ETV Bharat / state

ಅತ್ಯಾಚಾರ ಆರೋಪ: ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಎಫ್ಐಆರ್

ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಅತ್ಯಾಚಾರ ಆರೋಪದ ಮೇಲೆ ಮಹಿಳೆಯ ದೂರಿನಡಿ ಎಫ್ಐಆರ್ ದಾಖಲಾಗಿದೆ. ಇದಕ್ಕೂ ಮುನ್ನ ಬ್ಲ್ಯಾಕ್‌ಮೇಲ್ ಯತ್ನ ಮಾಡಲಾಗಿದೆ ಎಂದು ಆರೋಪಿಸಿ ಮಹಿಳೆ ಸೇರಿ ಇಬ್ಬರ ವಿರುದ್ಧ ಶಾಸಕರು ದೂರು ನೀಡಿದ್ದರು.

author img

By ETV Bharat Karnataka Team

Published : 3 hours ago

vinay kulkarni
ವಿನಯ್ ಕುಲಕರ್ಣಿ (ETV Bharat)

ಬೆಂಗಳೂರು: ತಮ್ಮ ಮೇಲೆ ಅತ್ಯಾಚಾರವೆಸಗಿ, ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ನೀಡಿರುವ ದೂರಿನ ಅನ್ವಯ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಸಂಜಯ​ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ವಿನಯ್ ಕುಲಕರ್ಣಿ ಹಾಗೂ ಅವರ ಆಪ್ತ ಸಹಾಯಕ ಅರ್ಜುನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಮತ್ತು ಐಟಿ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ.

ಮಹಿಳೆಯ ದೂರಿನಲ್ಲಿ ಏನಿದೆ?: ''2022ರಲ್ಲಿ ನಾನು ಶಾಸಕ ಕುಲಕರ್ಣಿ ಭೇಟಿ ಮಾಡಿದ್ದು, ಆ ಬಳಿಕ ರೈತರೊಬ್ಬರಿಂದ ಅವರು ನನ್ನ ಫೋನ್ ನಂಬರ್ ಪಡೆದಿದ್ದರು. ನಂತರದಲ್ಲಿ ರಾತ್ರಿ ವೇಳೆಯೂ ನನಗೆ ಕರೆ ಮಾಡಲು ಪ್ರಾರಂಭಿಸಿದ್ದರು. ಆ ಬಳಿಕ, ಬೆತ್ತಲೆಯಾಗಿದ್ದಾಗ ವಿಡಿಯೋ ಕರೆ ಮಾಡುವಂತೆ, ಹೆಬ್ಬಾಳದಲ್ಲಿರುವ ತಮ್ಮ ಮನೆಗೆ ಬರುವಂತೆ ಒತ್ತಾಯಿಸಿದ್ದರು. ಇದಕ್ಕೆ ನಿರಾಕರಿಸಿದಾಗ, ಶಾಸಕರ ಮನೆಗೆ ಬರದಿದ್ದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರೌಡಿಗಳು ಬೆದರಿಕೆ ಹಾಕಿದರು. ಏಪ್ರಿಲ್‌ನಲ್ಲಿ ಅವರು ನನ್ನನ್ನು ಬೆಳಗಾವಿಗೆ ಕರೆದಿದ್ದರು. ಅಲ್ಲಿ ತನ್ನ ಮೇಲೆ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದಾರೆ'' ಎಂದು ದೂರಿನಲ್ಲಿ ತಿಳಿಸಿದ್ದಾರೆ.

