಸಾಧ್ಯವಿಲ್ಲ. ನಾನು ನಿಗಮದ ಅಧ್ಯಕ್ಷ ಆಗಿದ್ದವನು. ಹಣಕ್ಕೆ ಬಡ್ಡಿ ಹೆಚ್ಚು ಕೊಡುತ್ತಾರೆ ಅಂದರೆ ಟೆಂಡರ್ ಕರೆದು ಇಡಬೇಕು. ಆದರೆ ಇದನ್ನ ಮುಚ್ಚಿಹಾಕಲು ನೋಡುತ್ತಿದ್ದಾರೆ ಎಂದರು.

ಸಿಬಿಐ ಎಂಟ್ರಿ ಕೊಟ್ಟಿರುವುದರಿಂದ ಇನ್ನು ಮುಚ್ಚಿಹಾಕಲು ಸಾಧ್ಯವಾಗಿಲ್ಲ. ಎಸ್ಟಿ ಬೋರ್ಡಿಗೆ ಹಣ ವಾಪಸ್ ತರಬೇಕು. ಜಮೀನು ತೆಗೆದವರಿಗೆ ಹಣ ಸಿಕ್ಕಿಲ್ಲ, ಬೋರ್ ಕೊರೆಸಲು ಹಣ ಇಲ್ಲದೆ ಕಾಯ್ತಿದ್ದಾರೆ. ನಾಗೇಂದ್ರ ಒಬ್ಬರ ರಾಜೀನಾಮೆ ಪಡೆದರೆ ಸಾಲಲ್ಲ. 187 ಕೋಟಿ ಹಣ ವಾಪಸ್ ತರಬೇಕು. ಅಧಿಕಾರಿಗಳ ತಲೆದಂಡ ಕೂಡ ಆಗಬೇಕು ಎಂದು ಒತ್ತಾಯಿಸಿದರು.

ಸಮುದಾಯದ ಶಾಸಕರು ಧ್ವನಿ‌ ಎತ್ತಬೇಕಿತ್ತು. ಆದರೆ, ಯಾರೂ ಧ್ವನಿ ಎತ್ತುತ್ತಿಲ್ಲ. ಕೇವಲ‌ ಶಾಸಕರಷ್ಟೇ ಅಲ್ಲ, ಗುರುಪೀಠದ ಸ್ವಾಮೀಜಿಗಳು ಕೂಡ ಧ್ವನಿ ಎತ್ತಬೇಕು. ಕಾಂಗ್ರೆಸ್ ನಾಯಕರು ಹಾಗೂ ಜನರೂ ಕೂಡ ಇದರ ವಿರುದ್ಧ ಧ್ವನಿ ಎತ್ತಬೇಕು. ನಿಮ್ಮ ಹಕ್ಕಿಗಾಗಿ ಜನರು ಧ್ವನಿ ಎತ್ತಬೇಕು ಎಂದು ಹೇಳಿದರು.

ಇದನ್ನೂ ಓದಿ : ವಾಲ್ಮೀಕಿ ನಿಗಮದ ಹಗರಣ: ಯಾವ ಕಂಪನಿಗಳಿಗೆ ಎಷ್ಟೆಷ್ಟು ಕೋಟಿ ವರ್ಗಾವಣೆ?, ಇಲ್ಲಿದೆ ಫುಲ್​​ ಡೀಟೇಲ್ಸ್ - Valmiki corporation scam

ETV Bharat Logo

Copyright © 2025 Ushodaya Enterprises Pvt. Ltd., All Rights Reserved.