ETV Bharat / state

ಅನಗತ್ಯ 4ಜಿ ವಿನಾಯಿತಿ ಪ್ರಸ್ತಾವನೆ: ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸಿದ ಆರ್ಥಿಕ ಇಲಾಖೆ - 4G exemption proposal

ರಾಜ್ಯ ಆರ್ಥಿಕ ಇಲಾಖೆ ಅನಗತ್ಯವಾಗಿ ಹೆಚ್ಚಾಗುತ್ತಿರುವ 4ಜಿ ವಿನಾಯಿತಿ ಪ್ರಸ್ತಾವನೆಗಳಲ್ಲಿ ಕೆಲ ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸಿದೆ.

ಸರ್ಕಾರ
ಸರ್ಕಾರ
author img

By ETV Bharat Karnataka Team

Published : Mar 17, 2024, 10:54 PM IST

ಬೆಂಗಳೂರು : ಅನಗತ್ಯವಾಗಿ ಕೆಟಿಪಿಪಿ ಕಾಯ್ದೆಯ 4(ಜಿ) ವಿನಾಯಿತಿ ಪ್ರಸ್ತಾವನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಆರ್ಥಿಕ ಇಲಾಖೆ ಕೆಲ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ.

ರಾಜ್ಯ ಸರ್ಕಾರ ಕಾಲ ಕಾಲಕ್ಕೆ ನಿರ್ದಿಷ್ಟ ಸಂಗ್ರಹಣೆಗಳ ಸಂಬಂಧ 4ಜಿ ವಿನಾಯಿತಿ ನೀಡಬಹುದಾಗಿದೆ. ಅದರಂತೆ ಟೆಂಡರ್ ಮೂಲಕ ಸರಕು/ಸೇವೆಯನ್ನು ಪಡೆಯಲು ಅವಕಾಶವಾಗದ ವಿಶೇಷ ಮತ್ತು ತುರ್ತು ಸಂದರ್ಭಗಳಲ್ಲಿ ಮಾತ್ರ ವಿನಾಯಿತಿಯನ್ನು ನೀಡಬಹುದಾಗಿದೆ. ಆದಾಗ್ಯೂ ಇತ್ತೀಚಿನ ದಿನಗಳಲ್ಲಿ ವಾರ್ಷಿಕವಾಗಿ ಆಚರಿಸಲಾಗುವ ಹಾಗೂ ಪೂರ್ವನಿರ್ಧರಿತವಾದ ಸಂಗ್ರಹಣೆಗಳ ಸಂದರ್ಭದಲ್ಲಿಯೂ ಸಹ ವಿನಾಯಿತಿಗೆ ಪ್ರಸ್ತಾವನೆ ಸಲ್ಲಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೆಟಿಪಿಪಿ ಕಾಯ್ದೆ, ಕಲಂ 4(ಜಿ) ರಡಿ ವಿನಾಯಿತಿ ನೀಡಲು ಕೋರಿ ಸಲ್ಲಿಸಿದ ಹಲವು ಪ್ರಸ್ತಾವನೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಕೆಲ ಸೂಚನೆಗಳನ್ನು ನೀಡಲಾಗಿದೆ.

ಆರ್ಥಿಕ ಇಲಾಖೆ ನೀಡಿದ ಸೂಚನೆಗಳೇನು? :

  • ವಾರ್ಷಿಕವಾಗಿ ಆಚರಿಸಲಾಗುವಂತಹ ಮತ್ತು ಪೂರ್ವನಿರ್ಧರಿತವಾದಂತಹ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ, ರಾಜ್ಯೋತ್ಸವ, ಮಹನೀಯರ ಜಯಂತಿ, ದಸರಾ ಉತ್ಸವ, ಚಲನಚಿತ್ರೋತ್ಸವ ಮುಂತಾದ ಕಾರ್ಯಕ್ರಮಗಳ ಆಯೋಜನೆಗೆ ಅಗತ್ಯವಿರುವ ಸರಕು ಮತ್ತು ಸೇವೆಗಳನ್ನು ಕಡ್ಡಾಯವಾಗಿ ಟೆಂಡರ್ ಪ್ರಕ್ರಿಯೆ ಮೂಲಕವೇ ಸಂಗ್ರಹಣೆ ಮಾಡಿಕೊಳ್ಳಬೇಕು.
