ETV Bharat / state

ದಾವಣಗೆರೆಯಲ್ಲಿ ಆಧಾರರಹಿತ BPL ಕಾರ್ಡ್ ಪತ್ತೆ ಕಾರ್ಯಾಚರಣೆ: ಅಂಕಿಅಂಶ ಹೇಳುವುದೇನು? - BPL Card

ಆಧಾರರಹಿತ ಬಿಪಿಎಲ್ ಕಾರ್ಡ್ ಪತ್ತೆ ಹಚ್ಚಲು ಆಹಾರ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಈ ನಿಟ್ಟಿನಲ್ಲಿ ದಾವಣಗೆರೆಯಲ್ಲಿ ಇಲ್ಲಿಯವರೆಗೆ ಪತ್ತೆಯಾದ ಬಿಪಿಎಲ್ ಕಾರ್ಡ್​ಗಳೆಷ್ಟು ಎಂಬುದರ ಅಂಕಿಅಂಶ ಇಲ್ಲಿದೆ.

FOOD DEPARTMENT  BPL CARD STATISTICS  BPL CARD MISUSE  DAVANAGERE
ಆಧಾರರಹಿತ ಬಿಪಿಎಲ್ ಕಾರ್ಡ್ ಪತ್ತೆ ಕಾರ್ಯ (ETV Bharat)
author img

By ETV Bharat Karnataka Team

Published : Sep 26, 2024, 10:56 AM IST

ದಾವಣಗೆರೆ: ಆಧಾರರಹಿತ ಬಿಪಿಎಲ್ ಕಾರ್ಡ್ ಪತ್ತೆಗೆ ಆಹಾರ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ. ಈಗಾಗಲೇ ಸಾಕಷ್ಟು ಆಧಾರರಹಿತ ಬಿಪಿಎಲ್ ಕಾರ್ಡ್‌ಗಳನ್ನು ಕಂಡುಹಿಡಿಯಲಾಗಿದೆ. ಸರ್ಕಾರಿ ನೌಕರರು ಕೂಡ ಬಿಪಿಎಲ್ ಕಾರ್ಡ್ ಪಡೆದಿರುವ ವಿಚಾರ ಬೆಳಕಿಗೆ ಬಂದಿದೆ. ಬಡವರಿಗೆ ಸೇರಬೇಕಾದ ಕಾರ್ಡ್ ಅನ್ಯರ ಪಾಲಾಗುತ್ತಿದೆ. ಆಹಾರ ಇಲಾಖೆ ಈ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಸಜ್ಜಾಗಿದೆ. ಮೂರು ಹೆಕ್ಟೇರ್ ಕೃಷಿ ಭೂಮಿ, 1.20 ಲಕ್ಷ ರೂ.ಗೂ ಹೆಚ್ಚು ಆದಾಯ ಹೊಂದಿದವರು, ಆದಾಯ ತೆರಿಗೆ ಪಾವತಿಸುವವರು ಹಾಗು ಸರ್ಕಾರಿ ನೌಕರರು ದಾವಣಗೆರೆಯಲ್ಲಿ ಬಿಪಿಎಲ್ ಕಾರ್ಡ್ ಪಡೆದಿದ್ದಾರೆ.

ಆಧಾರರಹಿತ ಬಿಪಿಎಲ್ ಕಾರ್ಡ್​ಗಳ ಅಂಕಿಅಂಶ: ಜಿಲ್ಲೆಯಲ್ಲಿ ಮೊದಲಿಗೆ, ಬಿಪಿಎಲ್ ಕಾರ್ಡ್​ಗಳಲ್ಲಿ 4,900 ಜನ ಮರಣ ಹೊಂದಿದವರನ್ನು ಇಲಾಖೆ ತೆಗೆದು ಹಾಕಿದೆ. ಸತತ ಆರು ತಿಂಗಳುಗಳಿಂದ ಯಾರು ಬಿಪಿಎಲ್ ಕಾರ್ಡ್​ದಾರರು ಪಡಿತರ ಪಡೆದಿಲ್ಲವೋ ಅಂತಹ 4,932 ಬಿಪಿಎಲ್ ಕಾರ್ಡ್​ಗಳನ್ನು ತಾತ್ಕಾಲಿಕವಾಗಿ ಸಸ್ಪೆಂಡ್ ಮಾಡಲಾಗಿದೆ. 39,693 ಬಿಪಿಎಲ್ ಕಾರ್ಡ್​ದಾರರು 1 ಲಕ್ಷ 20 ಸಾವಿರ ರೂ ಆದಾಯದ ಮಾನದಂಡ ಮೀರಿರುವವರ ಅಂಕಿಅಂಶಗಳು ಅಧಿಕಾರಿಗಳ ಕೈಸೇರಿದೆ. ಇದನ್ನು ಇಲಾಖೆ ಪ್ರತಿ ತಾಲೂಕುಗಳ ಫುಡ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಪರಿಶೀಲನೆ ನಡೆಸುತ್ತಿದೆ.‌

