ETV Bharat / state

ಪೆನ್​ಡ್ರೈವ್ ಪ್ರಕರಣದಿಂದ ಮನನೊಂದ ನನ್ನ ಸಹೋದರಿಯರಿಗೆ ಕ್ಷಮೆ ಕೇಳುತ್ತೇನೆ: ಕುಮಾರಸ್ವಾಮಿ - h d kumaraswamy - H D KUMARASWAMY

ನಮ್ಮ ಕುಟುಂಬ ಮುಗಿಸೊದಕ್ಕೆ ಮಿನಿ ಕ್ಯಾಬಿನೆಟ್ ಆಗಿದೆ, ಇದನ್ನೆಲ್ಲ ಎದುರಿಸುವ ಶಕ್ತಿ ರಾಜ್ಯದ ಜನ ಕೊಟ್ಟಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.​

ಕುಮಾರಸ್ವಾಮಿ
ಕುಮಾರಸ್ವಾಮಿ (ETV Bharat)
author img

By ETV Bharat Karnataka Team

Published : May 20, 2024, 3:35 PM IST

ಬೆಂಗಳೂರು: ಪೆನ್​ಡ್ರೈವ್ ಪ್ರಕರಣದಿಂದ ಮನನೊಂದಿರುವ ನನ್ನ ಸಹೋದರಿಯರಿಗೆ ಕ್ಷಮೆ ಕೇಳುತ್ತೇನೆ. ನಾವೆಲ್ಲರೂ ಅಸಹ್ಯ ಪಡುವಂತ, ತಲೆ ತಗ್ಗಿಸುವಂತ ಪ್ರಕರಣ ಇದು ಎಂದು ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂತಹ ಒಂದು ವಾತಾವರಣ ಸೃಷ್ಠಿಸಿದವರು ಯಾರು?. ಈ ಪ್ರಕರಣದ ನಂತರ ರೇವಣ್ಣ ಕುಟುಂಬ ಬೇರೆ ನನ್ನ ಕುಟುಂಬ ಬೇರೆ ಅಂತ ಏನೇನೋ‌ ಹೇಳಿದ್ರು, ನಮ್ಮ ಕುಟುಂಬದವರು ಮದುವೆ ಆದ ಮೇಲೆ ಯಾರು ಯಾವ ವ್ಯವಹಾರ ಮಾಡುತ್ತೇವೆ ಎಂದು ಗೊತ್ತಿಲ್ಲ. ನನಗೆ ಇನ್ನು ಇಬ್ಬರು ಬ್ರದರ್ಸ್ ಇದ್ದಾರೆ, ಅವರು ಏನ್ಮಾಡ್ತಾರೆ ನನಗೆ ಗೊತ್ತಿಲ್ಲ. ಹಬ್ಬ ಹರಿದಿನಗಳಲ್ಲಿ ಒಂದು ಕಡೆ ಸೇರ್ತಿವಿ ಊಟ ಮಾಡ್ತೇವಿ ಎಂದರು.