  • ಇಲಾಖೆಯಲ್ಲಿ ಅನುಮೋದಿಸಲಾಗಿರುವ ಕ್ರಿಯಾ ಯೋಜನೆ ಅಥವಾ ಅಂದಾಜುಗಳಲ್ಲಿ ಮುಂಚಿತವಾಗಿಯೇ ಒಳಗೊಂಡಿರುವಂತಹ ಸರಕು/ಸೇವೆಗಳ ಸಂಗ್ರಹಣೆಯನ್ನು, ಅವುಗಳ ಅನುಷ್ಠಾನಕ್ಕೆ ಸಂಬಂಧಿಸಿದ ಕ್ರಿಯಾಯೋಜನೆ/ಅಂದಾಜು ಅನುಮೋದನೆಯಾದ ಕೂಡಲೇ ನಿಗದಿತ ದಿನಾಂಕದಂದು ಪ್ರಸ್ತಾಪಿತ ಸರಕು/ಸೇವೆ ಲಭ್ಯವಾಗುವಂತೆ ಸಾಕಷ್ಟು ಮುಂಚಿತವಾಗಿಯೇ ಟೆಂಡರ್ ಪ್ರಕ್ರಿಯೆ ಕೈಗೊಂಡು ಸಂಗ್ರಹಣೆಗೆ ಕ್ರಮ ಕೈಗೊಳ್ಳತಕ್ಕದ್ದು. (ಉದಾಹರಣೆಗೆ: ಕಟ್ಟಡ ಕಾಮಗಾರಿಗಳ ಅಂದಾಜುಗಳಲ್ಲಿ ಒಳಗೊಂಡಿರುವ ಉಪಕರಣ/ಪೀಠೋಪಕರಣಗಳಿಗೆ ಸಂಬಂಧಿಸಿದಂತೆ ಸದರಿ ಸಾಮಗ್ರಿಗಳು ನಿಗದಿತ ಸಮಯಕ್ಕೆ ಲಭ್ಯವಾಗುವಂತೆ ಸಾಕಷ್ಟು ಮುಂಚಿತವಾಗಿಯೇ ಟೆಂಡರ್ ಪ್ರಕ್ರಿಯೆ ಕೈಗೊಂಡು ಸಂಗ್ರಹಣೆಗೆ ಕ್ರಮವಹಿಸಬೇಕು).
  • ಸಿವಿಲ್ ಕಾಮಗಾರಿಗಳ ಅನುಮೋದಿತ ಅನುಸೂಚಿ ದರಗಳಲ್ಲಿ ಗುತ್ತಿಗೆದಾರರ ಲಾಭಾಂಶ ಮತ್ತು overhead charges ಮೌಲ್ಯವು ಒಳಗೊಂಡಿರುವುದರಿಂದ, ನೇರವಾಗಿ 4(ಜಿ) ವಿನಾಯಿತಿ ಮೂಲಕ ಗುತ್ತಿಗೆದಾರರಿಗೆ ಕಾಮಗಾರಿಯನ್ನು ವಹಿಸುವುದರಿಂದ ಸ್ಪರ್ಧಾತ್ಮಕ ದರಗಳಲ್ಲಿ ಸಿಗಬಹುದಾದ ಕಡಿಮೆ ದರಗಳ ಲಾಭದಿಂದ ಸರ್ಕಾರ ವಂಚಿತವಾಗುವ ಸಾಧ್ಯತೆ ಇರುವುದರಿಂದ, ಇಂತಹ ಸಂಗ್ರಹಣೆಗಳಿಗೆ ಕೆಟಿಪಿಪಿ ಕಾಯ್ದೆ, ಕಲಂ 4(ಜಿ)ರಡಿ ವಿನಾಯಿತಿಗೆ ಪ್ರಸ್ತಾವನೆ ಸಲ್ಲಿಸಬಾರದು.
  • DPR ತಯಾರಿಕೆಯಂತಹ ಸೇವೆಯನ್ನು ನೀಡಲು ಹಲವು ಸಂಸ್ಥೆಗಳು ಇರುವುದರಿಂದ ಮತ್ತು ಇಂತಹ ಕಾರ್ಯಕ್ಕೆ ಯಾವುದೇ ನಿಗದಿತ ದರಗಳು ಇಲ್ಲದಿರುವುದರಿಂದ, ನೇರವಾಗಿ ವಹಿಸುವ ಪ್ರಸ್ತಾವನೆಗಳಲ್ಲಿ ಸಂಸ್ಥೆಯು ನೀಡಿರುವ ದರಗಳು ಸಮಂಜಸವಾಗಿದೆಯೇ ಎಂಬುದನ್ನು ದೃಢೀಕರಿಸಿಕೊಳ್ಳಲು ಸಾಧ್ಯವಾಗುವುದಿಲ್ಲವಾದ್ದರಿಂದ, ಸದರಿ ಸೇವೆಯನ್ನು ಟೆಂಡ‌ರ್ ಮೂಲಕವೇ ಪಡೆಯಬೇಕು.
