ETV Bharat / state

ಬೆಂಗಳೂರು: ಮನೆಯಲ್ಲಿ ಸಂಗ್ರಹಿಸಿ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ವಿದೇಶಿಗ ಅರೆಸ್ಟ್, ₹4 ಕೋಟಿಯ ಮಾಲು ವಶಕ್ಕೆ - Drug Peddler Arrest - DRUG PEDDLER ARREST

ಕೋಟ್ಯಂತರ ಮೌಲ್ಯದ ಎಂಡಿಎಂಎ ಕ್ರಿಸ್ಟೆಲ್ ಡ್ರಗ್ಸ್ ಅನ್ನು ಮನೆಯಲ್ಲಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಬೆಂಗಳೂರಿನ ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

DMA Crystal drugs  MDMA Crystal  Bengaluru  Bagalagunte Police
4 ಕೋಟಿ ಮೌಲ್ಯದ 4 ಎಂಡಿಎಂಎ ಕ್ರಿಸ್ಟೆಲ್ ಡ್ರಗ್ಸ್ ಮನೆಯಲ್ಲಿ ಸಂಗ್ರಹಿಸಿ ಮಾರಾಟ ತೊಡಗಿದ್ದ ವಿದೇಶಿ ಪ್ರಜೆ ಅರೆಸ್ಟ್
author img

By ETV Bharat Karnataka Team

Published : Apr 8, 2024, 2:54 PM IST

ಬೆಂಗಳೂರು: ಬಿಸ್ನೆಸ್ ವೀಸಾದಡಿ ಭಾರತಕ್ಕೆ ಬಂದು ಅವ್ಯವಾಹತವಾಗಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಮೂಲದ ವಿದೇಶಿ ಪ್ರಜೆಯನ್ನು ಬಂಧಿಸಿರುವ ಸಿಸಿಬಿ ಮಾದಕ ದ್ರವ್ಯನಿಗ್ರಹ ಅಧಿಕಾರಿಗಳು, ಆರೋಪಿಯಿಂದ 4 ಕೋಟಿ ರೂ ಮೌಲ್ಯದ ಎಂಡಿಎಂಎ ಕ್ರಿಸ್ಟೆಲ್​ಗಳನ್ನು ಜಪ್ತಿ ಮಾಡಿದ್ದಾರೆ.

DM Crystal drugs  MDM Crystal  Bengaluru  Bagalagunte Police
ಎಂಡಿಎಂ ಕ್ರಿಸ್ಟೆಲ್ ಡ್ರಗ್ಸ್

2022ರಲ್ಲಿ ಬಿಸ್ನೆನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದ ಹೆನ್ರಿ ಔಕಮೇಕ್ ಎಂಬಾತನನ್ನು ಬಂಧಿಸಲಾಗಿದೆ. ಈತ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಡ್ರಗ್ಸ್ ದಂಧೆಗಿಳಿದು ದೆಹಲಿ ಹಾಗೂ ಮುಂಬೈ ಮೂಲದ ಡ್ರಗ್ಸ್‌ಕೋರರ ಸಂಪರ್ಕ ಸಾಧಿಸಿ ಅವರಿಂದ ಕೊರಿಯರ್ ಮೂಲಕ ಎಂಡಿಎಂಎ ಕ್ರಿಸ್ಟೆಲ್ ತರಿಸಿಕೊಳ್ಳುತ್ತಿದ್ದ. ಈ ಬಗ್ಗೆ ಯಾರಿಗೂ ಅನುಮಾನ ಬರದಂತೆ ವ್ಯಾನಿಟಿ ಬ್ಯಾಗ್‌ನಲ್ಲಿ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಡ್ರಗ್ಸ್ ಸಂಗ್ರಹಣೆಗಾಗಿಯೇ ಪ್ರತ್ಯೇಕ ಮನೆ: ಆರೋಪಿ ದಂಧೆಯ ಬಗ್ಗೆ ಯಾರಿಗೂ ಗೊತ್ತಾಗದಿರಲು ಕೊರಿಯರ್ ಬಾಯ್​ ವಾಸವಾಗಿದ್ದ ಕಟ್ಟಡದ ಮತ್ತೊಂದು ಮನೆಯ ವಿಳಾಸ ನೀಡಿದ್ದ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಮನೆ ಪರಿಶೀಲಿಸಿದಾಗ ಕೋಟ್ಯಂತರ ಮೌಲ್ಯದ ಎಂಡಿಎಂಎ ಕ್ರಿಸ್ಟೆಲ್​ಗಳು ಸಿಕ್ಕಿವೆ.

4 ಕೋಟಿ ಮೌಲ್ಯದ 4 ಎಂಡಿಎಂ ಕ್ರಿಸ್ಟೆಲ್ ಡ್ರಗ್ಸ್

ಆರೋಪಿ 1 ಗ್ರಾಂ ಎಂಡಿಎಂಎ ಕ್ರಿಸ್ಟೆಲ್​ಗೆ 8 ಸಾವಿರದಿಂದ 10 ಸಾವಿರ ರೂ.ಗಳಂತೆ ಪರಿಚಯಸ್ಥರಿಗೆ ಮಾರಾಟ ಮಾಡುತ್ತಿದ್ದ.‌ ವಾಟ್ಸ್‌ಆ್ಯಪ್ ಮೂಲಕ ಲೊಕೇಷನ್ ಹಾಕಿ ನಿರ್ದಿಷ್ಟ ಜಾಗದಲ್ಲಿ ಮಾದಕ ವಸ್ತು ಇಟ್ಟಿರುವುದಾಗಿ ಹೇಳಿ ಆನ್‌ಲೈನ್‌‌ ಮೂಲಕ ಹಣ ಪಡೆದುಕೊಳ್ಳುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸ್ನೇಹಿತರಿಂದಲೇ ಕಾಲೇಜು ವಿದ್ಯಾರ್ಥಿನಿ ಕಿಡ್ನಾಪ್: ಪೋಷಕರಿಂದ ಹಣ ಸುಲಿಗೆ ಮಾಡಿ ಕೊಲೆ - Murder Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.