ETV Bharat / state

78ನೇ ಸ್ವಾತಂತ್ಯೋತ್ಸವ: ಕಟೀಲು ಶ್ರೀಕ್ಷೇತ್ರದ ಆನೆಯಿಂದ ಧ್ವಜ ವಂದನೆ - Flag Salute By Elephant - FLAG SALUTE BY ELEPHANT

ಕಟೀಲು ದೇವಳದ ಮುಂಭಾಗದಲ್ಲಿ ನಡೆದ ಧ್ವಜಾರೋಹಣದ ವೇಳೆ ಸೇನಾಧಿಕಾರಿ ಸುಬೇದಾರ್​ ಉದಯಚಂದ್ರ ಉಡುಪ ಅವರಿಗೆ ಆನೆ ಧ್ವಜವನ್ನು ನೀಡಿ ವಂದನೆ ಸಲ್ಲಿಸಿತು.

Flag salute by elephant from Kateelu Temple
ಕಟೀಲು ಶ್ರೀಕ್ಷೇತ್ರದ ಆನೆಯಿಂದ ಧ್ವಜವಂದನೆ (ETV Bharat)
author img

By ETV Bharat Karnataka Team

Published : Aug 16, 2024, 7:09 AM IST

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ನಡೆದ ಸ್ವಾತಂತ್ರ್ಯೋತ್ಸವ ಆಚರಣೆ ವೇಳೆ ದೇಗುಲದ ಆನೆಯಿಂದ ವಿಶೇಷ ಧ್ವಜ ವಂದನೆ ನೆರವೇರಿತು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಶಿಕ್ಷಣ ಸಂಸ್ಥೆಗಳ ವತಿಯಿಂದ ರಥಬೀದಿಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಮಾಡಲಾಯಿತು.

ಸೇನಾಧಿಕಾರಿ ಸುಬೇದಾರ್ ಉದಯಚಂದ್ರ ಉಡುಪ ಅವರು ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಕಟೀಲು ದೇವಳದ ಆನೆ ಮಹಾಲಕ್ಷ್ಮಿಯಿಂದ ವಿಶೇಷ ಧ್ವಜ ವಂದನೆ ನಡೆಯಿತು‌.

ಸುಬೇದಾರ್ ಉದಯಚಂದ್ರ ಉಡುಪ ಅವರಿಗೆ ಆನೆಯು ಧ್ವಜವನ್ನು ನೀಡಿ ವಂದನೆ ಸಲ್ಲಿಸಿತು‌. ಬಳಿಕ ಧ್ವಜ‌ಸ್ತಂಭದ ಮುಂದೆ ನಿಂತು ಮೂರು ಬಾರಿ ಘೀಳಿಟ್ಟು ಧ್ವಜ ವಂದನೆ ಮಾಡಿತು. ಈ ಅಪೂರ್ವ ದೃಶ್ಯಕ್ಕೆ ದೇವಸ್ಥಾನದ ಅರ್ಚಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಆಡಳಿತ ಮಂಡಳಿ ಸೇರಿದಂತೆ ಇತರರು ಸಾಕ್ಷಿಯಾದರು.

ಇದನ್ನೂ ನೋಡಿ: ಸ್ವಾತಂತ್ರ್ಯ ದಿನೋತ್ಸವದ ಸಂಭ್ರಮ; ವಿದ್ಯುತ್​ ದೀಪಗಳಲ್ಲಿ ಮಿರಿ ಮಿರಿ ಮಿಂಚಿದ ಬೆಳಗಾವಿಯ ಸುವರ್ಣ ವಿಧಾನಸೌಧ - Suvarna Vidhana Soudha

ETV Bharat Logo

Copyright © 2024 Ushodaya Enterprises Pvt. Ltd., All Rights Reserved.