  • ಈಗಾಗಲೇ ಹಲವು ವರ್ಷಗಳಿಂದ ಟೆಂಡರ್ ಮೂಲಕ ಸಂಗ್ರಹಿಸಲಾಗುತ್ತಿರುವ ಸರಕು/ಸೇವೆಗಳ ಸಂಗ್ರಹಣಾ ಪ್ರಕ್ರಿಯೆಯನ್ನು ಏಕಾಏಕಿಯಾಗಿ ಬದಲಿಸಿ ನೇರವಾಗಿ ಸಂಗ್ರಹಿಸಲು ಕೆಟಿಪಿಪಿ ಕಾಯ್ದೆ, ಕಲಂ 4(ಜಿ)ರಡಿ ವಿನಾಯಿತಿ ಕೋರಿ ಪ್ರಸ್ತಾವನೆ ಸಲ್ಲಿಸಬಾರದು.
  • ಸರ್ಕಾರದ ಅಂಗ ಸಂಸ್ಥೆಗಳೆಂಬ ಕಾರಣಕ್ಕೆ ಸರಕು ಮತ್ತು ಸೇವೆಗಳನ್ನು ಅವುಗಳಿಂದ ಮಾತ್ರ ನೇರವಾಗಿ ಸಂಗ್ರಹಣೆ ಮಾಡಿಕೊಳ್ಳಲು 4(ಜಿ) ರಡಿ ವಿನಾಯಿತಿಗೆ ಪ್ರಸ್ತಾವನೆಯನ್ನು ಸಲ್ಲಿಸಬಾರದು.
  • ರಾಷ್ಟ್ರದ ಎಲ್ಲಾ ನಾಗರಿಕರಿಗೂ ಸಮಾನ ಅವಕಾಶ ಕಲ್ಪಿಸುವುದು ಭಾರತ ಸಂವಿಧಾನದ ಆಶಯವಾಗಿರುತ್ತದೆ. ಈ ಆಶಯಕ್ಕೆ ಅನುಗುಣವಾಗಿ ಸರಕು ಮತ್ತು ಸೇವೆಗಳ ಉತ್ಪಾದನೆ ಮತ್ತು ಸರಬರಾಜಿನಲ್ಲಿ ನಿರತವಾಗಿರುವ ಎಲ್ಲಾ ಸಂಸ್ಥೆಗಳಿಗೂ ಸಮಾನ ಅವಕಾಶ ಒದಗಿಸಬೇಕಾದ ಹಿನ್ನೆಲೆಯಲ್ಲಿ, ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳಲ್ಲಿ ನಿಗದಿಪಡಿಸಿದ ಪ್ರಕ್ರಿಯೆಗಳಂತೆ ಅಗತ್ಯವಿರುವ ಸರಕು ಮತ್ತು ಸೇವೆಗಳನ್ನು ಸ್ಪರ್ಧಾತ್ಮಕ ದರಗಳಲ್ಲಿ ಎಲ್ಲಾ ಸಂಗ್ರಹಣಾ ಸಂಸ್ಥೆಗಳು ಸಂಗ್ರಹಿಸಿಕೊಳ್ಳಬೇಕು.