''ಆಗಸ್ಟ್ 24ರಂದು ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಾಗ ಕರೆ ಮಾಡಿ, ಹೆಬ್ಬಾಳದ ಮನೆಗೆ ಬರುವಂತೆ ಸೂಚಿಸಿದ್ದರು. ಕಾರಿನಲ್ಲಿ ಒಬ್ಬರೇ ಬಂದು ವಿಮಾನ ನಿಲ್ದಾಣದ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಾರಿನಲ್ಲೇ ಅತ್ಯಾಚಾರ ಎಸಗಿದರು. ರಾಜಕೀಯದಲ್ಲಿ ದೊಡ್ಡಮಟ್ಟದಲ್ಲಿ ಬೆಳೆಸುತ್ತೇನೆ ಎಂದು ನನಗೆ ಆಮಿಷವೊಡ್ಡಿದ್ದರು. ಅಲ್ಲದೆ, ಅಕ್ಟೋಬರ್ 2ರಂದು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿ ಶಾಸಕರು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಯಾರಿಗೂ ವಿಚಾರ ತಿಳಿಸದಂತೆ ಬೆದರಿಕೆ ಹಾಕಿದ್ದಾರೆ.'' ಎಂದು ಮಹಿಳೆ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ. ದೂರಿನ ಅನ್ವಯ ಎಫ್ಐಆರ್ ದಾಖಲಿಸಿಕೊಂಡಿರುವ ಸಂಜಯನಗರ ಠಾಣೆ ಪೊಲೀಸರು, ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ವಿನಯ್ ಕುಲಕರ್ಣಿ ನೀಡಿದ ದೂರಿನಲ್ಲಿ ಏನಿದೆ?: ಮತ್ತೊಂದೆಡೆ, ಮಹಿಳೆ ದೂರು ನೀಡುವ ಒಂದು ದಿನ ಮುನ್ನವೇ ಶಾಸಕ ವಿನಯ್​​ ಕುಲಕರ್ಣಿ ಬ್ಲ್ಯಾಕ್‌ಮೇಲ್ ಯತ್ನ ಆರೋಪಿಸಿ ದೂರು ನೀಡಿದ್ದರು. ''ತಮ್ಮ ವಿರುದ್ಧ ಮಹಿಳೆಯೊಬ್ಬರು ಕಿರುಕುಳ ಆರೋಪ ಹೊರಿಸಿದ್ದು, ಖಾಸಗಿ ಸುದ್ದಿ ವಾಹಿನಿಯ ಮುಖ್ಯಸ್ಥರೊಬ್ಬರು 2 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದಾರೆ'' ಎಂದು ಸಂಜಯನಗರ ಠಾಣೆಗೆ ವಿನಯ್ ಕುಲಕರ್ಣಿ ದೂರು ನೀಡಿದ್ದಾರೆ.

''2022ರಲ್ಲಿ ಕರೆ ಮಾಡಿ ಹಾವೇರಿ ಜಿಲ್ಲೆಯ ರೈತ ಹೋರಾಟಗಾರ್ತಿ ಎಂದು ಪರಿಚಯಿಸಿಕೊಂಡಿದ್ದ ಮಹಿಳೆಯೊಬ್ಬರು ಮಾತನಾಡಿದ್ದರು. ಇದೀಗ ಅವರಿಂದ ನನಗೆ ವಂಚನೆ ಮಾಡಲಾಗಿದೆ. ನೀವು ಮಾತನಾಡಿರುವ ವಿಡಿಯೋ ಕಾಲ್, ಮೊಬೈಲ್ ಸಂಭಾಷಣೆ ಪ್ರಸಾರ ಮಾಡಲಾಗುವುದು ಎಂದು ಸುಳ್ಳು ಆರೋಪಗಳ ಮೂಲಕ ಷಂಡ್ಯಂತ್ರ ರೂಪಿಸಿದ್ದಾರೆ'' ಎಂದು ವಿನಯ್ ಕುಲಕರ್ಣಿ ದೂರಿದ್ದಾರೆ. ದೂರಿನನ್ವಯ ಓರ್ವ ಮಹಿಳೆ ಸೇರಿದಂತೆ ಇಬ್ಬರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 308(2) ಹಾಗೂ 61(2)ರಡಿ ಪ್ರಕರಣ ದಾಖಲಾಗಿದೆ.