ಪೆನ್ ಡ್ರೈವ್ ಪ್ರಕರಣದ ಬಗ್ಗೆ ಕುಮಾರಸ್ವಾಮಿ, ದೇವೇಗೌಡರಿಗೆ ಗೊತ್ತು ಅಂತ ಹೇಳಿದ್ದೀರಿ. ಇದೆಲ್ಲ ನನಗೆ ಗೊತ್ತಿದರೆ ಇಷ್ಟು ಮುಂದುವರಿಯೋಕೆ ಬಿಡುತ್ತಿರಲಿಲ್ಲ. ವಿದೇಶದಿಂದ ಆ ವ್ಯಕ್ತಿಯನ್ನು ಕರೆಸಬೇಕು ಎಂದು ಚೆಲುವರಾಯಸ್ವಾಮಿ‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಇದ್ದಾಗಲೇ ನನ್ನ ಜೊತೆ ಸಂಪರ್ಕ ಇರ್ಲಿಲ್ಲ. ಸಿಡಿ ಶಿವು ಆಡಿಯೋ ನಿನ್ನೆ‌ ಬಂದಿದೆ, ಪೆನ್ ಡ್ರೈವ್ ಹೊರ ಬಂದಾಗ ಇದನೆಲ್ಲ ಬಗೆ ಹರಿಸಬೇಕಿತ್ತು. ನೀನೇ ಹೇಳಿದ್ದಲ್ಲ ದೊಡ್ಡ ಸವಾಲು ಅಂತ ಶಿವಕುಮಾರ್ ಅವರೇ, ನಿನ್ನೆ ಆಡಿಯೋ ಬಂದ ಮೇಲೆ ಉಸಿರೇ ಇಲ್ಲ. ಯಾವ ಕಾಂಗ್ರೆಸ್​ ನಾಯಕರು ಮುಂದೆ ಬರುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಅವರಿಗೆ ಹೇಳುತ್ತೇನಿ, ಈ ಸಾಧನೆ ಹೇಳೋದು ಮರೆತಿದ್ದಾರೆ. ಈ ಸರ್ಕಾರ 376 ಸೆಕ್ಷನ್ ಸರ್ಕಾರ, ಯಾರು ಸರ್ಕಾರದ ವಿರುದ್ದ ಮಾತನಾಡುತ್ತಾರೆ. ಅವರ ವಿರುದ್ದ 376 ಸೆಕ್ಷನ್​ ಹಾಕುತ್ತಾರೆ. ಇನ್ನು ದೇವರಾಜೇಗೌಡ ಪೊಲೀಸ್ ವ್ಯಾನ್​ನಲ್ಲಿ ಕುಳಿತು ಏನೋ ಹೇಳಿದ್ದಾರೆ. ನಮ್ಮ ಕುಟುಂಬ ಮುಗಿಸುವುದಕ್ಕೆ ಮಿನಿ ಕ್ಯಾಬಿನೆಟ್ ಆಗಿದೆ, ಇದನ್ನೆಲ್ಲ ಎದುರಿಸುವ ಶಕ್ತಿ ರಾಜ್ಯದ ಜನ ಕೊಟ್ಟಿದ್ದಾರೆ ಎಂದು ಹೇಳಿದರು.

ವಿಡಿಯೋ ಯಾರು ಮಾಡಿದ್ದಾರೆ ಅವರನ್ನ ಕರೆದುಕೊಂಡು ಬಂದು ಹ್ಯಾಂಗ್ ಮಾಡಿ: ಏ.1ಕ್ಕೆ ಆ ಹೆಣ್ಣು ಮಗು ಕಂಪ್ಲೈಂಟ್ ಕೊಟ್ಟಿದ್ದು, ದೇವರಾಜೇಗೌಡರನ್ನು ಯಾವಾಗ ಅರೆಸ್ಟ್ ಮಾಡಿದ್ದು?. ಪೆನ್​ಡ್ರೈವ್ ಹೊರ ಬಂದ ಮೇಲೆ ಹೆಣ್ಣು ಮಗಳ ಕೈಯಲ್ಲಿ ಈ ಕೇಸ್ ಹಾಕಿಸಿದರು. ಹಾಸನದಿಂದ ಆ ಹೆಣ್ಣು ಮಗಳನ್ನ ಕರೆದುಕೊಂಡು ಬಂದವರು ಯಾರು?. ಕರೆದುಕೊಂಡು ಬರುವಾಗ ಅವರಿಗೆ ಎಷ್ಟು ಹಣ ಕೊಟ್ಟರು?. ಸಿಡಿ ಶಿವು ನಿನ್ನೆ ಏನೋ ಹೇಳ್ತಿದ್ದರು. ನಿಮ್ಮ ಕಚೇರಿಯಲ್ಲಿ ಟೈಪ್ ಮಾಡಿಸಿ ದೂರು ಕೊಡಿಸಿದ್ರಿ. ಸಿದ್ದರಾಮಯ್ಯ ಅವರೇ ಎಸ್​ಐಟಿಯಿಂದ ಯಾವ ರೀತಿ ತನಿಖೆ ಮಾಡಿಸ್ತಿದ್ದೀರಿ?. ನಿಮ್ಮ ತನಿಖೆ ಯಾವ ದಿಕ್ಕಿನಲ್ಲಿ ಹೋಗುತ್ತಿದೆ. ಏ.1 ರಂದು ದೂರು ಕೊಟ್ಟ ಮೇಲೆ ಯಾವ ರೀತಿ ಆ್ಯಕ್ಷನ್​ ತೆಗೆದುಕೊಂಡಿದ್ದೀರಿ?. ಪೆನ್ ಡ್ರೈವ್ ಯಾರು ಹಂಚಿದರು. ಆ ಆ್ಯಂಗಲ್​ನಲ್ಲಿ ತನಿಖೆ ಮಾಡಿದ್ದೀರಾ?. ಪೆನ್ ಡ್ರೈವ್​ನಲ್ಲಿ ಇರೋ ವಿಡಿಯೋ ಯಾರು ಮಾಡಿದ್ದಾರೆ ಅವರನ್ನ ಕರೆದುಕೊಂಡು ಬಂದು ಹ್ಯಾಂಗ್ ಮಾಡಿ ಎಂದರು.