  • ಕಾಲಾವಕಾಶ ಕಡಿಮೆ ಇರುವ ಸಂದರ್ಭಗಳಲ್ಲಿಯೂ ಸಹ ಕೆಟಿಪಿಪಿ ನಿಯಮಗಳು, 2000ರ ನಿಯಮ 17(2)ರಂತೆ ಟೆಂಡರ್‌ಗೆ ನಿಗದಿಪಡಿಸಬೇಕಾದ ಕಾಲಾವಕಾಶವನ್ನು ಬರವಣಿಗೆಯಲ್ಲಿ ದಾಖಲಿಸಬಹುದಾದ ಕಾರಣಗಳಿಗಾಗಿ, ಕನಿಷ್ಠ 7 ದಿನಗಳ ಅವಧಿಗೆ ಅಲ್ಪಾವಧಿ ಟೆಂಡರ್ ಕರೆಯಲು ಅವಕಾಶವಿದ್ದು, ಅದರಂತೆ ಸಂಗ್ರಹಣಾ ಪ್ರಕ್ರಿಯೆಯನ್ನು ಕೈಗೊಳ್ಳತಕ್ಕದ್ದು. ಕನಿಷ್ಠ ಮೂರು ವಾರಗಳ ಕಾಲಾವಕಾಶವಿರುವ ಯಾವುದೇ ಸಮಾರಂಭ/ಕಾರ್ಯಕ್ರಮಗಳನ್ನು ಟೆಂಡರ್‌ಗಳನ್ನು ಕರೆಯುವ ಮೂಲಕವೇ ಜಾರಿಗೊಳಿಸಬೇಕೆ ವಿನಃ ಕೆಟಿಪಿಪಿ ಕಾಯ್ದೆ ಕಲಂ 4(ಜಿ) ರಡಿ ವಿನಾಯಿತಿ ಕೋರಬಾರದು.
  • ಸರ್ಕಾರದ ಅಂಗ ಸಂಸ್ಥೆಗಳಿಂದ ವಿವಿಧ ಸಂಗ್ರಹಣಾ ಸಂಸ್ಥೆಗಳಿಗೆ ಸರಕು/ಸೇವೆಗಳನ್ನು ಒದಗಿಸಲು ಸಲ್ಲಿಸುವ ವಿನಾಯಿತಿ ಪ್ರಸ್ತಾವನೆಗಳನ್ನು ಅಂತಹ ಸಂಸ್ಥೆಗಳು ಸ್ವಂತ ಸಂಪನ್ಮೂಲಗಳಿಂದ ತಯಾರಿಸಿ ಸರಬರಾಜು ಮಾಡುವಂತಹ ಸರಕು/ಸೇವೆಗಳಿಗೆ ಸೀಮಿತಗೊಳಿಸಿ ಸಲ್ಲಿಸತಕ್ಕದ್ದು. ಬೇರೆ ಮೂಲಗಳಿಂದ ಪಡೆದು ಸರಬರಾಜು ಮಾಡುವ ಪ್ರಕರಣಗಳಲ್ಲಿ ಆಯಾ ಸಂಸ್ಥೆಯ ಆಡಳಿತಾತ್ಮಕ ವೆಚ್ಚ ಮತ್ತು ಅದರ ಮೇಲಿನ ತೆರಿಗೆಯೂ ಸೇರಿ ಸಂಗ್ರಹಣಾ ಸಂಸ್ಥೆಗಳಿಗೆ ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗುವುದರಿಂದ, ಅಂತಹ ಪ್ರಸ್ತಾವನೆಗಳನ್ನು ಸಲ್ಲಿಸಬಾರದು.
  • ಕೆಟಿಪಿಪಿ ಕಾಯಿದೆ ಮತ್ತು ನಿಯಮಗಳಡಿಯಲ್ಲಿ ಘಟನೋತ್ತರವಾಗಿ 4(ಜಿ) ವಿನಾಯಿತಿ ನೀಡಲು ಅವಕಾಶವಿರುವುದಿಲ್ಲ. ಆದ್ದರಿಂದ ಕಾಮಗಾರಿ/ಕಾರ್ಯಕ್ರಮ/ಸರಬರಾಜು ಆರಂಭವಾದ ನಂತರ ಅಥವಾ ಮುಕ್ತಾಯವಾದ ನಂತರ ಯಾವುದೇ ವಿನಾಯಿತಿ ಪ್ರಸ್ತಾವನೆಗಳನ್ನು ಸಲ್ಲಿಸತಕ್ಕದ್ದಲ್ಲ. ಆಡಳಿತ ಇಲಾಖೆಗಳಿಂದ ಸ್ವೀಕೃತವಾಗುವ ಅಂತಹ ಯಾವುದೇ ಪ್ರಸ್ತಾವನೆಗಳನ್ನು ಟಿಪ್ಪಣಿ ಮಾಡಿಕೊಂಡು ಸಂಬಂಧಪಟ್ಟ ಅಧಿಕಾರಿಗಳ ಸೇವಾ ಪುಸ್ತಕದಲ್ಲಿ ದಾಖಲಿಸಲು DPAR ಗೆ ವರದಿ ಮಾಡಲಾಗುತ್ತದೆ.
