ETV Bharat / state

ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್ ಪುತ್ರನ ಹತ್ಯೆಗೆ ಸಂಚು: ನಾಲ್ವರ ವಿರುದ್ಧ ಎಫ್​ಐಆರ್ - Bhadravathi MLA Sangamesh

author img

By ETV Bharat Karnataka Team

Published : Aug 22, 2024, 4:10 PM IST

ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಅವರ ಪುತ್ರ ಬಸವೇಶ್ ಹತ್ಯೆಗೆ ಸಂಚು ನಡೆದಿರುವ ಆರೋಪ ಸಂಬಂಧ ನಾಲ್ವರ ವಿರುದ್ಧ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ.

MURDER ATTEMPT
ಸಾಂದರ್ಭಿಕ ಚಿತ್ರ (ETV Bharat)
ಎಸ್​ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದರು. (ETV Bharat)

ಶಿವಮೊಗ್ಗ: ಭದ್ರಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಪುತ್ರ ಬಸವೇಶ್ ಅವರ ಕೊಲೆಗೆ ಜೈಲಿನಿಂದಲೇ ಯತ್ನ ನಡೆದಿತ್ತು ಎಂದು ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಸಂಚಿನ ಆರೋಪದ‌ಡಿ ಭದ್ರಾವತಿಯ ಮುಬಾರಕ್ ಅಲಿಯಾಸ್ ಡಿಚ್ಚಿ ಮುಬಾರಕ್ ಹಾಗೂ ಟಿಪ್ಪು ಎಂಬವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಓರ್ವ ಆರೋಪಿ ಸೆರೆ: ಮುಬಾರಕ್‌ ಅಲಿಯಾಸ್‌ ಡಿಚ್ಚಿ ಮುಬಾರಕ್‌ ಎಂಬಾತ ಜೈಲಿನಿಂದ ಭದ್ರಾವತಿಯ ಟಿಪ್ಪು ಎಂಬಾತನಿಗೆ ಕರೆ ಮಾಡಿ ಬಸವೇಶ್ ಅವರು ಭದ್ರಾವತಿ ಗಾಂಧಿ ಸರ್ಕಲ್‌ ಬಳಿ ಬಂದಾಗ ಕೊಲೆ ಮಾಡುವಂತೆ ಹೇಳಿದ್ದಾನೆ ಎಂದು ಆರೋಪಿಸಿ ಗುತ್ತಿಗೆದಾರ ಸುನೀಲ್ ಎಂಬವರು ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಗೆ ದೂರು‌ ನೀಡಿದ್ದಾರೆ. ದೂರು ದಾಖಲಾದ ನಂತರ ಪೊಲೀಸರು, ಟಿಪ್ಪುನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಮುಬಾರಕ್ ಅಲಿಯಾಸ್​ ಮುಜ್ಜು ಎಂಬಾತ ಬಂದು ಬಸಣ್ಣ (ಬಸವೇಶ್) ಎಲ್ಲಿದ್ದಾನೆ ಎಂದು ನನ್ನನ್ನು ವಿಚಾರಿಸಿದ್ದ. ಆಗ ಮನೆಯಲ್ಲಿ ಇರಬಹುದು ಎಂದು ಹೇಳಿದ್ದೆ. ಜೈಲಿ​ನಲ್ಲಿರುವ ಡಿಚ್ಚಿ ಮುಬಾರಕ್‌ ತಕ್ಷಣ ಟಿಪ್ಪು ಎಂಬವನಿಗೆ ಕರೆ ಮಾಡಿ ಬಸವೇಶ್ ಭದ್ರಾವತಿಯ ಗಾಂಧಿ ಸರ್ಕಲ್ ಬಳಿ ಕ್ಯಾಂಟೀನ್​​ಗೆ ಬಂದಾಗ ಆತನನ್ನು ಕೊಂದು ಹಾಕುವಂತೆ ಸುಪಾರಿ ನೀಡಿದ್ದ ಎಂದು ಗುತ್ತಿಗೆದಾರ ಸುನೀಲ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಎಸ್​ಪಿ ಮಿಥುನ್ ಕುಮಾರ್, "ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಬಸವೇಶ್ ಕೊಲೆ ಪ್ರಕರಣ ಸಂಬಂಧ ಎಫ್​ಐಆರ್​ ದಾಖಲಿಸಲಾಗಿದೆ. ಜೈಲಿನಿಂದ ಒಂದು ಕರೆ ಬಂದಿದೆ. ಕೊಲೆ ಬೆದರಿಕೆ ಇರುವುದು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ. ಎಫ್​ಐಆರ್​ನಲ್ಲಿ ದಾಖಲಾಗಿರುವ ಆರೋಪಿಗಳನ್ನು ಕರೆದು ವಿಚಾರಣೆ ಮಾಡಲಾಗುತ್ತಿದೆ. ಈಗಾಗಲೇ ಪ್ರಕರಣದ ತನಿಖೆ ಆರಂಭಿಸಿದ್ದೇವೆ. ಈಗಾಗಲೇ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಎಲ್ಲಾ ಆಯಾಮದಲ್ಲೂ ತನಿಖೆ ಆರಂಭಿಸಿದ್ದೇವೆ. ಜೈಲಿನಿಂದ ಕರೆ ಬಂದಿರುವ ಬಗ್ಗೆ ಪರಿಶೀಲನೆ ಕೂಡ ನಡೆಸುತ್ತಿದ್ದೇವೆ. ಯಾರಿಂದ ಕರೆ ಬಂದಿದೆ, ಯಾರು ಮಾತನಾಡಿದ್ದಾರೆ ಎಂಬ ಬಗ್ಗೆ ಎಲ್ಲವನ್ನೂ ಪರಿಶೀಲನೆ ನಡೆಸುತ್ತೇವೆ" ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು: ಆಸ್ಪತ್ರೆಯಲ್ಲಿ ಮಗು ಅದಲು ಬದಲು ಆರೋಪ, ದೂರು ದಾಖಲು - baby exchange allegation

ETV Bharat Logo

Copyright © 2024 Ushodaya Enterprises Pvt. Ltd., All Rights Reserved.