ನಿನ್ನೆ ಶಿವರಾಮೇಗೌಡ ಕರೆ ಮಾಡಿ ಮಾತನಾಡಿದರಲ್ಲ, ಹಲೋ ಎಲ್ಲಿದ್ಯಪ್ಪ, ಸದಾಶಿವನಗರಕ್ಕೆ ಯಾವಗ ಬರುತ್ತೀರಾ ಅಂತ ಕೇಳಿದ್ರಲ್ಲ. ಸದಾಶಿವನಗರದಲ್ಲಿ ಯಾರು ಇದ್ದಾರೆ, ಕುಮಾರಸ್ವಾಮಿ ಇದ್ದಾರಾ?. ಸದಾಶಿವನಗರದಲ್ಲಿ ಇರೋದು ನಮ್ಮ ಸಿಡಿ ಶಿವು ತಾನೇ. ನಾನು ರೇವಣ್ಣ ಕುಟುಂಬ ಹಾಳು ಮಾಡೋಕೆ ಹೊರಟಿದ್ದೀನಿ ಅಂತ ಹೇಳಿದ್ರಿ, ನೀವು ಇನ್ನು ಯಾರ್‍ಯಾರ ಮನೆ ಹಾಳು ಮಾಡಿದ್ದೀರಿ. ದೇವೇಗೌಡರು ಇನ್ನು ಸಾಯಲಿಲ್ಲ ಅಂತೀರಾ, ಶಿವಕುಮಾರ್ ಅವರೇ ನೀವು ತಿಹಾರ್ ಜೈಲಿನಲ್ಲಿ ಇದ್ದಾಗ ನಾನು ಹೋಗಿ ನಿಮ್ಮ ತಾಯಿ ಅವರಿಗೆ ಸಾಂತ್ವನ‌ ಹೇಳಿ ಬಂದಿದ್ದೆ. ನೀವು ಹೇಳ್ತಿರಾ ದೇವೇಗೌಡರು ದೇವಸ್ಥಾನಕ್ಕೆ ಹೋಗಿದ್ದಾರೆ. ಅವರಿಗೆ ದೇವರು ಒಳ್ಳೆದು ಮಾಡಲಿ ಅಂತ ವ್ಯಂಗ್ಯವಾಗಿ ಹೇಳ್ತಿರಾ ಎಂದು ಕಿಡಿಕಾರಿದರು.

ಹೆಚ್.​​ಡಿ. ಕುಮಾರಸ್ವಾಮಿ ಅವರು ನಡೆಸಿದ ಸಂಪೂರ್ಣ ಸುದ್ದಿಗೋಷ್ಠಿ ವೀಕ್ಷಿಸಲು ಇಲ್ಲಿ ಕ್ಲಿಕ್​ ಮಾಡಿ

ಇದನ್ನೂ ಓದಿ: ಡಿ.ಕೆ.ಶಿವಕುಮಾರ್​ ಪೆನ್ ಡ್ರೈವ್ ಫ್ಯಾಕ್ಟರಿಯ ಒರಿಜಿನಲ್ ಓನರ್: ಜೆಡಿಎಸ್​ ಗಂಭೀರ ಆರೋಪ - jds allegations

ETV Bharat Logo

Copyright © 2025 Ushodaya Enterprises Pvt. Ltd., All Rights Reserved.