  • ಕೆಟಿಪಿಪಿ ಕಾಯಿದೆ ಮತ್ತು ನಿಯಮಗಳನ್ನು ಪಾಲಿಸದೆ ಕೈಗೊಂಡ ಕಾಮಗಾರಿ/ಸೇವೆಗಳ ಸಂಗ್ರಹಣೆಯನ್ನು ಕ್ರಮಬದ್ಧ (regularize) ಗೊಳಿಸುವ ಉದ್ದೇಶದಿಂದ ಕೆಟಿಪಿಪಿ ಕಾಯ್ದೆ ಕಲಂ 4(ಜಿ) ರಡಿ ವಿನಾಯಿತಿ ಪ್ರಸ್ತಾವನೆಗಳನ್ನು ಸಲ್ಲಿಸಬಾರದು.
  • ಮೇಲಿನ ಎಲ್ಲಾ ಅಂಶಗಳನ್ನು ಪರಿಗಣಿಸಿದ ನಂತರ ಅತ್ಯಂತ ಅವಶ್ಯಕ ಮತ್ತು ತುರ್ತು ಸಂದರ್ಭಗಳಲ್ಲಿ ಟೆಂಡ‌ರ್ ಪ್ರಕ್ರಿಯೆ ಕೈಗೊಳ್ಳಲಾಗದ ಪ್ರಕರಣಗಳಲ್ಲಿ ಮಾತ್ರ ವಿನಾಯಿತಿ ಕೋರಿ ಪ್ರಸ್ತಾವನೆಗಳನ್ನು ಸಲ್ಲಿಸಬೇಕು. ವಿನಾಯಿತಿ ಪ್ರಕ್ರಿಯೆಗೆ ಒಳಪಡಿಸಲು ಸಾಕಷ್ಟು ಸಮಯಾವಕಾಶ ಕಡಿಮೆಯಿರುವ ವಿನಾಯಿತಿ ಪ್ರಸ್ತಾವನೆಗಳ ಕುರಿತು ಸಂಬಂಧಪಟ್ಟ ಆಡಳಿತ ಇಲಾಖೆಯ ಕಾರ್ಯದರ್ಶಿಗಳು ವೈಯಕ್ತಿಕವಾಗಿ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಬೇಕು. ಅಂತಹ ವಿನಾಯಿತಿಯು ಏಕೆ ಅಗತ್ಯವಿದೆ ಎಂಬುದರ ಕುರಿತು ಕಾರಣಗಳನ್ನು ಲಿಖಿತವಾಗಿ ದಾಖಲಿಸತಕ್ಕದ್ದು. ವಿನಾಯಿತಿ ಪ್ರಸ್ತಾವನೆಯಲ್ಲಿನ ದರಗಳ ಸಮಂಜಸತೆಯನ್ನು ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು/ಕಾರ್ಯದರ್ಶಿರವರು ವೈಯಕ್ತಿಕವಾಗಿ ಪ್ರಮಾಣೀಕರಿಸಬೇಕು.
  • ವಿನಾಯಿತಿ ಪ್ರಸ್ತಾವನೆಗಳನ್ನು ಜಿಲ್ಲಾಧಿಕಾರಿಗಳು, ಇಲಾಖಾಧಿಕಾರಿಗಳು ನೇರವಾಗಿ ಆರ್ಥಿಕ ಇಲಾಖೆಗೆ ಸಲ್ಲಿಸುತ್ತಿರುವುದನ್ನು ಗಮನಿಸಲಾಗಿದೆ. ವಿನಾಯಿತಿ ಪ್ರಸ್ತಾವನೆಗಳಿಗೆ ಸಂಬಂಧಿಸಿದಂತೆ ಆಡಳಿತ ಇಲಾಖೆಯಿಂದ ಅನುದಾನ ಲಭ್ಯತೆ, ವಿನಾಯಿತಿ ಅವಶ್ಯಕತೆ ಮತ್ತು ತುರ್ತು ಅಗತ್ಯತೆಯನ್ನು ಪರಿಶೀಲಿಸಿ ವಿನಾಯಿತಿಗೆ ಶಿಫಾರಸ್ಸು ಮಾಡಬೇಕಾಗಿರುವುದರಿಂದ, ವಿನಾಯಿತಿ ಪ್ರಸ್ತಾವನೆಗಳನ್ನು ಕಡ್ಡಾಯವಾಗಿ ಇಲಾಖಾ ಕಾರ್ಯದರ್ಶಿರವರ ಮೂಲಕವೇ ಆರ್ಥಿಕ ಇಲಾಖೆಗೆ ಸಲ್ಲಿಸಬೇಕು.