ಆಹಾರ ಇಲಾಖೆಯ ಡಿಡಿ ಸಿದ್ದರಾಮ ಮಾರಿಹಾಳ ಹೇಳಿಕೆ (ETV Bharat)

ಆದಾಯ ತೆರಿಗೆ ಪಾವತಿಸುತ್ತಿರುವ ಒಟ್ಟು 2,354 ಬಿಪಿಎಲ್ ಕಾರ್ಡ್​ದಾರರ ಮಾಹಿತಿ ಕೂಡ ಲಭ್ಯವಾಗಿದೆ. ಜಿಲ್ಲೆಯಲ್ಲಿ ಒಟ್ಟು 68 ಮಂದಿ ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್‌ದಾರರಿದ್ದಾರೆ. HRMS ಮೂಲಕ ಅಧಿಕಾರಿಗಳು ಮಾಹಿತಿ ಪಡೆದಿದ್ದು, ಬಿಪಿಎಲ್ ಕಾರ್ಡ್ ಪಡೆದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ. ಅಲ್ಲದೆ ಈ ಎಲ್ಲ ಕಾರ್ಡ್​ದಾರರ ಮಾಹಿತಿಯನ್ನು ಕೇಂದ್ರ ಕಚೇರಿಗೆ ಕಳುಹಿಸಿಕೊಡುತ್ತೇವೆ. ಬಳಿಕ ಇಲಾಖೆ ಸರ್ಕಾರದ ನಿರ್ದೇಶನದಂತೆ ಸಸ್ಪೆಂಡ್​ ಮಾಡುವುದಾ ಅಥವಾ ರದ್ದುಗೊಳಿಸಬೇಕಾ ಎಂಬ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಆಹಾರ ಇಲಾಖೆಯ ಡಿಡಿ ಸಿದ್ದರಾಮ ಮಾರಿಹಾಳ ಮಾಹಿತಿ ನೀಡಿದರು.

ಮರಣ ಹೊಂದಿದವರ ಬಿಪಿಎಲ್ ಕಾರ್ಡ್ ಕೂಡ ರದ್ದಾಗಲಿದೆ. ಬಿಪಿಎಲ್ ಕಾರ್ಡ್ ಪಡೆದಿರುವ ಸರ್ಕಾರಿ ನೌಕರರಿಗೆ ದಂಡ ವಿಧಿಸಬಹುದು. ಆಧಾರರಹಿತ ಪಡಿತರ ಚೀಟಿಗಳನ್ನು ರದ್ದುಪಡಿಸುವ ಬಗ್ಗೆ ಸರ್ಕಾರ ಗಟ್ಟಿ ನಿರ್ಧಾರ ಕೈಗೊಂಡಿದೆ. ಇಡೀ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲೂ ನಿರತರಾಗಿದ್ದೇವೆ ಎಂದು ಅವರು ತಿಳಿಸಿದರು.‌

ಜಿಲ್ಲೆಯಲ್ಲಿ ಬಿಪಿಎಲ್ ಹಾಗು ಎಎವೈ ಸೇರಿ ಒಟ್ಟು 3 ಲಕ್ಷದ 68 ಸಾವಿರ ಕಾರ್ಡ್​ಗಳಿವೆ. 44 ಸಾವಿರ ಎಪಿಎಲ್ ಕಾರ್ಡ್​ಗಳಿವೆ. ಸದ್ಯ ಸರ್ಕಾರದ ಆದೇಶದಂತೆ ಎಪಿಎಲ್ ಕಾರ್ಡ್ ನೀಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಪಿಯು ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ: ಎಐ ಸೇರಿ ವಿವಿಧ ಕೋರ್ಸ್​ಗಳಿಗೆ ಅರ್ಜಿ ಆಹ್ವಾನಿಸಿದ ಮದ್ರಾಸ್ ಐಐಟಿ - IIT Madras Online AI Courses

ETV Bharat Logo

Copyright © 2024 Ushodaya Enterprises Pvt. Ltd., All Rights Reserved.