ವಿನಯ್​ ಕುಲಕರ್ಣಿ ಪ್ರತಿಕ್ರಿಯೆ: ಈಗಾಗಲೇ ಈ ಬಗ್ಗೆ ಪ್ರತಿಕ್ರಿಯಿಸಿರುದ ಶಾಸಕ ವಿನಯ್ ಕುಲಕರ್ಣಿ, ತಮ್ಮ ವಿರುದ್ಧದ ಲೈಂಗಿಕ ಕಿರುಕುಳ ಆರೋಪವನ್ನು ತಳ್ಳಿಹಾಕಿದ್ದಾರೆ. ಇದೊಂದು ಷಡ್ಯಂತ್ರ ಎಂದು ಹೇಳಿದ್ದಾರೆ. "ನಾನು ಆ ಮಹಿಳೆಯನ್ನು ಟಚ್ ಮಾಡಿದ್ರೆ ನನ್ನ ತಾಯಿಯನ್ನು ಟಚ್ ಮಾಡಿದ ಹಾಗೆಯೇ. ಕೇವಲ ಎರಡು ಮೂರು ಸಲ ನಡೆದ ವಿಡಿಯೋ ಕಾಲ್ ಸಂಭಾಷಣೆ ಇಟ್ಟುಕೊಂಡು ಹೀಗೆ ಆರೋಪ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದದ್ದು. ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ಬದುಕಿದ್ದೇನೆ.‌ ಕೆಲವು ಮಂದಿ ಹಿಂದಿನಿಂದ ಈ ರೀತಿ ಕೆಲಸ ಮಾಡಿಸುತ್ತಿದ್ದಾರೆ. ನನ್ನ ವಿರುದ್ಧದ ಪ್ರಕರಣದ​ ವಿಚಾರಣೆ ನಡೆಯುತ್ತಿದೆ. ಸಾಕ್ಷಿಗಳ ಮೇಲೆ ಪರಿಣಾಮ ಬೀರಲು ಈ ರೀತಿಯ ಷಡ್ಯಂತ್ರ ಮಾಡುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.

"ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯಲ್ಲಿ ಗೊತ್ತಾಗಲಿದೆ. ಇದರಲ್ಲಿ ನನ್ನದೇನೂ ಇಲ್ಲ. ಹಿಂದಿನಿಂದ ಆರೋಪ ಮಾಡಿಸಿದ್ದಾರೆ. ನಾನೂ ಕೂಡ ದೂರು ಕೊಟ್ಟಿದ್ದೇನೆ. ಈ ಬಗ್ಗೆ ತನಿಖೆ ಆಗಲಿ. ಸತ್ಯಾಸತ್ಯತೆ ಹೊರಬರಲಿ. ಆರೋಪ ಮಾಡಿರುವ ಮಹಿಳೆ ರೈತ ಸಂಘದ ಮುಖಂಡೆ. ರೈತರನ್ನು ಕರೆದುಕೊಂಡು ಸಮಸ್ಯೆ ಹೇಳಿಕೊಂಡು ಬರುತ್ತಿದ್ದರು. ರೈತರಿಗೆ ನಾನು ಸಹಾಯ ಮಾಡಿದ್ದೆ. ಇದು ಮುಂದುವರೆದು ನನಗೆ ವಿಡಿಯೋ ಕಾಲ್ ಮಾಡುತ್ತಿದ್ದರು. ಬಳಿಕ ವಾಟ್ಸ್‌ ಆ್ಯಪ್‌ನ​ಲ್ಲಿ ರೀಲ್ಸ್ ಕಳಿಸುತ್ತಿದ್ದರು. ನಮ್ಮ ಮಧ್ಯೆ 3.5 ವರ್ಷದಿಂದ ಯಾವುದೇ ಕಾಲ್, ಮೆಸೇಜ್ ನಡೆದಿಲ್ಲ. 3.5 ವರ್ಷದ ಹಿಂದಿನ ವಿಡಿಯೋ ಕಾಲ್ ಇಟ್ಟುಕೊಂಡು ಈಗ ಆರೋಪ ಮಾಡುತ್ತಿರುವುದು ಅಚ್ಚರಿಯಾಗುತ್ತಿದೆ" ಎಂದು ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಇದನ್ನೂ ಓದಿ: ಉದ್ಯಮಿ ಮುಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ: ಹನಿಟ್ರ್ಯಾಪ್ ಆರೋಪ, ಮಹಿಳೆ ಸೇರಿ ಇಬ್ಬರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.