  • 4(ಜಿ) ರಡಿ ನಿರ್ದಿಷ್ಟ ಸಂಗ್ರಹಣೆಗೆ ವಿನಾಯಿತಿ ನೀಡಲು ಮಾತ್ರ ಅವಕಾಶವಿರುವುದರಿಂದ, ವಿನಾಯಿತಿಗೆ ಸಲ್ಲಿಸುವ ಪ್ರಸ್ತಾವನೆಯಲ್ಲಿ ಕಡ್ಡಾಯವಾಗಿ ಸಂಗ್ರಹಣೆಗಳನ್ನು ಯಾರಿಂದ/ಯಾವ ಸಂಸ್ಥೆಯಿಂದ, ಯಾವ ಅನುದಾನದಿಂದ, ಯಾವ ಅವಧಿಗೆ, ಯಾವ ಉದ್ದೇಶಕ್ಕಾಗಿ, ಯಾವ ದರ ಮತ್ತು ಒಟ್ಟು ಎಷ್ಟು ಮೊತ್ತದಲ್ಲಿ ಮತ್ತು ಈ ದರಗಳು ಸಮಂಜಸವಾಗಿವೆಯೇ ಎಂಬುದರ ಬಗೆಗಿನ ದೃಢೀಕರಣ ಹಾಗೂ ಟೆಂಡರ್ ಪ್ರಕ್ರಿಯೆ ಮೂಲಕ ಏಕೆ ಕೈಗೊಳ್ಳಲು ಸಾಧ್ಯವಿಲ್ಲ ಎಂಬುದರ ಕುರಿತು ಸಮರ್ಥನೆಗಳನ್ನು ನಮೂದಿಸಿ ಆಡಳಿತ ಇಲಾಖೆಯ ಸೂಕ್ತ ಶಿಫಾರಸ್ಸಿನೊಂದಿಗೆ ಪ್ರಸ್ತಾವನೆಗಳನ್ನು ಸಲ್ಲಿಸಬೇಕು.
  • ಕಲಂ 4(ಜಿ) ರಡಿ ವಿನಾಯಿತಿ ನೀಡಿ ಹೊರಡಿಸಿದ ಅಧಿಸೂಚನೆಯಲ್ಲಿ ನಮೂದಿಸಿದ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು ಮತ್ತು ಅದರಲ್ಲಿ ನಿಗಧಿಪಡಿಸಿದ ಮೊತ್ತಕ್ಕೆ ಸೀಮಿತಗೊಳಿಸಿ ಕಾಮಗಾರಿ/ಕಾರ್ಯಕ್ರಮ/ಸರಬರಾಜು ಸೇವೆಯನ್ನು ಸಂಗ್ರಹಿಸತಕ್ಕದ್ದು. ಒಂದು ವೇಳೆ ವಿನಾಯಿತಿ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಅಥವಾ ವಿನಾಯಿತಿಯಲ್ಲಿ ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚುವರಿ ವೆಚ್ಚವನ್ನು ಭರಿಸಿದಲ್ಲಿ ಅಥವಾ ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳಲ್ಲಿನ ಯಾವುದೇ ಅಂಶಗಳ ಉಲ್ಲಂಘನೆಯಾದಲ್ಲಿ, ಅಂತಹ ಪ್ರಕರಣಗಳು ಕೆಟಿಪಿಪಿ ಕಾಯ್ದೆ, ಕಲಂ 23 ರಡಿಯಲ್ಲಿ ಶಿಸ್ತು ಕ್ರಮಗಳಿಗೆ ಒಳಪಡುತ್ತವೆ. ಆದ್ದರಿಂದ, ಇಂತಹ ಪ್ರಕರಣಗಳು ಗಮನಕ್ಕೆ ಬಂದಲ್ಲಿ ನಿಯಮಾನುಸಾರ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ/ಸಂಬಂಧಪಟ್ಟ ಶಿಸ್ತು ಪ್ರಾಧಿಕಾರಕ್ಕೆ ವರದಿ ಮಾಡಬೇಕು.

ಇದನ್ನೂ ಓದಿ : ಜನನ, ಮರಣ ಉಪನೋಂದಣಾಧಿಕಾರಿಗಳಾಗಿ ಗ್ರಾ.ಪಂ ಕಾರ್ಯದರ್ಶಿಗಳನ್ನು ನೇಮಿಸಿ ಸರ್ಕಾರ ಆದೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.