ETV Bharat / state

ಮದ್ಯಪಾನ ಮಾಡಬೇಡಿ ಎಂದಿದ್ದೇ ತಪ್ಪಾಯ್ತು: ಚಾಕುವಿನಿಂದ ಇರಿದು ವ್ಯಕ್ತಿ ಹತ್ಯೆ ಮಾಡಿದ ಆರೋಪಿಗಳ ಬಂಧನ - Bengaluru Crime case - BENGALURU CRIME CASE

ಬೆಂಗಳೂರಿನ ಎರಡು ವಿಭಿನ್ನ ಅಪರಾಧ ಪ್ರಕರಣದಲ್ಲಿ ಐವರು ಅರೆಸ್ಟ್ ಆಗಿದ್ದಾರೆ.

Bengaluru Crime case
ಬೆಂಗಳೂರು ಅಪರಾಧ ಪ್ರಕರಣ
author img

By ETV Bharat Karnataka Team

Published : Apr 10, 2024, 2:29 PM IST

ಲಕ್ಷ್ಮಿ ಪ್ರಸಾದ್, ಡಿಸಿಪಿ-ಬೆಂಗಳೂರು ಈಶಾನ್ಯ ವಿಭಾಗ

ಬೆಂಗಳೂರು: ಮದ್ಯಪಾನ ಮಾಡಬೇಡಿ ಎಂದು ಬುದ್ಧಿವಾದ ಹೇಳಿದ್ದ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ ಇಬ್ಬರು ಆರೋಪಿಗಳನ್ನು ವಿದ್ಯಾರಣ್ಯಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪವನ್ (24) ಹಾಗೂ ನಂದಗೋಪಾಲ್ (21) ಬಂಧಿತ ಆರೋಪಿಗಳು.

ಸೋಮವಾರ ರಾತ್ರಿ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಚಂದ್ರಪುರ ಆಟದ ಮೈದಾನದ ಬಳಿ ಆರೋಪಿಗಳು ವೆಂಕಟೇಶ (45) ಎಂಬುವವರನ್ನು ಚಾಕು ಇರಿದು ಹತ್ಯೆ ಮಾಡಿದ್ದರು. ರಾತ್ರಿ ರಾಮಚಂದ್ರಪುರ ಆಟದ ಮೈದಾನದ ಕಡೆಗೆ ವಾಕಿಂಗ್ ಮಾಡಲು ಹೋಗುತ್ತಿದ್ದ ವೆಂಕಟೇಶ್, ವಾಟರ್ ಫೀಲ್ಡ್ ಟ್ಯಾಂಕ್ ಮುಂಭಾಗದ ರಸ್ತೆಯ ಪಕ್ಕದ ಖಾಲಿ ಜಾಗದಲ್ಲಿ ಆರೋಪಿಗಳು ಬಿಯರ್ ಬಾಟಲ್ ಹಿಡಿದು, ಮದ್ಯಪಾನ ಮಾಡುತ್ತಾ ನಿಂತಿದ್ದನ್ನು ಗಮನಿಸಿದ್ದರು.

ಅದೇ ಏರಿಯಾದ ಪರಿಚಿತ ಯುವಕರಾಗಿದ್ದರಿಂದ 'ನಿಮಗಿನ್ನೂ ಚಿಕ್ಕ ವಯಸ್ಸು, ಮಧ್ಯಪಾನ ಮಾಡಬೇಡಿ' ಎಂದು ಬುದ್ಧಿಮಾತು ಹೇಳಿದ್ದರು. ಇದರಿಂದ ಸಿಟ್ಟಿಗೆದ್ದು ವೆಂಕಟೇಶ್ ಅವರೊಂದಿಗೆ ಆರೋಪಿಗಳು ಜಗಳ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಆರೋಪಿಗಳ ಪೈಕಿ ಪವನ್‌ ಕುಮಾರ್ ಚಾಕುವಿನಿಂದ ವೆಂಕಟೇಶ್ ಅವರ ಹೊಟ್ಟೆಗೆ ಬಲವಾಗಿ ಚುಚ್ಚಿದ್ದ. ಪರಿಣಾಮ, ತೀವ್ರ ರಕ್ತಸ್ರಾವದಿಂದ ವೆಂಕಟೇಶ್ ಮೃತಪಟ್ಟಿದ್ದರು. ಮೃತ ವೆಂಕಟೇಶ್ ಅವರ ಸಹೋದರನ ಮಗ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ವಿದ್ಯಾರಣ್ಯಪುರ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಹತ್ಯೆಗೆ ಸುಪಾರಿ ಪ್ರಕರಣ - ಮೂವರು ಅರೆಸ್ಟ್: ಮತ್ತೊಂದು ಅಪರಾಧ ಪ್ರಕರಣದಲ್ಲಿ ಮೂವರು ಅರೆಸ್ಟ್ ಆಗಿದ್ದಾರೆ. ಹಳೇ ವೈಷಮ್ಯದಿಂದ ಸಹೋದ್ಯೋಗಿಯ ಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಸಹಿತ ಮೂವರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ. ಚಂದ್ರಕಾಂತ್ (30) ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಶ್ರೀಧರ್ (48), ಸಿದ್ದೇಶ್ (25) ಹಾಗೂ ನಿತೇಶ್ (24) ಬಂಧಿತ ಆರೋಪಿಗಳು.

