ಆನೇಕಲ್: ಆನೇಕಲ್ ಶಾಸಕ, ಮಾಜಿ ಅರಣ್ಯ ಸಚಿವ ಎಂ.ಪಿ.ಕೇಶವ ಮೂರ್ತಿ ಇಂದು ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಅನಾರೋಗ್ಯದ ಬಳಲುತ್ತಿದ್ದ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಆನೇಕಲ್ ಕ್ಷೇತ್ರದಲ್ಲಿ ಮೊದಲ ಬಾರಿಗೆ ಸೂರಿಲ್ಲದವರಿಗೆ ಹಕ್ಕು ಪತ್ರ ವಿತರಣೆ, ಮೊದಲ ಡಾಂಬರು ರಸ್ತೆ, ಕಿರು ನೀರಾವರಿ ಯೋಜನೆಯಡಿ ಹಳ್ಳಿ ಹಳ್ಳಿಗೆ ನೀರು ಸರಬರಾಜು, ಹಳ್ಳಿ ಹಳ್ಳಿಗೆ ಸಮುದಾಯ ಭವನ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳನ್ನು ತರುವಲ್ಲಿ ಶ್ರಮಿಸಿದ ಕೀರ್ತಿ ಕೇಶವಮೂರ್ತಿಯವರದ್ದು.
ಇವರ ಮೊದಲ ಹೆಸರು ಕರಗಪ್ಪ. ಆ ನಂತರದಲ್ಲಿ ಕೇಶವಮೂರ್ತಿ ಎಂದು ಬದಲಿಸಿಕೊಂಡಿದ್ದರು. ತಂದೆ ಪಾಲಪ್ಪ, ತಾಯಿ ಕಾಳಮ್ಮರ ಮಗನಾಗಿ ಜೂನ್ 30, 1939ರಲ್ಲಿ ಜನಿಸಿದ್ದರು. ಬಿಎಬಿಲ್ ಪದವಿ ಪಡೆದಿದ್ದರು.
ನಾಳೆ ಹೆಚ್ಎಸ್ಆರ್ ಬಡಾವಣೆಯ ಸ್ವಗೃಹದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಿದ್ದತೆ ಮಾಡಲಾಗಿದೆ.
ಇದನ್ನೂ ಓದಿ: ಸ್ವಾತಂತ್ರ್ಯಯೋಧೆ ಚಂದ್ರವ್ವ ಕಾಡಪ್ಪ ಗೋಲಬಾವಿ ನಿಧನ - Freedom Fighter Dies