ಇದನ್ನೂ ಓದಿ: ಬಿಎಂಟಿಸಿ ಬಸ್‌ನಲ್ಲಿ ಹಲ್ಲೆ ಪ್ರಕರಣ: ಮಹಿಳೆ ವಿರುದ್ಧ ಪ್ರತಿ ದೂರು ದಾಖಲಿಸಿದ ನಿರ್ವಾಹಕ - Bengaluru Assault Case

ಕಿದ್ವಾಯಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿದ್ದ ಚಂದ್ರಕಾಂತ್ ಅವರ ವಿದ್ಯಾರ್ಥಿಗೆ ಅದೇ ಲ್ಯಾಬ್​​ನಲ್ಲಿ ಚೀಫ್ ಮೆಡಿಕಲ್ ಇಮ್ಯಾಜಿನ್ ಟೆಕ್ನಾಲಜಿಸ್ಟ್ ಆಗಿದ್ದ ಶ್ರೀಧರ್ ಅವಾಚ್ಯವಾಗಿ ನಿಂದಿಸಿದ್ದ. ಆ ವಿಚಾರವನ್ನು ಚಂದ್ರಕಾಂತ್ ಲ್ಯಾಬ್​ನ ಹಿರಿಯ ಸಿಬ್ಬಂದಿಯ ಗಮನಕ್ಕೆ ತಂದಿದ್ದರು. ಅದೇ ಕಾರಣದಿಂದ ಸಿಟ್ಟಿಗೆದ್ದಿದ್ದ ಶ್ರೀಧರ್ ಚಂದ್ರಕಾಂತನ ಹತ್ಯೆಗೆ ಸಂಚು ರೂಪಿಸಿದ್ದ. ಇದಕ್ಕಾಗಿ ತನ್ನ ಸಹಚರ ಸಿದ್ದೇಶನ ಮೂಲಕ ಶಿವಮೊಗ್ಗ ಮೂಲದ ನಿತೇಶ್​​ನನ್ನು ಸಂಪರ್ಕಿಸಿದ್ದ. ಕಳ್ಳತನ, ಮಾದಕ ಸರಬರಾಜಿನಂತಹ ಅಪರಾಧ ಪ್ರಕರಣಗಳ ಹಿನ್ನೆಲೆಯಿದ್ದ ನಿತೇಶ್, ಸುಂಕದಕಟ್ಟೆಯ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಸುಮಾರು 1 ಲಕ್ಷ ಸುಪಾರಿಗೆ ಚಂದ್ರಕಾಂತನನ್ನು ಹತ್ಯೆ ಮಾಡಲು ಸಮ್ಮತಿಸಿದ್ದ. ಆರೋಪಿಗಳು ಏಪ್ರಿಲ್ 3ರಂದು ಸುಂಕದಕಟ್ಟೆಯ ಹೊಯ್ಸಳ ನಗರದ 2ನೇ ಕ್ರಾಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆತನ ಮೇಲೆ ಮಾರಕಾಸ್ತ್ರಗಳೊಂದಿಗೆ ದಾಳಿ ಮಾಡಿದ್ದರು.

ಇದನ್ನೂ ಓದಿ: ಆದಿಚುಂಚನಗಿರಿ ಮಠಕ್ಕೆ ಒಟ್ಟಾಗಿ ಆಗಮಿಸಿದ ಬಿಜೆಪಿ, ಜೆಡಿಎಸ್ ನಾಯಕರು - BJP JDS Leaders

ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಚಂದ್ರಕಾಂತ್ ಅವರ ಹೇಳಿಕೆ ಪಡೆದುಕೊಂಡಿದ್ದ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದರು. ಸದ್ಯ ಮೂವರು ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೊಪ್ಪಿಸಿರುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.